ಕಳೆದ ಎಂಟು ತಿಂಗಳ ಹಿಂದೆ ಪುತ್ತೂರು ಪ್ರಕಾಶ್ ಫೂಟ್ ವೇರ್‌ನಿಂದ ಬರೋಬ್ಬರಿ ಹದಿನೈದು ಲಕ್ಷ ಹಣ ಕಳವಾಗಿತ್ತು. ಕಳ್ಳರು ಹೆಂಚು ತೆಗೆದು ಅಂಗಡಿಯೊಳಗೆ ಜಂಪ್ ಮಾಡಿ ಹಣಕ್ಕೆ ಕೈ ಕೊಟ್ಟಿದ್ದರು. ಈ ಬಗ್ಗೆ ನಿದ್ದೆ ಬಿಟ್ಟಿದ್ದ ಪುತ್ತೂರು ಪೋಲಿಸರು ಓ ಮೊನ್ನೆ ನೆಲ್ಲಿಕಟ್ಟೆಯಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ದಾವಣ ಗೆರೆಯ ಕಪ್ಪ ಯಾನೆ ಸಮೀರ್ ಮತ್ತು ಸಕಲೇಶಪುರದ ಚಂದ್ರ ಯಾನೆ ಚಂದ್ರಶೇಖರ್ ಎಂಬವರನ್ನು ಹೊತ್ತುಕ್ಕೊಂಡು ತಂದು ಚಡ್ಡಿಯಲ್ಲಿ ನಿಲ್ಲಿಸಿದ್ದರು. ಪುತ್ತೂರು ಪೋಲಿಸರು ಸದ್ರಿ ಕಳ್ಳರನ್ನು ಕಂಕಣೆ ಮಲಂಕಣೆ ಮಾಡಿ ಹೊಡೆದು ಬಡಿದು, ಉಗುರು ತೆಗದು, ಹಿಂದೆ ಮುಂದೆ ಡಬ್ಬಣ ಹಾಕಿ, ಬೆಂಡ್ ತೆಗೆದು, ಕುಂಡೆಯಲ್ಲಿ ಒಟಿಪಿ ಬರುವ ತನಕ ರಿಪೇರಿ ಮಾಡಿದಾಗ ಹದಿನೈದು ಲಕ್ಷದ ಬಾಯಿ ಬಿಟ್ಟಿದ್ದರು.
ಪ್ರಕಾಶ್ ಪೂಟ್‌ವೇರ್‌ನಿಂದ ಹದಿನೈದು ಲಕ್ಷ ಕದ್ದದ್ದು ಅವರೇ ಎಂಬುದನ್ನು ಅವರೇ ಒಪ್ಪಿಕ್ಕೊಂಡಿರುವಾಗ ಅದರ ರಿಕವರಿ ಆಗಬೇಕಲ್ಲ. ಇಲ್ಲಿ ತನಕ ಆಗಿಲ್ಲ. ಕಪ್ಪನನ್ನು ಮತ್ತು ಚಂದ್ರನನ್ನು ಈಗಾಗಲೇ ಜೈಲಿಗೆ ಕಳಿಸಿ ಕೊಡಲಾಗಿದೆ. ದುಡ್ಡು ರಿಕವರಿಗೆಂದು ಪೋಲಿಸರು ಇವರಿಬ್ಬರನ್ನೂ ಕರಕ್ಕೊಂಡು ಅವರ ಊರಿಗೆ ಹೋದರೂ ಏನೂ ಪ್ರಯೋಜನವಾಗಿಲ್ಲ. ಕದ್ದ ದುಡ್ಡಿನಲ್ಲಿ ಕಳ್ಳ ರಿಬ್ಬರೂ ಮನೆಗೆ ಬೇಕಾಗುದ ಲಕ್ಷುರಿ ಐಟಂಗಳನ್ನು ಪರ್ಚೆಸ್ ಮಾಡಿದ್ದು ಪೋಲಿಸರು ಅದನ್ನು ಆಪೆಯಲ್ಲಿ ತುಂಬಿಸಿಕ್ಕೊಂಡು ಬಂದಿದ್ದಾರೆ. ಇನ್ನು ಒಂದೈದು ಲಕ್ಷ ದುಡ್ಡು ಕಳ್ಳನೊಬ್ಬನ ಸ್ಟೆಪಿನಿ ಕೈಯಲ್ಲಿ ಉಂಟೆಂದು ಕಳ್ಳ ಬಾಯಿ ಬಿಟ್ಟಿದ್ದು ಪೋಲಿಸರು ಕಳ್ಳನ ಸ್ಟೆಪಿನಿ ಮನೆಗೆ ಹೋಗಿ ಬಂದಿದ್ದಾರೆ. ಸ್ಟೆಪಿನಿ ಕೈಯಿಂದ ಪೋಲಿಸರು ರಿಕವರಿ ಮಾಡಿದ್ರಾ ಅಥವಾ ಸ್ಟೆಪಿನಿಯನ್ನು ನೋಡಿ ಕಣ್ತುಂಬಿಸಿ ಕೊಂಡು ಬಂದರಾ ಎಂಬುದು ಗೊತ್ತಾಗುತ್ತಿಲ್ಲ.
ಅಂತೂ ಇಂತೂ ಫೂಟ್ ವೇರ್‌ನವರಿಗೆ ವನವಾಸ, ಕಳ್ಳರಿಗೆ ಜೈಲುವಾಸ.
Post a Comment