ಕಳಸದಲ್ಲಿ ಸಬ್ಸಿಡಿ ಗೋಲ್-ಮಾಲ್‌ಗಳು



      ಕಳಸ ಎಂಬ ಚಿಕ್ಕ ಪಟ್ಟಣದಲ್ಲಿ ಕೃಷಿ ಸಾಮಾಗ್ರಿಗಳ ವ್ಯವಹಾರದಲ್ಲಿ ದೊಡ್ಡ ಮಟ್ಟದಲ್ಲಿ ವಂಚನೆ ನಡೆಯುತ್ತಿದೆ. ಕೃಷಿ ಉಪಕರಣಗಳಿಗೆ ಸಬ್ಸಿಡಿ ಕೊಡಲಾಗುವುದು ಎಂದು ರೈತರನ್ನು ಮಂಗ ಮಾಡಿ ತಮ್ಮ ಜೇಬು ತುಂಬಿಸಿ ಕೊಳ್ಳುವ ದೊಡ್ಡ ಪಟಾಲಮ್ಮೆ ಕಳಸ, ಮೂಡಿಗೆರೆ ತುಂಬಾ ತುಂಬಿಕೊಂಡಿದೆ. ಇದೆಲ್ಲ ಹೇಗೆ ಅಂದರೆ ಕೃಷಿ ಉಪಕರಣಗಳ ಅಂಗಡಿ ಅಥವಾ ಸೊಸ್ಶೆಟಿಗಳಿಗೆ ನೀವೋಮ್ಮೆ ಹೋಗಿ ಒಂದು ಕೃಷಿ ಉಪಕರಣದ ರೇಟ್ ಕೇಳಿ. ಉದಾಹರಣೆಗೆ ಒಂದು ಉಪಕರಣದ ಬಾಕ್ಸ್ ಮೇಲೆ ಅದರ ಬೆಲೆ ಇಪ್ಪತ್ತೈದು ಸಾವ್ರ ಅಂತ ಇದ್ದರೆ ಅಂಗಡಿಯವರು ಅದನ್ನು ನಿಮಗೆ ಅದನ್ನು ಹದಿನೈದು ಸಾವ್ರಕ್ಕೆ ಕೊಟ್ಟು ಬಿಡುತ್ತಾರೆ. ಉಳಿದ ಹತ್ತು ಸಾವ್ರ ನಿಮಗೆ ಸರಕಾರದ ಕಡೆಯಿಂದ ಸಬ್ಸಿಡಿ ಇದೆ ಎಂದು ಮಂಗ ಮಾಡುತ್ತಾರೆ. 
      ಮಂಗ ಮಾಡುವ ಕೆಲಸ ಅಧಿಕೃತ ಆಗಿರಲಿ ಅಂತ ನಿಮ್ಮ ಪಹಣೆ, ಆಧಾರ್ ಕಾರ್ಡ್ ಜೆರಾಕ್ಸ್ ಎಲ್ಲಾ ತಗೊಂಡು ನೀವು ಈಚೆ ಬಂದ ಮೇಲೆ ಅದನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಇಲ್ಲಿ ಅಂಗಡಿಯವರು ಹೇಗೆ ತಮ್ಮ ತಿಜೋರಿ ತುಂಬಿಸಿ ಕೊಲ್ಳುತ್ತಾರೆಂದರೆ ನೀವು ತಗೊಂಡ ಹದಿನೈದು ಸಾವಿರದ ಕೃಷಿ ಉಪಕರಣ ಅವರಿಗೆ ಕೇವಲ ಏಳೂವರೆಗೆ ಬಂದಿರುತ್ತದೆ. ಒರಿಜಿನಲೀ ಅದರ ರೇಟು ಅಷ್ಟೇ. ಜನರನ್ನು ಮಂಗ ಮಾಡಲು 25 ಸಾವಿರ ರೇಟು, ಸಬ್ಸಿಡಿ, ಆಧಾರ್ ಕಾರ್ಡ್ ಜೆರಾಕ್ಸ್ ಎಂದೆಲ್ಲ ನಾಟಕ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಯಾವ ಸರಕಾರಗಳೂ ಖಾಸಗೀಯಾಗಿ ರೆಡಿಯಾಗುವ ಕೃಷಿ ಉಪಕರಣಗಳಿಗೆ ಸಬ್ಸಿಡಿ ಕೊಡುವ ಗೋಜಿಗೆ ಹೋಗಲ್ಲ. ಇಷ್ಟೆಲ್ಲ ಯಾಕೆ ಮಾಡುತ್ತಾರೆಂದರೆ ತಮ್ಮ ಏಳೂವರೆ ಸಾವಿರದ ಪ್ರೋಡಕ್ಟ್ ಹದಿನೈದು ಸಾವಿರಕ್ಕೆ ಹೋಗಲಿ ಎಂಬ ಏಕೈಕ ಕಾರಣಕ್ಕೆ. ಸಬ್ಸಿಡಿಯೂ ಇಲ್ಲ, ಮಣ್ಣಂಗಟ್ಟಿಯೂ ಇಲ್ಲ. ಇಂಥ ಅನೇಕ ಕೃಷಿ ಉಪಕರಣಗಳ ಗೋಲ್- ಮಾಲ್‌ಗಳು ಕಳಸ, ಮೂಡಿಗೆರೆ, ಕಾರ್ಕಳ, ಪುತ್ತೂರು ಗಳಲ್ಲಿ ತುಂಬಿ ಹೋಗಿದ್ದು ಇದೊಂದು ನೂರಾರು ಕೋಟಿಯ ಗೋಲ್‌ಮಾಲ್ ವ್ಯವಹಾರ ಎಂಬುದು ವಾಸನೆ ಬರ ತೊಡಗಿದೆ. ಸಹಕಾರಿ ಸೊಸ್ಶೆಟಿಗಳೂ ಇಂತ ಕೃಷಿ ಉಪಕರಣಗಳ ಗೋಲ್-ಮಾಲ್‌ಗಳನ್ನು ತೆರೆದಿದ್ದು ರೈತರ ಕಿಸೆಗೆ ಬ್ಲೇಡ್ ಹಾಕುವಲ್ಲಿ ಸಫಲ ಆಗಿದೆ.



 
Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget