2023

                                      


           ಇದು ಕಡಬ ಸಮೀಪದ ನೆಟ್ಟಣದ ಕತೆ. ಸದ್ರಿ ಊರಿನಲ್ಲಿ ಊರವರ ಪುಣ್ಯಕ್ಕೆ ಒಬ್ಬಡಾಕ್ಟರ್ ಹುಟ್ಟಿಕೊಂಡಿದ್ದಾನೆ. ಹೆಸರು ಡಾ! ಬೆನ್ನಿSSLC (fail) at Nettana university. ನೆಟ್ಟಣದಲ್ಲಿ ಇದೀಗ ಬೆನ್ನಿ ಹವಾ ಜೋರಾಗಿದೆ.  ಬೆನ್ನುನೋವು, ಸೊಂಟ ನೋವು, ಕೀಲು ನೋವು, ಕಾರು ಅಡಿ ಮಗ್ರಿದ್ದು, ಪುಳೆವು, ಉಳುಕು,ಕೊಳ್ಪು ಮುಂತಾದ ಜಂಡೂಬಾಂಬ್, ಟೈಗರ್ ಬಾಂಬ್ ಸೀಕ್ ಗಳ ಆರೋಪಿಗಳನ್ನು ಇವನು ತಿಕ್ಕಿ ತಿಕ್ಕಿಯೇ ಒಂಜೆ ಲೆಕ ಮಾಡಿ ಸಮಾಧಾನ ಮಾಡುತ್ತಿದ್ದ ಕಾರಣ ಜನ ಬೆನ್ನಿಯ ಐರನ್ ಹ್ಯಾಂಡಿನಲ್ಲಿ ತಿಕ್ಕಿ ತಿಕ್ಕಿ ತಿಕ್ಕಿಸಿ ಕೊಳ್ಳಲು ಕ್ಯೂ ನಿಂತು ಬಿಟ್ಟರು. ಡಾಕ್ಟರ್ ಗೆ ಗಮ್ಮತ್ತಾಯಿತು.
     ಹಾಗೆ ತನ್ನ ಮಸಾಜ್ ನೆಟ್ಟಣದಲ್ಲಿ ಕ್ಲಿಕ್ ಆಗುತ್ತಿದ್ದಂತೆ ಬೆನ್ನಿ ಡಾಕ್ಟರ್ ಈಗ ಸಾಧಾರಣ ಎಲ್ಲಾ ಕೆಎಂಸಿ ‌ಸೀಕುಗಳಿಗೂ ಮೆಡಿಕಲ್ ಗೆ ಚೀಟಿ ಕೊಡುವಷ್ಟು ಬೆಳೆದಿದ್ದಾನೆ ಎಂದು ತಿಳಿದುಬಂದಿದೆ. ತಿಕ್ಕಿಸಲು ಬಂದವರಿಗೆ ಬೇರೆನಾದರೂ ಮಂಡೆ ಸೀಕುಗಳು ಉಂಟಾ ಎಂದು ತಿಳಿದು  ಕೊಳ್ಳುವ ಬೆನ್ನಿ ಡಾಕ್ಟರ್ ಹಾಗೇನಾದರೂ ಇದ್ದರೆ ಅಂಥವರಿಗೆ  ಮೆಡಿಕಲ್ ಗೆ ಚೀಟಿ ಕೊಡುತ್ತಾನೆ. ಮೆಡಿಕಲ್ ನವರು ಬೆನ್ನಿ ಚೀಟಿ ಪ್ರಕಾರ ಗುಳಿಗೆ ಕೊಡುತ್ತಾರೆ. ಜನ ಗುಳಿಗೆ ನುಂಗಿ ಹುಷಾರಾಗುತ್ತಾರೆ. ಆದರೆ ಕಿಡ್ನಿ? ಈಗಾಗಲೇ ನೆಟ್ಟಣದಲ್ಲಿ ಒಂದು ಹದಿನೈದು ಪರ್ಸೆಂಟ್ ಜನ ಬೆನ್ನಿ ಕೊಟ್ಟ ಗುಳಿಗೆ  ನುಂಗಿ ಕಿಡ್ನಿ ಡ್ಯಾಮೇಜ್ ಮಾಡಿಕೊಂಡಿದ್ದಾರೆ, ತಿಕ್ಕಿಸಿ ತಿಕ್ಕಿಸಿ ಸೊಂಟ ಸೋಬಾನೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಪಕ್ಷಪಾತದ ರೋಗಿಯೊಬ್ಬ ಆಸ್ಪತ್ರೆಯಲ್ಲಿ ಹುಷಾರಾಗಿ ಮನೆಗೆ ಬಂದಿದ್ದ.    ಎಕ್ಸ್ ಟ್ರಾ ಎನರ್ಜಿ ಇರಲಿ ಎಂದು ಬೆನ್ನಿ ಕೈಯಲ್ಲಿ ಬೆನ್ನು, ಸೊಂಟ ಗಿಂಟ ‌ಎಂದೆಲ್ಲ ಸಿಕ್ಕ ಸಿಕ್ಕ ಕಡೆಯೆಲ್ಲಾ ತಿಕ್ಕಿಸಿಕೊಂಡಿದ್ದ ಮತ್ತು ಬೆನ್ನಿ ಕೊಟ್ಟ ಗುಳಿಗೆ ಗುಳುಂ ಮಾಡಿದ್ದ. ಅಷ್ಟೇ. ಎರಡೇ ದಿನದಲ್ಲಿ ಪಡ್ಚ!
     ಹಾಗೆಂದು ಈ ಬೆನ್ನಿ ಡಾಕ್ಟರ್ ಕೂಡ ಒಬ್ಬ ಪೇಶೇಂಟೇ. ಹಲವು ವರ್ಷಗಳ ಹಿಂದೆ ಇದೇ ಬೆನ್ನಿ ವಿಚಿತ್ರ  ಚರ್ಮ ರೋಗದಿಂದ ಬಳಲುತ್ತಿದ್ದ. ಆಗ ಅದ್ಯಾರೋ ಪುಣ್ಯಾತ್ಮರು ಕೊಟ್ಟಿದ್ದ ಎಣ್ಣೆಯನ್ನು ತಿಕ್ಕಿ ತಿಕ್ಕಿ ಇವನು ಬಚಾವಾಗಿದ್ದ. ಈಗ ಅದೇ ಎಣ್ಣೆಯಲ್ಲಿ ಇಡೀ ನೆಟ್ಟಣಕ್ಕೆ ಮಸಾಜ್ ಮಾಡುತ್ತಿದ್ದಾನೆ. ಹಾಗೆಂದು ಇವನ ತಿಕ್ಕಾಟ ಏನೇ ಇರಲಿ ಆದರೆ ಮೆಡಿಕಲ್ ಗೆ ಚೀಟಿ ಕೊಟ್ಟು ಜನರ ಕಿಡ್ನಿಯೊಂದಿಗೆ ಆಟ ಆಡೋದು ಮಾತ್ರ ಅಕ್ಷಮ್ಯ ಅಪರಾಧ. ಮೆಡಿಕಲ್ ಅಸೋಸಿಯೇಶನ್ನವರಿಗೆ ಎಲ್ಲಿಯಾದರೂ ಗೊತ್ತಾದರೆ ಇವನ ತಲೆಗೆ ಬೆಂಕಿ ಕೊಟ್ಟಾರು. ಅದಕ್ಕೂ ಮೊದಲು ಕಡಬ ಪೊಲೀಸರು ಒಮ್ಮೆ ಇವನಿಗೆ ಎಣ್ಣೆ ಮಸಾಜ್ ಕೊಟ್ಟು ಬೆಂಡ್ ತೆಗೆದರೆ ಎಲ್ಲಾ ಸರಿ ಹೋಗುತ್ತದೆ. ಇಲ್ಲದಿದ್ದರೆ ಬೆನ್ನಿ ಇನ್ನು ಆಪ್ರೆಷನ್ ಗೀಪ್ರೆಷನ್ ಎಂದೆಲ್ಲಾ ಶುರು ಹಚ್ಕೊಂಡು ಬಂಜಿಯ ಒಳಗಡೆ ಕತ್ರಿ ಬಾಕಿಯಾದರೆ ಹೊಣೆ ಆಗೋದು ಯಾರು? ಹೆಣ ಆಗೋದು ಯಾರು?








                                     



           ಹಾಗೆಂದು ಹಳ್ಳಿಗಾಡಿನ ಅಂಡಮಾನ್ ಗಳಲ್ಲಿ ಈವತ್ತು ‌ಸಾಯಲು ಕೆರೆ ಬಾವಿಗಳು, ಬೀಜದ ಮರಗಳು, ರೈಲು ಮಾರ್ಗಗಳು ಇಲ್ಲದಿದ್ದರೆ ಏನಂತೆ ಧರ್ಮಕ್ಕೆ ಸಾಯಲು ಅಥವಾ ನಾವೇ ಟಿಕೆಟ್ ತೆಗೆದು ಕೊಳ್ಳಲು ಪ್ರತೀ ಹಳ್ಳಿಯಲ್ಲೂ ಕೋರೆಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಟಿಕೆಟ್ ತೆಗೆದುಕೊಳ್ಳಲು ಕ್ಯೂ ನಿಲ್ಲಬೇಕಿಲ್ಲ.
   ಈವತ್ತು ಹಳ್ಳಿಗಾಡಿನ ಮುಚ್ಚದ ಕಲ್ಲಿನ ಕೋರೆಗಳಿಗೆ ಆಕಸ್ಮಿಕವಾಗಿ ಬಿದ್ದು ಅದೆಷ್ಟೋ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವವರಂತೂ ಉಳ್ಳಾಲ ‌ಸಂಕದ ತನಕ ಹೋಗಲೇ ಬೇಕಿಲ್ಲ. ಇಲ್ಲೇ ತೇಲಾಡ ಬಹುದು. ಇಷ್ಟಿದ್ದರೂ ಜಿಲ್ಲಾಡಳಿತಗಳು, ತಾಲೂಕ ಆಡಳಿತಗಳು ಸದ್ರಿ ಕೋರೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದೀಗ ವಿಟ್ಲ ಸಮೀಪದ ಅಳಿಕೆ ಗ್ರಾಮದ ಆದಾಳ ಎಂಬಲ್ಲಿ ಕಲ್ಲಿನ ಕೋರೆಗೆ ಬಿದ್ದು ಕೂಲಿ ಕಾರ್ಮಿಕನೊಬ್ಬ ಸ್ವರ್ಗ ಪಾಲಾಗಿದ್ದಾನೆ. ಅಮಾಯಕನ ಜೀವಕ್ಕೆ ಈಗ ಚಿಲ್ಲರೆಗಳು ಸೇರಿ ಚಿಲ್ಲರೆ ಬೆಲೆ ಕಟ್ಟಿದ್ದು ಮಾತ್ರ ವಿಪರ್ಯಾಸವೇ ಸರಿ.



    ಇವನು ಕಾರ್ತಿಕ್. ವಿಟ್ಲ ಮುಡ್ನೂರು  ‌ಗ್ರಾಮದ ಅಲಂಗಾರು ಅಡ್ಡದ ಪಾದೆ ನಿವಾಸಿ. ಕಾರ್ತಿಕ್ ಅಳಿಕೆ ಗ್ರಾಮದ ಕಾಡುಪಾಪನ ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದಾಗ    ಕೋರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ತಿಕ್ ಬ್ರದರು ವಿಟ್ಲ ಪೋಲಿಸರಿಗೆ ದೂರು ನೀಡಿದ್ದು ಯುಡಿಆರ್ 53/2023 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿದೆ. ಇನ್ನು ಕೋರೆ ಮಾಲೀಕ ಕಾಡುಪಾಪ ಮಾತ್ರ ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಚಂದುಗಿಡಿ ಎಂಬವರೊಂದಿಗೆ ಸೇರಿಕ್ಕೊಂಡು ಕಾರ್ತಿ ಮನೆಯವರಿಗೆ ಚಿಲ್ಲರೆ ಪರಿಹಾರ ಕೊಟ್ಟು ಕೇಸ್ ಮುಗಿಸಿ ಕೊಳ್ಳಲು ಪಂಚಾತಿಕೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲ ಮಾರಾಯ್ರೆ ಆ ಕಾಡುಪಾಪ ದೊಡ್ಡ ದುಡ್ಡಿನ ಮರ. ಈತನಿಗೆ ಕೇರಳ ಗಡಿಯಲ್ಲಿ ಒಂದು ಪಂಪು ಮತ್ತು ಒಂದು ವೈನ್ ಶಾಪೆಲ್ಲ ಇದೆ. ಇವನನ್ನು ಒಮ್ಮೆ ಅಲುಗಾಡಿಸಿದರೂ ಸಾಕು ಕಾಟು ಕುಕ್ಕಿನ ಮರ ಅಲುಗಾಡಿಸಿದಾಗ ಕುಕ್ಕು ಬೀಳುವ ಹಾಗೆ ದುಡ್ಡು ಬೀಳ ಬಹುದು. ಆದರೂ ಸತ್ತವರಿಗೆ ಪರಿ‌ಹಾರ ಕೊಡುವ ವಿಷಯದಲ್ಲಿ ಕುರೆ ಕಟ್ಟುತ್ತಿದ್ದಾರೆ. ಅದಕ್ಕಾಗಿ  ಈತ ಒಬ್ಬ ಪಂಚಾಯಿತಿ ಅಧ್ಯಕ್ಷ ಮತ್ತು ಚಂದುಗಿಡಿ ಎಂಬ ನಿರುದ್ಯೋಗಿಯನ್ನು ಛೂ ಬಿಟ್ಟಿದ್ದು ಅವರು ಕಾರ್ತಿ ಕುಟುಂಬಕ್ಕೆ ಚಿಲ್ಲರೆ ನೆಕ್ಕಿಸಿ ರಾಜಿಯಲ್ಲಿ ಫೈಲ್ ಕ್ಲೋಸ್ ಮಾಡಲು ಓಡಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲ ಕಣ್ರೀ ಒಂದು  ಪಂಚಾಯಿತಿ ಅಧ್ಯಕ್ಷ ಆಗಿದ್ದುಕ್ಕೊಂಡು ಒಬ್ಬ ಬಡಪಾಯಿ ಗೆ ನ್ಯಾಯ ದೊರಕಿಸಿ ಕೊಡುವ ಬದಲು ಇವನೇ ಹೋಗಿ ಕಾಡುಪಾಪನೊಂದಿಗೆ ಸೇರಿಕೊಂಡಿದ್ದು ವಿಪರ್ಯಾಸವೇ ಸರಿ. ಜನ ಇಂಥವನಿಗೂ ಓಟು ಕೊಟ್ಟಿದ್ದಾರಲ್ಲ. ಅದರಲ್ಲೂ ಅಧ್ಯಕ್ಷನ ಕುರ್ಚಿ ಬೇರೆ. ಇವನ ಬಗ್ಗೆ ಜನರಿಗೆ ಬೆಚ್ಚ ಆಗಿದೆ. ಆದ್ದರಿಂದ ಇನ್ನಾದರೂ ಸ್ಥಳೀಯ ಆಡಳಿತಗಳು ಇಂಥ ಅಪಾಯಕಾರಿ ಕೋರೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನು ಪಾಲಿಸದ ಕೋರೆ ಮಾಲೀಕರು ಮತ್ತು ಕಾನೂನು ಜಾರಿ ಮಾಡದ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ಇನ್ನೂ ಅನೇಕ ಸಾವು ನೋವುಗಳು ಸಂಭವಿಸುವುದರಲ್ಲಿ ಸಂಶಯವೇ ಇಲ್ಲ. ಅಮಾಯಕರ ಪ್ರಾಣದೊಂದಿಗೆ ಆಟವಾಡುವವರನ್ನೇ ಕೋರೆಗೆ ದೂಡಿ ಹಾಕಬೇಕು. ಭಂಡಾರ ಹೋಗಲಿ ಅಂಥವರದ್ದು.






                                    


           ಹಾಗೆಂದು ಈ  ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಕಾಡು ಪಂಜಿ ಹಾವಳಿ ಜೋರು. ತೋಟ, ಗದ್ದೆಗಳಿಗೆ ಧಾಳಿ ಮಾಡುವ ಈ ಕಾಡು ಹಂದಿಗಳು ರೈತರು ಬೆಳೆದ ಬೆಳೆಗಳನ್ನು ಲಗಾಡಿ ಮಾಡಿ ಬಿಡುತ್ತದೆ. ಅದರಲ್ಲೂ ಕಂಡೆ ಮಗುರಿದ ಅಡಿಕೆ ಸಸಿಗಳನ್ನಂತೂ ಕಬ್ಬು ಜಗಿದ ಹಾಗೆ ಜಬ್ಬಿ ಬಿಡುತ್ತದೆ ಈ ಲೋಫರ್ ಪಂಜಿಗಳು. ಹಾಗೆಂದು ಈ ಕಾಡು ಹಂದಿಗಳು ಎಷ್ಟೇ‌ ಅತ್ರಣ ಮಾಡಿದರೂ ಅವನ್ನು ಯಾರೇ ಆಗಲಿ ಟಚ್ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಜೈಲು ವಾಸ್ತವ್ಯ ಗ್ಯಾರೆಂಟಿ. ಅರಣ್ಯ ಇಲಾಖೆ ಮತ್ತು ಪೋಲಿಸ್ ಇಬ್ಬರೂ ಕಾಡು ಪಂಜಿ ಕೇಸಲ್ಲಿ ಟೈಟ್ ಬರೆಯುತ್ತಾರೆ.
          ಇದೀಗ ಗುತ್ತಿಗಾರು ಸಮೀಪದ ಮೊಗ್ರ ಕಾಡಪನ ಗುಡ್ಡೆಯಲ್ಲಿ ಪಂಜಿ  ಬೋಂಟೆ ಭಾರೀ ಜೋರುಟ್ಟು ಗಡ. ಲೋಕಲ್ ಬೇಟೆಗಾರರ ಉಪಟಳದಿಂದ ಇಡೀಕ್ಕಿಡಿ  ಪಂಜಿ ಫ್ಯಾಮಿಲಿಗಳೇ ಗಡ ಗಡ ಆಗಿದೆ ಗಡ. ಪಂಜಿಗಳಿಗೆ ಒಂದು ಕಟ್ಟು ಬೀಡಿ ಸೂತಪೆಟ್ಯೆ ಅಂಗಡಿಯಿಂದ ತರಲೂ ಆಗದಂತಹ ಪರಿಸ್ಥಿತಿ ಮೊಗ್ರದಲ್ಲಿದೆ. ಪಂಜಿಗಳು ಬರುವ ಓಣಿ ಒರುಂಕು, ಬರೆಯಿಂದ ಜಾರಿ ಲ್ಯಾಂಡ್ ಆಗುವ ಜಾಗ, ಅಗರುಗಳಲ್ಲಿ, ಗುರುಂಪುಗಳಲ್ಲಿ, ತೋಡುಗಳಲ್ಲಿ, ಉಜಿರು ಕಣಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಲೋಕಲ್ ಬೇಟೆಗಾರರು ಗೇರ್ ವಯರಿನ ಉರ್ಲು ಇಟ್ಟಿರುತ್ತಾರೆ. ಎಲ್ಲಿಯಾದರೂ ಪಂಜಿ ನನ್ಮಗನ ಹಣೆಯಲ್ಲಿ ಟೇಸ್ಟೀ‌ ಟೇಸ್ಟೀ, ಹೆಲ್ದಿ ಹೆಲ್ದಿ ಪಂಜಿ ಕಜಿಪ್ಪಿನ ಬಗ್ಗೆ ಉಲ್ಲೇಕವಿದ್ದರೆ ಆವತ್ತೇ ಅವನು ಇವರು ಅಲ್ಲಲ್ಲಿ ಇಟ್ಟಿರುವ ಗೇರ್ ವಯರಿನ ಉರ್ಲುಗೆ ಬಂದು ಬಿದ್ದೇ ಬೀಳುತ್ತಾನೆ. ಆವತ್ತು ಬೇಟೆಗಾರರಿಗೆ ವಿಜಯದಶಮಿ. ಹಾಗೆಂದು ಮೊಗ್ರದಲ್ಲಿ ಒಂದು ನಾಲ್ಕು ಜನ ಪ್ರೊಫೆಷನಲ್ ಬೊಂಟೆಯವರು ಇದ್ದಾರೆ. ಮೇಲೆ ಸೂರ್ಯ ಅತ್ತ ಮಸ್ಕ್ ಮಸ್ಕ್ ಆಗುತ್ತಿದ್ದಂತೆ ಈ ಬೇಟೆಗಾರರು ಬೆಡಿ ತಗೊಂಡು ಕಾಡು ಹತ್ತಿದರೆ ಮುಗಿಯಿತು, ಆವತ್ತು ಯಾವುದನ್ನಾದರೂ ಢಂ ಮಾಡದೆ ಇವರಿಗೆ ನಿದ್ದೆ ಬರಲ್ಲ. ಓ ಮೊನ್ನೆ ತಾನೇ ಎರಣಿಗುಡ್ಡೆ ಮರ್ಮಯ ಇಟ್ಟಿದ್ದ ಉರ್ಲ್ ಗೆ ಎರಡು ಸಲ ಹಂದಿ ಬಿದ್ದು ಡಬಲ್ ಧಮಾಕಾ ಆಗಿತ್ತು. ನಂತರ ಮೊನ್ನೆ ಮೊಗ್ರ ನದಿಯಲ್ಲಿ ಉರ್ಲಿಗೆ ಬಿದ್ದ ಟೇಸ್ಟೀ ಟೇಸ್ಟೀ ಹಂದಿಯನ್ನು ಭಟ್ರ‌ ಜಾಗದಲ್ಲಿ ಬೆಳಿಗ್ಗೆ 9 ಗಂಟೆಯ ಕರ್ಕಾಟಕ ಲಗ್ನದ ಸುಮುಹೂರ್ತದಲ್ಲಿ ಢಂ ಮಾಡಲಾಗಿದೆ. ಒಟ್ಟಾರೆಯಾಗಿ ಮೊಗ್ರದಲ್ಲಿ ಹಂದಿ ಬೇಟೆ ಒಂದು ಕ್ರೇಜ್ ಆಗಿ ಬೆಳೆಯುತ್ತಿದೆ. ದಿನಾ ಬೇಟೆ ನಡೆಯುತ್ತಿದೆ. ಅದರಲ್ಲೂ ಇರಣಿ ಗುಡ್ಡೆ ಮರ್ಮಯನಿಗೆ ಉರ್ಲ್ ಇಡುವುದರಲ್ಲಿ ಮಾಸ್ಟರ್ ಡಿಗ್ರಿ ಆಗಿದೆ. ಇವನ ಉರ್ಲಿಗೆ ಹೆದರಿ ಮೊಗ್ರ ಭಾಗದ ಅಷ್ಟೂ ಕುಲೆ, ಪೀಡೆ,ಪಿಚಾಚಿಗಳೂ ತಾವೂ ಉರ್ಲಿಗೆ ಬಿದ್ದು ಇನ್ನೊಮ್ಮೆ ಸಾಯೋದು ಬೇಡ ಎಂದು ‌ತಮ್ಮ ನೈಟ್ ರೌಂಡ್ಸನ್ನೇ ನಿಲ್ಲಿಸಿದೆಯೆಂದು  ಬಲಿಮ್ಮೆಯವರು ಮಂಡೆ ಬೆಚ್ಚ ಮಾಡಿಕೊಂಡಿದ್ದಾರೆ. ಇನ್ನು ಮೊಗ್ರದ ಚೊಕ್ಕಾಡಿ ಅಳಿಯ ಶಾರ್ಪ್ ಶೂಟರ್. ಇವನು ಗಾಳಿಯಲ್ಲಿ ಗುಂಡು ಹಾರಿಸಿದರೂ ಸಾಕು ಕಾಡು ಹಂದಿಗೆ HEART ATTACK ಆಗಿ ಬಿಡುತ್ತದೆ. ಆದ್ದರಿಂದ ಈ ಬೇಟೆಗಾರರು ಇನ್ನು ಕಾಡಲ್ಲಿ ಟೈಟಾಗಿ ಹಂದಿ ಅಂತ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕ್ಕೊಂಡು ಮೈನೀರು ಬಿಡಲು ಕುಂತವನನ್ನು ಢಂ ಮಾಡಿ ಒಂಜೆಕ್ಕ್ ಒಂಜರೆ ಆಗುವ ಮೊದಲು ಇವರ ಬೇಟೆಯನ್ನು ಸಂಬಂಧ ಪಟ್ಟ ಇಲಾಖೆಗಳು ನಿಲ್ಲಿಸೋದು ಒಳ್ಳೆಯದು. ಇಲ್ಲದಿದ್ದರೆ ಇವರು ಪಂಜಿಯ ಫೋಟೋವನ್ನು ಕೂಡ ಕಜಿಪು ಮಾಡಿ ತಿನ್ನುವ ಅಪಾಯಗಳಿವೆ.






                                   


                       


      ಹಾಗೆಂದು ಈ ಚೆಂಬು ಹೆಸರಿನ ಗ್ರಾಮ ಮಡಿಕೇರಿ ತಾಲೂಕಲ್ಲಿದ್ದರೂ ಮಡಿಕೇರಿಯಿಂದ ಇಲ್ಲಿಗೆ ಬರಬೇಕಾದರೆ ಸುಳ್ಯ ತಾಲೂಕಿನ ಕಲ್ಲುಗುಂಡಿ ದಾಟಿಯೇ ಬರಬೇಕು ಮತ್ತು ಚೆಂಬು ಜನ ಹೆಚ್ಚಾಗಿ ಸುಳ್ಯದಲ್ಲಿಯೇ ಬಂದು ಬೈಯಿಂಗ್ ಮತ್ತು ಸೆಲ್ಲಿಂಗ್‌ ಮಾಡಿಕೊಂಡಿರುತ್ತಾರೆ. ಇದೀಗ ಸದ್ರಿ ಚೆಂಬು ಗ್ರಾಮದಲ್ಲಿ ತಮ್ಮನೊಬ್ಬ ಪಿತ್ತ ನೆತ್ತಿಗೇರಿ ಸ್ವಂತ ಅಣ್ಣನ ಮಂಡೆಯನ್ನೇ ಶರ್ಬತ್ ಮಾಡಿದ ಘಟನೆ ನಡೆದಿದೆ.
   ಇದು ಚೆಂಬು. ಚೆಂಬಿನಲ್ಲಿ ಎರಡು ಚೆಂಬುಗಳಿವೆ. ಒಂದು U ಚೆಂಬು, ಇನ್ನೊಂದು M ಚೆಂಬು. U ಚೆಂಬು ಅಂದರೆ ಊರುಬೈಲು ಚೆಂಬು ಮತ್ತು M ಚೆಂಬು ಅಂದರೆ ಮೇಲ್ಚೆಂಬು ಎಂದರ್ಥ. ಮೊನ್ನೆ ಮೇಲ್ಚೆಂಬು ಗ್ರಾಮದ ನಾಯರ್ ಗದ್ದೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಫೈಟಿಂಗ್ ಒಂದು ನಡೆದಿದ್ದು ಫೈಟಿಂಗ್ ನಲ್ಲಿ ವಿಪರೀತ  ಪಿತ್ತ ನೆತ್ತಿಗೇರಿದ್ದ ತಮ್ಮ ಅಣ್ಣನ ಮಂಡೆ ಶರ್ಬತ್ ಮಾಡಿದ ಘಟನೆ ನಡೆದಿದೆ. ಇದರಿಂದಾಗಿ ಅಣ್ಣನ ಭೋಧ ತಪ್ಪಿದ್ದು ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ‌ICU ನಲ್ಲಿ ಗುಲ್ಗುಸು ಹಾಕಿ ಚಿಕಿತ್ಸೆ ಕೊಡಲಾಗುತ್ತಿದೆ. ಅಲ್ಲಿ ಆಸ್ಪತ್ರೆಯಲ್ಲಿ ಪೇಶೆಂಟನ್ನು ನೋಡಿ ಕೊಳ್ಳಲು ಖುದ್ದು ಶರ್ಬತ್ ಮಾಡಿದ ತಮ್ಮನೇ ಆರೈಕೆಗೆ ನಿಂತಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯಿಂದಾಗಿ ಭಯಂಕರ ಹೆದರಿಕೊಂಡಿರುವ ತಮ್ಮನ ಪಿತ್ತಕೋಶದದ ಅಷ್ಟೂ ಪಿತ್ತ ಲೀಕೇಜ್ ಆಗಿರುವ ಸಾಧ್ಯತೆಗಳಿವೆ. ಯಾಕೆಂದರೆ ಅಣ್ಣನ ಪರಿಸ್ಥಿತಿ ಇತ್ತೆ ಬುಕ್ಕ ಲೆವೆಲ್ ನಲ್ಲಿದ್ದು ಎಲ್ಲಿಯಾದರೂ ಅಂಚಿಂಚಿ ಆದರೆ ತಮ್ಮ ಸೆಕ್ಷನ್ 302 ಅಡಿಗೆ ಬರುತ್ತಾನೆ. ಸದ್ಯಕ್ಕೆ ತಮ್ಮ ಸೆಕ್ಷನ್ 307 ಅಡಿಯಲ್ಲಿದ್ದು ಇದೇ ಪರಿಸ್ಥಿತಿ ಮುಂದುವರೆದು ಅಣ್ಣ ಅಪಾಯದಿಂದ ಪಾರಾಗಲಿ. ಈ ಘಟನೆ ಮಡಿಕೇರಿ-ಸಂಪಾಜೆ OP ಪೋಲಿಸರ ವ್ಯಾಪ್ತಿಯಲ್ಲಿ ನಡೆದಿದ್ದು ಪಾಪ ಅವರಿಗೆ ವಿಷಯವೇ ಗೊತ್ತಿಲ್ಲ ಎಂದು ಕಾಣುತ್ತದೆ.


                                                          




    ವೇದಿಕೆ ರೆಡಿಯಾಗುತ್ತಿದೆ. ಮೈಕ ಸೆಟ್, ಬ್ಯಾಂಡ್ ಸೆಟ್, ಶಾಮೀಯಾನದವರಿಗೆ ಹೇಳಲು ಬಚ್ಚಿರೆ ಕೊಯ್ಯಲಾಗಿದೆ. ಇನ್ನೇನು ಚಡ್ಡಿ ಕಳಚಿ ಗರಿ ಗರಿ ಖಾದಿ ಧರಿಸಲು ದಿನ ಫಿಕ್ಸ್ ಆದರೆ ಮುಗೀತು. ಚೊಕ್ಕಾಡಿ-ಕುಕ್ಕುಜಡ್ಕ ಭಾಗದ ಪ್ರಭಾವೀ ದೇಶಭಕ್ತನೊಬ್ಬ ಕಾಂಗ್ರೆಸ್ ‌ಗೆ ಸೇರ್ಪಡೆ ಆಗುವ ಕರಾಳ ದಿನ ಹತ್ತಿರದಲ್ಲೇ ಇದೆ.
   ಹೌದು ಸ್ವಾಮಿ ! ಸುಳ್ಯ ತಾಲೂಕಿನ ಚೊಕ್ಕಾಡಿ- ಕುಕ್ಕುಜಡ್ಕ‌ ಏರಿಯಾದ ಪ್ರಭಾವೀ ದೇಶಭಕ್ತನೊಬ್ಬ ಬಿಜೆಪಿಗೆ ವಂದನಾರ್ಪಣೆ ಹೇಳಿ ಕಾಂಗ್ರೆಸ್ ನಲ್ಲಿ ಸ್ವಾಗತ ಭಾಷಣಕ್ಕೆ ರೆಡಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆ ಮೂಲಕ ಇಲ್ಲಿ ದೇಶ ಭಕ್ತರ ಟೀಮು ವಿರಾಟ್ ಕೊಹ್ಲಿ ವಿಕೆಟನ್ನೇ ಕಳೆದು ಕೊಳ್ಳಲಿದೆ.
    ಹಾಗೆಂದು ಚೊಕ್ಕಾಡಿ ಭಾಗದಲ್ಲಿ ಈ ದೇಶ ಭಕ್ತ ಪವರ್ ಫುಲ್ ಲೀಡರ್. ಸುಳ್ಯ ದೇಶಭಕ್ತರ ಗ್ಯಾಂಗಿನಲ್ಲೂ ಈ ನಾಯಕ ಟಾಪ್ ಲೆವೆಲ್ ಲೀಡರು. ದೇಶಭಕ್ತರ ಪಕ್ಷದಿಂದ ಈ ನಾಯಕ ಜನಪ್ರತಿನಿಧಿಯೂ ಆಗಿದ್ದು ತಾಲೂಕು ಲೆವೆಲ್ ನ ಎಲ್ಲಾ ಸೀಟುಗಳನ್ನು  ಅಲಂಕರಿಸಿಯಾಗಿದೆ. ಇದೀಗ ಈ ನಾಯಕ ಅದ್ಯಾಕೋ ದೇಶ ಭಕ್ತರ ಮೇಲೆ ಕೋಪಗೊಂಡಿದ್ದು ಪಕ್ಷಕ್ಕೆ ಡೈವೊರ್ಸ್ ಕೊಡಲು ನಿರ್ಧರಿಸಿದ್ದಾರೆ ಎಂದು ನಮ್ಮ ಚೊಕ್ಕಾಡಿ ಟವರ್ ಡುಂಯಿ ಡುಂಯಿ ಮಾಡಿದೆ. ಆಯಿತು ಈ ನಾಯಕರು ಹೋದರೆ ಹೋಗಲಿ ಎಂದು ದೇಶಭಕ್ತರು ಸುಮ್ಮನಿರಬಹುದಿತ್ತು. ಆದರೆ ಸದ್ರಿಯವರು "ನೀ ಬಂದಿಯನ.... ನೀ ಬಂದಿಯನ" ಎಂದು ಸುಳ್ಯ ಬಿಜೆಪಿಯ ಅಷ್ಟೂ ಆತ್ರಪ್ತ ಆತ್ಮಗಳಿಗೆ ಕಾಲ್ ಮಾಡಿ ಅವರನ್ನೂ ಕಾಂಗ್ರೆಸ್ ಸೇರಿಕೊಳ್ಳಲು ಒತ್ತಾಯಿಸುತ್ತಿದ್ದಾರೆ.   ಮಂಕಿ ತಾನೂ ಕೆಟ್ಟಿತ್ತಲ್ಲದೆ ಫಾರೆಸ್ಟನ್ನೆಲ್ಲ ಕೆಡಿಸಿತು ಎಂಬ ಪರಿಸ್ಥಿತಿ ಸದ್ಯಕ್ಕೆ ದೇಶಭಕ್ತರ ಗ್ಯಾಂಗಿನಲ್ಲಿದೆ. ಕೊಹ್ಲಿ ಹೋದರೆ ಹೋಗಲಿ ರಾಹುಲ್, ಜಡ್ಡೂ, ಸೂರ್ಯ ಇದ್ದಾರೆ. ಇಷ್ಟಕ್ಕೂ ಈ ನಾಯಕರಿಗೆ ದೇಶಭಕ್ತರ ಗ್ಯಾಂಗಿನಲ್ಲಿ ಎಲ್ಲಿ ವಯರ್ ಶಾರ್ಟ್  ಆಗಿದೆ ಎಂದೇ ಅರ್ಥವಾಗುತ್ತಿಲ್ಲ.


                                                         


    ಹಾಗೆಂದು ದಕ್ಷಿಣ ಕನ್ನಡ ಗಡಿ ಭಾಗದ ಆಚೆ ಯಾರೂ ಹೋಗಲ್ಲ. ಅಲ್ಲಿ ಫಾರೆಸ್ಟ್ ಬಿಟ್ಟರೆ ಬೇರೇನೂ ಇಲ್ಲ. ಆದರೆ ಅಂಥ ಫಾರೆಸ್ಟ್ ನಲ್ಲೂ ಅಕ್ರಮ ಗಣಿಗಾರಿಕೆ ಮಾಡುತ್ತಾರೆಂದರೆ ಅವರನ್ನು ಮೆಚ್ಚಲೇಬೇಕು. ಹಾಗೆಂದು ಈ ಭಾಗದಲ್ಲಿ ಹರಳು ಕಲ್ಲು ಅಗೆದ ವಿಷಯ ಇಡೀ ಲೋಕಕ್ಕೆ ಗೊತ್ತುಂಟು. ಅದನ್ನೆಲ್ಲ ವರ್ಣಿಸಲಸಾಧ್ಯ. ಆದರೆ ಇದೀಗ ಇಲ್ಲಿ ಚಿಕ್ಕದಾಗಿ, ಚೊಕ್ಕದಾಗಿ, ಯಾರಿಗೂ ಗೊತ್ತಾಗದಂತೆ ಕೆಂಪು ‌ಕಲ್ಲಿನ ಪಣೆಯೊಂದು ಕಾರ್ಯಚರಿಸುತ್ತಿದೆ ಎಂದು ನಮ್ಮ ಕಲ್ಮಕಾರ್ ಟವರ್ ಕೂಕುಲು ಹಾಕಿ ಹೇಳಿದೆ. ಯಾರಿಗೆ ಹೇಳೋಣ ಈ ವಿಷಯ?
   ಅಲ್ಲಿ ಕಲ್ಮಕಾರಿನ ಅರಣ್ಯ ಪ್ರದೇಶದಲ್ಲಿ ಈಗ ಕೆಂಪು ಕಲ್ಲಿನ ಪಣೆಯೊಂದು ಇದ್ದು‌ ಇಲ್ಲಿಂದ  ಪಿಕಪ್ ನಲ್ಲಿ ಕೆಂಪು ಕಲ್ಲು ಸಾಗಾಟ ಮಾಡಲಾಗುತ್ತಿದೆ. ಮೊದಲು ಭೂತ ಸ್ಥಾನ ಕಟ್ಟಲು ಕಲ್ಲು ಎಂದು ಕಲ್ಲು ಕಳ್ಳರು ಘೋಷಣೆ ಮಾಡಿದ್ದು ಇದೀಗ ನೂರು ಭೂತಗಳಿಗಾಗುವಷ್ಟು ಕಲ್ಲು ಇಲ್ಲಿಂದ ಹೊರಹೋಗು ತ್ತಿದೆ. ಭೂತಗಳಿಗೆ ಹತ್ತು ಕಲ್ಲು ಮಾತ್ರ ಹಾಕುವ ಇದೇ ಕಲ್ಲು ಕಳ್ಳರು ಹೊರಗೆ ಲೋಡ್ ಲೋಡ್ ಕಲ್ಲು ಇಳಿಸುತ್ತಿದ್ದಾರೆ. ಭೂತದ ಹೆಸರಿನಲ್ಲಿ ಕಲ್ಲು ಬ್ಯಾರಕ್ಕೆ ಇಳಿದಿರುವ ಈ ಕಲ್ಲು ಕಳ್ಳರ ಭಾವಚಿತ್ರ, ಅವರ ಸಾಧನೆಗಳ ಪಟ್ಟಿ, ಯಾರ ಮಿಸನ್, ಯಾರ ಪಿಕಪು ಮತ್ತು ಕಲ್ಲು ಕಳ್ಳರ, ಮರಗಳ್ಳರ, ಹರಳು ಕಳ್ಳರ ಮಹಾನ್ ನಾಯಕನ ಜಾತಕ ಪತ್ರಿಕೆಗೆ ಬಂದಿದೆ. ಇನ್ನಾದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಪ್ರದೇಶದಲ್ಲಿ ಸಣ್ಣ ವಾಕಿಂಗ್ ಆದರೂ ಮಾಡಲಿ. ಗ್ಯಾಸ್ಟ್ರಿಕ್ ಗೆ ಒಳ್ಳೆದು.

Copy to DFO Mangalore  ✅


                                                        


    ಕೆಲವು ದಿನಗಳ ಹಿಂದೆ ನಾವು ದೇವಚಳ್ಳ ಗ್ರಾಮದ ದೇವಾ ಎಂಬಲ್ಲಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರಗಳನ್ನು ಕಡಿದು ಮಾರಾಟ ‌ಮಾಡಲಾಗಿದೆ ಎಂದು ಬರೆದಿದ್ದೆವು. ಅಸಲಿಗೆ ಆ ಮರ ಕಡಿದ ಏರ್ಯ ಯಾರ ಅಂಡರಲ್ಲಿ ಬರುತ್ತದೆ ಎಂದು ಸುಳ್ಯ- ಸುಬ್ರಹ್ಮಣ್ಯ ಎರಡೂ ರೇಂಜಲ್ಲೂ ಕೇಳಿದ್ದೆವು. ನಮಗಲ್ಲ, ನಮಗಲ್ಲ ಎಂದು ಎರಡೂ ರೇಂಜ್ ನವರೂ ರೈಲು ಬಿಟ್ಟಿದ್ದರು. 
    ನಾವೂ ಮಣ್ಣು ಹಾಕಲಿ ಎಂದು ಸುಮ್ಮನಾಗಿ ಬಿಟ್ಟೆವು. ಈಗ ನೋಡಿದರೆ ಅದೇ ದೇವಚಳ್ಳ ಗ್ರಾಮದ ಕರಂಗಲ್ ಎಂಬಲ್ಲೂ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರ ಗಳನ್ನು ಮಟಾಷ್ ಮಾಡಲಾಗಿದೆ. ಯಾರಲ್ಲಿ ಹೇಳೋಣ? ಇದಕ್ಕೆ ಸಾಕ್ಷಿ ಎಂಬಂತೆ  ಕರಂಗಲ್ ನಲ್ಲಿ ಅಲ್ಲಲ್ಲಿ ಮರದ ಕುತ್ತಿಗಳು ಸಿಗುತ್ತಿದ್ದು ಕೇಳುವವರೇ ಇಲ್ಲದಂತಾಗಿದೆ. ಹಿಂದೆ ಸ್ಟೇಟ್ ಗೊಬ್ಬ ವೀರಪ್ಪನ್ ಇದ್ದ. ಈಗ ಅವನ ಸಂತಾನ ಗ್ರಾಮ ಗ್ರಾಮಗಳಲ್ಲಿ, ಅರಣ್ಯ ಇಲಾಖೆಯಲ್ಲಿ ಹುಟ್ಟಿಕೊಂಡದ್ದು ವಿಪರ್ಯಾಸವೇ ಸರಿ. ಅರಣ್ಯ ಇಲಾಖೆಯ ವೈಟ್ ಕಾಲರ್ ಗಳು ಒಮ್ಮೆ ದೇವಚಳ್ಳ ಗ್ರಾಮಕ್ಕೆ ವಾಕಿಂಗ್ ಹೋದರೂ ಸಾಕು. ಮರ ತಿಂದದ್ದು ಯಾರೆಂದು ಗೊತ್ತಾಗುತ್ತದೆ.







                                                       



    ಅದು ಸುಳ್ಯ- ಮಡಿಕೇರಿ ಸ್ಟೇಟ್ ಹೈವೇಯಲ್ಲಿ ಸಿಗುವ ಪ್ರತಿಷ್ಠಿತ ಗ್ರಾಮ ಪಂಚಾಯತ್. ಕೊಡಗು ಜಿಲ್ಲಾ ಸರಹದ್ದಿಗೆ ಸೇರಿರುವ ಈ ಊರು ಅರೆಭಾಷೆ ಗೌಡ್ರುಗಳ ರಿಪಬ್ಲಿಕ್ ಸಹ. ಇಲ್ಲಿ ಗೌಡ್ರುಗಳು ಹಾಕಿರುವ ಲಕ್ಷ್ಮಣ ರೇಖೆಯನ್ನು ಯಾರೂ ದಾಟುವಂತಿಲ್ಲ. ಇಂತಹ ಪ್ರತಿಷ್ಠಿತ ಪಂಚಾಯ್ತಿಗೆ ಒಬ್ಬ PDO ಘಟ್ಟದ ಮೇಲಿಂದ ಇಳಿದು ಬರುತ್ತಾನೆ. ಸದ್ರಿ PDOಗೆ ಸ್ವಲ್ಪ ಚೂಡಿ ಮರ್ಲ್ ಜಾಸ್ತಿ ಇತ್ತು ಗಡ. ಹಾಗೇ ಕಣ್ಣಿಗೆ ಕಂಡ ಚೂಡಿಗೆಲ್ಲ ಈತ ಬಲೆ ಹಾಕುತ್ತಿದ್ದ, ಕಾಳು ಹಾಕುತ್ತಿದ್ದ, ಬಿಸ್ಕತ್ತು ಬಿಸಾಡುತ್ತಿದ್ದ ಗಡ. ಆದರೆ ಎಲ್ಲಾ ಬಾಲುಗಳು ಲೂಸ್ ಡೆಲಿವರಿ ಅಲ್ವಲ್ಲ. ಒಂದು ಬಾಲಿಗೆ ಔಟಾದ.
   ಹಾಗೇ ಈತನ ಭಂಡಾರ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದೇ ಗ್ರಾಮಕ್ಕೆ ಸಂಬಂಧ ಪಟ್ಟ VA ಒಬ್ಬಳು ಹೆಣ್ಣು ಮಗಳಾಗಿದ್ದಳು. ಹಾಗಾಗಿ ಇಬ್ಬರೂ ಒಂದೇ ಗ್ರಾಮಕ್ಕೆ ಸಂಬಂಧ ಪಟ್ಟವರಾದ ಕಾರಣ PDO ಕಣ್ಣು VA ಮೇಲೆ ಬೀಳುತ್ತದೆ. ಅಲ್ಲಿಂದ VAಗೆ ಇವನ ಗುಳಿಗ್ಗ ಬಾಧೆ ಶುರುವಾಗುತ್ತದೆ. VAಗೆ ಶೇಕ್ ಹ್ಯಾಂಡ್ ಮಾಡೋದು, ಬೆನ್ನು ತಟ್ಟೋದು/ಸವರೋದು, ಅಪಗಪಗ ಟಚ್ಚಿಂಗ್, ಡ್ಯಾಶ್ ಹೊಡೆಯೋದು, ಡ್ರಾಪ್ ಕೊಡೋಕೆ  ನೋಡೋದು ಇತ್ಯಾದಿ ಇತ್ಯಾದಿ ಮಾಡುತ್ತಿದ್ದ. ಆದರೆ ಇವನ ಎಲ್ಲಾ ಬಾಲಲೀಲೆಗಳನ್ನು ಸಹಿಸಿಕ್ಕೊಂಡಿದ್ದ VA ತನ್ನಂತೆಯೇ ಇವನೂ ಸರ್ಕಾರಿ ನೌಕರ ಎಂದು ಸುಮ್ಮನಿದ್ದಳು. ಆದರೆ VAಯ ಈ ಮೌನವನ್ನೇ ಒಪ್ಪಿಗೆ ಎಂದು ಮಿಸ್ಸಾಗಿ ಅರ್ಥ ಮಾಡಿಕೊಂಡ PDO ಒಂದು ದಿನ ಮೈನ್ ಸ್ವಿಚ್ ಗೆ ಕೈ ಹಾಕಿ ಬಿಟ್ಟ. ಅಷ್ಟೇ. ಕೇಸ್ ದೊಡ್ಡದಾಯಿತು.
   PDOನ ಈ ಒಂದು ಅತಿರೇಕದ ವರ್ತನೆಯಿಂದ ರೋಸಿ ಹೋದ VA  ಸೀದಾ ಹೋಗಿ ಆ ಊರಿನ ಪ್ರಮುಖರಲ್ಲಿ PDO ಬಗ್ಗೆ, ಅವನ ಲೀಲೆಗಳ ಬಗ್ಗೆ ಇಂಚಿಂಚು ಬಿಡದೆ ಹೇಳಿದ್ದಾರೆ. ಮೊದಲೇ ಅರೆಭಾಷೆ ಗೌಡ್ರುಗಳ ರಿಪಬ್ಲಿಕ್ಕು, ದೇಶಭಕ್ತರ ಭದ್ರಕೋಟೆ  ಬೇರೆ. ಊರ ಪ್ರಮುಖರು PDOನ ಕರೆದು ಬಚ್ಚಿರೆ ತಿಂದು ಉಗಿದಿದ್ದಾರೆ. ಕೂಡಲೇ ಆ ಊರಿಂದ ಕರ ಕೈಲ್, ಗಂಟು ಮೂಟೆ ಕಟ್ಟುವಂತೆ ಪಂಚಾಯಿತಿ ಮುಗಿಸಿದ್ದಾರೆ ಮಾತ್ರವಲ್ಲದೆ ಸದ್ರಿ PDOಗೆ ಆ ಪಂಚಾಯಿತಿಯಿಂದ ಟ್ರಾನ್ಸ್ ಫರ್ ಮಾಡಿಸಿ ಫೈಲ್‌ ಕ್ಲೋಸ್ ಮಾಡಿಸಿದ್ದಾರೆ. ಇದೀಗ ಆ PDO ಅದೇ ಸ್ಟೇಟ್ ಹೈವೇಯಲ್ಲಿ ಸಿಗುವ ಇನ್ನೊಂದು ಪಂಚಾಯಿತಿಯಲ್ಲಿ ಸ್ಥಾಪನೆಯಾಗಿದ್ದು ಸದ್ಯಕ್ಕೆ ಆ ಪಂಚಾಯಿತಿಗೆ ಕೆಲಸಕ್ಕೆ ಬರುತ್ತಿದ್ದ ಹುಡುಗಿಯೊಂದು ಕೆಲಸಕ್ಕೆ ಬರುತ್ತಿಲ್ಲ ಎಂದು ತಿಳಿದುಬಂದಿದೆ. PDO ಭಾರೀ ಚಾಲೂ ಮಾರಾಯ್ರೆ ದೊಡ್ಡವನಾಗುವಾಗ ಇನ್ನೂ ದೊಡ್ಡ ಚಾಪ್ಟರ್ ಆಗ ಬಹುದು.
    







                                                      


  ದೇವರಿಗೂ ಬೇಸರವಾಗಿರಬಹುದು ಸುಳ್ಯ ದ ಮದುವೆ ಗದ್ದೆಯ ಹುಡುಗಿಯನ್ನು ವಾಪಾಸ್ ಕರೆಸಿಕೊಳ್ಳಲು. ಆದರೆ ಈ ಪಾಪಿಗಳ ಲೋಕದಿಂದ ಅವಳೇ ಸ್ವಯಂ  ಮುಕ್ತಿ ತೆಗೆದುಕೊಳ್ಳಲು ನಿರ್ಧರಿಸಿದಾಗ ಆ ದೇವರೇ ಮದುವೆ ಗದ್ದೆ ಹುಡುಗಿಯನ್ನು ವಾಪಾಸ್ ಕರೆಸಿಕೊಂಡಿದ್ದಾನೆ ಅಷ್ಟೇ.
   ಇದು ಸುಳ್ಯ ಉಬರಡ್ಕದ ಮದುವೆ ಗದ್ದೆಯ ದುರಂತ ನಾಯಕಿಯೊಬ್ಬಳ ಕತೆ. ಹೆಸರು ಐಶ್ವರ್ಯ. ಸೌಂದರ್ಯದ ಗಣಿ, ಚೆಲುವಿನ ಖಜಾನೆ ಇವಳು. ಬೆಂಗಳೂರಿನಲ್ಲಿ ಸೆಟಲ್ ಆಗಿರುವ ಮದುವೆಗದ್ದೆಯ  ಸುಬ್ರಹ್ಮಣ್ಯ - ಉಷಾ ದಂಪತಿಯ ಕೊಂಡಾಟದ ಪುತ್ರಿ ಈಕೆ.  ಮದುವೆ ಗದ್ದೆಯ ಪ್ರತಿಷ್ಠೆಗೆ ಮತ್ತು ಕೊಂಡಾಟದ ಮಗಳ ಯಶಸ್ಸಿಗಾಗಿ ಸುಬ್ರಹ್ಮಣ್ಯರು ಮಗಳು ಐಶೂವನ್ನು ಅಮೇರಿಕಾದಲ್ಲಿ ಓದಿಸಿದ್ದರು. ಐಶೂ ಬೆಂಗಳೂರಿನಲ್ಲಿ ಅದ್ಯಾವುದೋ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸವನ್ನೂ ಮಾಡುತ್ತಿದ್ದಳು. ಓದು  ಮುಗಿದು, ಕೆಲಸ ಸಿಕ್ಕಿದ ಮೇಲೆ ಸುಬ್ರಹ್ಮಣ್ಯರು ಮಗಳನ್ನು ಬೆಂಗಳೂರಿನ ಡೈರಿ ರಿಚ್ ಸಾಮ್ರಾಜ್ಯದ ರಾಜ ಕುಮಾರ ರಾಜೇಶನಿಗೆ ಕೊಟ್ಟು ಮದುವೆಯನ್ನೂ ಮಾಡಿಸಿದ್ದರು ನಾಲಕ್ಕು ವರ್ಷಗಳ ಹಿಂದೆ. ಮದುವೆ ಗದ್ದೆ ಸುಬ್ರಹ್ಮಣ್ಯರದ್ದು  ಎಲ್ಲಾ ಮುಗಿದ ಮೇಲೆ ರಾಜೇಶಂದು ಶುರುವಾಯಿತು. ಮದುವೆ ಗದ್ದೆಯ ಹುಡುಗಿ ಧರೆಗಿಳಿದು ಹೋಯ್ತು.
   ಹಾಗೆಂದು ಈ ಡೈರಿ ರಿಚ್ ರಾಜೇಶ್ ಕೂಡಾ ಸುಳ್ಯದವನು. ಕನಕಮಜಲು ಕಾಪಿಲ ಗಿರಿಯಪ್ಪ ಗೌಡರು ಬೆವರು ಸುರಿಸಿ ಕಟ್ಟಿದ ಡೈರಿ ರಿಚ್ ಸಾಮ್ರಾಜ್ಯದ ಉತ್ತರಾಧಿಕಾರಿ ಅವನು. ಸೌಂದರ್ಯದ ಗಣಿಯನ್ನು ಚೆನ್ನಾಗಿಯೇ ನೋಡಿ ಕೊಂಡಿದ್ದ ರಾಜೇಶ. ಆದರೆ ಅದ್ಯಾರೋ ಶಕುನಿ ಗಳು ಎಂಟ್ರಿ ಕೊಟ್ಟು ಮದುವೆ ಗದ್ದೆ ಹುಡುಗಿ ಮತ್ತು ಡೈರಿ ರಿಚ್ ಸಾಮ್ರಾಜ್ಯದ ನಡುವೆ ಫಿಟ್ಟಿಂಗ್ ಇಟ್ಟು ಬಿಟ್ಟರು. ಇದರ  ರಿಸಲ್ಟ್ ಮಾತ್ರ ದುರಂತಮಯವಾಗಿ ಹೋಯ್ತು. ಮದುವೆ ಗದ್ದೆ ಹುಡುಗಿ ವಾಪಾಸ್ ಹೊರಟು ಹೋದರೆ ಡೈರಿ ರಿಚ್ ಸಾಮ್ರಾಜ್ಯದ ರಾಜ, ರಾಣಿ, ಯುವರಾಜ ಮತ್ತು ರಾಜ ಪರಿವಾರದ ಕೆಲವು ಸದಸ್ಯರು ಪೋಲಿಸ್ ಕಸ್ಟಡಿಯಲ್ಲಿ VIP ಚಡ್ಡಿಯಲ್ಲಿ ಕುಂತಿದ್ದಾರೆ. ಬೇಕಾ ಇವ್ರಿಗೆ?
   ಹಾಗೇ ಮದುವೆ ಗದ್ದೆ ಹುಡುಗಿಯನ್ನು ಮದುವೆಯಾಗಿ ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಇವರಿಬ್ಬರ ಬದುಕಿನಲ್ಲಿ ಶನಿ ವಕ್ಕರಿಸಿ ಬಿಟ್ಟ. ರಾಜೇಶನಿಗೆ ಐಶೂ ಬೊಡಿದು ಬಿಟ್ಟಲು. ಅದೇನೋ ಆಸ್ತಿ ಗಲಾಟೆಯೂ ಇವರಿಬ್ಬರ ದಾಂಪತ್ಯದಲ್ಲಿ ಹುಳಿ ಹಿಂಡಿತು. ಐಶೂಗೆ ಗಂಡನ ಮನೆಯಲ್ಲಿ ಕ್ಲಾಸ್, ಸ್ಪೆಷಲ್ ಕ್ಲಾಸ್ ಶುರುವಾಯ್ತು. ಹುಡುಗಿ ಇದನ್ನೆಲ್ಲ ತಡೆದುಕೊಂಡು ಕುಂತಿತು. ಆದರೆ ಕಡೆಗೊಮ್ಮೆ ಇನ್ನು ಸಾಧ್ಯವಿಲ್ಲ ಎಂದು ಗಂಡನ ಮನೆಯಿಂದ ಎದ್ದು ತವರಿನ ಕಡೆಗೆ ತನ್ನ ಲಾಸ್ಟ್ ಜರ್ನಿ ಮುಗಿಸಿ ಬಿಟ್ಟಳು ಮತ್ತು ಅಲ್ಲೇ ತನ್ನ ತವರಿನಲ್ಲೇ ನಾಲಕ್ಕು ಪುಟಗಳ ಗಂಡನ ಮನೆಯ ಕತೆಯನ್ನು ಬರೆದಿಟ್ಟು ಬದುಕಿಗೊಂದು ಅಂತ್ಯ ಹಾಡಿ ಬಿಟ್ಟಳು.
   ಹಾಗೇ ಈ ಬಗ್ಗೆ ಪೋಲಿಸ್ ಕಂಪ್ಲೈಂಟ್ ಆಗಿ ಐಶೂ ಬರೆದಿದ್ದ ಗಂಡನ ಮನೆಯ ಕತೆ ಪೋಲಿಸರಿಗೆ ಸಿಕ್ಕು ಅವರು ಡೈರಿ ರಿಚ್ ಮನೆಗೆ ಬಂದರೆ ಡೈರಿ ರಿಚ್ ಅದಾಗಲೇ ಗೋವಾ ರೀಚ್ ಆಗಿತ್ತು. ಗೋವಾದಿಂದ ಡೈರಿ ರಿಚ್ ಪರಿವಾರ ‌ಬಾಂಬೆ ಕಡೆ ದಿಬ್ಬಣ ಹೊರಟಾಗ ಹೋಗಿ ಬೆಂಗಳೂರು ಪೊಲೀಸರು ಹಿಡ್ಕೊಂಡಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಕರೆ ತಂದ ಪೋಲಿಸರು ಡೈರಿ ರಿಚ್ ಪರಿವಾರಕ್ಕೆ   ಸನ್ಮಾನ ಮಾಡಲು, ಬೆಂಡ್ ತೆಗೆಯಲು ಪರಿವಾರವನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
   ಇನ್ನೊಬ್ಬರ ಮನೆಯ ಗಿಳಿಯನ್ನು ತಂದು ಕತ್ತೆ ಮಾಡುವುದು ಬಹಳ ಪುರಾತನ ಕಾಲದಿಂದಲೂ ನಮ್ಮ ಸಂಪ್ರದಾಯವೇ ಆಗಿ ಬಿಟ್ಟಿದೆ. ಬೇರೆಯವರ ಮನೆಯ ರಾಜ ಕುಮಾರಿಯನ್ನು ತಂದು ಅವಳನ್ನು ಮಹಾ ರಾಣಿ ಮಾಡಬೇಕೇ ಹೊರತು ಅವಳನ್ನು ದಾಸಿ ಮಾಡಿದರೆ ನಾವು ಪೋಲಿಸ್ ಮಾಮನ ಕಸ್ಟಡಿಯಲ್ಲಿ ಚಡ್ಡಿಯಲ್ಲಿ ಕೊಕ್ಕರ ಕೂರ ಬೇಕಾಗುತ್ತದೆ. ಮದುವೆ ಗದ್ದೆ ಹುಡುಗಿಯ ಆತ್ಮಕ್ಕೆ ಶಾಂತಿ ಸಿಗಲಿ.
    







                                                     



  ಅಲ್ಲಿ ಪುತ್ತೂರು ತಾಲೂಕಿನ ವೀರಮಂಗಲ ವಿಷ್ಣು ಮೂರ್ತಿ ದೇವಸ್ಥಾನದ ಹತ್ತಿರ ಸಾಗುವಾನಿ ಮರಗಳ ಮಾರಣ ಹೋಮ ನಡೆದಿದೆ ಎಂದು ತಿಳಿದುಬಂದಿದೆ. ಲೋಕಲ್ ಅರಣ್ಯ ಇಲಾಖೆ ಖಾಕಿಗಳನ್ನು ಸೆಟ್ ಮಾಡಿಕ್ಕೊಂಡು ಅವರಿಗೆ ತಂಬಿಲ ಮಾಡಿ ಅಗೆಲು ಕೊಟ್ಟು ಸಾಗುವಾನಿ ಮರಗಳಿಗೆ ಟಿಕೆಟ್ ಕೊಡಲಾಗಿತ್ತು. 
   ಆದರೆ ಯಾರೋ ಪುಣ್ಯಾತ್ಮರು ಅರಣ್ಯ ಸಂಚಾರಿ ದಳಕ್ಕೆ ಕೂಕುಲು ಹಾಕಿದ ಕಾರಣ ಅವರೂ ಈವತ್ತು ನಟ್ಟ ಮಧ್ಯಾಹ್ನ ವೀರಮಂಗಲಕ್ಕೆ ಬಂದಿದ್ದು ಅವರಿಗೂ ಬಡಿಸಿ ಅವರನ್ನೂ ಚಪ್ಪೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಸಾಗುವಾನಿ ಲೋಡ್ ಅಂದಾಜು ಯಾವಾಗ ಹೋಗಬಹುದು ಎಂಬ ಅಂದಾಜು ಸಾರ್ವಜನಿಕರಿಗೆ ಸಿಕ್ಕಿದ್ದು ಒಂದು ಕಾಲ್ DFOಗೆ ಕೂಡ ಹೋಗಿದೆ ಎಂದು ತಿಳಿದುಬಂದಿದೆ. ಅವರು ಬರುವ ಮೊದಲು ಸ್ಪಾಟ್ ಕ್ಲೀನ್ ಮಾಡಿ ಕುತ್ತಿಗೆ ಸೂ ಹಾಕಿ ಬೊನ್ಯ ಮಾಡಿದ್ರೆ ಮರದ ಕತೆ ಮುಗಿಯುತ್ತದೆ.
    







                                                    


  ಸುಳ್ಯ ತಾಲೂಕಿನ ಈ ಗ್ರಾಮದ ಹೆಸರಿನಲ್ಲಿ ದೇವರಿದ್ದರೂ ಈ ಗ್ರಾಮದ ಅಮಾಯಕರನ್ನು ಕಂಕಣೆ ಮಾಡಿ ತಾವು ದುಡ್ಡು ಮಾಡಿಕೊಳ್ಳುವ ಬಿಸಿನೆಸ್ಗೆ ಅರಣ್ಯ ಇಲಾಖೆ ಇಳಿದದ್ದು ಮಾತ್ರ ವಿಪರ್ಯಾಸವೇ ಸರಿ. ದೇವಚಳ್ಳ ಗ್ರಾಮದ ದೇವಾ ಎಂಬಲ್ಲಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರಗಳು ಲಾರಿ ಹತ್ತಿ ಹೋದದ್ದು ಯಾರಿಗೂ ಗೊತ್ತಾಗದ್ದು ದೊಡ್ಡ ಸೋಜಿಗವಾಗಿದೆ. ದೇವಚಳ್ಳ ಗ್ರಾಮ ಯಾವ ರೇಂಜ್ ಅಂಡರ್ ಬರ್ತದೆ? ಸುಳ್ಯ ರೇಂಜ್ OR ಸುಬ್ರಹ್ಮಣ್ಯ ರೇಂಜ್? ಕೇಳಿದರೆ ಅರಣ್ಯ ಇಲಾಖೆಗೇ ಗೊತ್ತಿಲ್ಲ.
   ಇದು ದೇವಾ. ಇಲ್ಲಿನ ಅರಿಯಣ್ಣ, ಬಾಚಣ್ಣ,ಕಿಷ್ಣಣ್ಣ, ಚಂದಣ್ಣ ಮುಂತಾದದವರ ಕುಮ್ಕಿಯಿಂದ ಮತ್ತು ಕಂಡಕಜೆ, ಕುಂಬಾರ ಕೇರಿ,ಕುಚ್ಯಾಲದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರಗಳನ್ನು ಸಮ್ಮಿ ಯಾನೆ  ಸಮೀರ್ ಎಂಬುವನು ಲೋಡ್ ಮಾಡಿಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುಳ್ಯ ರೇಂಜ್ ನಲ್ಲಿ ಕೇಳಿದರೆ ದೇವಚಳ್ಳ, ದೇವಾ ನಮಗೆ ಬರಲ್ಲ ಅಂತ ಹೇಳುತ್ತಾರೆ. ಸುಬ್ರಹ್ಮಣ್ಯ ರೇಂಜ್ ನವರಲ್ಲಿ  ದೇವಚಳ್ಳದ ಬಗ್ಗೆ ಕೇಳಿದರೆ ಅವರ ಪಿತ್ತ್ ನೆತ್ತಿಗೇರಿ ಅದರ ಬಗ್ಗೆ ನಮ್ಮಲ್ಲಿ ಕೇಳಬೇಡಿ ಎಂದು ಹೇಳುತ್ತಾರೆ. ಹಾಗಾದರೆ ದೇವಚಳ್ಳದ ಮರಗಳ್ಳರನ್ನು ಹಿಡಿಯೋದು ಯಾರು? ಪೋಲಿಸರಲ್ಲಿ ಹೇಳಲಾ?
   ಹಾಗೆಂದು ನಮ್ಮ ಮಾಹಿತಿದಾರರ ಪ್ರಕಾರ ದೇವಾ ಸುಬ್ರಹ್ಮಣ್ಯ ರೇಂಜ್ ಅಡಿಯಲ್ಲಿ ಬರುತ್ತವೆ ಎಂದು ತಿಳಿದುಬಂದಿದೆ. ಸುಬ್ರಹ್ಮಣ್ಯ ಕಡೆಯಿಂದ ದೇವಚಳ್ಳ ಗ್ರಾಮಕ್ಕೆ ಅಪಗಪಗ ಒಂದು ಬಸವ ಬಂದು ಹೋಗಿ ಮಾಡುತ್ತಿರುವ ವಿಷಯ ಈಗ ಲೀಕ್ ಆಗಿದ್ದು ಬಸವನಿಗೆ ಮರ ತಿನ್ನುವ ಬ್ಯಾಡ್ ಹ್ಯಾಬಿಟ್ ಇದೆ ಎಂದು ತಿಳಿದುಬಂದಿದೆ. ಮರ ತಿಂದು ತಿಂದು ತಿಂದು ಬಸವ ಹೀಟ್ ಗೆ ಬರುವ ಮೊದಲು ಸಂಬಂಧ ಪಟ್ಟವರು ಬಸವನಿಗೆ ಒಂದು ಬಕ್ಕಿನ ಬಲ್ಲಿನ ಮೂಗು ದಾರವಾದರೂ ಹಾಕುವುದು ಒಳ್ಳೆಯದು.
    







                                                   


   ಅಲ್ಲಿ ಗುತ್ತಿಗಾರು ಕಾಲೇಜು ಓಣಿಯಲ್ಲಿ ಹಗಲಿಡೀ ಕಾಲೇಜು ಮಕ್ಕಳ ಕಲರವ ಕೇಳಿ ಬಂದರೆ ಅತ್ತ ಸೂರ್ಯ ಅಡ್ಡ ಹೋಗುತ್ತಿದ್ದಂತೆ ಓಣಿ ರಂಗೇರಿ ಬಿಡುತ್ತದೆ ಎಂದು ನಮ್ಮ ಗುತ್ತಿಗಾರು ಟವರ್ ವರದಿ ಓದಿದೆ. ಈ ಓಣಿ ಕಾಲೇಜು ಮಕ್ಕಳು ಮನೆಗೆ  ಹೋಗಿ ಕಾಲೇಜು ಅಟೆಂಡರ್ ಕಾಲೇಜಿಗೆ ಕೊನೆಯ ಬೀಗ ಹಾಕಿದ ಮೇಲೆ ಅನಾಥವಾಗಿ ಬಿಡುತ್ತದೆ. ಹಾಗೇ ಕತ್ತಲು ಕವಿಯುತ್ತಾ ಓಣಿ ಮಸ್ಕ್ ಮಸ್ಕ್ ಆಗುತ್ತಿದ್ದಂತೆ ಇಲ್ಲಿ ಮೋಹಿನಿ ಬಾಧೆ ಶುರುವಾಗುತ್ತದೆ ಎಂದು ಬಚ್ಚಿರೆ ಬಲಿಮೆಯಲ್ಲಿ ಕಂಡು ಬಂದಿದೆ. ಇಲ್ಲಿ ಸಂಜೆ ಏಳೂವರೆಯಿಂದ ನೈಟ್ ಹತ್ತರ ತನಕ ಕೆಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಕೆಲವು ಲೋಕಲ್ ಮೋಹಿನಿಗಳು ಇಲ್ಲಿ ರಾತ್ರಿ ವಿದ್ಯಾಭ್ಯಾಸ ಮಾಡುತ್ತಿದ್ದು ಏಳರಿಂದ ಎಂಟು, ಎಂಟರಿಂದ ಒಂಭತ್ತು, ಕೊನೆಗೆ ಹತ್ತು ತನಕ ಜಲಜನಕದ ಬಗ್ಗೆ ಥಿಯರಿ ಸ್ಟಡಿ ನಂತರ ಭಟ್ಟಿ ಇಳಿಸುವ ಪುಣ್ಯ ಕಾರ್ಯಗಳು ನಡೆಯುತ್ತವೆ ಎಂದು ತಿಳಿದುಬಂದಿದೆ. ಇದರ ಪರಿಣಾಮ ಮರುದಿನ ಬೆಳಿಗ್ಗೆ ಓಣಿಯಲ್ಲಿ, ಓಣಿ ಆಸುಪಾಸಿನಲ್ಲಿ ಬೀಡಿ ಸಿಗರೇಟು ಕುತ್ತಿಗಳು, ಪಿಂಟಿದ ಪಿಂಟ್ ಬಾಟ್ಲಿಗಳು, ಕ್ವಾಟ್ರು ಬಾಟ್ಲಿಗಳು, ಪುಗ್ಗೆಯಂತಹ ವಸ್ತುಗಳು, ಮಾರುತಿ, ಪಾನ್ ಮಸಾಲ ಪ್ಯಾಕೆಟ್ ಗಳು ಮತ್ತು ಅರ್ಜೆಂಟ್ ಅರ್ಜೆಂಟಲ್ಲಿ ಬಿಟ್ಟು ಹೋದ ಡೆಡ್ಲಿ ಚೆಡ್ಡಿಗಳು ಅಲ್ಲಲ್ಲಿ ಬಿದ್ದಿರುತ್ತದೆ. ಈ ವಸ್ತುಗಳು ಹಿಂದಿನ ನೈಟಿನಲ್ಲಿ ನೈಂಟಿ ಹಾಕಿ ನೈಟಿ ಮೇಲೆ ನಡೆಸಿದ ದಾಳಿಗೆ ಸಾಕ್ಷಿಯಾಗಿದೆ. ಒಬ್ಬರದ್ದು ಫಸ್ಟ್ ಶೋ ಮುಗಿದ ಮೇಲೆ ಇನ್ನೊಬ್ಬರದ್ದು ಸೆಕೆಂಡ್ ಶೋ.
   ಹಾಗೆಂದು ಈ ಓಣಿಗೆ ನೈಟ್ ಕುಲೆಗಳು ಬರಲೂ ಹೆದರಿಕೊಳ್ಳುತ್ತವೆ ಮತ್ತು ನಾಚಿಕೊಳ್ಳುತ್ತದೆ. ಯಾಕೆಂದರೆ ಅವು ಅಪ್ಪಿ ತಪ್ಪಿ ಬಂದರೂ ವಯಸ್ಕರ ಸಿನಿಮಾಗಳ ಅಬ್ಬರ ಈ ಓಣಿಯಲ್ಲಿ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ ನಾಚಿಕೆ ಪಟ್ಟುಕೊಂಡು ಬಂದ ದಾರಿಯಲ್ಲೇ ಛೀ.. ಥೂ... ಎಬೂ... ಎಂದು ಹೋಗ ಬೇಕಾಗುತ್ತದೆ. ಅಷ್ಟು ನಿರ್ಜನ ‌ಈ ಓಣಿ. ಹಾಗೆಂದು ಈ ಓಣಿಗೆ ಪೋಲಿಸರೂ ಬರಲ್ಲ. ಯಾಕೆಂದರೆ ಅಗತ್ಯ ಇಲ್ಲ ಎಂದು. ಆದರೆ ಈ ಓಣಿ ಗುತ್ತಿಗಾರಿನಿಂದ ಬಳ್ಪಕ್ಕೆ ಓಡಲು ಕಳ್ಳ ದಾರಿಯಾಗಿದೆ. ಕಳ್ಳರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಓಣಿ ಹೇಳಿ ಮಾಡಿಸಿ ದಂತಿದೆ. ಆದ್ದರಿಂದ ಪೋಲಿಸರು ನೈಟ್ರೌಂಡ್ಸ್ ಗೆ ಬಂದಾಗ ಒಮ್ಮೆ ಈ ಓಣಿಗೆ ಲೈಟ್ ಹಾಕಿದರೂ ಸಾಕು ಹುಟ್ಟುಡುಗೆಯಲ್ಲಿ  ಮಹಾನುಭಾವರು ಮತ್ತು ಭಾವಿಯರು ಓಡುವ ಸೀನ್ ಕಣ್ತುಂಬಿಸಿ ಕೊಳ್ಳ ಬಹುದು. ಪೋಲಿಸರು ಈ ಓಣಿಗೆ ಮೋಹೀನಿ ಕಾಟದಿಂದ ಮುಕ್ತಿ ಕೊಡಿಸ ಬೇಕಾಗಿದೆ.

    







                                                  


     ಅವಿಭಜಿತ ದಕ್ಷಿಣಕನ್ನಡದ ಗೌಡ್ರುಗಳ ರಾಜಧಾನಿ ಸುಳ್ಯದಲ್ಲಿ ಸದ್ದಿಲ್ಲದೆ ಅನಧಿಕೃತವಾಗಿ ಸರ್ಕಾರಿ ಬೋರ್ಡ್ ನ ಅಡಿಯಲ್ಲಿ ಶಿಶು ಪಾಲನಾ ಕೇಂದ್ರವೊಂದು ಕಾರ್ಯಾ ಚರಿಸುತ್ತಿದೆ.
   ಕೆಲವು ಸಮಯಗಳ ಹಿಂದೆ ಸರ್ಕಾರ ತಾನೇ ಪ್ರಾರಂಭಿಸಿದ್ದ ಕೆಲವು ಶಿಶು ಪಾಲನಾ ಕೇಂದ್ರಗಳನ್ನು ಮುಚ್ಚಿತ್ತು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಸರ್ಕಾರವೇ ನಡೆಸುತ್ತಿದ್ದ ಶಿಶು ಪಾಲನಾ ಕೇಂದ್ರಗಳನ್ನು ಅಂಡಿಗುಂಡಿ ಕಾರಣ  ಕೊಟ್ಟು ಸರ್ಕಾರವೇ ಬಂದ್ ಮಾಡಿತ್ತು. ಈ ಬಗ್ಗೆ ಜಿಲ್ಲಾ ಕೋರ್ಡಿನೇಟರ್ ಎಲ್ಲಾ ಶಿಶು ಪಾಲನಾ ಕೇಂದ್ರಕ್ಕೆ ಬಂದ್ ಮಾಡುವಂತೆ ತಿಳಿಸಿದ್ದರು. ಅವರ ಸೂಚನೆಯಂತೆ ಎಲ್ಲಾ ಶಿಶು ಪಾಲನಾ ಕೇಂದ್ರಗಳನ್ನು ಮುಚ್ಚಲಾಗಿತ್ತು ಸಹ. ಆದರೆ ಅಲ್ಲಿ ಸುಳ್ಯದ ಗಾಂಧಿ ನಗರ ನಾವೂರು ಎಂಬಲ್ಲಿನ ಶಿಶು ಪಾಲನಾ ಕೇಂದ್ರ ಮಾತ್ರ ಇವತ್ತಿಗೂ ಸರ್ಕಾರದ ಬೋರ್ಡ್ ಅಡಿಯಲ್ಲಿ ಕಾನೂನು ಬಾಹಿರವಾಗಿ ಕಾರ್ಯಾ ಚರಿಸುತ್ತಿದೆ. ಅಲ್ಲಿ ನಾವೂರಿನಲ್ಲಿ ಶಿಶು ಪಾಲನಾ ಕೇಂದ್ರವನ್ನು ನಡೆಸುತ್ತಿರುವುದು ಅಕ್ರಮವಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ‌ಕೈಗೊಳ್ಳಲೇ ಬೇಕಾಗಿದೆ. ಅದೂ ಅಲ್ಲದೆ ಸದ್ರಿ ಶಿಶು ಪಾಲನಾ ಕೇಂದ್ರದಲ್ಲಿ ಪ್ರತಿ ಮಕ್ಕಳಿಗೆ ಮಂಡೆಗೆ  ಆರು ನೂರು ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
   ಹಾಗೆಂದು ಶಿಶು ಪಾಲನಾ ಕೇಂದ್ರಗಳನ್ನು ಸರ್ಕಾರದ ಬೋರ್ಡ್ ಅಡಿಯಲ್ಲಿ ನಡೆಸುತ್ತಿದ್ದರೆ ಅಲ್ಲಿ ದುಡ್ಡು ವಸೂಲಿಗೆ ಆಸ್ಪದವಿಲ್ಲ. ಹಾಗೇನಾದರೂ ವಸೂಲಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಕೂಡ. ಆದರೂ ನಾವೂರು ಶಿಶು ಪಾಲನಾ ಕೇಂದ್ರದಲ್ಲಿ ಆರು ನೂರು ರೂಪಾಯಿ ಪ್ರತಿ ಮಂಡೆಗೆ ವಸೂಲಿ ಮಾಡಲಾಗುತ್ತಿದೆ. ಟೀಚರನ್ನು ಕೇಳುವವರೇ ಇಲ್ಲ. ಅದೆಂತಾ ಬೇಬಿ  ಸಿಟ್ಟಿಂಗ?

    







                                                


   ಹಾಗೆಂದು ಕಾಣಿಯೂರು ಎಂಬ ಮಠದ ಊರಿನಲ್ಲಿ ಲೋಕಲ್ ಕಳ್ಳರು, ಕಾಕರು ಕಡಿಮೆ. ಇಲ್ಲಿಗೆ ಹೊರಗಿನಿಂದ ಕಳ್ಳರು ಬಿನ್ನೆರ್ ಕಟ್ಟಿಕ್ಕೊಂಡು ಬರಬೇಕಷ್ಟೆ. ಹೊರಗಿನಿಂದ ಬಂದ ಬಿನ್ನೆರ್ ಕಳ್ಳರು ಇಲ್ಲಿ ಫೋರ್, ಸಿಕ್ಸ್ ಬಡಿದ ಉದಾಹರಣೆಗಳಿವೆ. ಆದರೆ ಇದೀಗ  ಒಂದು ಕೇಸ್ ಕಾಣಿ ಯೂರಿನಲ್ಲಿ ನಡೆದಿದ್ದು ಈ ಕೇಸಿನಲ್ಲಿ ಲೋಕಲ್ ಕಳ್ಳರ ಕೈಚಳಕ ಇದೆ ಎಂದು ಮೊನ್ನೆ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬೊಬ್ಬೆ ಹಾಕಲಾಗಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಯಾಕೆಂದರೆ ಯಾರಿಗೂ ಕೆಬಿ ಕೇನುಜಿ.
   ಹಾಗೆಂದು ಕಾಣಿಯೂರಿನಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಸದ್ರಿ ಆರೋಗ್ಯ ಕೇಂದ್ರದ ಅಂದಾಜು ಎರಡು ಸಾವಿರ ಹೆಂಚುಗಳನ್ನು ಹೇಳದೆ ಕೇಳದೆ ಯಾರೋ ಪುಣ್ಯಾತ್ಮರು ತಮ್ಮ ಮನೆಗೆ ಸಾಗಿಸಿ ಪುಣ್ಯ ಕಟ್ಟಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮೊನ್ನೆ ನಡೆದ ಗ್ರಾಮ ಸಭೆಯಲ್ಲಿ ಲೋಕಲ್ ವಾರ್ಡ್ ಸದಸ್ಯರೊಬ್ಬರು ಬೊಬ್ಬೆ ಹೊಡೆದಿದ್ದರು. ಆದರೆ ಅದೇ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ನಿರ್ಣಯ ಕೈಗೊಳ್ಳಲಾಗಿತ್ತು. ಹಾಗಾದರೆ ಹೆಂಚು ಕದ್ದಿದ್ದು ಯಾರು? ಯಾರು?
   ಹಾಗೆಂದು ಆರೋಗ್ಯ ಕೇಂದ್ರದ ಹೆಂಚು ತೆಗೆದದ್ದು ಯಾರು ಮ್ಯಾಡಂ, ನಿಮಗೇನಾದರೂ ಗೊತ್ತಿದೆಯಾ ಎಂದು ಡಾಕ್ಟರ ರಲ್ಲಿ ಕೇಳಿದರೆ ಅವರಿಗೆ ವಿಷಯವೇ ಗೊತ್ತಿಲ್ಲ. ಆರೋಗ್ಯ ಕೇಂದ್ರದ ಜಾಗದಲ್ಲಿ ಅದೇನೋ ಕಾಮಗಾರಿ ನಡೆಯುತ್ತಿದ್ದಾಗ ಆ ಹೆಂಚುಗಳನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿತ್ತು ಮತ್ತು ಈ ಬಗ್ಗೆ ಕಾಮಗಾರಿ ನಡೆಸಿದ ಗುತ್ತಿಗೆದಾರರಲ್ಲಿ ಮಾಹಿತಿ ಕೇಳಿ ಎಂದು ಡಾಕ್ಟರ್ ತಮ್ಮ ಭಾರ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ.
   ಹಾಗಾದರೆ ಆರೋಗ್ಯ ಕೇಂದ್ರದ ಹೆಂಚು ಎಲ್ಲಿಗೆ ಹೋಯ್ತು? ಕಾಣಿಯೂರಿನ ಬಲಿಮ್ಮೆಯವರ ಪ್ರಕಾರ ಹೆಂಚು ಪಂಜದ ಪಿಕಪ್ ಒಂದರಲ್ಲಿ ಸಾಗಾಟ ಮಾಡಲಾಗಿದ್ದು ಮೂರು ಫೀಟಿನ ಜನವೊಂದರ ನೆರಳು ಈ ಪ್ರಕರಣದಲ್ಲಿ ಮಸ್ಕ್ ಮಸ್ಕಾಗಿ ಬಚ್ಚಿರೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಯಾರೂ ಬೆಳ್ಳಾರೆ ಕಡೆ ಹೋಗದಿರುವ ಕಾರಣ ಪೋಲಿಸರೂ ಈ ಕಡೆ ಬರದಿರುವ ಕಾರಣ ಓಡು ಕಲ್ಲರು ಸದ್ಯಕ್ಕೆ ಸೇಫ್ ಆಗಿದ್ದಾರೆಂದು ತಿಳಿದುಬಂದಿದೆ.



   

    







                                               



    ಕೆಲವು ದಿನಗಳ ಹಿಂದೆಯಷ್ಟೇ ನಾವು ಒಂದೇ ಗ್ರಾಮದಲ್ಲಿ ಮೂರು ಬಾರ್ ಓಪನ್ ಆಗಲಿದೆ ಎಂದು ‌ಬರೆದ್ದಿದ್ದೆವು. ಒಂದೇ ಗ್ರಾಮದಲ್ಲಿ ಮೂರು ಬಾರ್ ಓಪನ್ ಆದರೆ ನಷ್ಟ ಬರಬಹುದು ಎಂದೂ ಗೀಚಿದ್ದೆವು. ಕೇವಲ ಎರಡೂವರೆ ಗ್ರಾಮಗಳಿಗಾಗಿ ಮೂರು ಬಾರ್ ಗಳಿಗೆ ಪರ್ಮಿಷನ್ ಕೊಟ್ಟರೆ ಬಾರೋನರ್ ಗಳಿಗೆ ಬ್ಯಾರದಲ್ಲಿ ನಷ್ಟ ಬರಬಹುದು ಎಂದೂ ಗೀಚಿದ್ದೆವು. ನಾವು ಯಾಕೆ ಬರೆದೆವೆಂದರೆ ಬಾರ್ ನಡೆಸಲು ಕಷ್ಟ ಇದೆ ಮಾರಾಯ್ರೆ. ಅದೆಲ್ಲ ಕೋಟಿ ಲೆಕ್ಕದ ವ್ಯವಹಾರ. ಚಿಲ್ಲರೆಗಳೆಲ್ಲ ಅದಕ್ಕೆ ಹೋದರೆ OC ಯಲ್ಲಿ ಮುಳುಗ ಬೇಕಾದೀತು.
   ಹಾಗೆಂದು ಒಂದು ಬಾರ್ ಓಪನ್ ಮಾಡಲು ಕಡಿಮೆ ಅಂದರೂ ಒಂದು ಕೋಟಿ ಇಂಡಿಯನ್ ಕರೆನ್ಸಿ ನಮ್ಮ ಪರ್ಸ್ ನಲ್ಲಿರಬೇಕು. ಅದರಲ್ಲೂ ಈಗ ಒಂದು ಕೋಟಿ ವೆಚ್ಚದ CL2, CL9ಗೆ ಪರ್ಮಿಷನ್ ಸಿಗಲ್ಲ. ನೀವು ಎರಡು ಕೋಟಿ ಗೋಣಿಯಲ್ಲಿ ಹಿಡಕ್ಕೊಂಡು ಹೊರಟರೆ ಮಾತ್ರ ನಿಮಗೆ CL7 ಪರ್ಮಿಷನ್ ಸಿಗುತ್ತದೆ. ಆದರೆ ಇದಕ್ಕೆ ಹೋಟೆಲ್ ಬೇಕು, ಲಾಡ್ಜಿಂಗ್ ಬೇಕು, ಅದೆಲ್ಲ ದೊಡ್ಡ ರಾಮಾಯಣ. ಈ CL7 ಸಮಸ್ಯೆ ಏನೆಂದರೆ ಅದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್  ಮಾಡಕ್ಕಾಗಲ್ಲ. ನೀವೀಗ ಒಂದು CL7 ಪರ್ಮಿಷನ್ ತಗೊಂಡು ಹೋಗಿ ಬಂಟಮಲೆಯಲ್ಲಿ ಬಾರ್ ಓಪನ್ ಮಾಡಿದರೆ ಅದು ಅಲ್ಲೇ ಕುಡುಕರ ಮನ ತಣಿಸ ಬೇಕು. ಕುಡುಕರು ಬಂಟಮಲೆಗೆ ಬರಲ್ಲ, ಅವರಿಗೆ ಕಷ್ಟ ಆಗುತ್ತದೆ ಅಲ್ಲಿಗೆ ಬರ್ಲಿಕ್ಕೆ ಎಂದು ಅದೇ ಪರ್ಮಿಟ್ ಹಿಡಕ್ಕೊಂಡು ಕೆಳಗೆ ಬಂದು ಪಂಜದಲ್ಲಿ, ಬೆಳ್ಳಾರೆಯಲ್ಲಿ ಬಾರ್ ಓಪನ್ ಮಾಡಲು ಆಗಲ್ಲ. ಇನ್ನು MSIL ಗಡಂಗ್ ಮಾಡಲೂ ಪರ್ಮಿಷನ್ ಸಿಗುತ್ತದೆ. ಗೂಡಂಗಡಿಗಳ ಹಾಗೆ ಇಂತಹ ಗಡಂಗ್ ಓಪನ್ ಆಗಿದೆ. ಇಂಥ MSIL ಗಡಂಗ್ ಗಳು ಕುಡುಕರನ್ನು ದೋಚುತ್ತಿದ್ದು MRP ಬಿಟ್ಟು ಇವರೇ ಅಂಡಿಗುಂಡಿ ರೇಟ್ ಹಾಕಿ ಕುಡುಕರ ನೆತ್ತೆರ್ ಸ್ಟ್ರಾದಲ್ಲಿ ಎಳೆಯುತ್ತಿದ್ದಾರೆ. ಹಾಗೆಂದು ಈ MSIL ನವರು ಪ್ರಿಂಟೆಡ್ ರೇಟ್ ನಲ್ಲಿಯೇ ಕುಡುಕರಿಗೆ ಕುಪ್ಪಿ ಕೊಡಬೇಕು. ಉದಾಹರಣೆಗೆ ಈಗ MLಗೆ ಒಂದು ಕ್ವಾಟ್ರಿಗೆ 80 ರೂಪಾಯಿ ಅಂತ ಅದರ ಕುಪ್ಪಿಯಲ್ಲಿ ರೇಟ್ ಬರೆದಿದ್ದರೆ MSIL ಗಡಂಗ್ ನವರು ಅಷ್ಟೇ ರೇಟೀಗೆ ಕುಪ್ಪಿ ಕಟ್ಟಿ ಕುಡುಕ ನನ್ಮಗನ ಕೈಯಲ್ಲಿ  ಕೊಡಬೇಕು. ಆದರೆ MSIL ನವರು 80 ರೂಪಾಯಿ ಮೌಲ್ಯದ MLಗೆ ಕುಡುಕರ ಕೈಯಿಂದ 85 ರೂಪಾಯಿ ಎಳೆದು ಕೊಳ್ಳುತ್ತಿದ್ದಾರೆ. ಇದು ಅನ್ಯಾಯ. ಇಲ್ಲಿ ಕಮಿಷನ್ ಬೇರೆ, ಲಾಭ ಬೇರೆ. ಅಂತೂ ಇಂತೂ ಕುಡುಕ ನನ್ಮಕ್ಕಳಿಗೆ ಚರಂಡಿಯೇ ಗತಿ.
   ಇನ್ನು ಬಾರ್ ನಡೆಸಲು ಕಷ್ಟ ಇದೆ ಎಂದು ನಾನು ಆಗಲೇ ಹೇಳಿದ್ದೆ. ಯಾಕೆಂದರೆ ಅಬ್ಕಾರಿ ಇಲಾಖೆ ಸರ್ಕಾರದ ATM ಇದ್ದ ಹಾಗೆ. ಯಾವಾಗ ಮೇಲಿಂದ ಫಂಡ್ಸ್ ಗೆ ಕರೆ ಬರುತ್ತದೆಂದೇ ಹೇಳಕ್ಕಾಗಲ್ಲ. ಇನ್ನು ಲಂಚದ ಮಟ್ಟಿಗೆ ಅಬ್ಕಾರಿ ಇಲಾಖೆ ಕ್ಲೀನ್. ಪ್ರತಿ ಬಾರಿನವರೂ ತಿಂಗಳಿಗೆ ಹತ್ತು ಸಾವಿರದ ಕಟ್ಟನ್ನು ಇಲಾಖೆ ಟೇಬಲ್ ಗೆ ಮುಟ್ಟಿಸಲೇ ಬೇಕು. ಒಂದು ದಿನ ಅಂಚಿಂಚಿ ಆದರೂ ಇಲಾಖೆಗೆ ಸೂತಿಕೊ ಬಂದು ಬಿಡುತ್ತದೆ. ಲೆಕ್ಕ ಹಾಕಿ, ಒಂದು ತಾಲೂಕಿನಲ್ಲಿ, ಒಂದು ಜಿಲ್ಲೆ ಯಲ್ಲಿ ಎಷ್ಟು ಬಾರುಗಳಿವೆ. ಒಂದೊಂದು ಬಾರೂ ಹತ್ತತ್ತು ಕೊಟ್ಟರೆ ದುಡ್ಡೇಷ್ಟಾಯಿತು ಮಾರಾಯ್ರೆ. ಆಯ್ತು ಅಬ್ಕಾರಿಗಳಿಗೆ  ಮಾತ್ರನಾ ಅಗೆಲು? ಇಲ್ಲ. ಅಬ್ಕಾರಿ ಜೀಪು ಹೋದ ಕೂಡಲೇ ಲೋಕಲ್   ಪೋಲಿಸ್ ಠಾಣೆ ಬಿನ್ನೆರ್ ಬಂದು ಕ್ಯಾಶ್ ಕೌಂಟರ್ ನಲ್ಲಿ ನಿಲ್ಲುತ್ತಾರೆ. ಲೋಕಲ್ ಪೋಲಿಸ್ ಸ್ಟೇಷನ್ ಗೆ ಪ್ರತೀ ಬಾರಿಂದ ಮಿನಿಮಮ್ ಎರಡೂವರೆಯಿಂದ ಹತ್ತರ ತನಕ ಮಾಮೂಲು ಕೊಡಲೇ ಬೇಕಾಗುತ್ತದೆ. ಕೊಡದಿದ್ದರೆ ಪೋಲಿಸರು ಹೇಗೆಲ್ಲ ಎಣ್ಣೆ ಕಾಯಿಸ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆಯ್ತು ಮಾಮೂಲು ಕೊಟ್ಟು ಬಾರಿನವರು ಸುಮ್ಮನೆ ಕೂರಂಗಿಲ್ಲ. ಅಬ್ಕಾರಿ ಪೋಲಿಸರ, ಮಾಮೂಲು ಪೋಲಿಸರ ಮನೆಯ ಮದುವೆ, ಬಯಕ್ಕೆ, ಬರ್ಡೆ, ನೇಮ, ಕೊನೆಗೆ ಕುಲೆಗಳಿಗೆ ಬಡಿಸಲೂ ಬೇಕಾಗುವ ಮದ್ಯವನ್ನೂ ಬಾರಿನವರು ಮುಟ್ಟಿಸಲೇಬೇಕು. ಇಲ್ಲದಿದ್ದರೆ ಪೋಲಿಸರು ಅಂಚಿಂಚಿ ಹೋಗುವಾಗ ಬಾರಿನತ್ತ ನೋಡಿ ಮಲೆಯುತ್ತಾ ಹೋಗು ವುದು ರೂಢಿ. ಇಷ್ಟು ಮಾಹಿತಿ ಕೊಟ್ಟ ನನ್ನ ಬಾರ್ ಫ್ರೆಂಡ್ ನಲ್ಲಿ ಕೊನೇಗೆ ಕೇಳಿದೆ, ಲೋಕಲ್ ರೌಡಿಗಳಿಗೆ ನೀವು ಮಾಮೂಲು ಕೊಡಲ್ವಾ ಎಂದು. ಅದಕ್ಕವನು ಲೋಕಲ್ ರೌಡಿಗಳು ಯಾರಿದ್ದಾರೆ, ಸದ್ಯಕ್ಕೆ ನಾವೇ ಲೋಕಲ್ ರೌಡಿಗಳು ಎಂದು ನಕ್ಕಿದ್ದ.



   

    







                                      


 ಭೂ ಕಬಳಿಕೆ ಧರ್ಮಸ್ಥಳದವರು ಮಾತ್ರ ಮಾಡಿದ್ದ?
     ಓ ಮೊನ್ನೆಯಿಂದ ಧರ್ಮಸ್ಥಳದವರು ಭೂ ಕಬಳಿಕೆ ಮಾಡಿದ್ದಾರೆ ಎಂಬ ಅರಚಾಟ ಜೋರಾಗಿ ಶುರುವಾಗಿದೆ.  ಈ ಅರಚಾಟ ಹಿಂದೆಯೂ ಇತ್ತು. ಆದರೆ ಈಗ ಕಂಡೆ ಯಿಂದಲೇ ಅರಚಾಟ ಶುರುವಾಗಿದೆ. ಹಾಗೆಂದು ಇಲ್ಲಿ ಭೂ ಕಬಳಿಕೆ ಮಾಡದ್ದು ಯಾರು? 74ನೇ ಇಸವಿಯಲ್ಲಿ ಭೂ ಮಸೂದೆ ಎಂಬ ಕಾನೂನು ಬಂದಾಗ ಇದೇ ಧರ್ಮಸ್ಥಳ ದವರ ಭೂಮಿಯ ಸಮೇತ ಇತರೇ ಜಮೀನ್ದಾರರ ಭೂಮಿಯನ್ನು ಗಲಾಟೆ ಮಾಡಿ, ಬಲಾತ್ಕಾರವಾಗಿ ನುಂಗಿ ನೀರು ಕುಡಿದದ್ದು ಯಾರು? ಅದು ಭೂ ಕಬಳಿಕೆ ಅಲ್ವಾ? ಆ ಪ್ರಕ್ರಿಯೆಯನ್ನು ಏನೆಂದು ಕರೆಯಲಿ? ಆ ಕಬಳಿಕೆ ನಂತರ ಅದೇ ಭೂಮಿಯ ಆಸುಪಾಸಿನ ಸರ್ಕಾರಿ ಭೂಮಿಯನ್ನು ಕುಮ್ಕಿ ಹೆಸರಲ್ಲಿ ಕಬಳಿಕೆ ಮಾಡಿದ್ದು ಯಾರು? ಹಾಗೆ ಸರ್ಕಾರಿ ಭೂಮಿಯನ್ನು ಕುಮ್ಕಿ ಹೆಸರಲ್ಲಿ ಕಬಳಿಕೆ ಮಾಡಿದ ನಂತರ ಕುಮ್ಕಿ ಭೂಮಿಯ ಆಸು ಪಾಸಿನ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಆಕ್ರಮಣ ಮಾಡಿ ಆ ಅಕ್ರಮವನ್ನು ಸಕ್ರಮ ಮಾಡಿ ಕೊಂಡು ಆ ಭೂಮಿಯನ್ನೂ ಕಬಳಿಸಿದ್ದು ಯಾರು? ನಮ್ಮಲ್ಲೆಲ್ಲ ಎಕರೆ ಗಟ್ಟಲೆ ಭೂಮಿ ಇದ್ದರೂ ಹೆಂಡತಿ ಹೆಸರಿನಲ್ಲಿ, ಮಗನ ಹೆಸರಲ್ಲಿ, ಮಗಳ ಹೆಸರಿನಲ್ಲಿ, ಸೊಸೆ ಹೆಸರಿನಲ್ಲಿ, ಕುಟುಂಬಿಕರ ಹೆಸರಿನಲ್ಲಿ ಗೋಮಾಳಗಳನ್ನು, ಖಾಲಿ ಸರ್ಕಾರಿ ಭೂಮಿಯನ್ನು, ಅರಣ್ಯ ಪ್ರದೇಶಗಳನ್ನು, ಶಾಲಾ ಕಾಲೇಜುಗಳ ಭೂಮಿಯನ್ನು, ಕಡೆಗೆ ಸ್ಮಶಾನದ ಜಾಗವನ್ನೂ ಬಿಡದೆ ಅಕ್ರಮ ಸಕ್ರಮದಡಿ ಮಂಜೂರು ಮಾಡಿಕ್ಕೊಂಡು ಕಬಳಿಸಿದ್ದು ಯಾರು? ಇಷ್ಟಾಗಿಯೂ ಮನೆ ನಿವೇಶನದ ಹೆಸರಿನಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಮನೆ ನಿವೇಶನದ ಜಾಗ ಮಾಡಿಕೊಂಡು ಭೂಮಿ ನುಂಗಿದ್ದು ಯಾರು? ದಲಿತರ ಭೂಮಿಯನ್ನು ಅವರಿಗೆ ಚಿಲ್ಲರೆ ಸಾಲ ಕೊಟ್ಟು, ಅದಕ್ಕೆ ಅಂಡಿಗುಂಡಿ ಬಡ್ಡಿ ಹಾಕಿ ಕೋರ್ಟ್ ಏಲಂ ಮಾಡಿಸಿ ನುಂಗಿ ನೀರು ಕುಡಿದದ್ದು ಯಾರು? ಸಾರ್ವಜನಿಕ ‌ರಸ್ತೆಯ ಕಬಳಿಕೆ, ಕೆರೆ ಒತ್ತುವರಿ, ನದಿ ಜಾಗ ಕಬಳಿಕೆ, ಮೈದಾನ ಕಬಳಿಕೆ, ಕಾದಿರಿಸಿದ ಭೂಮಿ ಕಬಳಿಕೆ, ಪಾರ್ಕಿಂಗ್ ಒತ್ತುವರಿ ಹೀಗೆ ಭೂಮಿ ವಿಷಯದಲ್ಲಿ ನಾವು ಮಾಡದ ಘನಂಧಾರಿ ಕೆಲಸಗಳೇ ಇಲ್ಲ. ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿರುವ ನಾವು ಈವತ್ತು ಧರ್ಮಸ್ಥಳದವರು ಭೂ ಕಬಳಿಕೆ ಮಾಡಿದರು ಎಂದು ಭೂಕಂಪ ಆಗುವಷ್ಟು ಬೊಬ್ಬೆ ಹೊಡೆಯುತ್ತಿದ್ದೇವೆ. ನಾಚಿಕೆ ಮಾನ ಮರ್ಯಾದೆ, ಲಜ್ಜೆ ಪೊಲೆಜ್ಜಿ ಏನಾದರೂ ನಮಗಿದೆಯಾ? ಹಾಗೆಲ್ಲ ಭೂ ಕಬಳಿಕೆ ಮಾಡದೆ ಇರಲು ಧರ್ಮಸ್ಥಳದವರು ಏನು ದಿಗಂಬರ ಸ್ವಾಮಿಗಳಾ? ಅಖಂಡ ಬ್ರಹ್ಮಚಾರಿಗಳಾ? ವಿವಿಧ ಮಠಗಳ ಸ್ವಾಮಿಗಳೇ ದೇವರ ಹೆಸರಿನಲ್ಲಿ, ಖಾವೀ ಹೆಸರಿನಲ್ಲಿ, ಮಠದ ಹೆಸರಿನಲ್ಲಿ ಕಂಡ ಕಂಡಲ್ಲಿ ಬೇಲಿ ಹಾಕುವಾಗ ಧರ್ಮಸ್ಥಳದವರು ಸುಮ್ಮನೆ ಕೈಕಟ್ಟಿ ‌ಕೂರಬೇಕೆಂದು ಯಾರು ಹೇಳಿದ್ದು? ಈಗ ಧರ್ಮಸ್ಥಳ ವಿರೋಧಿಗಳ  ಪ್ರಕಾರ ಧರ್ಮಸ್ಥಳದವರು ಚಕ್ಕುಲಿ ನುಂಗಿರ ಬಹುದು. ಆದರೆ ನಾವು? ನಾವು ಕೂಡ ಚಕ್ಕುಲಿ‌ ನುಂಗು ವವರೇ. ಆದರೆ ನಾವು ಒಮ್ಮೆಲೇ ನುಂಗಲ್ಲ. ಚಕ್ಕುಲಿಯ ಸುತ್ತಲಿನ ಸೈಡ್ ಸೈಡಿಂದ ಒಂದೊಂದೇ ಎಳೆಯನ್ನು ತಿನ್ನುತ್ತಾ ತಿನ್ನುತ್ತಾ ಇಡೀ ಚಕ್ಕುಲಿಯನ್ನು ತಿನ್ನುವ ಜಾತಿ ನಾವು. ತಿನ್ನುವುದು ಮತ್ತು ನುಂಗುವುದು ಎರಡೂ ಒಂದೇ ಅಲ್ವಾ?
   ಹಾಗೆಂದು ಸೌಜನ್ಯ ಎಂಬ ಹೆಣ್ಣು ಮಗುವಿಗೆ ಈ ಭರತ ಖಂಡದ ಮಣ್ಣಿನ ಕಾನೂನಿನಡಿಯಲ್ಲಿ ಇನ್ನು ನ್ಯಾಯ ಸಿಗಲ್ಲ ಕಣ್ರೀ. ಆ ನ್ಯಾಯದ ಹಾದಿ ತಪ್ಪಿ ಒಂದು ದಶಕವೇ ಕಳೆದು  ಹೋಗಿದೆ. ಇನ್ನು ಆ ಮಗುವಿಗೆ ನ್ಯಾಯ ಕೊಡಬೇಕಾಗಿದ್ದ ಅಣ್ಣಪ್ಪನ ಗುಡಿಯನ್ನು, ಮಂಜುನಾಥನ ಆಲಯವನ್ನು ಜೆಸಿಬಿ ತಂದು ಒಡೆದು ಹಾಕುವ ‌ಬಗ್ಗೆ ಮಾತಾಡಿದ್ದೇವೆ. ನಸುಕಿನ ಜಾವ ಧರ್ಮಸ್ಥಳಕ್ಕೆ ನುಗ್ಗಿ ಎಲ್ಲವನ್ನೂ ದೋಚುವ ಎಂಬ ಮಾತೂ ಬಂದಿದೆ.ದೈವ ನಿಂದಕರು ಮತ್ತು ಧರ್ಮ ದೂಷಣೆ ಮಾಡಿದವರು ನ್ಯಾಯ ಕೇಳಿದರೆ ಅಣ್ಣಪ್ಪ ಮತ್ತು ಮಂಜುನಾಥ ನ್ಯಾಯ ಕೊಡುತ್ತಾರಾ? ನ್ಯಾಯ ಸಿಗಲ್ಲ ಕಣ್ರೀ, ಯಾಕೆಂದರೆ ರಸ್ತೆ ರಸ್ತೆಗಳಲ್ಲಿ ನಿಂತು ದೈವ ನಿಂದನೆ ಮಾಡುವವರೊಂದಿಗೆ, ಧರ್ಮ ದೂಷಣೆ ಮಾಡುವವ ರೊಂದಿಗೆ ಅಕ್ರಮ ಕೂಟ ಸೇರಿಕ್ಕೊಂಡು ನಾವು ಆ ಮಗುವಿಗೆ ನ್ಯಾಯ ಕೇಳುತ್ತಿದ್ದೇವೆ. ಎಂಟು ನೂರು ವರ್ಷಗಳ ಹಿನ್ನೆಲೆ ಇರುವ, ವಿವಿಧ ಧಾರ್ಮಿಕ ಕಾರಣಗಳಿಗಾಗಿ ಈ ಭರತ ಖಂಡದಲ್ಲಿ ತನ್ನದೇ ವಿಶೇಷ ಕಾರಣಿಕಗಳಿಂದ ಹೆಸರು ವಾಸಿಯಾಗಿರುವ ಹಿಂದೂ ಶ್ರದ್ಧಾ ‌ಕೇಂದ್ರದ ಅಡಿಗಲ್ಲನ್ನೇ ಅಲುಗಾಡಿಸಿ ನ್ಯಾಯ ಕೇಳಿದರೆ ದೇವರು ಒಲಿಯುತ್ತಾನಾ? ನ್ಯಾಯ ಕೇಳುವ ಭರದಲ್ಲಿ ದೈವ ನಿಂದನೆ ಮಾಡಿ ಅಣ್ಣಪ್ಪ ಮತ್ತು ಮಂಜುನಾಥನ ಅಸ್ತಿತ್ವವನ್ನೇ ಪ್ರಶ್ನಿಸುವ ದೈವ ನಿಂದಕರ ಪರವಾಗಿ ಮಂಜುನಾಥನ ದೇವ ನ್ಯಾಯಾಲಯ ತೀರ್ಪು ಕೊಡುವ ಬಗ್ಗೆ ಅನುಮಾನಗಳಿವೆ. ಒಂದು ಕಡೆ ದೈವ ನಿಂದಕರು ಇನ್ನೊಂದು ಕಡೆ ಧರ್ಮ ನಡೆಸಿದವರು. ದೇವರು  ಯಾರ ಪರ ನಿಲ್ಲ ಬಹುದು?
   ಹಾಗೆಂದು ಸೌಜನ್ಯ ಪರ ಹೋರಾಟಗಾರರ ಟಾರ್ಗೆಟ್ ಯಾರು, ಅವರ ಮನಸ್ಸಿನಲ್ಲಿ ಏನಿದೆ, ಅವರ ಹಿಡನ್ ಅಜೆಂಡಾ ಏನು ಎಂಬುದು ಕೂಡ ಧರ್ಮಸ್ಥಳದ ದೈವ ದೇವರುಗಳ ದಿವ್ಯ ಜ್ಞಾನಕ್ಕೆ ಬರದ ವಿಷಯವೇನಲ್ಲ. ಸೌಜನ್ಯ ಪರ ವೇದಿಕೆಗಳಲ್ಲಿ ಸಿಗುವ ಪ್ರತೀ ಮುಖವೂ ಅವರ ಗೇಮ್ ಪ್ಲಾನ್ ಗಳ ಇಂಡಿಕೇಟ್ ಮಾಡುತ್ತಿದೆ. ಅವರು ಕೇಳುವ ನ್ಯಾಯದ ಹಿಂದೆ ಇನ್ನೂ ಏನೇನೋ ಇದೆ.
   ನಮಗೆ ನಮ್ಮ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಮೇಲೆ ನಂಬಿಕೆ ಇಲ್ಲ. ಎಂಟು ನೂರು ವರ್ಷಗಳ ಇತಿಹಾಸ ಹೊಂದಿರುವ ಶ್ರದ್ಧಾ ‌ಕೇಂದ್ರದ ಮೇಲೆ ನಂಬಿಕೆ ಇಲ್ಲ, ದೈವ ದೇವರುಗಳ ಮೇಲೆ ನಂಬಿಕೆ ಇಲ್ಲ, ಒಂದು ವ್ಯವಸ್ಥಿತ ಅಸ್ತಿತ್ವದ ಮೇಲೆ ನಂಬಿಕೆ ಇಲ್ಲ. ಹಾಗಾದರೆ ನಮ್ಮ ಟಾರ್ಗೆಟ್ ಏನು?  ಟಾರ್ಗೆಟ್ ಒಂದೇ.
   ಸೌಜನ್ಯ ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟವರು ನಾವು. ಸೌಜನ್ಯ ಬೆಂಕಿಯಲ್ಲಿ ಚಳಿ ಕಾಯಿಸಿ ಕೊಳ್ಳುವವರು ನಾವು. ಸೌಜನ್ಯ ಪ್ರಕರಣವನ್ನು ನಮ್ಮ ರಾಜಕೀಯ ಯಶಸ್ಸಿನ ಮೆಟ್ಟಿಲು ಮಾಡಿಕೊಂಡವರು ನಾವು. ಅದೆಲ್ಲ ಕಾರಣಗಳಿಗಾಗಿ ನಮ್ಮದೇ ಶ್ರದ್ಧಾ ಕೇಂದ್ರದ ಬಲಿ. ದೈವ ನಿಂದನೆ ಮಹಾ ಪಾಪ. ಧರ್ಮ ದೂಷಿಕರಿಗೆ, ದೈವ ನಿಂದಕರಿಗೆ ನ್ಯಾಯ ಸಿಗಲ್ಲ.


   

    











                                               


    ಹಾಗೆಂದು ಕೆಲವು ವರ್ಷಗಳ ಹಿಂದೆಯೇ ನರಿಮೊಗರು ಗ್ರಾಮಕ್ಕೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಒಂದು ಕೌ ಆಸ್ಪತ್ರೆ ಸ್ಯಾಂಕ್ಷನ್ ಆಗಿತ್ತು. ಪುರುಷರ ಕಟ್ಟೆಯಲ್ಲಿ ಸರ್ವೇ ನಂಬರ್ 312ರಲ್ಲಿ ಈ ಇಲಾಖೆಗಳಿಗೆ ಸ್ಥಳ ಕೂಡ ಗುರುತಿಸಲ್ಪ ಟ್ಟಿತ್ತು. ಆದರೆ ನರಿಮೊಗರು ಗ್ರಾಮಕ್ಕೆ ಮಂಜೂರಾಗಿದ್ದ ಆರೋಗ್ಯ ಕೇಂದ್ರ  ಮತ್ತು ಕೌ ಆಸ್ಪತ್ರೆಯನ್ನು ಕೇವಲ ಆ ಜಾಗವನ್ನು ನುಂಗುವ ಸಲುವಾಗಿ ‌ಹತ್ತಿರದ ಭಕ್ತ ಕೋಡಿಗೆ ಶಿಫ್ಟ್ ಮಾಡಲಾಗಿತ್ತು. 
   ಭಕ್ತಕೋಡಿಯಿಂದ ಕೆಲವೇ ಕೆಲವು ಮೈಲು ದೂರದಲ್ಲಿ ತಿಂಗಳಾಡಿ ಆರೋಗ್ಯ ಕೇಂದ್ರ ಕೂಡ  ಇದ್ದು ಕೆಲವೇ ಮೈಲಿಗಳ ಅಂತರದಲ್ಲಿ ಎರಡೆರಡು ಆರೋಗ್ಯ ಕೇಂದ್ರ ಯಾಕೆ ನೊಣ ಹೊಡಿಲಿಕ್ಕಾ ಎಂಬ ಪ್ರಶ್ನೆ ಚಿಂತನೆ ಮಾಡಬೇಕಾಗಿದೆ. ಹಾಗೆ ನರಿಮೊಗರು ಗ್ರಾಮಕ್ಕೆ ಮಂಜೂರಾಗಿದ್ದ ಆರೋಗ್ಯ ಕೇಂದ್ರದ ಜಾಗವನ್ನು ಅನಂತರ ಆಕ್ರಮಣ ಮಾಡಿ ಅದನ್ನು ದರ್ಖಾಸ್ ಮಾಡಿ ಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಇದೀಗ ಆ ಜಾಗ ಯಾರದೋ ಹೆಸರಿನಲ್ಲಿದ್ದು ಪುರುಷರ ಕಟ್ಟೆಯ ಶಾಂತಿ ಗೋಡು ರಸ್ತೆಯಲ್ಲಿ ಅಲ್ಲೇ ಸೊಸೈಟಿ ಬಳಿ ಲೊಕೇಶನ್ ತೋರಿಸುತ್ತಿದೆ.


   

    







                                              



   ಕಲಾವಿದರು ಮುಂದೆ ಬಂದು ಅವಕಾಶವ ಬೆಳೆಸಿ ಕೊಳ್ಳಬೇಕು. ಅವಕಾಶ ಎನ್ನುವುದು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇರುತ್ತದೆ. ತಮ್ಮ ಪ್ರತಿಭೆಯ ತೋರಿಸಿಕೊಂಡಾಗ ಒಂದಷ್ಟು ಜನರಿಗೆ ಪರಿಚಯವಾಗಲು ಸಾಧ್ಯ, ಹಾಗೆಯೇ ಸಮಾಜದ ದೃಷ್ಟಿಕೋನ ಬದಲಾಗಬೇಕು ಎಂದರೆ ಹದಿಯರೆಯ ವಿದ್ಯಾರ್ಥಿಗಳು ಪ್ರೇಮ ವೈಕಾಲ್ಯಕ್ಕೆ ಹಿಡಿತದಲ್ಲಿರಬೇಕು ಎಂದು ತೇಜಕುಮಾರ್ ಬಡ್ಡಡ್ಕ ಹೇಳಿ ದರು.
   ಇವರು ಸುಳ್ಯದ ಎ ಪಿ ಎಂ ಸಿ ಸಭಾಂಗಣದಲ್ಲಿ ನಡೆದ ಲವ್ ಮೈನಸ್ 18ಎನ್ನುವ ಪ್ರೀಮಿಯರ್ ಶೋ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.
   ಸುಳ್ಯದಲ್ಲಿ ಕಲಾವಿದರು ಹೆಚ್ಚಿನ ಟಿವಿ ಚಾನೆಲ್ ಗಳಲ್ಲಿ ಮುಂದೆ ಬರುತ್ತಿದ್ದಾರೆ ಎನ್ನುವುದು  ಸಂತಸದ ಸುದ್ದಿ ಆಗಿದೆ . ಬೇರೆ ಬೇರೆ ದೇಶಗಳಲ್ಲಿ ಆಗುವ ಎಲ್ಲಾ ಸಿನಿಮಾಗಳನ್ನು ನಾವು ವೀಕ್ಷಿಸಲು  ಹೊರದೇಶಕ್ಕೆ ಹೋಗುತ್ತೇವೆ ಅಂತದರ ನಡುವೆ  ನಮ್ಮ ಕರಾವಳಿಯ ಸ್ಥಳಗಳಲ್ಲಿಯೇ ಚಿತ್ರೀಕರಣ ಆದ ಚಿತ್ರವು ಹದಿಯರೆಯ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಸ್ಫೂರ್ತಿಯಾಗಿದೆ ಇನ್ನಷ್ಟು ಸಿನಿಮಾ ತರಲಿ ಎಂದು ತಂಡಕ್ಕೆ ರಂಗನಿರ್ಧೇಶಕ ಕೃಷ್ಣಪ್ಪ  ಬಿಂಬಿಲ ಶುಭ ಹಾರೈಸಿದರು.
   ಕಾರ್ಯಕ್ರಮದಲ್ಲಿ ನಿರ್ದೇಶಕ ಚಿದಾನಂದ ಪರಪ್ಪ, ಛಾಯಾಗ್ರಾಹಕ ಯಶ್ ಫೋಟೋಗ್ರಫಿ, ಹಿರಿಯ ಸಾಹಿತಿ ಭೀಮರಾವ್ ವಾಷ್ಠರ್ ಹಾಗೂ ಕಲಾವಿದರು ಉಪಸ್ಥಿತ ರಿದ್ದರು. ಪ್ರಸಾದ್ ಕಾಟೂರು  ನಿರ್ವಹಿಸಿದರು‌.


   

    







                                             

    ಮೊನ್ನೆಯಿಂದ ಕುದ್ಮಾರು ಗ್ರಾಮದ ಬರೆಪ್ಪಾಡಿಯದ್ದೇ ಸುದ್ದಿ. ಬರೆಪ್ಪಾಡಿಯಲ್ಲಿ ಕುದ್ಮಾರು ಶಾಲೆಯ ಎದುರುಗಡೆಯೇ ಒಂದು ಬಾರ್ ತಲೆ ಎತ್ತಲಿದೆ ಎಂದು ಬರೆದ ಮರುದಿನವೇ ಬರೆಪ್ಪಾಡಿಯಲ್ಲಿ ಮತ್ತೊಂದು ಬಾರ್ ಓಪನ್ ಆಗಲಿದೆ ಎಂದು ಮಾಹಿತಿ ಬಂದ ಕಾರಣ ಆ ಬಾರ್ ಬಗ್ಗೆಯೂ ನಾಲ್ಕಕ್ಷರ ಟೈಟಾಗಿ ಬರೆದಿದ್ದೆವು. ಇದೀಗ ಅದೇ ಬರೆಪ್ಪಾಡಿಯಲ್ಲಿ ಓಪನ್ ಆಗಲಿರುವ ಮೂರನೇ ಬಾರಿನ ಕತೆಯೂ ಬಂದಿದೆ. ಹೌದು ಬರೆಪ್ಪಾಡಿಯಲ್ಲಿ ಮೂರನೇ ಬಾರ್ ಓಪನ್ ಮಾಡಲು ಈಗಾಗಲೇ ಚಪ್ಪರ ಹಾಕಿಯಾಗಿದೆ. ಇನ್ನು ಬೋರ್ಡ್ ಸಿಕ್ಕಿಸಿ ಕುಡುಕಣ್ಣ ಬಂದರೆ ಮುಗಿಯಿತು ಅಷ್ಟೇ. ಬಾಕಿ ಎಲ್ಲಾ ಕೆಲಸ ಮುಗಿದಿದೆ.
   ಹಾಗೆಂದು ಬರೆಪ್ಪಾಡಿಯಲ್ಲಿ ಓಪನ್ ಆಗಲಿರುವ ಮೂರನೇ ಪೊಯ್ಯೆ ಬಾರ್ ಬರೆಪ್ಪಾಡಿ ಜಂಕ್ಷನ್ ಬಿಟ್ಟು ಸ್ವಲ್ಪ ಪಡ್ಡಾಯಿ ಭಾಗದ ನೂಜೋಲ್ತಡ್ಕ ಎಂಬ ಜಂಕ್ಷನ್ ಬಳಿ ಓಪನ್ ಆಗಲಿದೆ. ಇತ್ತೀಚಿನ ದಿನಗಳಲ್ಲಿ ನೂಜೋಲ್ತಡ್ಕ ಜಂಕ್ಷನ್ ನಿಂತಿಕಲ್ ವೇಗದಲ್ಲಿ ಬೆಳೆಯುತ್ತಿದ್ದು ಆಚೆ ಹೋದರೆ ಪುತ್ತೂರು, ಈಚೆ ಬಂದರೆ ಕಾಣಿಯೂರು, ಮೇಲೆ ಹೋದರೆ ಆಲಂಕಾರು, ಕೆಳಗೆ ಹೋದರೆ ದೈಪಿಲ ಚಾರ್ವಾಕ ಹೀಗೆ ಎಲ್ಲಾ ಸೈಜಿನ ಜನರು ಬಂದು ಹೋಗುವ ಒಂದು ಜಂಕ್ಷನ್ ಇದಾಗಿದೆ. ಹಾಗೆ ಇಲ್ಲಿಗೆ ಬರುವ ಎಲ್ಲಾ ಸೈಜಿನ ಜನರ ತೃಷೆಯ ಬಗ್ಗೆ ಅರಿವಿದ್ದ ನೂಜೋಲ್ತಡ್ಕದ ಶಿಲ್ಪಿ ಇಲ್ಲಿ ಒಂದು ಬಾರ್ ಓಪನ್ ಮಾಡಲು ರಾಕ್ಷಸ ಕ್ರೀಯೆ, ದೇವಕ್ರೀಯೆ ಎರಡರಲ್ಲೂ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಂದೇ ಗ್ರಾಮದಲ್ಲಿ ಮೂರು ಬಾರ್, ಒಂದೇ ಜಂಕ್ಷನ್ ನಲ್ಲಿ ಮೂರು ಬಾರ್. ಬರೆಪ್ಪಾಡಿಯನ್ನು ಗೋವಾ ಮಾಡಲು ಹೊರಟಿರುವ ಅಬಕಾರಿ ಇಲಾಖೆಗೆ ಒಂದು ದೊಡ್ಡ ಸೈಜಿನ ಧಿಕ್ಕಾರವಿರಲಿ. ಅದರಲ್ಲೂ ವಿಶೇಷವೇನೆಂದರೆ ಮೊದಲನೇ ಬಾರ್ ಕುದ್ಮಾರು ಶಾಲೆಯ ಎದುರೇ ಓಪನ್ ಆದರೆ ಮೂರನೇ ಬಾರ್ ಕುದ್ಮಾರು ಅಂಗನವಾಡಿಯ ಎದುರೇ ಓಪನ್ ಆಗಲಿದೆ. ಕುದ್ಮಾರು ಅಂಗನವಾಡಿ ಮುಂದೆ ಓಪನ್ ಆಗಲಿರುವ ಬಾರ್ ನ ವಿಶೇಷತೆ ಏನೆಂದರೆ ಇಲ್ಲಿ ಒಂದು ಪಂಪೂ ಇದ್ದೂ ಇಲ್ಲೇ ಗಾಡಿಗೂ ಇಂಧನ ಹಾಕಬಹುದು ನಮಗೂ ಹಾಕಿಕೊಳ್ಳಬಹುದು. ಅಂಥದ್ದೊಂದು ವ್ಯವಸ್ಥೆ ನೂಜೋಲ್ತಡ್ಕದ ಶಿಲ್ಪಿಯಿಂದ ಆದರೆ ಕುದ್ಮಾರು ಗ್ರಾಮ ಧನ್ಯ ಧನ್ಯ.



   

    







                                            



    ಈ ಸರ್ಕಾರಗಳೇ ಹೀಗೆ. ಏನೋ ಸಾಧಿಸ ಬೇಕೆಂದು ಏನೇನೋ ಶುರು ಮಾಡಿಬಿಡುತ್ತದೆ. ಆಮೇಲೆ ನಂಬಿದವರನ್ನು ನಡು ನೀರಿನಲ್ಲಿ ಕೈ ಬಿಡುವುದು ಸರ್ಕಾರಗಳ ಚಾಳಿ. ಇದೀಗ ಎರಡು ವರ್ಷಗಳ ಹಿಂದೆ ಸರ್ಕಾರವೇ ಶುರು  ಮಾಡಿದ್ದ ಕಟ್ಟಡ ಕಾರ್ಮಿಕರ  ಮಕ್ಕಳ ಅಂಗನವಾಡಿಗಳಿಗೆ ಸರ್ಕಾರವೇ ಈಗ ಬೀಗ ರೆಡಿ ಮಾಡಿದೆ. ಈಗ ಒಮ್ಮಿಂದೊಮ್ಮೆಲೆ ಬೀಗ ಹಾಕ್ತೇವೆ ಅಂದರೆ ಅಂಗನವಾಡಿ ಕಾರ್ಯಕರ್ತೆಯರು ಎಲ್ಲಿಗೆ ಹೋಗ ಬೇಕು, ಪುಟ್ಟಪುಟ್ಟ ಮಕ್ಕಳು ಎಲ್ಲಿಗೆ ಹೋಗಬೇಕು?




 ಇದೆಲ್ಲ ಶುರುವಾಗಿದ್ದು ಎರಡು ವರ್ಷಗಳ ಹಿಂದೆ. ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅಂಗನವಾಡಿ ಪ್ರಾರಂಭಿಸಲು ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದಿತ್ತು. ಅದರಂತೆ ಆ ಯೋಜನೆಗೆ CRECHE ಎಂದು ಹೆಸರಿಟ್ಟು ತೊಟ್ಟಿಲಲ್ಲಿ ಹಾಕಿ ಜೋಯಿ ಹಾಡಲಾಗಿತ್ತು. ಕಟ್ಟಡ ಕಾರ್ಮಿಕರ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದಿದ್ದರು. ಆದರೆ ಇದೀಗ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಲು ತೀರ್ಮಾನಿಸಿದೆ. ಇದಕ್ಕೆ ಸರ್ಕಾರ ಏನು ಕಾರಣ ಕೊಟ್ಟಿದೆ ಅಂದರೆ ಪ್ರತಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ವಿಹಾರಗಳು ಇರುವ ಕಾರಣ ಸಚಿವ ಶ್ರೀ ಸಂತೋಷ್ ಲಾಡ್ ಸಾಹೇಬ್ರಿಗೆ CRECHE ಯೋಜನೆಯನ್ನು ಮುಂದುವರೆಸಲು ಇಷ್ಟವಿಲ್ಲದ ಕಾರಣ ಈ ತಿಂಗಳ ಕೊನೆಯಲ್ಲಿ ಎಲ್ಲಾ CRECHEಗಳನ್ನು ಮುಚ್ಚಲು  ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.


   ಹಾಗಾದರೆ ಈ ಶಿಶು ವಿಹಾರಗಳ ಮಕ್ಕಳನ್ನು ಪುನಃ ಬೇರೆ ಬೇರೆ ಅಂಗನವಾಡಿಗಳಿಗೆ ಸೇರಿಸಬೇಕು. ಇಲ್ಲಿ ಮಕ್ಕಳ ಸಮಸ್ಯೆ ದೊಡ್ಡದಲ್ಲ. ಅವರನ್ನು ಬೇರೆ ಬೇರೆ ಅಂಗನವಾಡಿ ಗಳಿಗೆ ಸೇರಿಸಬಹುದು. ಆದರೆ ಈ CRECHEಯಲ್ಲಿ ಕೆಲಸ ಮಾಡುತ್ತಿದ್ದ ಟೀಚರ್ಸ್ ಮತ್ತು ಹೆಲ್ಪರ್ ಗಳ ಗತಿ ಏನು. ಅವರೆಲ್ಲ ಈ ಸರ್ಕಾರವನ್ನು ನಂಬಿ ಇದ್ದ ಕೆಲಸ ಕೈ ಬಿಟ್ಟು ಇದಕ್ಕೆ ಸೇರಿ ಈಗ ಅದೂ ಇಲ್ಲ ಇದೂ ಇಲ್ಲ ಎಂಬ ಪರಿಸ್ಥಿತಿಗೆ ಮುಟ್ಟಿದ್ದಾರೆ. ಆದ್ದರಿಂದ ಸರ್ಕಾರ ಈ ಕಾರ್ಯಕರ್ತೆಯರನ್ನು ಅರ್ಧ ನೀರಲ್ಲಿ ಕೈ ಬಿಟ್ಟ ಕಾರಣ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯೋಚಿಸ ಬೇಕಾಗಿದೆ.


   

    







MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget