June 2023


      ಹಾಗೆಂದು ಒಂದು ಕಳ್ಳತನ ನಡೆದು ಹೋದರೆ ಆ ಬಗ್ಗೆ ಪೋಲಿಸ್ ಕಂಪ್ಲೈಂಟ್ ಆಗೋದು ಕಾನೂನಿನ ಒಂದು ಸಹಜ ಪ್ರಕ್ರೀಯೆ. ಬಂದ ಕಂಪ್ಲೈಂಟ್‌ನ ಆಧಾರದ ಮೇಲೆ ಪೋಲಿಸರು ತನಿಖೆ ನಡೆಸಿ ಕಳ್ಳಣ್ಣನನ್ನು ಚಡ್ಡಿಯಲ್ಲಿ ಒದ್ದು ಒಳಗೆ ಹಾಕೋದು ಇದ್ದದ್ದೇ. ಆದರೆ ಪೋಲಿಸರು ಮೌಕಿಕ ದೂರಿನ ಮೇರೆಗೆ ಯಾರ ಚಡ್ಡಿಯನ್ನೂ ಜಾರಿಸಲ್ಲ. ಇದೀಗ ಗುತ್ತಿಗಾರು ನೆರಳಾಡಿಯಲ್ಲಿ ಮಲೆ ದೈವಗಳ ಡಬ್ಬಿಗೆ ಕೈ ಹಾಕಿದವನೊಬ್ಬ ಸೇಫಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಕಳ್ಳ ಯಾರೆಂದು ಮಲೆದೈವಗಳ ಸಮೇತ ಊರಿಡೀ ಗೊತ್ತಿದೆ, ಪೋಲಿಸರಿಗೂ ದೂರಾಗಿದೆ. ಆದರೆ ರಿಟನ್ ಕಂಪ್ಲೈಂಟ್ ಯಾರೂ ಕೊಡದ ಕಾರಣ ಪೋಲಿಸರ ಬೆಟ್ರಿ ಚಾರ್ಜ್ ಆಗುತ್ತಿಲ್ಲ. ಸದ್ಯಕ್ಕೆ ಕಲ್ಲ ಇನ್ನೊಂದು ಡಬ್ಬಿ ಹುಡುಕುತ್ತಿದ್ದಾನೆ.
     ಇದು ಗುತ್ತಿಗಾರು ಸಮೀಪದ ನೆರಳಾಡಿಯ ಕತೆ. ಸದ್ರಿ ನೆರಳಾಡಿಯಲ್ಲಿ ಮಲೆದೈವಗಳ ಸನ್ನಿಧಿ ಇದೆ. ಭಾರೀ ಕಾರಣಿಕದ ದೈವಗಳಿವು. ಊರವರ ಆಡಳಿತ ಮಂಡಳಿ ಸದ್ರಿ ದೈವಸ್ಥಾನಕ್ಕಿದೆ. ಊರ ಪರವೂರ ಭಕ್ತರ ಹರಿಕೆ ಕಾಣಿಕೆ ಎಲ್ಲವೂ ಸನ್ನಿಧಿಗಿದೆ. ಆದರೆ ಕೆಲವು ತಿಂಗಳ ಹಿಂದೆ ನಟ್ಟ ಅರೆಗ್ಗಲದಲ್ಲಿ ಒಂದು ಮುಸ್ಸಂಜೆ ಇಲ್ಲಿನ ದೈವಸ್ಥಾನದ ಡಬ್ಬಿಯನ್ನು ದೋಚಲಾಯಿತು. ದೋಚಿದ್ದು ಯಾರೆಂ ದೂ ಕೆಲವು ಪ್ರತ್ಯಕ್ಷ ಸಾಕ್ಷಿಗಳ ಮುಖಾಂತರ ಗೊತ್ತೂ ಆಯಿತು. ಡಬ್ಬಿಗೆ ಕೈಹಾಕಿದ್ದು ಒಬ್ಬ ದಾವಣಗೆರೆ ಮೂಲದ ವ್ಯಕ್ತಿ. ಅವನು ಅಲ್ಲೇ ದೈವಸ್ಥಾನದ ಟ್ರಸ್ಟಿ ಒಬ್ಬರ ತೋಟದಲ್ಲಿ ಕೆಲಸಕ್ಕಿದ್ದವನು. ಈ ಬಗ್ಗೆ ಹುಡುಗರೆಲ್ಲ ಸೇರಿ ಅವನನ್ನು ಹಿಡಿದು ನಾಲಕ್ಕು ಬಾರಿಸಿಯೂ ಆಯಿತು. ಟ್ರಸ್ಟಿಯನ್ನು ಕರೆಸಿ ಪಂಚಾಯ್ತಿಯೂ ನಡೆಯಿತು. ಆದರೆ ಟ್ರಸ್ಟಿ ಕಳ್ಳನ ಪರವೇ ವಾದ ಮಂಡನೆ ಮಾಡಿದ ಕಾರಣ ಊರವರು ಈ ಬಗ್ಗೆ ಪೋಲಿಸರಿಗೆ ಹೋಗಿ ಹೀಗೀಗೆ ಆಗಿದೆ ಎಂದು ದೂರು ಹೇಳಿದರು. ಆದರೆ ಕಳ್ಳನ ಮೇಲೆ ಯಾರೂ ರಿಟನ್ ಕಂಪ್ಲೈಂಟ್ ಕೊಡದ ಕಾರಣ ಪೋಲಿಸರಿಗೂ ಕಳ್ಳನ ಮೇಲೆ ಕರುಣೆ ಉಕ್ಕಿ ಉಕ್ಕಿ ಬಂದಿತ್ತು. ಪೋಲಿಸರೂ ಕಳ್ಳನನ್ನು ಮತ್ತು ಕಳ್ಳನ ಧನಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗಲೂ ಕಳ್ಳನ ಧನಿ ಕಳ್ಳನ ಪರವಾಗಿಯೇ ಪ್ರಬಲವಾದ ಮಂಡನೆ ಮಾಡಿದ ಕಾರಣ ಪೋಲಿಸರು ಬೇರೆ ದಾರಿ ಕಾಣದೆ 'ಕರೆದಾಗ ಬರಬೇಕು'  ಎಂದು ಇಬ್ಬರನ್ನೂ ಮನೆಗೆ ವಾಪಾಸ್ ಕಳಿಸಿದ್ದರು. ಅಲ್ಲಿಗೆ ಮಲೆ ದೈವಗಳ ಡಬ್ಬಿ ದುಡ್ಡಿಗೆ ಗತಿಯೇ ಇಲ್ಲದಂತಾಗಿತ್ತು. 
     ಹಾಗೇ ಮಲೆ ದೈವಗಳ ಡಬ್ಬಿಗೆ ಕೈಹಾಕಿದ ಸನ್ಮಾನ್ಯ ಕಳ್ಳಣ್ಣ ಊರಲ್ಲೇ ಇದ್ದರೂ, ಅವನೇ ಕದ್ದಿದ್ದು ಎಂಬುದಕ್ಕೆ ಪೂರಕವಾದ ದಾಖಲೆಗಳಿದ್ದರೂ ಊರವರಿಗೆ ಕಳ್ಳನ ಒಂದು ಕೆಂಚಿ ಕೂದಲನ್ನೂ ಅಲುಗಾಡಿಸಲಾಗಲಿಲ್ಲ. ಪೋಲಿಸರು ಕಳ್ಳನ ಮೇಲೆ ಒಂದು ರಿಟನ್ ಕಂಪ್ಲೈಂಟ್ ಕೊಡಿ ಎಂದು ಜಾರಿಕ್ಕೊಂಡರೆ, ಮಲೆ ಟ್ರಸ್ಟಿ ನನ್ನ ಕೆಲಸದವನು ಸತ್ಯ ಹರಿಶ್ಚಂದ್ರನ ತಮ್ಮ, ಗಾಂಧೀ ಕುಟುಂಬದ ಕುಡಿ ಎಂದು ಕಳ್ಳನ ಪರವಾಗಿಯೇ ವಾದ ಮಾಡಿದ ಕಾರಣ ಮಲೆ ದೈವಗಳ ಡಬ್ಬಿ ದುಡ್ಡಿಗೆ ಇಲ್ಲಿ ತನಕ ನ್ಯಾಯ ಸಿಕ್ಕಿಲ್ಲ. ಈ ಸ್ಟೋರಿಯ ಹಿಂದೆ ಒಂದು ಲವ್ ಸ್ಟೋರಿ ಇದೆ ಎಂದು ಈಗೀಗ ಗುತ್ತಿಗಾರಿನಲ್ಲಿ ಗುಸುಗುಸು ಶುರುವಾಗಿದೆ. ಯಾರು ಯಾರನ್ನು ಯಾವಾಗ ಲವ್ ಮಾಡಿದರು ಎಂಬುದು ಯಾವ ಸಂಧಿ ಎಂಬುದು ಇನ್ನು ಮುಂದೆ ಗೊತ್ತಾಗಬೇಕಿದೆ. ಮಲೆ ದೈವಗಳಿಗಿಂತಲೂ ಪವರ್‌ಫುಲ್ ಆದ ಶಕ್ತಿಯೊಂದು ಹೊಸೊಳಿಕೆ ಆಸುಪಾಸಿನಲ್ಲಿ ದಾವಣಗೆರೆಯಿಂದ ಬಂದು ಸ್ಥಾಪನೆಯಾಗಿದೆ ಎಂಬ ಮಾಹಿತಿ ಇದೆ. ಹಾಗಾದರೆ ಆ ಶಕ್ತಿ ಯಾವುದ? ಡೀಟೈಲ್ಸ್ ಸಿಕ್ಕಿಲ್ಲ.

 



      ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಅವರಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದಲ್ಲಿ ಉಳಿಯುವಂತೆ ಆಗಿದ್ದು, ಸುಮಾರು 23 ವರುಷಗಳಿಂದ ಸುಳ್ಯ ಕಾರ್ಯಕರ್ತರ ಆಶಾಕಿರಣರು ಹಾಗೂ ಪ್ರತಿಯೊಬ್ಬರ ವಿಶ್ವಾಸ ಗಳಿಸಿ ಹಲವಾರಿಗೆ ಉನ್ನತ ಸ್ಥಾನ ನೀಡು ವಲ್ಲಿಯು ಪ್ರಮುಖ ಕಾರಣಿಕರ್ತರು. ಶ್ರೀ ಬಿ. ರಮಾನಾಥ ರೈ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲು ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿಮಾನಿಗಳಿಂದ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ. 
        ರಮಾನಾಥ ರೈ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಮಹೇಶ್ ಕರಿಕ್ಕಳ, ಸಂಚಾಲಕರಾದ ಪ್ರವೀಣ್ ಕೆಡೆಂಜಿ, ಗೌರ ವಾಧ್ಯಕ್ಷ ಬಾಲಕೃಷ್ಣ ಬಳ್ಳೇರಿ, ಸಹ ಸಂಚಾಲಕರಾದ ಗೋಕುಲ್ ದಾಸ್, ಕಾರ್ಯದರ್ಶಿ ಭವಾನಿ ಶಂಕರ ಕಲ್ಮಡ್ಕ ಹಾಗೂ ಪದಾ ಧಿಕಾರಿಗಳ ನೇತೃತ್ವದಲ್ಲಿ ಮನವಿ ನೀಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ

 



      ಕಳಸ ಎಂಬ ಚಿಕ್ಕ ಪಟ್ಟಣದಲ್ಲಿ ಕೃಷಿ ಸಾಮಾಗ್ರಿಗಳ ವ್ಯವಹಾರದಲ್ಲಿ ದೊಡ್ಡ ಮಟ್ಟದಲ್ಲಿ ವಂಚನೆ ನಡೆಯುತ್ತಿದೆ. ಕೃಷಿ ಉಪಕರಣಗಳಿಗೆ ಸಬ್ಸಿಡಿ ಕೊಡಲಾಗುವುದು ಎಂದು ರೈತರನ್ನು ಮಂಗ ಮಾಡಿ ತಮ್ಮ ಜೇಬು ತುಂಬಿಸಿ ಕೊಳ್ಳುವ ದೊಡ್ಡ ಪಟಾಲಮ್ಮೆ ಕಳಸ, ಮೂಡಿಗೆರೆ ತುಂಬಾ ತುಂಬಿಕೊಂಡಿದೆ. ಇದೆಲ್ಲ ಹೇಗೆ ಅಂದರೆ ಕೃಷಿ ಉಪಕರಣಗಳ ಅಂಗಡಿ ಅಥವಾ ಸೊಸ್ಶೆಟಿಗಳಿಗೆ ನೀವೋಮ್ಮೆ ಹೋಗಿ ಒಂದು ಕೃಷಿ ಉಪಕರಣದ ರೇಟ್ ಕೇಳಿ. ಉದಾಹರಣೆಗೆ ಒಂದು ಉಪಕರಣದ ಬಾಕ್ಸ್ ಮೇಲೆ ಅದರ ಬೆಲೆ ಇಪ್ಪತ್ತೈದು ಸಾವ್ರ ಅಂತ ಇದ್ದರೆ ಅಂಗಡಿಯವರು ಅದನ್ನು ನಿಮಗೆ ಅದನ್ನು ಹದಿನೈದು ಸಾವ್ರಕ್ಕೆ ಕೊಟ್ಟು ಬಿಡುತ್ತಾರೆ. ಉಳಿದ ಹತ್ತು ಸಾವ್ರ ನಿಮಗೆ ಸರಕಾರದ ಕಡೆಯಿಂದ ಸಬ್ಸಿಡಿ ಇದೆ ಎಂದು ಮಂಗ ಮಾಡುತ್ತಾರೆ. 
      ಮಂಗ ಮಾಡುವ ಕೆಲಸ ಅಧಿಕೃತ ಆಗಿರಲಿ ಅಂತ ನಿಮ್ಮ ಪಹಣೆ, ಆಧಾರ್ ಕಾರ್ಡ್ ಜೆರಾಕ್ಸ್ ಎಲ್ಲಾ ತಗೊಂಡು ನೀವು ಈಚೆ ಬಂದ ಮೇಲೆ ಅದನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಇಲ್ಲಿ ಅಂಗಡಿಯವರು ಹೇಗೆ ತಮ್ಮ ತಿಜೋರಿ ತುಂಬಿಸಿ ಕೊಲ್ಳುತ್ತಾರೆಂದರೆ ನೀವು ತಗೊಂಡ ಹದಿನೈದು ಸಾವಿರದ ಕೃಷಿ ಉಪಕರಣ ಅವರಿಗೆ ಕೇವಲ ಏಳೂವರೆಗೆ ಬಂದಿರುತ್ತದೆ. ಒರಿಜಿನಲೀ ಅದರ ರೇಟು ಅಷ್ಟೇ. ಜನರನ್ನು ಮಂಗ ಮಾಡಲು 25 ಸಾವಿರ ರೇಟು, ಸಬ್ಸಿಡಿ, ಆಧಾರ್ ಕಾರ್ಡ್ ಜೆರಾಕ್ಸ್ ಎಂದೆಲ್ಲ ನಾಟಕ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಯಾವ ಸರಕಾರಗಳೂ ಖಾಸಗೀಯಾಗಿ ರೆಡಿಯಾಗುವ ಕೃಷಿ ಉಪಕರಣಗಳಿಗೆ ಸಬ್ಸಿಡಿ ಕೊಡುವ ಗೋಜಿಗೆ ಹೋಗಲ್ಲ. ಇಷ್ಟೆಲ್ಲ ಯಾಕೆ ಮಾಡುತ್ತಾರೆಂದರೆ ತಮ್ಮ ಏಳೂವರೆ ಸಾವಿರದ ಪ್ರೋಡಕ್ಟ್ ಹದಿನೈದು ಸಾವಿರಕ್ಕೆ ಹೋಗಲಿ ಎಂಬ ಏಕೈಕ ಕಾರಣಕ್ಕೆ. ಸಬ್ಸಿಡಿಯೂ ಇಲ್ಲ, ಮಣ್ಣಂಗಟ್ಟಿಯೂ ಇಲ್ಲ. ಇಂಥ ಅನೇಕ ಕೃಷಿ ಉಪಕರಣಗಳ ಗೋಲ್- ಮಾಲ್‌ಗಳು ಕಳಸ, ಮೂಡಿಗೆರೆ, ಕಾರ್ಕಳ, ಪುತ್ತೂರು ಗಳಲ್ಲಿ ತುಂಬಿ ಹೋಗಿದ್ದು ಇದೊಂದು ನೂರಾರು ಕೋಟಿಯ ಗೋಲ್‌ಮಾಲ್ ವ್ಯವಹಾರ ಎಂಬುದು ವಾಸನೆ ಬರ ತೊಡಗಿದೆ. ಸಹಕಾರಿ ಸೊಸ್ಶೆಟಿಗಳೂ ಇಂತ ಕೃಷಿ ಉಪಕರಣಗಳ ಗೋಲ್-ಮಾಲ್‌ಗಳನ್ನು ತೆರೆದಿದ್ದು ರೈತರ ಕಿಸೆಗೆ ಬ್ಲೇಡ್ ಹಾಕುವಲ್ಲಿ ಸಫಲ ಆಗಿದೆ.



 




     ಕಳೆದ ಎಂಟು ತಿಂಗಳ ಹಿಂದೆ ಪುತ್ತೂರು ಪ್ರಕಾಶ್ ಫೂಟ್ ವೇರ್‌ನಿಂದ ಬರೋಬ್ಬರಿ ಹದಿನೈದು ಲಕ್ಷ ಹಣ ಕಳವಾಗಿತ್ತು. ಕಳ್ಳರು ಹೆಂಚು ತೆಗೆದು ಅಂಗಡಿಯೊಳಗೆ ಜಂಪ್ ಮಾಡಿ ಹಣಕ್ಕೆ ಕೈ ಕೊಟ್ಟಿದ್ದರು. ಈ ಬಗ್ಗೆ ನಿದ್ದೆ ಬಿಟ್ಟಿದ್ದ ಪುತ್ತೂರು ಪೋಲಿಸರು ಓ ಮೊನ್ನೆ ನೆಲ್ಲಿಕಟ್ಟೆಯಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ದಾವಣ ಗೆರೆಯ ಕಪ್ಪ ಯಾನೆ ಸಮೀರ್ ಮತ್ತು ಸಕಲೇಶಪುರದ ಚಂದ್ರ ಯಾನೆ ಚಂದ್ರಶೇಖರ್ ಎಂಬವರನ್ನು ಹೊತ್ತುಕ್ಕೊಂಡು ತಂದು ಚಡ್ಡಿಯಲ್ಲಿ ನಿಲ್ಲಿಸಿದ್ದರು. ಪುತ್ತೂರು ಪೋಲಿಸರು ಸದ್ರಿ ಕಳ್ಳರನ್ನು ಕಂಕಣೆ ಮಲಂಕಣೆ ಮಾಡಿ ಹೊಡೆದು ಬಡಿದು, ಉಗುರು ತೆಗದು, ಹಿಂದೆ ಮುಂದೆ ಡಬ್ಬಣ ಹಾಕಿ, ಬೆಂಡ್ ತೆಗೆದು, ಕುಂಡೆಯಲ್ಲಿ ಒಟಿಪಿ ಬರುವ ತನಕ ರಿಪೇರಿ ಮಾಡಿದಾಗ ಹದಿನೈದು ಲಕ್ಷದ ಬಾಯಿ ಬಿಟ್ಟಿದ್ದರು. 
      ಪ್ರಕಾಶ್ ಪೂಟ್‌ವೇರ್‌ನಿಂದ ಹದಿನೈದು ಲಕ್ಷ ಕದ್ದದ್ದು ಅವರೇ ಎಂಬುದನ್ನು ಅವರೇ ಒಪ್ಪಿಕ್ಕೊಂಡಿರುವಾಗ ಅದರ ರಿಕವರಿ ಆಗಬೇಕಲ್ಲ. ಇಲ್ಲಿ ತನಕ ಆಗಿಲ್ಲ. ಕಪ್ಪನನ್ನು ಮತ್ತು ಚಂದ್ರನನ್ನು ಈಗಾಗಲೇ ಜೈಲಿಗೆ ಕಳಿಸಿ ಕೊಡಲಾಗಿದೆ. ದುಡ್ಡು ರಿಕವರಿಗೆಂದು ಪೋಲಿಸರು ಇವರಿಬ್ಬರನ್ನೂ ಕರಕ್ಕೊಂಡು ಅವರ ಊರಿಗೆ ಹೋದರೂ ಏನೂ ಪ್ರಯೋಜನವಾಗಿಲ್ಲ. ಕದ್ದ ದುಡ್ಡಿನಲ್ಲಿ ಕಳ್ಳ ರಿಬ್ಬರೂ ಮನೆಗೆ ಬೇಕಾಗುದ ಲಕ್ಷುರಿ ಐಟಂಗಳನ್ನು ಪರ್ಚೆಸ್ ಮಾಡಿದ್ದು ಪೋಲಿಸರು ಅದನ್ನು ಆಪೆಯಲ್ಲಿ ತುಂಬಿಸಿಕ್ಕೊಂಡು ಬಂದಿದ್ದಾರೆ. ಇನ್ನು ಒಂದೈದು ಲಕ್ಷ ದುಡ್ಡು ಕಳ್ಳನೊಬ್ಬನ ಸ್ಟೆಪಿನಿ ಕೈಯಲ್ಲಿ ಉಂಟೆಂದು ಕಳ್ಳ ಬಾಯಿ ಬಿಟ್ಟಿದ್ದು ಪೋಲಿಸರು ಕಳ್ಳನ ಸ್ಟೆಪಿನಿ ಮನೆಗೆ ಹೋಗಿ ಬಂದಿದ್ದಾರೆ. ಸ್ಟೆಪಿನಿ ಕೈಯಿಂದ ಪೋಲಿಸರು ರಿಕವರಿ ಮಾಡಿದ್ರಾ ಅಥವಾ ಸ್ಟೆಪಿನಿಯನ್ನು ನೋಡಿ ಕಣ್ತುಂಬಿಸಿ ಕೊಂಡು ಬಂದರಾ ಎಂಬುದು ಗೊತ್ತಾಗುತ್ತಿಲ್ಲ. 
     ಅಂತೂ ಇಂತೂ ಫೂಟ್ ವೇರ್‌ನವರಿಗೆ ವನವಾಸ, ಕಳ್ಳರಿಗೆ ಜೈಲುವಾಸ.



 

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget