ಹಾಗೆಂದು ಒಂದು ಕಳ್ಳತನ ನಡೆದು ಹೋದರೆ ಆ ಬಗ್ಗೆ ಪೋಲಿಸ್ ಕಂಪ್ಲೈಂಟ್ ಆಗೋದು ಕಾನೂನಿನ ಒಂದು ಸಹಜ ಪ್ರಕ್ರೀಯೆ. ಬಂದ ಕಂಪ್ಲೈಂಟ್‌ನ ಆಧಾರದ ಮೇಲೆ ಪೋಲಿಸರು ತನಿಖೆ ನಡೆಸಿ ಕಳ್ಳಣ್ಣನನ್ನು ಚಡ್ಡಿಯಲ್ಲಿ ಒದ್ದು ಒಳಗೆ ಹಾಕೋದು ಇದ್ದದ್ದೇ. ಆದರೆ ಪೋಲಿಸರು ಮೌಕಿಕ ದೂರಿನ ಮೇರೆಗೆ ಯಾರ ಚಡ್ಡಿಯನ್ನೂ ಜಾರಿಸಲ್ಲ. ಇದೀಗ ಗುತ್ತಿಗಾರು ನೆರಳಾಡಿಯಲ್ಲಿ ಮಲೆ ದೈವಗಳ ಡಬ್ಬಿಗೆ ಕೈ ಹಾಕಿದವನೊಬ್ಬ ಸೇಫಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಕಳ್ಳ ಯಾರೆಂದು ಮಲೆದೈವಗಳ ಸಮೇತ ಊರಿಡೀ ಗೊತ್ತಿದೆ, ಪೋಲಿಸರಿಗೂ ದೂರಾಗಿದೆ. ಆದರೆ ರಿಟನ್ ಕಂಪ್ಲೈಂಟ್ ಯಾರೂ ಕೊಡದ ಕಾರಣ ಪೋಲಿಸರ ಬೆಟ್ರಿ ಚಾರ್ಜ್ ಆಗುತ್ತಿಲ್ಲ. ಸದ್ಯಕ್ಕೆ ಕಲ್ಲ ಇನ್ನೊಂದು ಡಬ್ಬಿ ಹುಡುಕುತ್ತಿದ್ದಾನೆ.
ಇದು ಗುತ್ತಿಗಾರು ಸಮೀಪದ ನೆರಳಾಡಿಯ ಕತೆ. ಸದ್ರಿ ನೆರಳಾಡಿಯಲ್ಲಿ ಮಲೆದೈವಗಳ ಸನ್ನಿಧಿ ಇದೆ. ಭಾರೀ ಕಾರಣಿಕದ ದೈವಗಳಿವು. ಊರವರ ಆಡಳಿತ ಮಂಡಳಿ ಸದ್ರಿ ದೈವಸ್ಥಾನಕ್ಕಿದೆ. ಊರ ಪರವೂರ ಭಕ್ತರ ಹರಿಕೆ ಕಾಣಿಕೆ ಎಲ್ಲವೂ ಸನ್ನಿಧಿಗಿದೆ. ಆದರೆ ಕೆಲವು ತಿಂಗಳ ಹಿಂದೆ ನಟ್ಟ ಅರೆಗ್ಗಲದಲ್ಲಿ ಒಂದು ಮುಸ್ಸಂಜೆ ಇಲ್ಲಿನ ದೈವಸ್ಥಾನದ ಡಬ್ಬಿಯನ್ನು ದೋಚಲಾಯಿತು. ದೋಚಿದ್ದು ಯಾರೆಂ ದೂ ಕೆಲವು ಪ್ರತ್ಯಕ್ಷ ಸಾಕ್ಷಿಗಳ ಮುಖಾಂತರ ಗೊತ್ತೂ ಆಯಿತು. ಡಬ್ಬಿಗೆ ಕೈಹಾಕಿದ್ದು ಒಬ್ಬ ದಾವಣಗೆರೆ ಮೂಲದ ವ್ಯಕ್ತಿ. ಅವನು ಅಲ್ಲೇ ದೈವಸ್ಥಾನದ ಟ್ರಸ್ಟಿ ಒಬ್ಬರ ತೋಟದಲ್ಲಿ ಕೆಲಸಕ್ಕಿದ್ದವನು. ಈ ಬಗ್ಗೆ ಹುಡುಗರೆಲ್ಲ ಸೇರಿ ಅವನನ್ನು ಹಿಡಿದು ನಾಲಕ್ಕು ಬಾರಿಸಿಯೂ ಆಯಿತು. ಟ್ರಸ್ಟಿಯನ್ನು ಕರೆಸಿ ಪಂಚಾಯ್ತಿಯೂ ನಡೆಯಿತು. ಆದರೆ ಟ್ರಸ್ಟಿ ಕಳ್ಳನ ಪರವೇ ವಾದ ಮಂಡನೆ ಮಾಡಿದ ಕಾರಣ ಊರವರು ಈ ಬಗ್ಗೆ ಪೋಲಿಸರಿಗೆ ಹೋಗಿ ಹೀಗೀಗೆ ಆಗಿದೆ ಎಂದು ದೂರು ಹೇಳಿದರು. ಆದರೆ ಕಳ್ಳನ ಮೇಲೆ ಯಾರೂ ರಿಟನ್ ಕಂಪ್ಲೈಂಟ್ ಕೊಡದ ಕಾರಣ ಪೋಲಿಸರಿಗೂ ಕಳ್ಳನ ಮೇಲೆ ಕರುಣೆ ಉಕ್ಕಿ ಉಕ್ಕಿ ಬಂದಿತ್ತು. ಪೋಲಿಸರೂ ಕಳ್ಳನನ್ನು ಮತ್ತು ಕಳ್ಳನ ಧನಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗಲೂ ಕಳ್ಳನ ಧನಿ ಕಳ್ಳನ ಪರವಾಗಿಯೇ ಪ್ರಬಲವಾದ ಮಂಡನೆ ಮಾಡಿದ ಕಾರಣ ಪೋಲಿಸರು ಬೇರೆ ದಾರಿ ಕಾಣದೆ 'ಕರೆದಾಗ ಬರಬೇಕು' ಎಂದು ಇಬ್ಬರನ್ನೂ ಮನೆಗೆ ವಾಪಾಸ್ ಕಳಿಸಿದ್ದರು. ಅಲ್ಲಿಗೆ ಮಲೆ ದೈವಗಳ ಡಬ್ಬಿ ದುಡ್ಡಿಗೆ ಗತಿಯೇ ಇಲ್ಲದಂತಾಗಿತ್ತು.
ಹಾಗೇ ಮಲೆ ದೈವಗಳ ಡಬ್ಬಿಗೆ ಕೈಹಾಕಿದ ಸನ್ಮಾನ್ಯ ಕಳ್ಳಣ್ಣ ಊರಲ್ಲೇ ಇದ್ದರೂ, ಅವನೇ ಕದ್ದಿದ್ದು ಎಂಬುದಕ್ಕೆ ಪೂರಕವಾದ ದಾಖಲೆಗಳಿದ್ದರೂ ಊರವರಿಗೆ ಕಳ್ಳನ ಒಂದು ಕೆಂಚಿ ಕೂದಲನ್ನೂ ಅಲುಗಾಡಿಸಲಾಗಲಿಲ್ಲ. ಪೋಲಿಸರು ಕಳ್ಳನ ಮೇಲೆ ಒಂದು ರಿಟನ್ ಕಂಪ್ಲೈಂಟ್ ಕೊಡಿ ಎಂದು ಜಾರಿಕ್ಕೊಂಡರೆ, ಮಲೆ ಟ್ರಸ್ಟಿ ನನ್ನ ಕೆಲಸದವನು ಸತ್ಯ ಹರಿಶ್ಚಂದ್ರನ ತಮ್ಮ, ಗಾಂಧೀ ಕುಟುಂಬದ ಕುಡಿ ಎಂದು ಕಳ್ಳನ ಪರವಾಗಿಯೇ ವಾದ ಮಾಡಿದ ಕಾರಣ ಮಲೆ ದೈವಗಳ ಡಬ್ಬಿ ದುಡ್ಡಿಗೆ ಇಲ್ಲಿ ತನಕ ನ್ಯಾಯ ಸಿಕ್ಕಿಲ್ಲ. ಈ ಸ್ಟೋರಿಯ ಹಿಂದೆ ಒಂದು ಲವ್ ಸ್ಟೋರಿ ಇದೆ ಎಂದು ಈಗೀಗ ಗುತ್ತಿಗಾರಿನಲ್ಲಿ ಗುಸುಗುಸು ಶುರುವಾಗಿದೆ. ಯಾರು ಯಾರನ್ನು ಯಾವಾಗ ಲವ್ ಮಾಡಿದರು ಎಂಬುದು ಯಾವ ಸಂಧಿ ಎಂಬುದು ಇನ್ನು ಮುಂದೆ ಗೊತ್ತಾಗಬೇಕಿದೆ. ಮಲೆ ದೈವಗಳಿಗಿಂತಲೂ ಪವರ್‌ಫುಲ್ ಆದ ಶಕ್ತಿಯೊಂದು ಹೊಸೊಳಿಕೆ ಆಸುಪಾಸಿನಲ್ಲಿ ದಾವಣಗೆರೆಯಿಂದ ಬಂದು ಸ್ಥಾಪನೆಯಾಗಿದೆ ಎಂಬ ಮಾಹಿತಿ ಇದೆ. ಹಾಗಾದರೆ ಆ ಶಕ್ತಿ ಯಾವುದ? ಡೀಟೈಲ್ಸ್ ಸಿಕ್ಕಿಲ್ಲ.
Post a Comment