July 2023

                             




        ಅಲ್ಲ ಮಾರಾಯ್ರೆ ಅಲ್ಲಿ ಸುಳ್ಯದಲ್ಲಿ ಅಷ್ಟೊಂದು ಲಾಡ್ಜ್ ಗಳು ಯಾರಿಗೆ? ಅವುಗಳ ಮೈಂಟೇನೆನ್ಸ್ ಆದರೂ ಹೇಗೆ ಎಂಬ ಪ್ರಶ್ನೆ ‌ಇತ್ತು. ಇದೀಗ ಸುಳ್ಯದ ಅಷ್ಟೂ ಲಾಡ್ಜ್ ಗಳ ಕತೆ, ದಂತಕಥೆ ಎಲ್ಲಾ ಹೊರಗೆ ಬರುತ್ತಿದೆ. ಹಾಗೆಂದು ಲಾಡ್ಜ್ ಗಳಲ್ಲಿ ‌ಸಮಾಜ ಬಾಹಿರ ಚಟುವಟಿಕೆಗಳು ನಡೆಯುವುದು ಇಂದು ನಿನ್ನೆಯ ಕತೆಯಲ್ಲ. ಲಾಡ್ಜ್ ಗಳಿಗೂ ಸಮಾಜ  ಕಂಟಕರಿಗೂ ಅನೈತಿಕ ಸಂಬಂಧ ಓಬಿರಾಯನ ಕಾಲದಿಂದಲೂ ಇದೆ. ಇದೀಗ ಸುಳ್ಯದ ಕೆಲವು ಲಾಡ್ಜ್ ಗಳಲ್ಲಿ ನಿರಂತರವಾಗಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ. ಮಂಗಳೂರು, ಕೇರಳ ಕಡೆಯಿಂದ ಬರುವ ಹೈಟೆಕ್ ವಿಟಪುರುಷರಿಗೆ ಸುಳ್ಯದ ಪ್ರತಿಷ್ಠಿತ ಕಾಲೇಜುಗಳಿಂದ ಬಾಕ್ಸ್ ಪೀಸ್ ಹುಡುಗಿಯರನ್ನು ಸರಬರಾಜು ಮಾಡುವ ತಲೆಹಿಡು ಕರ ಒಂದು ಟೀಮ್ ಸುಳ್ಯ ದಲ್ಲಿದೆ. ಹೈಟೆಕ್ ವಿಐಪಿಗಳು ಸುಳ್ಯಕ್ಕೆ ಬಂದು ಕೆಲವು ನೋಟೆಡ್ ಲಾಡ್ಜ್ ಗಳಲ್ಲಿ ರೂಂ ಮಾಡಿ ಸಣ್ಣಗೆ ಆಕಳಿಸಿದರೂ ಸಾಕು ತಲೆಹಿಡುಕರು  ಅಲರ್ಟ್ ಆಗಿ ಬಿಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕೇರಳದಿಂದ ಬರುವ ಮುದ್ಕ ನನ್ಮಗನಿಗೂ ಸುಳ್ಯದಲ್ಲಿ ಬಾಕ್ಸ್ ಪೀಸ್ ಸರಬರಾಜು ಮಾಡಲಾಗುತ್ತದೆ. ಅಲ್ಲಿ ಪೈಚಾರು ಕಡೆಯಿಂದ ಶುರುವಾಗಿ ಓಡಬಾಯಿ ದಾಟಿ ಮುಂದೆ ಪೇಟೆಯಲ್ಲಿ ಸಾಗಿ ಬಸ್‌ ನಿಲ್ದಾಣದಿಂದ ಗಾಂಧಿ ನಗರದತ್ತ ಬಂದು ಪರಿವಾರ ಕಾನ ದಾಟುವವರೆಗೆ ನೀವೊಮ್ಮೆ ನೈಟ್ ಪ್ರತಿ ಲಾಡ್ಜ್ ನ ಗೋಡೆಗೆ ಕಿವಿ ಇಟ್ಟು ಕೇಳಿದರೆ ಗೊತ್ತಾಗುತ್ತದೆ ಕಾಲೇಜುಗಳಲ್ಲಿ ಕಲಿಯಲು ಬರುವ  ಹುಡುಗಿಯರು ಮಾಡುವ ರಿವಿಜನ್ ‌ಮತ್ತು ಅವರ ಸ್ಪೆಷಲ್ ಕ್ಲಾಸ್ ಗಳು.
   ಹಾಗೆಂದು ಸುಳ್ಯದಲ್ಲಿ ಮಾಸ್ಟರ್ ಪೀಸ್ ಗಳ ಸರಬರಾಜು ಮಾಡಲೆಂದೇ ಹೈಟೆಕ್ ಪಿಂಪ್ ಗಳ ದೊಡ್ಡ ಟೀಮೇ ಇದೆ. ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರ ಬ್ಯಾಲೆನ್ಸ್ ಶೀಟ್ ಚೆಕ್ ಮಾಡಿ ಅದು  ನಿಲ್ ಆಗಿದ್ದರೆ ಅಥವಾ ಅವರ ಬೇಕು ಬೇಡ ಗಳನ್ನು ಆಲಿಸಿ, ಕರುಣಿಸಿ ಅವರನ್ನು ಈ ಚಟುವಟಿಕೆಗಳಿಗೆ ಇಳಿಸಲಾಗುತ್ತಿದೆ. ಫಸ್ಟಿಗೆ ಒಮ್ಮೆ ಮಾತ್ರ ಅಂತ ಕಳಿಸಲಾ ಗುತ್ತದೆ. ನಂತರ ಇನ್ನೊಮ್ಮೆ. ಮತ್ತೊಮ್ಮೆ ದುಡ್ಡಿನ ಟೈಟಿಗೆ. ಹೀಗೆ ಅದೆಷ್ಟೋ ಹುಡುಗಿಯರ ಸ್ಪೆಷಲ್ ಕ್ಲಾಸ್ ಗಳು ಸುಳ್ಯದ ಲಾಡ್ಜ್ ಗಳಲ್ಲಿ ನಡೆಯುತ್ತಾ ಇರುತ್ತದೆ. ಈ ನಡುವೆ ‌ಪುತ್ತೂರು ರೋಡಿನಲ್ಲಿರುವ ಬಾರ್ ಒಂದರಲ್ಲಿ ಬೆಂದ್ರ್‌ ಗೆ ಸೂ ಹಾಕಿದ ಹಾಗೆ ಹೊಗೆ ಏಳುತ್ತಿದ್ದು ಅಲ್ಲಿಗೆ ಗಾಂಜಾ ಎಳೆಯಲು ಸುಳ್ಯದ ಎಲ್ಲಾ ಪ್ರತಿಷ್ಠಿತ ಕಾಲೇಜುಗಳ ಜೋಕುಲು ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಖುದ್ದು ಈ ಬಾರ್ ಮಾಲೀಕನೇ ಗಾಂಜಾ ಎಡಿಕ್ಟ್ ಆಗಿದ್ದು ಇವನನ್ನು ಹೇಳುವವರು ಕೇಳುವವರು ಸುಳ್ಯದಲ್ಲಿ ಯಾರೂ ಹುಟ್ಟಿಲ್ಲ ಎಂಬ ಜೋಕೂ ಸುಳ್ಯದಲ್ಲಿದೆ. ಇಲ್ಲಿ ಬಂದು ಟೈಟಾಗಿ ಗಾಂಜಾ ಎಳೆಯುವ ಯುವಕ ಯುವತಿಯರಿಗೆ ರೆಸ್ಟ್ ತೆಗೆಯಲು ರೂಮಿನ ವ್ಯವಸ್ಥೆಯೂ ಮಾಡಲಾಗಿದೆ.
   ಇನ್ನೊಂದು ವಿಷಯ ನಿಮ್ಗೆ ಗೊತ್ತಾ? ಅಲ್ಲಿ ಮಡಿಕೇರಿ ರಸ್ತೆಯಲ್ಲಿ ಒಂದು ಡೀ...... ಸೆಂಟ್ ಹೋಟೆಲ್ ಇದೆ.ಕೆಳಗೆ  ಶುದ್ಧ ಸಸ್ಯಾಹಾರಿ ಹೋಟೆಲ್ ಇದು. ಮೇಲೆ ರೂಂಗಳಲ್ಲಿ ಶುದ್ಧ ಮಾಂಸಾಹಾರ. ಕೇರಳದ ಕಡಪ್ಪುಗಳಿಗೆ ಡ್ರಿಪ್ಸ್ ಹಾಕಲು ಇದೇ ಲಾಡ್ಜ್ ಆಗಬೇಕು. ಇಲ್ಲಿಗೆ  ಬಾಕ್ಸ್ ಪೀಸ್ ಗಳ ಸಪ್ಲೈ ಸ್ವಲ್ಪ ಜೋರುಟ್ಟು ಗಡ. ಇಲ್ಲಿ ಲೋಕಲ್ ಜನರಿಗೆ ರೂಮ್ ಕೊಡಲ್ಲ. ಇನ್ನು ಗಾಂಧಿ ನಗರದ ಲಾಡ್ಜ್ ಗಳ ಬಗ್ಗೆ ಬರೆದರೆ ‌ಸುಳ್ಯ ಪೋಲಿಸರ ಕಣ್ಣು ಕೂಡ ಚಂಡಿ ಚಂಡಿ ಆಗಬಹುದು. ಇಲ್ಲಿ 10 ಮತ್ತು 11 ಎರಡೂ ಕೇಸ್ ಗಳೂ ನಡೆಯುತ್ತಿದೆ. ಇಲ್ಲಿನ ಲಾಡ್ಜ್ ಗಳಿಗೆ ಎಲ್ಲಿಯಾದರೂ ಪೋಲಿಸರು ರೈಡು ಬಿದ್ದರೆ ಪಾಪ ಅವರೀಗೇ ಕನ್ ಫ್ಯೂಸ್ ಆಗಬಹುದು. ಯಾಕೆಂದರೆ ಇಲ್ಲಿ ಒಂದು ರೂಮಿನಲ್ಲಿ ಗಂಡು ಹೆಣ್ಣು ಸಿಕ್ಕರೆ ಇನ್ನೊಂದು ರೂಮಿನಲ್ಲಿ ಎರಡು ಗಂಡುಗಳೇ ಸಿಗುವ ಅಪಾಯಗಳುಂಟು. ಇನ್ನೊಂದು ರೂಮಿನಲ್ಲಿ ಒಬ್ಬ ಅಜ್ಜ ಪುಳ್ಳಿ ಸಿಗ ಬಹುದು. ಮುಂದಿನ ರೂಮ್ ಗಳಲ್ಲಿ ಅಣ್ಣ ತಮ್ಮ ಥರದವರು, ಕಾಕ ಅಳಿಯಾಕ ಹೀಗೆ ಟೋಟಲೀ ಕನ್ ಫ್ಯೂಸ್ಡ್. ಇದೀಗ ಸುಳ್ಯದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಈರಯ್ಯ ಇದ್ದು ಅವರ ಹತ್ತು ಹಲವು ರೌಂಡ್ಸ್ ಗಳಲ್ಲಿ ಒಂದು ರೌಂಡನ್ನು ಈ ಲಾಡ್ಜ್ ಗಳ ಶುದ್ಧೀಕರಣಕ್ಕೆ ಯೂಸ್ ಮಾಡಿದರೆ  ಕಡೇ ಪಕ್ಷ ಯಾವ್ಯಾವ ಲಾಡ್ಜ್ ಗಳಲ್ಲಿ ಯಾರ್ಯಾರು, ಯಾರ್ಯಾ ರೊಟ್ಟಿಗೆ ಯಾವ್ಯಾವ ಅಸನಗಳಲ್ಲಿ ಪವಡಿಸಿದ್ದಾರೆ ಎಂಬ ಲೆಕ್ಕಾಆದರೂ ಸಿಗುತ್ತಿತ್ತು.


































 

                            




     ಹಾಗೆಂದು ನರಿಮೊಗರು ಪಂಚಾಯತ್ ಪುತ್ತೂರಿನ ಪ್ರತಿಷ್ಠಿತ, ದೊಡ್ಡ ಪಂಚಾಯತ್. ರೆವೆನ್ಯೂ ವಿಷಯದಲ್ಲೂ  ಬೇರೆ ‌ಪಂಚಾಯತ್ ಗಳಿಗೆ ಹೋಲಿಸಿದರೆ ನರಿಮೊಗರು ಪಂಚಾಯತ್ ಸಿರಿವಂತ ಪಂಚಾಯತ್. ಪುರುಷರ ಕಟ್ಟೆಯ ನ್ನು ರಾಜಧಾನಿ ಮಾಡಿಕೊಂಡಿರುವ ನರಿಮೊಗರು ಪಂಚಾ ಯತ್ ವ್ಯಾಪ್ತಿಯಲ್ಲಿಯೇ ಜಿಲ್ಲೆಯ ಪ್ರತಿಷ್ಠಿತ ನೀರಿನ ಫ್ಯಾಕ್ಟರಿ ಯೂ ಬರುತ್ತದೆ. ಸದ್ರಿ‌‌ ನರಿಮೊಗರು ಪಂಚಾಯತ್ ‌ದೇಶ ಭಕ್ತ ರ ಆಡಳಿತದಲ್ಲಿದ್ದು ಇದೀಗ 26 ಸದಸ್ಯ ಬಲದ ಪಂಚಾಯತ್ ಗೆ ಮುಂದಿನ ಅವಧಿಗೆ ಅಧ್ಯಕ್ಷ ಕುರ್ಚಿಗೆ ಆಯ್ಕೆ ಪ್ರಕ್ರಿಯೆ ನಡೆಯ ಬೇಕಾಗಿದ್ದು ಹಿಂದುಳಿದ ವರ್ಗಗಳ ಎ ಕೆಟಗರಿ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. 
    ಈ ಕೆಟಗರಿಯಲ್ಲಿ ನಾಲಕ್ಕು ಜನ ಮಹಿಳಾ ಸದಸ್ಯರು ಇದ್ದು ಅವರಲ್ಲಿ ಮೂರು ಜನ ಅಧ್ಯಕ್ಷ ಕುರ್ಚಿಗೆ ಟವೆಲ್ ಹಾಕಿದ್ದಾರೆ. ಹೇಳಿ ಕೇಳಿ ನರಿಮೊಗರು ಪಂಚಾಯತ್ ‌ಒಂದು ಪ್ರತಿಷ್ಠಿತ ಪಂಚಾಯತ್ ಆಗಿರುವ ಕಾರಣ ಇಲ್ಲಿಗೆ ಅರ್ಹ ಅಧ್ಯಕ್ಷರ ಆಯ್ಕೆಯನ್ನೇ ಮಾಡ ಬೇಕಾಗುತ್ತದೆ. ಇಪ್ಪತ್ತಾರು ಸದಸ್ಯರಲ್ಲಿ ಏಳು ಜನ ಕೈಗಳಿದ್ದು ಒಂದು ಮೆಂಬರನ್ನು ಎಸ್ಡಿಪಿಐಯವರು ಕಳಿಸಿ ಕೊಟ್ಟಿದ್ದಾರೆ. ಇಲ್ಲಿ ವಿರೋಧ ಪಕ್ಷಗಳ ಹಾರಾಟ, ಚೀರಾಟಗಳೂ ಜಬರ್ದಸ್ತ್ ನಲ್ಲಿದ್ದು ಅವರನ್ನೆಲ್ಲ ಟ್ಯಾಕಲ್ ಮಾಡುವ ಅಧ್ಯಕ್ಷರ ಅವಶ್ಯಕತೆ ಇದೆ. ಇದೀಗ ಈ ಸೀಟಿಗೆ  ಮೂರು ಜನ ಟವೆಲ್ ಹಾಕಿದ್ದು ಅವರಲ್ಲಿ ಯಾರು ಆಯ್ಕೆ ಅಗಲಿದ್ದಾರೆ ಎಂಬುದನ್ನು ದೇಶ ಭಕ್ತರ ಹೈಕಮಾಂಡು ನಿರ್ಧರಿಸಿಸಲಿದೆ. ಹಾಗೆಂದು ಈ ಮೂವರೂ ಸೀಟಿಗೆ ಅರ್ಹರಿ ದ್ದು ಅವರಲ್ಲೂ ಎಜುಕೇಟೆಡ್ ಸದಸ್ಯರೊಬ್ಬರು ತಮ್ಮ ಅಧ್ಯಕ್ಷ ರಾಗಲಿ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಒಬ್ಬ ವಿದ್ಯಾ ವಂತೆ ಪಂಚಾಯತ್ ಅಧ್ಯಕ್ಷೆಯಾದರೆ ನರಿಮೊಗರು ಪಂಚಾ ಯತ್ ನ ಕಿರೀಟಕ್ಕೆ ಒಂದು ಚಿನ್ನದ ಗರಿ ಇದ್ದಂತೆ ಎಂಬ ಮಾತು ನರಿಮೊಗರು ತುಂಬಾ ಹರಡಿದೆ. ವಿದ್ಯಾವಂತ ಮಗಳು ಮನೆಯನ್ನು ಬೆಳಗಿದಂತೆ ವಿದ್ಯಾವಂತ ಅಧ್ಯಕ್ಷರು ಪಂಚಾಯ ತ್ ನ ಹಿರಿಮೆ ಗರಿಮೆ ಹೆಚ್ಚಿಸುವರೆಂಬ ನಂಬಿಕೆ ಜನರಲ್ಲಿದೆ.


































 

                           



   ಹಾಗೆಂದು ಗ್ರಾಮಗಳ ಮಾರಿ ಓಡಿಸುವ ಕ್ರಮ ಡಿಸೆಂಬರ್ ನಿಂದ ಹಿಡಿದು ಜನವರಿ ಎಂಡ್ ನಂತರ ಫೆಬ್ರವರಿ ಅರ್ಧ ಮುಟ್ಟ  ನಡೆಯುವುದು ರೂಢಿ. ಆವಾಗ ಮಾರಿ ಓಡಿಸುವಲ್ಲಿ ಗ್ರಾಮ ದೈವದ ಜೊತೆಗೆ ಗುಳಿಗ್ಗ ಇರುತ್ತದೆ. ಆವಾಗೆಲ್ಲ ದೊಡ್ಡವನು ಇರುವಾಗ ಗುಳಿಗ್ಗ ಸ್ವಲ್ಪ ಅಸ್ಕಿ ಇರುತ್ತಾನೆ. ಆದರೆ ಕಾಣಿಯೂರು ಕೂಡುಕಟ್ಟಿನವರು ತಮ್ಮ ಮಾಮೂಲು ಗ್ರಾಮ ದೈವಗಳ ಕೋಲದ ಜೊತೆ ಜೊತೆಗೆ ಆಟಿ ತಿಂಗಳಲ್ಲಿ ಕೂಡ ಆಟಿ ಮಾರಿ ಓಡಿಸುವ ಸಂಪ್ರದಾಯ ನಡೆಸಿಕ್ಕೊಂಡು ಬಂದಿ ದ್ದಾರೆ. ಕಾಣಿಯೂರುನಲ್ಲಿ ಆಟಿ ಮಾರಿಗೆ ಆಟಿ ಗುಳಿಗ್ಗ ಮಾತ್ರ. ಗ್ರಾಮ ದೈವ ಇರಲ್ಲ.
    ಇದು ಕಾಣಿಯೂರು. ಅಷ್ಟ ಮಠಗಳ ಪೈಕಿ ಒಂದು ಮಠ ಕಾಣಿಯೂರಿದ್ದು. ಇಲ್ಲಿನ ಕೂಡುಕಟ್ಟಿನವರು ಸಂಪ್ರದಾಯ ದಂತೆ ನಡೆಸಿಕೊಂಡು ಬರುವ ಆಟಿ ಮಾರಿಯನ್ನ ಮೊನ್ನೆ ಶನಿವಾರ ನಡೆಸಿದ್ದಾರೆ. ಆವತ್ತು ಕಾಣಿಯೂರು ಕೂಡುರಸ್ತೆ ಯಲ್ಲಿರುವ ಗುಳಿಗ್ಗ ಬನದಲ್ಲಿ ಗುಳಿಗ್ಗನ ಆವಾಹನೆ ಮಾಡಿ ಅಲ್ಲಿಂದ ಪುಣ್ಚಾತ್ತಾರು ಗಡಿ ತನಕ ಗುಳಿಗ್ಗ ಕೇವಲ ಎಂಬರೆಯಲ್ಲಿ ಸಾಗಿ ಅಲ್ಲಿ ಬಲಿ ಪಡೆದು ಕೂಡುಕಟ್ಟಿಗೆ ಅಭಯ ಕೊಡುತ್ತಾನೆ. ಈ ಆಟಿ ಮಾರಿಯಲ್ಲಿ  ಗ್ರಾಮದ ಪ್ರತೀ ಮನೆಯಿಂದಲೂ ಗ್ರಾಮಸ್ಥರು ಭಕ್ತಿಭಾವದಿಂದ ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಾರೆ.
   ಹಾಗೆಂದು ಕಾಣಿಯೂರಿನಲ್ಲಿ ಆಟಿ ಗುಳಿಗ್ಗನಿಗೆ ಇತ್ತೀಚಿನ ದಿನಗಳಲ್ಲಿ ಹಂದಿ ಬಲಿ ಕೊಡಲಾಗುತ್ತಿದೆ. ಹಿಂದೆ ಈ ಸಂಪ್ರ ದಾಯ ಇರಲಿಲ್ಲ. ಕೊರೋನ ಸಂದರ್ಭದಲ್ಲಿ ಮಹಾ ಮಾರಿ ಕಾಣಿಯೂರು ಗ್ರಾಮದೊಳಗೆ ಎಂಟ್ರಿ ಹಾಕದಿರಲಿ ಎಂದು ಗ್ರಾಮಸ್ಥರು ಗುಳಿಗ್ಗನಿಗೆ ಹಂದಿ ಹರಿಕೆ ಹೊತ್ತಿದ್ದರು. ಆ ದಿನಗಳಲ್ಲಿ ಗುಳಿಗ್ಗನೂ ಗ್ರಾಮವನ್ನು ಕೊರೋನದಿಂದ ಕಾಪಾ ಡಿದ್ದ ಎಂಬ ನಂಬಿಕೆಯಿಂದ ಗ್ರಾಮಸ್ಥರು ಆಟಿ ಗುಳಿಗ್ಗನಿಗೆ ಹಂದಿ ಬಲಿ ‌ಕೊಡಲಾರಂಬಿಸಿದ್ದರು.



































 

                          



    ಬೆಳಿಗ್ಗೆ ಎಂಟು ಗಂಟೆಗೆ ದ್ವಾರಕಾ ಹೋಟೆಲ್ ಹತ್ರ ಕೆಲಸಕ್ಕೆ ಬಾ ಎಂದು ನೀವು ಗಾಂಧಿ ನಗರದ ಯಾವುದೇ ಕೂಲಿಯಲ್ಲಿ ಹೇಳಿದರೆ‌ ಅವನು ಒಂಭತ್ತುವರೆ ತನಕ ಉಡುಪಿ ಗಾರ್ಡನ್ ಗೆ ಸುತ್ತು ಬಂದು ಬಂದು ದ್ವಾರಕಾಗೆ ದಾರಿ ಸಿಗದೆ ಅಲ್ಲೇ ಎಲ್ಲಾ ದರೂ ಚರಂಡಿಯಲ್ಲಿ, ಬಾಗಿಲು ಬಂದ್ ಆಗಿರುವ ಅಂಗಡಿ ಜಗುಲಿಯಲ್ಲಿ ಲ್ಯಾಂಡಿಂಗ್ ಆಗಿ ಬಿಡುತ್ತಾರೆ. ಇದಕ್ಕೆಲ್ಲ ಕಾರಣ ಗಾಂಧಿ ನಗರದ ‌ಗಡಂಗ್ ಗಳು. ಬೆಳಿಗ್ಗೆ ಐದು ಗಂಟೆಗೆ ಗಾಂಧಿ ನಗರದಲ್ಲಿ ಗಡಂಗ್ ಓಪನ್ ಆಗಿ ಬಿಡುತ್ತದೆ.
      ಹಾಗೆಂದು ಭೂಲೋಕದಲ್ಲಿ ಗಡಂಗ್ ಗಳು ಓಪನ್ ಆಗೋದೇ ಬೆಳಿಗ್ಗೆ ಹನ್ನೊಂದರ ನಂತರ. ಅಲ್ಲಿ ತನಕ ಕುಡ್ಚೆ ಲರಿಗೆ ಬಾಯಲ್ಲಿ ಎಷ್ಟು ಚಪ್ಪೆ ಚಪ್ಪೆ ಉಬ್ಬಿ ಬಂದರೂ ಮಾರುತಿ ತಿಂದೇ ಸುಧಾರಿಸಬೇಕಷ್ಟೇ. ಆದರೆ ಸುಳ್ಯದಲ್ಲಿ ಕಾಫಿ ಹೋಟೆಲ್ ಗಳಿಗಿಂತಲೂ ಮುಂದೆ, ಹಕ್ಕಿಗಳು ಏಳುವುದ ಕ್ಕಿಂತಲೂ ಮೊದಲೇ ಗಡಂಗ್ ಗಳು ಓಪನ್ ಆಗಿ ಬಿಡುತ್ತದೆ. ಬಿಜಾಪುರ, ಧಾರವಾಡದ ದಿನಗೂಲಿಗಳು, ಕಟ್ಟಡ ಕೆಲಸ ದವರು, ನಾರ್ತ್ ಇಂಡಿಯನ್ ಕೆಲಸದವರು ಹೀಗೆ  ಬೆಳಿಗ್ಗೆ ಎಲ್ಲರ "ಒಂದು ರೌಂಡ್ ನಡಿಗೆ ಗಾಂಧಿ ನಗರದ ‌ಗಡಂಗ್ ಕಡೆಗೆ" ಎಂಬ ಪರಿಸ್ಥಿತಿ ಸುಳ್ಯದಲ್ಲಿದೆ. ಇದೆಲ್ಲ ಯಾಕೆ ಎಂದು ಕೇಳಿದರೆ ಗಡಂಗ್ ಗಳ ಮಧ್ಯೆ ಸ್ಪರ್ಧೆ ಇರುವ ಕಾರಣ ಬಾಕಿಯವರು ಇಡೀ ದಿನ ಮಾಡುವ  ಕಲೆಕ್ಷನ್ ನಾವು ಬೆಳಿಗ್ಗೆ ಹತ್ತರ ವೇಳೆಗೆ ಬಾಚಿ ಬಿಡುತ್ತೇವೆ ಎಂಬ ಉತ್ತರ ಬರುತ್ತದೆ. ಮಾಮೂಲಿಯಾಗಿ ಬೆಳಿಗ್ಗೆ ಎದ್ದು ಬಿಸಿ ಬಿಸಿ ಕಾಫಿ ಟೀ ಕುಡಿಯುವುದು ಎಲ್ಲರ ಕ್ರಮ ಮತ್ತು ರೂಢಿ. ಅದು ಕುಡುಕರ ತವರು ಗೋವದಲ್ಲೂ ಹಾಗೆ. ಬರಿದಾದ ಹೊಟ್ಟೆಗೆ ಒಂದು ಟ್ರಿಪ್ ಇಡ್ಲಿ ವಡೆ ಅಥವಾ ಕಾಂಕ್ರೀಟ್ ಹಾಕಿ ದ ಹಾಗೆ ಕಡ್ಲೆ ಬಜಿಲ್ ಹೋದ ಮೇಲೆಯೇ ವಿಜಯ್ ಮಲ್ಯ, ಕೋಡೆಸ್ ಎಲ್ಲಾ ಇಳಿಯೋದು. ಆದರೆ ಸುಳ್ಯದಲ್ಲಿ ಉಲ್ಟಾ. ಎಂಥ ಅವಸ್ಥೆ ಮಾರಾಯ್ರೆ ಈ ಕುಡ್ಚೆಲರದ್ದು. ಇಂಥ ಕುಡುಕರಿಗೆಲ್ಲ ಇನ್ನು ಲಿವರ್ ಬದಲು ಪಿವಿಸಿ ಪೈಪು   ಫಿಕ್ಸ್ ಮಾಡುವ ಒಂದು ಶಿಬಿರ ಮಾಡುವುದು ಸೇಫ್. ಈಗಾಗಲೇ ಇಲ್ಲಿನ ಕುಡುಕರ ಲಿವರ್ ಗಳು ಕಾರಂಜಿಯಂತೆ ಆಗಿರ ಬಹುದು.
    ಹಾಗೆಂದು ಸುಳ್ಯದಲ್ಲಿ ಗಡಂಗ್ ಗಳು ಪಕ್ಕಿ ಏಳುವ ಮೊದಲೇ ಓಪನ್ ಆಗಿ ಸಾರ್ವಜನಿಕ ಸೇವೆಗೆ ಶುರುವಿಟ್ಟು ಕೊಳ್ಳುತ್ತದೆ ಎಂಬ ವಿಷಯ ಪಾಪ ಪೋಲಿಸರಿಗೆ ಗೊತ್ತೇ ಇರಲಿಕ್ಕಿಲ್ಲ. ಗೊತ್ತಿದ್ದರೆ ಅವರು ಗಡಂಗ್ ಸೇವೆ ಮಾಡು ವವರಿಗೆ ಕರೆದು ಮಂಗಳಾರತಿ ಮಾಡಿ ಪ್ರಸಾದ ವಿತರಣೆ ಮಾಡುತ್ತಿದ್ದರು. ಇನ್ನು ಅಬಕಾರಿಗಳು ಗಾಂಧಿ ನಗರದ ಕಡೆಗೆ ಕಾಲು,ಕೈ, ಮಂಡೆ, ಬೆರಿ ಯಾವುದನ್ನೂ ಹಾಕಿ ಮಲಗಲ್ಲ.



































                         


    ಅಲ್ಲಿ ಕಾಣಿಯೂರು - ಸುಬ್ರಹ್ಮಣ್ಯ ರಸ್ತೆಯ ಪುಣ್ಚತ್ತಾರು ಶಿವಾನಂದರ ಮನೆ ಬಳಿ ನೀರು ಮಾರ್ಗಕ್ಕೆ ಬಂದು ‌ಸ್ಟೇಟ್ ಹೈವೇಯಲ್ಲಿ ಜಮಾವಣೆ ಆಗಿದೆ. ಇದರಿಂದ ಜನರು ಪರದಾ ಡುವಂತಾಗಿದೆ. ಈ ಕತೆ ಇಂದು ನಿನ್ನೆಯದಲ್ಲ. ಆದರೆ ಮಂಜೇ ಶ್ವರ - ಸುಬ್ರಹ್ಮಣ್ಯ ಹೈವೇ ನಿರ್ಮಾಣ ಆಗುವಾಗಲೂ ಈ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸಿಕೊಂಡಿದ್ದು ವಿಪ ರ್ಯಾಸವೇ ಸರಿ.



































                        


      ಕೊಡಗು ಜಿಲ್ಲೆಯಾದ್ಯಂತ ವರುಣನ ಉಪಟಳ ಮೇರೆಮೀರಿದ್ದು ಇನ್ನು ಅವನ ಅವಾಂತರದಿಂದ ಭೂಮಿ ಮತ್ತು ಕಾವೇರಿ ಏನಾದರೂ ಕಿರಿಕ್ ಮಾಡುವ ಅಪಾಯ ಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆ ಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾ ಕಲೆಕ್ಟರ್ ವೆಂಕಟ್ ರಾಜಾ IAS ನಾಳೆಯೂ ರಜೆ ಘೋಷಿಸಿ ಆದೇಶ ಹೊರಡಿ ಸಿದ್ದಾರೆ. 
        ಈ ಮೊದಲಿನ ವರ್ಷಗಳಲ್ಲೂ ವರುಣ ಹೀಗೆ ವರ್ತಿಸಿದ್ದು ಭೂಮಿ ಮತ್ತು ಕಾವೇರಿ ಉಗ್ರ ರೂಪ ತಾಳಿ ನಾಗರೀಕ ಬದು ಕಿಗೆ ಇಲ್ಲದ ಡ್ಯಾಮೇಜ್ ಎಲ್ಲ ಮಾಡಿದ್ದರು. ಅದಕ್ಕೆ ಈ ರಜೆ. ಮಕ್ಕಳೆಲ್ಲ 'ನಾಳೆ ರಜೆ ಗೋಳಿ ಬಜೆ' ಅಂತ ಆಗಲೇ ಕಲೆಕ್ಟರನಿಗೆ ಥ್ಯಾಂಕ್ಸ್ ‌ಹೇಳಿರಬಹುದು.






























                       


       ಬಾರೀ ಮಳೆ ಮುಂದುವರಿದಿದ್ದು, ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿ ಹೆದ್ದಾರಿ ಜಲಾವೃತಗೊಂಡಿದ್ದು ಪದವಿ ವಿದ್ಯಾರ್ಥಿಗಳು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಿ ಪರೀಕ್ಷೆಗೆ ಹಾಜರಾಗಬೇಕಾದ ಸ್ಥಿತಿ ಉಂಟಾಯಿತು.
  ಮಂಗಳೂರು ಯುನಿವರ್ಸಿಟಿ ಸೆಮಿಸ್ಟರ್ ಪರೀಕ್ಷೆ ನಡೆ ಯುತ್ತಿದ್ದು, ಮಳೆ ಕಾರಣ ಪರೀಕ್ಷೆ ಮುಂದೂಡಿಕೆ ಆಗಿರಲಿಲ್ಲ. ಪರಿಣಾಮ ಪಂಜ ಭಾಗದಿಂದ ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿಗೆ  ಪರೀಕ್ಷೆ ಹಾಜರಾಗಲು ಬರುವ ವಿದ್ಯಾರ್ಥಿಗಳು ಜಲಾವೃತಗೊಂಡ ರಸ್ತೆಯಲ್ಲೇ ಸಂಚರಿಸಿ ಪರೀಕ್ಷಾ ಕೇಂದ್ರ ಗಳತ್ತ ಬಂದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸೆಮಿಸ್ಟರ್ ಪರೀಕ್ಷೆ ಮುಂದೂಡಲಿ ಎಂಬ ಆಗ್ರಹ ವ್ಯಕ್ತವಾಗಿದೆ. ಬೆಳಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆಗಳು ನಡೆಯಿತ್ತಿವೆ. ಕೊಡಗು ಜಿಲ್ಲೆಯಲ್ಲಿ ಸೆಮಿಸ್ಟರ್ ಪರೀಕ್ಷೆ ಮುಂ ದೂಡಲಾಗಿತ್ತು.
























                      


   ಹಾಗೆಂದು ವಿಟ್ಲ ಎಂಬ ಊರಿನಲ್ಲಿ ಕ್ರಿಮಿನಲ್ ಗಳ ಸಂತೆ ಇಂದು ನಿನ್ನೆಯದಲ್ಲ. ವಿಟ್ಲದಲ್ಲಿ ಅವರ ಕತೆ ಮುಗಿಯಲ್ಲ. ಅದೊಂದು ಟಿವಿ ಧಾರಾವಾಹಿ ಇದ್ದ ಹಾಗೆ. ಇದೀಗ ಮೊನ್ನೆ ವಿಟ್ಲದ ಕಾವೇರಿ ಬಾರ್ ನಲ್ಲಿ ಕುಡ್ಕೊಂಡು ಹೊಡ್ಕೊಂಡು ಒಬ್ಬನ ಮಂಡೆ ಶರ್ಬತ್ ಆಗಿದೆ. ಶರ್ಬತ್ ಮಾಡಿದವರ ಮೇಲೆ ಟೈಟ್ ಕೇಸ್ ಜಡಿಯಲಾಗಿದೆ.
    ವಿಷಯ ಏನೆಂದರೆ ಓ ಮೊನ್ನೆ ಕೇಪು ಗ್ರಾಮದ ಬಡಕ್ಕೋಡಿ ಸುರೇಶ ಅನ್ನುವವರು ನೈಟ್ ತನ್ನ ಗೆಳೆಯರಾದ‌ ಕೇಪು ಗಣೀಶ ಮತ್ತು ವಿಟ್ಲದ ಸುರೇಶ ಎಂಬವರೊಂದಿಗೆ ವಿಟ್ಲದ ಕಾವೇರಿ ಬಾರ್ ನಲ್ಲಿ ಊಟಕ್ಕೆ ಕುಂತಿದ್ದರು. ಅದೇ ಸಮಯದಲ್ಲಿ ಅದೇ ಬಾರ್ ಗೆ ಟೈಟಾಗಲು ನಿಶಾಂತ್ ಶೆಟ್ಟಿ, ಚೇತನ್ ಮತ್ತುರಾಕೆಟ್ ಎಂಬವರೂ ಬಂದಿದ್ದಾರೆ. ಬಂದವರೇ ಬಾರಲ್ಲಿ ಬಡಕ್ಕೊಡಿ ಸುರೇಶನೊಂದಿಗೆ ಊಟ ಮಾಡುತ್ತಿದ್ದ ಗಣೇಶನೊಂದಿಗೆ ಪೆಟ್ಟಿಗೆ ನಿಂತಿದ್ದಾರೆ. ಗಣೀಶನ ಮೇಲೆ ಅದ್ಯಾವುದೋ ಓಬೀ ರಾಯನ ಕಾಲದ ಬೆಚ್ಚ ಇದ್ದ ಕಾರಣ ನಿಶಾಂತ್ ಶೆಟ್ಟಿ ಗಣೀಶನನ್ನು ಎಳೆದು ಹಾಕಿ ರಂ ಮಗನೇ,ಬೋ ಮಗನೇ,ಸೂ ಮಗನೇ, ಮುಂ ಮಗನೇ ನಿಮ್ಮ ಸಂತಾನ ಮಾಡಿಸುತ್ತೇನೆ ಎಂದು ಹಲ್ಲೆ ಮಾಡಿದ್ದಾನೆ. ಹಾಗೆ ಗಣೇಶ್ ಮೇಲೆ ಹಲ್ಲೆ ಆಗುತ್ತಿದ್ದಂತೆ ಅವನ ರಕ್ಷಣೆಗೆ ವಿಟ್ಲ ಸುರೇಶ ಮತ್ತು ಬಡಕ್ಕೋಡಿ ಸುರೇಶ ಬಂದಿದ್ದಾರೆ. ಅಷ್ಟರಲ್ಲಿ ಚೇತನ್ ಮತ್ತುರಾಕೆಟ್ ಕೂಡ ಪೆಟ್ಟಿಗೆ ಸೇರಿಕೊಂಡು ಉರ್ಡ ಪತ್ತ ಆಗಿದೆ. ಆಗ ಬಾರ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಜಗಳ ಬಿಡಿಸಲು ಬಂದಿದ್ದು ಎಲ್ಲರನ್ನು ಬಿಡಿಸಿ ದೂರ ದೂರ ಮಾಡಿದ್ದಾರೆ. ಆದರೆ ಬಡಕ್ಕೋಡಿ ಸುರೇಶ ಸುಮ್ಮನಿರದೆ ಗಣೀಶನಿಗೆ ಯಾಕೆ ಹೊಡೆದಿದ್ದು ಎಂದು ನಿಶಾಂತ್ ಶೆಟ್ಟಿಯಲ್ಲಿ ಕೇಳಿದ್ದಾನೆ.ಅಷ್ಟೇ. ನಿಶಾಂತ್ ಶೆಟ್ಟಿ ಲಾಸ್ಟ್ ಓವರಿನ ಲಾಸ್ಟ್ ಬಾಲ್ ಗೆ ಸಿಕ್ಸ್ ಹೊಡೆದಂತೆ ಸುರೇಶನನ್ನು ದೂಡಿ ಹಾಕಿದ್ದಾನೆ.
   ಹಾಗೆ ನಿಶಾಂತ್ ಶೆಟ್ಟಿ ದೂಡಿ ಹಾಕಿದ  ಸುರೇಶ ಬೀಳುತ್ತಿದ್ದಂತೆ ಸುರೇಶನ ಮಂಡೆ ಹೂವಿನ ಚಟ್ಟಿಗೆ ಬಡಿದು ಪುಣರ್ಪುಳಿ ಜ್ಯೂಸ್ ಬಂದಂತೆ ತಲೆಯಿಂದ ರಕ್ತ ಒಸರಿದೆ. ಕೂಡಲೇ  ಸುರೇಶನನ್ನು ವಿಟ್ಲ ಆಸ್ಪತ್ರೆಗೆ ಅಲ್ಲಿಂದ ಪುತ್ತೂರು ಆಸ್ಪತ್ರೆಗೆ ನಂತರ ಸೀದಾ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಡುಂಯ್ ಡುಂ ಯ್ ಎಂದು ರವಾನೆ ಮಾಡಲಾಗಿದೆ. ಇತ್ತ ಪೆಟ್ಟಿಸ್ಟ್ ಗಳ ಮೇಲೆ ವಿಟ್ಲ ಪೊಲೀಸರು 504, 341, 323, 506ಮತ್ತು 34 ಐಪಿಸಿ ಅಡಿಯಲ್ಲಿ ಕೇಸ್ ದಾಖಲಿಸಿ  ಬೆಂಡ್ ತೆಗೆಯಲು ಮಂಡಲ ರೆಡಿ ಮಾಡಿದ್ದಾರೆ.














                     



       ಒಂದು ನಗರದ ಜೀವನಾಡಿಗಳು ಅಂದರೆ ಆಟೋ ರಿಕ್ಷಾಗಳು. ಇವರ ನಿಸ್ವಾರ್ಥ ‌ಸೇವೆ ನಾಗರಿಕ ಜಗತ್ತಿನಲ್ಲಿ ಶ್ಲಾಘನೀಯವಾದುದು. ಒಂದು ದಿನ ಆಟೋ ರಿಕ್ಷಾಗಳು ಇಲ್ಲದಿದ್ದರೆ ಇಡೀ ನಗರವೇ ಸ್ಥಬ್ದ ಆದಂತೆ. ಆಟೋ ಬಗ್ಗೆ ಯಾಕೆ ಇಷ್ಟೆಲ್ಲ ಅಂದರೆ ಈವತ್ತು ಬಿಎಂಎಸ್ ಸ್ಥಾಪಕರ ದಿನಾಚರಣೆ. ಸುಳ್ಯ ತಾಲೂಕಿನ ಗುತ್ತಿಗಾರು ಜಂಕ್ಷನ್ ಆಟೋ ಚಾಲಕರು ಈವತ್ತು ಬಿಎಂಎಸ್ ಸ್ಥಾಪಕರ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ.
   ಬಿಎಂಎಸ್ ಗುತ್ತಿಗಾರು ಘಟಕ ಮತ್ತು ಸುಳ್ಯ ಆಟೋ ಚಾಲಕರ ಸಂಘ (ರಿ) ಇದರ ಆಶ್ರಯದಲ್ಲಿ ಈವತ್ತು ಬೆಳಿಗ್ಗೆ ಗುತ್ತಿಗಾರು ಆಟೋ ನಿಲ್ದಾಣದಲ್ಲಿ ಸ್ಥಾಪಕರ ಫೋಟೋಗೆ ಹಾರ ಹಾಕುವ ಮೂಲಕ ಅವರ ಸಂದೇಶವನ್ನು ನೆನಪಿಸಿ ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬಿಎಂಎಸ್ ಸಂಘಟ ನೆಯ ಧ್ಯೇಯ ವಾಕ್ಯಗಳನ್ನು ಕೊಂಡಾಡಲಾಯಿತು. ಆ ಮೂಲಕ ಗುತ್ತಿಗಾರು ಆಟೋ ನಿಲ್ದಾಣದಲ್ಲಿ ಈವತ್ತು ಹಬ್ಬದ ವಾತಾವರಣ ಸೃಷ್ಟಿಯಾಯಿತು. ಗುತ್ತಿಗಾರಿನಲ್ಲಿ ಈವತ್ತು ಆಟೋ ಚಾಲಕರ ರೈಸಿಂಗ್, ಮಿಂಚಿಂಗ್ ಜೋರಾಗಿತ್ತು.














                    





    ಹಾಗೆಂದು ವಿಟ್ಲ ಎಂಬ ಇಂಟರ್ ಸ್ಟೇಟ್ ಗಡಿಯಲ್ಲಿ ಅಂಚಿ ನಿಂತರೆ ಕೇರಳ ಇಂಚಿ ನಿಂತರೆ‌ ಕರ್ನಾಟಕ ಎಂಬ ಪರಿಸ್ಥಿತಿ ಇರುವಾಗ ಯಾರಿಗೇ ಆದರೂ ಕದಿಯದೆ, ಸಮಾಜ ಕಂಟಕ ಕೆಲಸ ಮಾಡದೆ ಮನಸು ಬರಲಿಕ್ಕಿಲ್ಲ. ಇಲ್ಲಿ  ಮಾಡಿ ಆಚೆ ಪದ್ರಾಡ್, ಅಲ್ಲಿ ಮಾಡಿ ‌ಇಂಚಿ ಪದ್ರಾಡ್ ಹಾಕುವವರೇ ಇಲ್ಲಿ ಜಾಸ್ತಿ. ಇಲ್ಲಿ ಪೋಲಿಸರಿಗೆ ಒಮ್ಮೊಮ್ಮೆ ಪುರುಸೊತ್ತೇ ಇರಲ್ಲ. ಅಷ್ಟು ಕಲರ್ ಕಲರ್ ಕಳ್ಳರು, ಕಾಕರು.
   ಓ ಮೊನ್ನೆ ಅಂದರೆ ಜುಲೈ ತಿಂಗಳ 20ರಂದು ಮಟ ಮಟ ಮಧ್ಯಾಹ್ನ ವಿಟ್ಲ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ರಾಜಾರೋಷವಾಗಿ  ಮಟ್ಕಾ ದಂಧೆ ನಡೆಯುವ ಮಾಹಿತಿ ವಿಟ್ಲ ಪೊಲೀಸರಿಗೆ ಸಿಕ್ಕಿದೆ. ಕೂಡಲೇ ಅಲರ್ಟ್ ಆದ ವಿಟ್ಲ ಎಸ್ಸೈ ವಿದ್ಯಾ ಕೈಗೆ ಸಿಕ್ಕ ಎರಡು ಪೋಲಿಸರನು ಜೀಪ್ ಗೆ ಹಾಕೊಂಡು ಸ್ಪಾಟ್ ಗೆ ಬಂದಿದ್ದಾರೆ. ಬಂದು ನೋಡಿದರೆ ಮುಳಿಯ ಜಗ್ಗಣ್ಣನ ಮಗ ರಾಕೇಶ ಮತ್ತು ಬಂದ್ಯೋಡ್ ಮಹೇಶ್ ಮಟ್ಕಾದಲ್ಲಿ ಫುಲ್ ಬ್ಯುಸಿ. ಇಬ್ಬರೂ  ಚೀಟಿಯಲ್ಲಿ ಅದೇನೋ ಬರೆಯುತ್ತಿದ್ದರು, ದುಡ್ಡು ಕಲೆಕ್ಷನ್ ಮಾಡುತ್ತಿದ್ದರು. ಆಗ ಇವರ ಹತ್ತಿರವೇ ಒಂದು ನೀಲಿ ಜೀಪ್ ಬಂದು ನಿಂತಿದೆ. ಯಾರೋ ದೊಡ್ಡ ಮಿಕ ಬಂದಿದೆ ಎಂದು ಜಗ್ಗಣ್ಣನ ಮಗ ತಲೆ ಎತ್ತಿ ನೋಡಿದರೆ ಪೊಣ್ಣು  ಪೋಲಿಸ್. ಬಂದಿದ್ದು ವಿಟ್ಲ ಎಸ್ಸೈ ವಿದ್ಯಾ. ಜಗ್ಗಣ್ಣನ ಮಗನಿಗೆ ಅವರ ಗುರ್ತ ಇತ್ತು. ಹಾಗಾಗಿ ಓಡದೆ, ಬೊಬ್ಬೆ ಹಾಕದೆ ಬಾಲ ಮಡಚಿ ಸೀದಾ ಬಂದು ನೀಲಿ ಜೀಪ್ ಹತ್ತಿದ್ದಾರೆ.




     ಹಾಗೆ ವಿಟ್ಲ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಡಿ ಶಾಂತಿ ಭಂಗ ಮಾಡುತ್ತಿದ್ದ ಇಬ್ಬರಿಗೂ ಎಸ್ಸೈ ವಿದ್ಯಾ ಪೋಲಿಸ್ ಸನ್ಮಾನ ಮಾಡಿ ಎಫ್ಐಆರ್ ಮಾಡಿದ್ದಾರೆ. ವಿಟ್ಲದಲ್ಲಿ ಇನ್ನೂ ಅನೇಕ ಕಡೆ ಮಟ್ಕಾ ದಂಧೆ, ಜೂಜು ನಡೆಯುತ್ತಿದ್ದು ಎಲ್ಲಾ ಆಟಗಾರರು ಪೊಣ್ಣು ಪೋಲಿಸ್ ಬಗ್ಗೆ ಎಚ್ಚರಿಕೆಯಿಂದ ಇರೋದು ಒಳ್ಳೇ ದು. ಯಾಕೆಂದರೆ ಯಾವಾಗ, ಎಲ್ಲಿಂದ ಬಂದು ನೀಲಿ ಜೀಪು ನಿಲ್ತದೆ ಎಂದೇ ಗೊತ್ತಾಗಲ್ಲ.












                   




     ಹತ್ರ ಹತ್ರ ಆರು ತಿಂಗಳು ಕಳೆದು ಹೋಗಿದೆ ಗುತ್ತಿಗಾರು ಹೈಸ್ಕೂಲ್ ಸುವರ್ಣ ಮಹೋತ್ಸವ ಮುಗಿದು. ಅದರ ಸವಿ ನೆನಪು, ಕಹಿ ನೆನಪು ಎಲ್ಲವೂ ಮಸ್ಕ್ ಮಸ್ಕ್ ಆಗುತ್ತಾ ಬರುತ್ತಿದ್ದರೂ ಒಂದು ನೆನಪು ಮಾತ್ರ ಗುತ್ತಿಗಾರು ಜನತೆ ಯನ್ನು ಇನ್ನೂ ಕಾಡುತ್ತಿದೆ ಮಾರಾಯ್ರೆ. ಆ ವಿಷಯ ಜನರನ್ನು ಕಾಡಿ ಕಾಡಿ ಅವರ ಬಿ.ಪಿ ಕೊಡಿ ಏರಿಸಿ ಬಿಟ್ಟಿದೆ. ಸುವರ್ಣ ಮಹೋತ್ಸವದ ಲೆಕ್ಕಾಚಾರ ಆಗಿಲ್ಲ ಗಡ. ಯಾಕೆ ಆಗಿಲ್ಲ ಎಂದು ಕೇಳಲೂ ಯಾರಿಗೂ ಬೆಟ್ರಿ ಇಲ್ಲ.
   ಕಳೆದ ಆರು ತಿಂಗಳ ಹಿಂದೆ ಗುತ್ತಿಗಾರು ಹೈಸ್ಕೂಲ್ ಗೆ ಸುವರ್ಣ ಮಹೋತ್ಸವ ಸಂಭ್ರಮ. ಸಮಾರಂಭವನ್ನು ಗೌಜಿ ಯಿಂದ ಮಾಡಲು ಹೈಸ್ಕೂಲ್ ಹಳೇ ವಿದ್ಯಾರ್ಥಿಗಳು, ಹೊಸ ವಿದ್ಯಾರ್ಥಿಗಳು, ಊರ ಪರ ಊರುಗಳ ಮಹನೀಯರುಗಳು, ಸಾರ್ವಜನಿಕರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದರು. ಸುವರ್ಣ ಮಹೋತ್ಸವದ ಹೆಸರಿನಲ್ಲಿ ಅಂದಾಜು ಇಪ್ಪತ್ತು ನಾಲ್ಕು ಲಕ್ಷ ಕಲೆಕ್ಷನ್ ಕೂಡ ಮಾಡಲಾಯಿತಂತೆ ಗಡ. ಆದರೆ ಸುವರ್ಣ ಮಹೋತ್ಸವ ಕಳೆದು ಆರು ತಿಂಗಳು ಕಳೆದರೂ ಇನ್ನೂ ಖರ್ಚು ವೆಚ್ಚಗಳ ಲೆಕ್ಕಾಚಾರ ಆಗಿಲ್ಲ ಗಡ. ಅದರಲ್ಲೂ ಸುವರ್ಣ ಮಹೋತ್ಸವ ಸಮಾರಂಭವನ್ನು ಗುತ್ತಿಗಾರುನ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತೆ ಆಚ ರಿಸುವ ಬದಲು ಕಲೆಕ್ಷನ್ ಆದ 24 ರಲ್ಲಿ ಎಷ್ಟು ಕಿಸೆಗೆ ಹಾಕಿ ಕೊಳ್ಳುವುದು ಎಂದೇ ಲೆಕ್ಕಾಚಾರ ಮಾಡಿ ಕಡೇಗೆ ಫಂಕ್ಷನ್ ಕೂಡ ಆಕಳಿಕೆ ತರಿಸಿತ್ತು. 24 ಲಕ್ಷ ಕಲೆಕ್ಷನ್ ಮಾಡಿದ ಮಂದಿ ದುಡ್ಡು ಕೊಟ್ಟ ಜನರಿಗೆ ಒಂದು ಒಳ್ಳೆಯ ಊಟವನ್ನೂ ಹಾಕಿಸದೆ ದೇವಸ್ಥಾನ ಒಂದರ ಅನ್ನಪ್ರಸಾದ ಕೊಟ್ಟು ಕೈ ತೊಳೆದುಕೊಂಡಿದ್ದರು. ಆಯ್ತು ಅವರ ಊಟವೂ ಬೇಡ, ಟಿಫಿನೂ ಬೇಡ, ಸುವರ್ಣ ಮಹೋತ್ಸವದ ಹೆಸರಿನಲ್ಲಿ ಕಲೆಕ್ಷನ್ ಆದ ದುಡ್ಡಿನ ಲೆಕ್ಕ, ಸಮಾರಂಭದ ಖರ್ಚು ವೆಚ್ಚಗಳು, ಉಳಿತಾಯದ ಹಣ ಇವುಗಳ ಲೆಕ್ಕ ಕೊಡಿ, ಒಂದು ಮೀಟಿಂಗ್ ಮಾಡಿ ಅಂದರೆ ನಾಳೆ ಗಡ, ನಾಡಿದ್ದು ಗಡ, ಮುಂದಿನ ‌ವಾರ ಗಡ ಅಂತ ಗಡ ಗಡ ಮಾತಾಡಿ ಕ್ಯಾಲೆಂಡರ್‌ನ ಎಲ್ಲಾ ಡೇಟುಗಳು ಮುಗಿದು ಹೋದರೂ ಇನ್ನೂ ಹಾವು ಬಿಟ್ಟಿಲ್ಲ.
   ಹಾಗಾದರೆ ಸುವರ್ಣ ಮಹೋತ್ಸವದ ದುಡ್ಡು ಯಾರ ಕಿಸೆಯಲ್ಲಿದೆ? ಅವರು ಯಾಕೆ ಲೆಕ್ಕಾಚಾರ ಇಡುತ್ತಿಲ್ಲ? ಸುವರ್ಣ ಮಹೋತ್ಸವದ ಹೆಸರಿನಲ್ಲಿ ಎಷ್ಟು ಗುಳುಂ ಮಾಡಿರ ಬಹುದು? ಈ ಬಗ್ಗೆ ಕಮಿಟಿಯಲ್ಲಿ ಕೇಳಿದರೆ ಅವರು ಬಂಟಮಲೆಯತ್ತ ಕೈ ತೋರಿಸಿ ಪಗೆಲ ನಗು ನಗುತ್ತಾರೆ. ಹೈಸ್ಕೂಲ್ ಮಾಸ್ತರ್ ಗಳಲ್ಲಿ ಕೇಳಿದರೆ ಅವರು ಬೇಂಗ ಮಲೆ ತೋರಿಸುತ್ತಾರೆ. ಅಂತೂ ಇಂತೂ ಕಡೇಗೂ ಸುವರ್ಣ ಮಹೋತ್ಸವದ ಹೆಸರಿನಲ್ಲಿ ಉಂಡೂ ಹೋದವನು ಕೊಂಡೂ ಹೋದವನು ಯಾರೆಂದು  ಜನತೆಗೆ ಮಸ್ಕ್ ಮಸ್ಕ್ ಆಗಿ ಅರ್ಥ ಆಗಿದೆ. ಇನ್ನು ಅವನನ್ನು ಕರೆ ತಂದು   ಮಂಡಲದಲ್ಲಿ ಕೂಂದ್ರಿ ಸುವುದಷ್ಟೇ ಕೆಲಸ. ಆ ಕೆಲಸ ಮಾಡುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅವಳೆಲ್ಲಿದ್ದಾಳೆ ಬಾಕಿಲದ ಮುಸ್ಲಿಂ ಆಂಟಿ ಐಶೂ?
   












                 



      ಕೊಡಗು ಸಂಪಾಜೆ ಯಾವಾಗ ಬಾಲಚಂದ್ರ ಕಳಗಿ ಎಂಬ ಅಜಾತಶತ್ರುವನ್ನ, ಬಿಜೆಪಿ ಯುವ ನಾಯಕನನ್ನು ಕಳೆದು ಕೊಂಡಿತೋ ಆವತ್ತೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ದೇಶ ಭಕ್ತರ ಅವನತಿ ಶುರುವಾಗಿತ್ತು. ಬೋಪಯ್ಯ ಸೋತು ಹೋದರು.
    ಇದೀಗ ‌ಸಂಪಾಜೆ ಪಂಚಾಯತ್ ಅಧ್ಯಕ್ಷ ಕುರ್ಚಿಗೆ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಮೀಸಲಾತಿ ನಿಗದಿಯಾಗಿದ್ದು ಅದು ಸಾಮಾನ್ಯ ಸದಸ್ಯ ವರ್ಗಕ್ಕೆ ಬಂದಿದೆ. ಹಾಗಂತ ಸಾಮಾನ್ಯ ಅಂದ ಕೂಡಲೇ ಪಂಚಾಯತ್ ನ ಅಷ್ಟೂ ಸದಸ್ಯರೂ ಅಧ್ಯಕ್ಷ ಕುರ್ಚಿಗೆ ಎಲಿಜಿಬಲ್ ಆಗುತ್ತಾರೆ. ಹಾಗಾಗಿ ಸಂಪಾಜೆಯಲ್ಲಿ ದಿನದಿಂದ ದಿನಕ್ಕೆ ಬಿಪಿ, ಬಿಸಿ ಏರುತ್ತಿದೆ. ಹಾಗೆಂದು ಸಂಪಾಜೆ ಯುವ ನಾಯಕನಾಗಿದ್ದ ದಿವಂಗತ ಬಾಲಚಂದ್ರ ಕಳಗಿ ಪತ್ನಿ ರಮಾ ದೇವಿ ಕಳಗಿ ಅಧ್ಯಕ್ಷ ಕುರ್ಚಿಗೆ ಪ್ರಬಲ ಆಕಾಂಕ್ಷಿಯಾಗಿದ್ದು ತನ್ನ ಪತಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುವ ಭರವಸೆ ನೀಡಿದ್ದಾರೆ. ಅದೂ ಅಲ್ಲದೆ ರಮಾದೇವಿಯವರನ್ನು ಅಧ್ಯಕ್ಷ ಮಾಡುವ ಮೂಲಕ ಜನಸೇವೆಗೆ ತನ್ನ ಜೀವನವನ್ನೇ ಮುಡಿ ಪಾಗಿಟ್ಟ ಬಾಲಚಂದ್ರ ಕಳಗಿ ಸಾವಿಗೆ ನ್ಯಾಯ ಒದಗಿಸುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ ಎಂಬ ನಂಬಿಕೆ ಸಂಪಾಜೆ ಜನರಲ್ಲಿದೆ. ಅದೂ ಅಲ್ಲದೆ ರಮಾದೇವಿ ಕಳಗಿ ಎಂ.ಎ ಪದವೀಧರೆಯೂ ಆಗಿದ್ದು ಸಂಪಾಜೆ ಪಂಚಾಯತನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಅರ್ಹತೆ ಹೊಂದಿದ್ದಾರೆ.
   ಹಾಗಂತ ಸಂಪಾಜೆ ಪಂಚಾಯತ್ ಅಧ್ಯಕ್ಷ ಕುರ್ಚಿಗೆ ಇನ್ನೂ ಹಲವರು ಆಕಾಂಕ್ಷಿಗಳಿದ್ದು ಪಂಚಾಯತ್ ಮಾಜೀ ಅಧ್ಯಕ್ಷ ಕುಮಾರ್ ಚಿದ್ಕಾರ್ ಕೊನೆಯ ಬಾರಿ ಕುರ್ಚಿ ಕೊಟ್ಟು ಬಿಡಿ ಮುಂದೆ ಕೇಳಲ್ಲ ಎಂದು ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. ಇನ್ನು ಪರಮಲೆಯ ದೇಶ ಭಕ್ತ ಕೂಡ ಅಧ್ಯಕ್ಷ ಕುರ್ಚಿಗಾಗಿ ಮೇಲೆ ಕೆಳಗೆ ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಕುರ್ಚಿ ಮೀಸಲಾತಿ ಇರುವುದರಿಂದ ಹಾಲೀ ಅಧ್ಯಕ್ಷರೂ ಕುರ್ಚಿಯಲ್ಲಿ ಮುಂದುವರೆದರೆ ಹೇಗೆ ಎಂದು ತಮ್ಮ ಬೆಂಬಲಿಗರಲ್ಲಿ ‌ಅಭಿಪ್ರಾಯ ಕೇಳುವ ಆಲೋಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
   ಬಾಕಿ ವಿಷಯಗಳೇನೇ ಇರಲಿ, ಕಳಗಿ ಸಾವಿನ ನಂತರ ಸರಿಯಾದ ನಾಯಕತ್ವ ಇಲ್ಲದೆ ಸೊರಗಿರುವ ಸಂಪಾಜೆ ಬಿಜೆಪಿಗೆ ರಮಾದೇವಿ ಆಯ್ಕೆ ಒಂದು ಬೂಸ್ಟರ್ ಆಗಲಿದೆ. ಇನ್ನು ಕಳೆದ ಪಂಚಾಯತ್ ಎಲೆಕ್ಷನ್ ನಲ್ಲಿ ಆಶ್ಚರ್ಯಕರವಾಗಿ ಸೋತ ಸಂಪಾಜೆಯ ಇನ್ನೊಬ್ಬ ಬಿಜೆಪಿ ನಾಯಕ ಕೆದಂಬಾಡಿ ಜಗದೀಶ್ ಕೂಡ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಯೋಗ್ಯ ಅಭ್ಯರ್ಥಿಯ ಆಯ್ಕೆಯಲ್ಲಿ ಮುಂಚೂಣಿಯಲ್ಲಿ ನಿಂತರೆ ಮಾತ್ರ ಸಂಪಾಜೆಯಲ್ಲಿ ಬಿಜೆಪಿ ತನ್ನ ಹಿಂದಿನ ವೈಭವವನ್ನು ಮುಂದುವರೆಸ ಬಹುದು. ಇಲ್ಲದಿದ್ದರೆ ಒಂದು ಸೀಟಿನ ಕೈ ಐದು ಆರರಲ್ಲಿ ಬಂದು ಕೂರುವ ಅಪಾಯಗಳಿವೆ.
   












                



      ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ, ಸುಳ್ಯ ಕಾಂಗ್ರೆಸ್ ನಾಯಕ ಸಚಿನ್ ರಾಜ್ ಶೆಟ್ಟಿ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಲ್ಲಿ ಪೆರುವಾಜೆ ಗ್ರಾಮದ ಪೆಲತಡ್ಕ ಎಂಬಲ್ಲಿ ವ್ಯಕ್ತಿಗಳಿಬ್ಬರು ಅದ್ಯಾವುದೋ ಅಂಡಿಗುಂಡಿ ಕಾಮಗಾರಿಗಳನ್ನು ನಡೆಸುತ್ತಿದ್ದು ಆ ಕಾಮ ಗಾರಿಗಳ ಮಣ್ಣು ಪಂಚಾಯತ್ ರಸ್ತೆಯ ಚರಂಡಿಗೆ ಬಿದ್ದು ಮಳೆಗಾಲದ ನೀರು ಬ್ಲಾಕ್ ಆಗಿ ಸಮಸ್ಯೆ ಆಗಿತ್ತು.  ಈ ಬಗ್ಗೆ ಪಂಚಾಯತ್ ಅನೇಕ ಬಾರಿ ನೋಟಿಸ್ ಕೊಟ್ಟರೂ ಆಸಾ ಮಿಗಳು ಆ‌ ಮಣ್ಣನ್ನು ತೆಗೆದಿರಲಿಲ್ಲ. ಕಡೆಗೆ ಖುದ್ದು ಪಂಚಾ ಯ್ತಿಯೇ ಆ ಮಣ್ಣು ತೆಗೆಯಲು ಮುಂದಾಗಿದ್ದು ಬೆಳ್ಳಾರೆ ಪೋಲಿಸರ ಪ್ರೊಟೆಕ್ಷನ್ ತಗೊಂಡು ಮೊನ್ನೆ ಸ್ಪಾಟ್ ಗೆ ಹೋಗಿತ್ತು. ಆ ಸಮಯದಲ್ಲಿ ಸ್ಥಳೀಯ ವಾರ್ಡ್ ಮೆಂಬರ್ ಸಚಿನ್ ರಾಜ್ ಶೆಟ್ಟಿ ಕೂಡ ಸ್ಪಾಟಲ್ಲಿ ಹಾಜರಿದ್ದರು. ಆದರೆ ಮರುದಿನ ಅದೇ ಪಾರ್ಟಿ ಬೆಳ್ಳಾರೆ ಪೋಲಿಸರಿಗೆ ಸಚಿನ್ ರಾಜ್ ಶೆಟ್ಟಿ ಮೇಲೆ ಕಂಪ್ಲೈಂಟ್ ಮಾಡಿದ್ದು ಸಚಿನ್ ಮೇಲೆ ಕಲಂ 504,506 IPC & the SC ST amendment Act 2015 ರ ಪ್ರಕಾರ ಟೈಟ್ ಕೇಸ್ ಜಡಿಯಲಾಗಿದೆ. ಸದ್ರಿ ಕೇಸ್ ಬಗ್ಗೆ ಪೆರುವಾಜೆ ಗ್ರಾಮ ಪಂಚಾಯತ್ ಈವತ್ತು ತುರ್ತು ಸಭೆ ಕರೆದು ಪಂಚಾಯತ್ ಕೆಲಸಕ್ಕೆ ಅಡ್ಡಿ ಪಡಿಸಿದ ಪೆಲತ್ತಡ್ಕ ನಿವಾಸಿಗಳಿಬ್ಬರ ಮೇಲೆ ಪೋಲಿಸ್ ದೂರು ಕೊಡುವು ದುದೆಂದು ನಿರ್ಣಯ ಪಾಸ್ ಮಾಡಿತ್ತು. ಆದರೆ ಟೆಕ್ನಿಕಲ್ ಸಮಸ್ಯೆಯಿಂದ ಪೋಲಿಸರು ಪಂಚಾಯತ್ ದೂರು ಸ್ವೀಕ ರಿ‌ಸಿಲ್ಲ ಎಂದು ತಿಳಿದುಬಂದಿದೆ.
    ಅಲ್ಲ ಮಾರಾಯ್ರೆ ಸಚಿನ್ ರಾಜ್ ಶೆಟ್ಟಿ ಒಬ್ಬ ವಾರ್ಡ್ ಸದಸ್ಯ, ಒಬ್ಬ ವಾರ್ಡ್ ಸದಸ್ಯನಾಗಿ ತನ್ನ ವಾರ್ಡ್ ‌ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗುವುದು ಮಾಮೂಲು. ಮೇಲಾಗಿ ಅಲ್ಲಿ ಸ್ಪಾಟಲ್ಲಿ ಪೋಲಿಸರೂ ಇದ್ದರು. ಅಲ್ಲಿ ಏನೇ ಮಾತು ಕತೆ ನಡೆದಿದ್ದರೂ ಅದಕ್ಕೆ ಪೋಲಿಸರೂ ಸಾಕ್ಷಿಯಾಗಿದ್ದಾರೆ. ಹಾಗಿ ರುವಾಗ ಮರುದಿನವೇ ಬಂದು ಸಚಿನ್ ‌ಮೇಲೆ ದೂರು ಕೊಡು ವುದೆಂದರೆ ಪ್ರಜಾ ಪ್ರಭುತ್ವ ಎಲ್ಲಿಗೆ ಬಂದು ನಿಂತಿದೆ ಎಂದು ಗೊತ್ತಾಗುತ್ತಿದೆ.

 ಪೆರುವಾಜೆ ಗ್ರಾಮ ಪಂಚಾಯತ್ ತುರ್ತು ಸಭೆ










               


    ಅಲ್ಲಿ ಗುತ್ತಿಗಾರು ಸಮೀಪದ ವಳಲಂಬೆ ದೇವಸ್ಥಾನದ ಎದುರಿದ್ದ ಬೋರ್ ವೆಲ್ ಒಂದನ್ನು ಕಳ್ಳರು ರಾತ್ರೋರಾತ್ರಿ ಎಬ್ಬಿಸಿದ್ದು ಗುಜುರಿಗೆ ಮಾರಿರುವ ಸಾಧ್ಯತೆ ಇದೆ. ವಳಲಂಬೆ ದೇವಸ್ಥಾನದ ಎದುರಿದ್ದ ಈ ಬೋರ್ ವೆಲ್ ತುಂಬಾ ಉಪ ಯುಕ್ತವಾಗಿದ್ದು ಎಷ್ಟೋ ವರ್ಷದಿಂದ ಈ ಬೋರ್ ಇಲ್ಲಿ ಶಬ್ದ ಮಾಡುತ್ತಾ ಇತ್ತು. ಓ ಮೊನ್ನೆ ಸಂಜೆ ತನಕ ಇದ್ದ ಬೋರು ಬೆಳಿಗ್ಗೆದ್ದು ನೋಡಿದರೆ ಇಲ್ಲ.
     ಯಾರೋ ಕಳ್ಳರು ರಾತ್ರಿ ಬಂದು ಬೋರನ್ನ ನಿದ್ರೆಯಿಂದ ಎಬ್ಬಿಸಿ ಕಳ್ಳತನ ಮಾಡಿರ‌ ಬಹುದೆಂದು ಜನರ ಗುಮಾನಿ ಇದೆ. ಕಡೇ ಪಕ್ಷ ಕಳ್ಳರು ಬೋರು ಅಲ್ಲಿತ್ತು ಎಂಬುದಕ್ಕೆ ಒಂದು ಚಿಕ್ಕ ಸಾಕ್ಷಿಯನ್ನೂ ಬಿಡದೆ ಕ್ಲೀನ್ ಮಾಡಿದ್ದಾರೆ. ಈ ಬೋರ್ ಗುತ್ತಿಗಾರು ಪಂಚಾಯತ್ ಸೊತ್ತಾಗಿದ್ದು ಇದರ ಬಗ್ಗೆ ಗುತ್ತಿ ಗಾರು ಪಿಡಿಒಗೆ ಹೇಳಿದರೆ ಅವರಿಗೆ ‌ಅಲ್ಲಿದ್ದ ಬೋರ್ ವೆಲ್ ನ ವಿಷಯವೇ ಗೊತ್ತಿಲ್ಲದ ರೀತಿ ವರ್ತಿಸುತ್ತಾರೆ. ಈ ಬಗ್ಗೆ ಬೇಗ ದಲ್ಲೇ ‌ಸಾರ್ವಜನಿಕರು ಪೋಲಿಸ್ ಕಂಪ್ಲೈಂಟ್ ಕೊಡಲು ತಯಾರಿ ನಡೆಸಿದ್ದಾರೆ. ಅಷ್ಟು ಮಾಡದಿದ್ದರೆ ಬೋರ್ ವೆಲ್ ಕಳ್ಳರನ್ನು ಹಿಡಿಯಲು ಗುತ್ತಿಗಾರು ಪಂಚಾಯತ್ ಗೆ ಕಷ್ಟ ಆಗ ಬಹುದು.









             


       ಅಲ್ಲಿ ಕಲ್ಲೆಗದಲ್ಲಿ ಇನ್ನು ನಡೆದಾಡಲೂ ಕಷ್ಟ ಅನ್ನುವಂತಹ ವಾತಾವರಣ ಕ್ರಿಯೇಟ್ ಆಗಿದೆ. ಕಲ್ಲೆಗದಲ್ಲಿ ಉದಯ ವಾಗಿರುವ ಗಾಂಜಾ ಪೋಕ್ರಿಗಳ ಗ್ಯಾಂಗ್ ಒಂದು ತಮ್ಮ ಗಾಂಜಾ ಅಮಲನ್ನು ಇಡೀ ಪುತ್ತೂರಿಗೆ ಪಸರಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಇದರ ಉದ್ಘಾಟನೆ ನಿನ್ನೆ ನಡೆದಿದ್ದು ಕಾಂಗ್ರೆಸ್ ‌ನಾಯಕನ ಕಾರು ದರೋಡೆ ಮಾಡುವ ಮೂಲಕ ಇದೀಗ ಫಸ್ಟ್ ಸ್ಟೆಪ್ ಇಟ್ಟಾಗಿದೆ. ಪುತ್ತೂರು ಪೋಲಿಸರ ಮೂಗಿನ ಒಟ್ಟೆಗೆ ಒಮ್ಮೆ ಅಜ್ಜನ ಮೀಸೆ ಹಾಕಿಯಾದರೂ ಒಂದು ಅಕ್ಷಿ ತೆಗೆಸೋದು ಒಳ್ಳೇದು. ಇಲ್ಲದಿದ್ದರೆ ಕಲ್ಲೆಗದ ಬ್ಯಾಡ್ ಬಾಯ್ಸ್ ಗಳಿಗೆ ಪೋಲಿಸರೂ ಈ ಲೋಕದಲ್ಲಿ ಇದ್ದಾರೆಂದು ಗೊತ್ತೇ ಆಗಲ್ಲ.
        ಕಳೆದ ತಿಂಗಳಷ್ಟೇ ಕಲ್ಲೆಗ ಬ್ಯಾಡ್ ಬಾಯ್ಸ್ ಗಳ ಕಾರು ಸೈಕಲ್ ಸಾಗಿಸುವಾಗ ಆಕ್ಸಿಡೆಂಟ್ ಆಗಿ ಸಿಕ್ಕಿ ಬಿದ್ದು ಪೋಲಿಸರ ಸಹಕಾರದಿಂದ ಬ್ಯಾಡ್ ಬಾಯ್ಸ್ ಮತ್ತು ಸೈಕಲ್ ಗಳು ಬಚಾವ್ ಆಗಿದ್ದರು. ಆ ಘಟನೆ ಕಾರ್ತೆಲ್ ತಿಂಗಳಲ್ಲಿ ನಡೆದಿದ್ದು ಇದೀಗ ಆಟಿಯಲ್ಲಿ ಇನ್ನೊಂದು. ಪ್ರಗತಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಪೇಶೆಂಟ್ ಒಬ್ಬರಿಗೆ ಊಟ ಕೊಂಡೊಯ್ಯುತ್ತಿದ್ದ ಮಾಜೀ NSUI ಅಧ್ಯಕ್ಷ, ಪುತ್ತೂರು ಕಾಂಗ್ರೆಸ್ ನಾಯಕ ಪ್ರದೀಪ್ ರೈ ಪಾಂಬಾರ್ ಕಾರು ಅಡ್ಡ ಹಾಕಿದ ಇದೇ ಕಲ್ಲೆಗ ಗ್ಯಾಂಗ್ ನ ಇಬ್ಬರು ಬ್ಯಾಡ್ ಬಾಯ್ಸ್ ರೈಗಳನ್ನು ಕಾರಿಂದ ಎಳೆದು ಹಾಕಿ, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರ ಬೆರಳಿನಲ್ಲಿದ್ದ ಉಂಗುರ, ಬ್ರಾಸ್ ಲೈಟ್ ಮತ್ತು ಪರ್ಸಿನಲ್ಲಿದ್ದ ಒಂಬತ್ತು ಸಾವ್ರ ದುಡ್ಡು ದರೋಡೆ ಮಾಡಿ ಇದೀಗ ತಲೆ ತಪ್ಪಿಸಿ ಕೊಂಡಿದ್ದಾರೆ. ಎಂಥ ಪೋಕಾಲ ಮಾರಾಯ್ರೆ ಹುಡುಗರಿಗೆ! ಪೆಟ್ಟು ತಿಂದು ಸಾಯ್ತಾರಾ?
    ಇದೀಗ ಪಾಂಬಾರ್ ರೈಗಳು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ಪುತ್ತೂರು ಪೋಲಿಸರಿಗೆ ದೂರು ನೀಡಿದ್ದಾರೆ. ರೈ ಕಡೆಯಿಂದ ಕಂಪ್ಲೈಂಟ್ ಆಗುತ್ತಿದ್ದಂತೆ ಅತ್ತ ಕಡೆಯಿಂದಲೂ ಒಬ್ಬನನ್ನು ಅಡ್ಮಿಟ್ ಮಾಡಲಾಗಿದ್ದು ಅವನೂ ಗುಲ್ಗುಸು ಸಿಕ್ಕಿಸಿ ಮಂಚ ಹತ್ತಿದ್ದಾನೆ ಎಂದು ತಿಳಿದುಬಂದಿದೆ. ಹೀಗೆಲ್ಲ ಆದರೆ ಪೋಲಿ ಸರಿಗೆ ಪಾಪ ದೊಡ್ಡ ಉಭಯ ಸಂಕಟ. ಕುರ್ಚಿ ಬಿಸಿ ಮಾಡುತ್ತಾ ಕೌಂಟರ್ ಕೇಸ್ ಬಗ್ಗೆ ಈಗ ಸ್ಕೇಚ್ ಹಾಕಿರ ಬಹುದು.
    ಅಲ್ಲಿ ಕಲ್ಲೆಗದಲ್ಲಿ ವಿವೇಕಾನಂದ ಕಾಲೇಜಿನ ಹುಡುಗಿ ಯರಿಗೇ ಓಂಗುತ್ತಾ, ಅವರಿಗೆ ವಿವಿಧ ಆಯಾಮಗಳಲ್ಲಿ ಕಿರಿಕ್ ಮಾಡುತ್ತಾ, ಅವರನ್ನು ಚುಡಾಯಿಸುತ್ತಾ, ಮೂಂಕು ಮುಟ್ಟ ಟೈಟಾಗಿ ಸಾರ್ವಜನಿಕ ಶಾಂತಿ ಭಂಗ  ಮಾಡುತ್ತಾ, ಬೆದರಿಕೆ ಹಾಕುತ್ತಾ, ಗಾಂಜಾ ಎಳೆಯುತ್ತಾ, ಸೈಕಲ್ ಸಪ್ಲೈ ಮಾಡುತ್ತಾ ಇಡೀ ಪುತ್ತೂರಿನ  ಶಾಂತಿ ನೆಮ್ಮದಿಗೆ ಕಂಟಕವಾಗಿ ಬೆಳೆ ಯುತ್ತಿರುವ ಈ ಟೀಮನ್ನು ಸರ್ಕಲ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ಒಂದು ಕೈ ನೋಡಿ ಕೈಗೊಳ್ಳದಿದ್ದರೆ ಇದೆ ಟೀಮು ಪೋಲಿಸರ ಸಮೇತ ಇಡೀ ಪುತ್ತೂರಿಗೆ ಒಂದು ಪಾಠ ಕಲಿಸುವುದರಲ್ಲಿ ಸಂಶಯವೇ ಇಲ್ಲ.  ಈವತ್ತು ಪ್ರದೀಪ್ ರೈ ಪಾಂಬಾರ್ ಗೇ ಹಲ್ಲೆ ಮಾಡಿದವರು ನಾಳೆ ಜನ ಸಾಮಾನ್ಯ ರೊಂದಿಗೆ ಹೇಗೆ ಸರ್ಕಸ್ ಮಾಡಬಹುದು? ಪುತ್ತೂರು ಪೋಲಿಸರು ಒಮ್ಮೆ ಇವರ ಬೆಂಡ್ ತೆಗೆದು ರೀ ಪೈಂಟ್ ಮಾಡಿ ಸನ್ಮಾನ ಮಾಡಿದರೆ ಸಾಕು. ಬುದ್ಧಿ ಬರ್ತದೆ.









            



         ಅಲ್ಲಿ ಕಾಣಿಯೂರು - ಸುಬ್ರಹ್ಮಣ್ಯ ರಸ್ತೆಯ ಪುರುಷರ ಕಟ್ಟೆಯಲ್ಲಿ ಅನ್ನಭಾಗ್ಯದ ಅಕ್ಕಿ ಓಪನ್ ಮಾರ್ಕೆಟ್ ನಲ್ಲಿ ರಾಜಾರೋಷವಾಗಿ ಸೇಲ್ ಆಗುತ್ತಿದೆ. ಬಿಪಿಎಲ್ ಕುಟುಂಬ ಗಳಿಗೆ, ಬಡಬಗ್ಗರಿಗೆ, ದೀನ ದಲಿತರಿಗೆ ಸರ್ಕಾರದಿಂದ ಬರುವ ಅಕ್ಕಿಯನ್ನು ಕಡಿಮೆ ದುಡ್ಡಿಗೆ ಪರ್ಚೆಸ್ ಮಾಡಿ ಅದನ್ನು ಜಾಸ್ತಿ ರೇಟ್ ಗೆ ಮಾರಿ ದುಡ್ಡು ಮಾಡುವ ಅಂಗಡಿಯೊಂದು ಪುರುಷರ ಕಟ್ಟೆಯ ಸೊಸೈಟಿ ಬಳಿಯೇ ಕಾರ್ಯಾಚರಿಸುತ್ತಿದೆ.
    ಹಾಗಂತ ಈ ಕಳ್ಳ ವ್ಯವಹಾರ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಯಾಕೆಂದರೆ ಪುರುಷರ ಕಟ್ಟೆಯಲ್ಲಿ ಬಿಪಿಎಲ್ ಕುಟುಂಬಗಳ ದೊಡ್ಡ ರಾಶಿಯೇ ಇದೆ. ಇಂತಹ ಬಿಪಿಎಲ್ ಕುಟುಂಬಗಳ ಜನ ಟೈಟಾಗಲು ಟೈಟಾದಾಗಲೆಲ್ಲ ಧರ್ಮಕ್ಕೆ ಸಿಕ್ಕಿದ ಅಕ್ಕಿಯನ್ನು ಕೆ.ಜಿಗೆ ಹತ್ತು ರೂಪಾಯಿಯಂತೆ ಈ ಅಂಗಡಿಗೆ ಸೇಲ್ ಮಾಡುತ್ತಾರೆ. ಅಂಗಡಿಯವನು ಅದೇ ಅಕ್ಕಿಯನ್ನು "ನಲ್ಲೇ ಉಂಡು" ಎಂದು ಮೂವತ್ತಕ್ಕೆ ಹೊರಗೆ ಮಾರುತ್ತಾನೆ.
    ಹಾಗಂತ ಪುರುಷರ ಕಟ್ಟೆ ಕಾಣಿಯೂರು ಲೈನಿನ‌ ನಂಬರ್ ವನ್ ಬ್ಯುಸಿ ಜಂಕ್ಷನ್. ಇಲ್ಲಿ ಜನಸಂಖ್ಯೆ ‌ಕೂಡ ಪಿಜಿನ್ ಲೆಕ್ಕದಲ್ಲಿ ಇದೆ. ಇಲ್ಲಿ ‌ಒಂದು ನೀರಿನ ಫ್ಯಾಕ್ಟರಿ ಕೂಡ ಇದ್ದು ಅಲ್ಲಿಗೆ ಬರುವ ಲಾರಿ ಡ್ರೈವರ್ ಗಳಿಗೂ ಈ ಅಕ್ಕಿ ಅಂಡಿಗುಂಡಿ ರೇಟಿಗೆ ಸೇಲ್ ಆಗುತ್ತಿದೆ. ಅದರಲ್ಲೂ ಪುರುಷರ ಕಟ್ಟೆಯ ಸೊಸೈಟಿ ಬಳಿಯೇ ಕಾರ್ಯಾಚರಿಸುತ್ತಿರುವ ಈ ಅಂಗಡಿಗೆ ಅನ್ನಭಾಗ್ಯದ ಗೋಣಿ ಯೊಂದಿಗೆ ಎಲ್ಲಿಯಾದರೂ ಅನೈತಿಕ ಸಂಬಂಧ ಬೆಳೆದರೆ ಅಂಗಡಿಯವನು ಪುರುಷರ ಕಟ್ಟೆಯಲ್ಲಿ ಮಾಳಿಗೆ ಹಾಕುವುದರಲ್ಲಿ ಸಂಶಯವೇ ಇಲ್ಲ. ಸಂಬಂಧ ಪಟ್ಟ ವರು ಒಮ್ಮೆ ಪುರುಷರ ಕಟ್ಟೆ ಗೆ ಬಂದು "ಆಡೂ ಆಡಂ ಆಡು" ಎಂದು ಪದ್ಯ ಹೇಳಿದರೂ ಸಾಕು ಅಕ್ಕಿ ಆಡು ಬಲೆಗೆ ಬೀಳು ತ್ತದೆ.









           


ಸತ್ತಾರ್ ಗ್ಯಾಂಗ್ ಕೇರಳಕ್ಕೆ? 
    ಹಾಗೆ ಘಟ್ಟದ ಕೆಳಗಿನ ಚೆಂಬು ಗ್ರಾಮದಲ್ಲಿ ಆಸ್ತಿಗಾಗಿ ಒಡ ಹುಟ್ಟಿದ ಅಣ್ಣ ನನ್ನೇ ಮರ್ಡರ್ ಮಾಡಿದ ಉಸ್ಮಾನ್ ಬ್ರದರ್ಸ್ ಕೇರಳ ಕಡೆ ಪದ್ರಾಡ್ ಹಾಕಿರುವ ಜಾಡು ಮಡಿಕೇರಿ ಪೋಲಿ ಸರಿಗೆ ಸಿಕ್ಕಿದೆ. ಅಲ್ಲಿ ಚೆಂಬಲ್ಲಿ ಇಚ್ಚನೆ ಮಯ್ಯತ್ತ್ ಮಾಡಿ ಅಲ್ಲಿಂದ ಪರಾರಿಯಾದ ಸತ್ತಾರ್ ಗ್ಯಾಂಗ್ ಸುಳ್ಯದ ಆಲೇಟ್ಟಿ‌ ಕ್ರಾಸ್ ನ ಸಿಸಿ ತನಕ ಬಂದಿದೆ. ಕ್ರಾಸ್ ನಲ್ಲಿದ್ದ ಅಂಗಡಿಯೊಂ ದರಿಂದ ಗ್ಯಾಂಗ್ ಕುಡಿಯಲು ನೀರು ಪರ್ಚೇಸ್ ಮಾಡಿದ್ದು ಸಿಸಿಯಲ್ಲಿ ಶೂಟ್ ಆಗಿದೆ. ಮಡಿಕೇರಿ ಪೋಲಿಸರು ಸಿಸಿ  ನೋಡುತ್ತಾ ಬಂದು ಆಲೆಟ್ಟಿ ಕ್ರಾಸ್ ಗೂ ಬಂದು ವಿಚಾರಿಸಿ ದ್ದಾರೆ.
  ಹಾಗೆ ಆಲೆಟ್ಟಿ ಕ್ರಾಸ್ ದಾಟಿ ಸತ್ತಾರ್  ಗ್ಯಾಂಗ್ ಬಂದ್ಯಡ್ಕ ಮುಖಾಂತರ ‌ಕೇರಳ ಕಡೆ ಪದ್ರಾಡ್ ಮಾಡಿರ ಬಹುದು ಎಂದು ಪೊಲೀಸರಿಗೆ ವಾಸನೆ ಸಿಕ್ಕಿದೆ. ಅಲ್ಲಿ ಬಂದ್ಯಡ್ಕದಲ್ಲಿ ಒಂದು ಇಪ್ಪತ್ತು ರೂಪಾಯಿ ಚೆಕ್ ಪೋಸ್ಟ್ ಇದ್ದು ‌ಸುಲಭದಲ್ಲೇ ಸತ್ತಾರ್ ಗ್ಯಾಂಗ್ ಗಡಿ ದಾಟಿರುವ ಶಂಕೆ ಇದೆ. ಮಡಿಕೇರಿ ಪೋಲಿಸರು ಬೇತೆ ಬೇತೆ ವೇಷದಲ್ಲಿ ಇನ್ನು ಕೇರಳದಲ್ಲಿ ತಿರುಗಾಟ ನಡೆಸ ಬೇಕಾಗಿದೆ.‌ ಅದರಲ್ಲೂ ಉಸ್ಮಾನ್ ‌ಎಳಯ ಮಾರ್ ಗಳಲ್ಲಿ ಸತ್ತಾರ್ ಭಾರೀ ಅಪಾಯಕಾರಿ ಬ್ಯಾಟ್ಸ್ಮನ್ ಆಗಿದ್ದು ಡ್ರಿಂಕಿಂಗ್ ಮತ್ತು ಸ್ಮೋಕಿಂಗ್ ಎರಡರಲ್ಲೂ ನಂಬರ್ ವನ್ ಎಂಬ ಮಾಹಿತಿ ಇದೆ. ನಾವು ಮೊನ್ನೆ ತಾನೇ ಕಲ್ಲು ಗುಂಡಿಯಲ್ಲಿ ಗಾಂಜಾ ವಾಸನೆ ಬರುತ್ತಿದೆ ಎಂದು ಬರೆದಿದ್ದೆವು. ಅದರ ಮರುದಿನವೇ ಗಾಂಜಾ ಸೇವಿಸಿದವರಿಂದ ಉಸ್ಮಾನ್ ಮರ್ಡರ್ ಆಗಿದ್ದು ವಿಪರ್ಯಾಸವೇ ಸರಿ. ಅದರಲ್ಲೂ ನಿನ್ನೆ ಆಲೆಟ್ಟಿ ಕ್ರಾಸ್ ಬಳಿ ಕೊಲೆ ಗಡುಕರಿಗೆ ನೀರು ಕೊಟ್ಟ ಅಂಗ ಡಿಯವನನ್ನು ಮಡಿಕೇರಿ ಪೋಲಿಸರು ವಿಚಾರಿಸಿದ್ದಾರಲ್ಲ ಪಾಪ ಅವನಿಗೆ ನಿನ್ನೆಯಿಂದಲೂ ಅಪಗಪಗ ಸೂಸೂ ನಿಂತಿಲ್ಲ ಎಂಬ ಜೋಕು ಗಾಂಧಿ ನಗರದಲ್ಲಿ ವೈರಲ್ ಆಗಿದೆ.


















       




           


      ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಎರಡು ಬಣಗಳ ಮಧ್ಯೆ ಅಸಮಾಧಾನ ಮತ್ತೆ ಸ್ಪೋಟಗೊಂಡು, ಬಡಿದಾಟ ಮಾರಾ ಮಾರಿ ನಡೆದ ಘಟನೆ ಶುಕ್ರವಾರ ನಡೆದಿದೆ.
      ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಪರಾಮರ್ಶೆ ಸಭೆಯು ಕಾಂಗ್ರೇಸ್‍ ಮುಖಂಡರಾದ  ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಾಯಕರ ಕಾರ್ಯಕರ್ತರ ವಾಕ್ಸ ಮರ, ಕೈ, ಕೈ ಮಿಲಾಯಿಸಿಕೊಳ್ಳವ ರಣರಂಗಕ್ಕೆ ವೇದಿಕೆಯಾ ಯಿತು. ರಾಜ್ಯದಲ್ಲಿ ಕಾಂಗ್ರೇಸ್ ಅಭೂತಪೂರ್ವ ಗೆಲವು ಸಾಧಿಸಿದರೂ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿನ ಹೀನಾಯ ಸೋಲು ಅರಗಿಸಕೊಳ್ಳಲಾಗದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷ ಒದ್ದಾಡುತ್ತಿರುವಾಗ ಎರಡು ಬಣಗಳ ಮಧ್ಯೆ ಉಂಟಾದ ಬಹಿರಂಗ ಗುದ್ದಾಟ ಉರಿಯುವ ಬೆಂಕಿಗೆ ತುಪ್ಪ ಸುರಿ ದಂತಾಗಿದೆ. 
     ಸೋಲಿನ ಪರಾಮರ್ಶೆ ಅವಲೋಕನ ಮಾಡಲು ಆಗಮಿಸಿದ ಕಾಮಗ್ರೇಸ್ ನಾಯಕರು ಬಣರಾಜಕೀಯದ ಒಳಬೇಗುದಿ ಹೊರಹಾಕಿದ್ದಾರೆ. ಕಾಂಗ್ರೇಸ್ ಉಸ್ತುವಾರಿ ಯಾಗಿದ್ದ ನಂದಕುಮಾರ್ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೇಟ್ ಪಡೆದು ಸ್ಪರ್ಧಿಸುವ ಆಕಾಂಕ್ಷೆ ಇಟ್ಟು ಕೊಂಡಿದ್ದರು, ಇದರ ಪೂರ್ವಬಾವಿ ಎಂಬಂತೆ ಕ್ಷೇತ್ರದಾದ್ಯಂತ ಓಡಾಡುತ್ತಾ ಹಣ ಖರ್ಚ ಮಾಡಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಒಡನಾಟ ಸಂಪಾದಿಸಿದ್ದರು. ಕೃಷ್ಣ ಅವರು ಕೂಡಾ ಉಸ್ತುವಾರಿಯಾಗುದ್ದುಕೊಂಡು ತನ್ನದೇ ರೀತಿಯಲ್ಲಿ ಕ್ಷೇತ್ರದಲ್ಲಿ ಓಡಾಟ ನಡೆಸಿಕೊಂಡು ಮಿಂಚುತ್ತಿದ್ದರು. ಕೊನೆ ಗಳಿಗೆಯಲ್ಲಿ ಕೃಷ್ಣಪ್ಪ ಅವರಿಗೆ ಟಿಕೇಟು ಗೋಷಣೆಯಾದ ಬಳಿಕ ನಂದಕುಮಾರ್ ಅಭಿಮಾನಿಗಳು ತಮ್ಮದೇ ತಂಡ ಕಟ್ಟಿಕೊಂಡು ಕೃಷ್ಣಪ್ಪ ಅವರ ಬದಲಿಗೆ ನಂದಕುಮಾರ್ ಅವರಿಗೆ ಬಿಫಾರಂ ನೀಡುವಂತೆ ನಾನಾ ರೀತಿಯ ಒತ್ತಡ ಹಾಕಿದ್ದರೂ ಕೃಷ್ಣಪ್ಪ ಅವರೇ ಅಭ್ಯರ್ಥಿಯಾಗಿ ಉಳಿದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಪಕ್ಷದ ಮುಖಂಡರು ಎರಡೂ ಬಣಗಳನ್ನು ಸೇರಿಸಿ ತೇಪೆ ಹಚ್ಚುವ ಕಾರ್ಯ ಮಾಡಿದರೂ  ಮುಖಂಡರು ತಿರುಗಿ ಹೋದ ಬಳಿಕ ತೇಪೆ ಹರಿದು ಹಂಚಿ ಹೋಗಿತ್ತು. ಕೆಲವು ಮುಖಂಡರು ಒಗ್ಗಟ್ಟಿನ ಮಂತ್ರ ಜಪಿ ಸಿದ್ದರೂ ಸುಳ್ಯ ವಿಧಾನ ಸಭಾ ಕ್ಷೇತ್ರದ ಎಲ್ಲಾ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ದುಡಿದು ಪಕ್ಷವನ್ನು ಗೆಲ್ಲಿಸುವಲ್ಲಿ ವಿಫಲರಾದರು.
      ಬಳಿಕ ನಡೆದು ಬೆಳವಣಿಗೆಯಲ್ಲಿ ಕೆಲವು ನಾಯಕರಿಗೆ ಪಕ್ಷ ವಿರೋಧಿ ಚಟುವಟಿಕೆಯ ಪಟ್ಟ ಕಟ್ಟಿ ಪಕ್ಷದಿಂದ ಉಚ್ಚಾ ಟಿಸಲಾಗಿತ್ತು. ಉಚ್ಚಾಟಿತರು ಇದರಿಂದ ಕೆಂಡಾಮಂಡಲಾಗಿ ದ್ದರು. ಕೆಲವರು ಪತ್ರಿಕಾ ಹೇಳಿಕೆ ನೀಡಿ ಅಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ನಾಯಕರು ನ್ಯಾಯಕ್ಕಾಗಿ ದೈವದ ಮೊರೆ ಹೋಗಿದ್ದರು. ಬುಧವಾರ ರಾಹುಲ್ ಗಾಂಧಿಯವ ಅವರ ಸಂಸತ್ ಸದಸ್ಯತನ ಅನರ್ಹತೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ  ಉಚ್ಚಾಟಿತ ನಾಯಕರು ಭಾಗವಿಸಿ ತಮ್ಮ ಪಕ್ಷ ನಿಷ್ಠೆಯನ್ನು ಪ್ರದರ್ಶಿಸಿದ್ದರು. ಇದು ಕೃಷ್ಣಪ್ಪ ಬಣದವರ ಪಿತ್ತ ನೆತ್ತಿಗೇರಸಿತ್ತು. ಇದೇ ಬೇಗುದಿ ಕಡಬದ ಪರಾಮರ್ಶೆ ಸಭೆಯಲ್ಲಿ ಸ್ಪೋಟಗೊಂಡಿದೆ. ಅಂಬೇಡ್ಕರ್ ಭವನದಲ್ಲಿ ಸಭೆ ಆರಂಭವಾಗಿ ಉಚ್ಚಾಟಿತ ಮುಖಂಡರು ಆಗಮಿಸತ್ತಿದ್ದಂತೆ ಕೃಷ್ಣಪ್ಪ ಅವರ  ಬಣದ ಅಕ್ರೋಶಕ್ಕೆ ಕಾರಣವಾಯಿತು. ಸಭೆ ಮಾತಿನ ಚಕಮುಖಿ ಮೂಲಕವೇ ಪ್ರಾರಂಭವಾಯಿತು. ಸ್ವತಃ ಕೃಷ್ಣಪ್ಪ ಅವರೇ ಉಚ್ಚಾಟಿತ ಮುಖಂಡರಿಗೆ ನೀವು ಈ ಸಭೆಗೆ ಯಾಕೆ ಬಂದಿದ್ದೀರಿ, ನಿಮಗೆ ಮಾನ ಮರ್ಯಾದೆ ಇಲ್ಲವೇ ಎಂದು ಛೇಡಿಸಿದ್ದಾರೆ ಎನ್ನಲಾಗಿದೆ. ಬಳಿಕ ಮುಖಂಡರೋರ್ವರು ಸಭೆಯಲ್ಲಿ ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ಚಾಟಿತರು ಭಾಗವಹಿಸಲು ಅವಕಾಶವಿದೆಯೇ ಎಂದು ಪ್ರಶಸ್ನಿಸಿದರು. ಅಷ್ಟೇ ಸಾಕಾಯಿತು ಮಾತಿನಚಕಮುಖಿ, ಪರಸ್ಪರ ಹಲ್ಲೆ, ತಳ್ಳಾಟ ನಡೆಯುವ ತನಕ ಮುಟ್ಟಿತು. ಕೃಷ್ಣಪ್ಪ ಬಣದ ಮೂರು ನಾಲ್ಕು ಮಂದಿ ಮುಖಂಡರು ನಂದಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ ಆರೋಪ ವ್ಯಕ್ತವಾಗಿದೆ. ಮಾರಾಮಾರಿ ನಡೆದಿರುವ ವಿಡಿಯೋಗಳು ಲಭ್ಯವಾಗಿದೆ. ನಂದಕುಮಾರ್ ಬಣದ ಸಾಮಾಜಿಕ ಜಾಲತಾಣ ನಿರ್ವಹಣ ಮಾಡಿದ ಮುಖಂಡ ರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಮಧ್ಯೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿ ಗೊಳಿಸಿದ್ದಾರೆ. ಆದರೂ ಇತ್ತಂಡಗಳ ಮಧ್ಯೆ ಅಸಮಾಧಾನ, ಸಿಟ್ಟು ಸೇಡು ಬೂದಿ ಮುಚ್ಚಿದ ಕೆಂಡದಂತಿದ್ದು ಕೊತಕೊತನೆ ಕುದಿಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಹಿಂದೆ ಕೂಡಾ ಒಮ್ಮೆ ಕಡಬದಲ್ಲಿ ಪಕ್ಷದ ಕಛೇರಿಯಲ್ಲಿಯೇ ಇತ್ತಂಡಗಳ ಮಧ್ಯೆ ವಾಕ್ಸಮರ ನಡೆದು ಕೈಮಿಲಾಯಿಸುವ ಹಂತಕ್ಕೆ ಹೋಗಿತ್ತು ಎಂದು ಕೆಲವು ಮುಖಂಡರು ಹೇಳಿಕೊಳ್ಳುತ್ತಿ ದ್ದಾರೆ.






















       



 

          


     ಈಗ ಸಿಂಗಲ್ ನಂಬರ್ ಲಾಟರಿ ಇಲ್ಲ. ಎಲ್ಲಿಯಾದರೂ ಅದು ‌ಈವತ್ತು ಇರುತ್ತಿದ್ದರೆ ಜನ ಮನೆ ಮಠ ಬಿಟ್ಟು ಬೀದಿ ಬೀದಿಗಳಲ್ಲಿ ಇರುತ್ತಿದ್ದರು. ಇದೀಗ ಸುಳ್ಯದಲ್ಲಿ ಕೇರಳ ರಾಜ್ಯದ ಲಾಟರಿ ಮೇಲೆ ಬೆಟ್ಟಿಂಗ್ ಶುರುವಾಗಿದ್ದು ಬಡ ಜನರು ಕೋಮಣ ಮಾತ್ರ ಉಳಿದರೆ ಸಾಕು ಎಂಬಲ್ಲಿ ತನಕ ದುಡ್ಡು ಕಟ್ಟೀ ಕಟ್ಟೀ ಹೈರಾಣಾಗಿ ಹೋಗಿದ್ದಾರೆ.
     ಹಾಗಂತ ಇದು ಕೂಡ ಒಂದು ಜೂಜು. ಕೇರಳ ಸರ್ಕಾರ ಡೈಲಿ ಲಾಟರಿ ಡ್ರಾ ಮಾಡುತ್ತದೆ. ಅಲ್ಲಿನ ವಿನ್ನಿಂಗ್ ನಂಬರ್ ಮೇಲೆ ಇಲ್ಲಿ ಸುಳ್ಯದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಉದಾ ಹರಣೆಗೆ ಕೇರಳ ಲಾಟರಿಯ ವಿನ್ನಿಂಗ್ ನಂಬರ್ ನ ಲಾಸ್ಟ್ ಮೂರು ಸಂಖ್ಯೆ 250 ಎಂದು ನೀವು ಹತ್ತು ರೂಪಾಯಿ ಬೆಟ್ ಕಟ್ಟಿದರೆ ನಿಮ್ಮ ಅಜ್ಜಿ ಪುಣ್ಯಕ್ಕೆ ಅದೇ ಸಂಖ್ಯೆ ಪಾಸಾದರೆ ನಿಮಗೆ ಒಂದು ಸಾವಿರ ಬರುತ್ತದೆ. ಬಾರದಿದ್ದರೆ ಹತ್ತು ಗೋವಿಂದ. ಅದೇ ರೀತಿ ವಿನ್ನಿಂಗ್ ನಂಬರ್ ನ ಕೊನೇಯ ಎರಡು ಸಂಖ್ಯೆಗೆ ಅಂದರೆ 50 ಎಂದು ಹತ್ತು ರೂಪಾಯಿ ಕಟ್ಟಿದರೆ ಅದು ಪಾಸಾದರೆ ನಿಮಗೆ ನೂರು ರೂಪಾಯಿ ಕೊಡಲಾಗುವುದು. ಅದೇ ರೀತಿ ವಿನ್ನಿಂಗ್ ನಂಬರ್ ನಲ್ಲಿ    ನಿಮ್ಮ ಹತ್ತು ರೂಪಾಯಿಗೆ ಕೊನೆಯ ನಾಲ್ಕು ಸಂಖ್ಯೆ ಪಾಸಾದರೆ ನಿಮಗೆ ಐದು ಸಾವಿರ ಸಿಗುತ್ತದೆ. ಇದು ಬೆಟ್ಟಿಂಗ್ ನ ರೂಪುರೇಷೆ.
   ಸುಳ್ಯ ಗಾಂಧಿನಗರದ ಮೊಬೈಲ್ ಶಾಪ್ ಒಂದರಲ್ಲಿ ಈ ಕೇರಳ ಬೆಟ್ಟಿಂಗ್ ಗೆ ದುಡ್ಡು ಕಲೆಕ್ಷನ್ ಮಾಡಲಾಗುತ್ತಿದೆ. ಬಡವರು, ಕಾಲೇಜು ವಿದ್ಯಾರ್ಥಿಗಳು, ದಿನಗೂಲಿ ಕೆಲಸ ದವರು, ಟೈಟ್ ಮಾಸ್ತರ್ ಗಳು, ನಿರುದ್ಯೋಗಿಗಳು ಈ ಬೆಟ್ಟಿಂಗ್ ನಲ್ಲಿ ಕೋಮಣದವರೆಗೆ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಿಯವರೆಗೆ ಇದರ ಅತಿರೇಕ ಮುಂದುವರೆದಿದೆ ಅಂದರೆ ಬೆಳಗ್ಗೆ ಎದ್ದು ಮೊದಲು ಯಾವ ನಂಬರ್ ಕಣ್ಣಿಗೆ ಬೀಳುತ್ತ ದೋ ಅದೇ ನಂಬರ್ ಮೇಲೆ ಸಾವಿರಾರು ರೂಪಾಯಿ ಬೆಟ್ ಕಟ್ಟಿ ಜನ ದುಡ್ಡು ಕಳೆದುಕೊಳ್ಳುತ್ತಿದ್ದಾರೆ. ಆಕ್ಸಿಡೆಂಟ್ ಆದ ಗಾಡಿ ನಂಬರ್, ಬಸ್ ಟಿಕೆಟ್ ನಂಬರ್, ಹೋಟೆಲ್ ಬಿಲ್ ನಂಬರ್, ಮಿಸ್ ಕಾಲ್ ನಂಬರ್ ಹೀಗೆ ಯಾವುದೇ ನಂಬರ್ ಕಂಡರೂ ಸಾಕು ಅದರ ಮೇಲೆ ಅಮಾಯಕ ಜನ ದುಡ್ಡು ಕಟ್ಟಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಸುಳ್ಯ ಪೊಲೀಸರಿಗೆ ಪು ರುಸೊತ್ತು ಸಿಕ್ಕರೆ ಒಮ್ಮೆ ಗಾಂಧಿ ನಗರಕ್ಕೆ ಹೋದರೂ ಸಾಕು ಊಟ ಮಾಡಿ ಬರಬಹುದು.

















       



 

         


    ಅಲ್ಲಿ ಗುತ್ತಿಗಾರು ಹೈಸ್ಕೂಲ್ ನಲ್ಲಿ ಎಂಥ ಉಂಟು ಮಾರಾಯ್ರೆ? ಒಬ್ಬರು ಮಾಸ್ತರ್ ಗುತ್ತಿಗಾರು ಹೈಸ್ಕೂಲ್ ಗೆ ಕಳೆದ ಇಪ್ಪತ್ತು ವರ್ಷಗಳಿಂದ ಮಣ್ಣು ಹೊರುತ್ತಿದ್ದು ಇಲ್ಲೇ ನಿವೃತ್ತಿ ಆಗುವ ಅಪಾಯಗಳಿವೆ. ಶಿಕ್ಷಕರ ವರ್ಗಾವಣೆಯ ಯಾವುದೇ ಕೌನ್ಸಿಲಿಂಗ್ ಗೆ ಪ್ರತ್ಯಕ್ಷವಾಗಿ ಅಥವಾ ಪರೋ ಕ್ಷವಾಗಿ ಹಾಜರಾಗದೆ ತಲೆ ತಪ್ಪಿಸಿಕೊಂಡಿರುವ ಸಾರ್ ಗುತ್ತಿ ಗಾರು ಹೈಸ್ಕೂಲ್ ನಲ್ಲಿಯೇ ಟೆಂಟ್ ಹಾಕಿ ಕುಂತಿದ್ದಾರೆ.
         ಇನ್ನು ಕಳೆದ ವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಂಡಿರುವ ಹೈಸ್ಕೂಲ್ ಸಮಿತಿ ಇನ್ನೂ ಲೆಕ್ಕಾಚಾರ ಇಟ್ಟಿಲ್ಲ. ತಪ್ಪು ತಪ್ಪು ಲೆಕ್ಕ, ಅಂಡಿಗುಂಡಿ ಲೆಕ್ಕ ಮಂಡನೆ ಮಾಡಲು ಸಮಿತಿಗೂ ಹೆದರಿಕೆ ಇದ್ದು ಎಲ್ಲವೂ ಮಾಸ್ತರ್ ಮೇಲೆ ಇದೆ ಎಂದು ತಿಳಿದುಬಂದಿದೆ. ಸದ್ರಿ ಮಾಸ್ತರರನ್ನು ಕಾಂಗ್ರೆಸ್ ಸರ್ಕಾರವಾದರೂ ಟ್ರಾನ್ಸ್ ಫರ್ ಮಾಡಲಿ.

















       



 

        


      ಈತ ಎರುಕಡ್ಪು ಅಣ್ಣಾಚೀ ಮಗ. ಫುಲ್ ಟೈಟ್ ಮಾಸ್ತರ್. ಅಮಲೇರುವ ಎಲ್ಲಾ ಐಟಂಗಳ ದಾಸ ಇವನು. ಇವನ ಅಮಲು ಬಿಡಿಸಲು ಕಂಕನಾಡಿಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇವನಲ್ಲಿ ಎರಡು ಲಕ್ಷದ ಒಂದು ಬೈಕ್ ಇದ್ದು ಅದರಲ್ಲಿ ಇವನ ಸರ್ಕಸ್ ನಿತ್ಯ ಕಲ್ಲು ಗುಂಡಿಯಲ್ಲಿ ನಡೆಯುತ್ತಾ ಇರುತ್ತದೆ.
       ಹಾಗೆಂದು ಈ ಮರಿ ಅಣ್ಣಾಚೀ ಮೇಲೆ ಒಂದು ವಿಚಿತ್ರ ಕಂಪ್ಲೈಂಟ್ ಇದೆ. ಇವನು ಟೈಟ್ ಆದಾಗಲೆಲ್ಲ ಅಣ್ಣಾಚೀ ಕಾಲೊನಿಗಳಿಗೆ ನುಗ್ಗಿ ಅಲ್ಲಿ ಒಣಗಲು ಹಾಕಿದ ಹೆಂಗಸರ ಅಂಗಿ, ಚಡ್ಡಿ ಧರಿಸಿ ಪರಾರಿಯಾಗುವ ಮಂಡೆಸೀಕ್ ಇವನಿಗಿದೆ ಎಂದು ತಿಳಿದುಬಂದಿದೆ. ಈವತ್ತು ಇವನ ಬೈಕ್ ಕಲ್ಲುಗುಂಡಿ ಕೆನರಾ ಬ್ಯಾಂಕ್ ಬಳಿ ಸ್ಕೂಟರ್ ಒಂದಕ್ಕೆ ‌ಡಿಕ್ಕಿ ಹೊಡೆದು ಸ್ಕೂಟರ್ ನವರ ಕೈ ಮುರಿತ ಆಗಿದೆ ಎಂಬ ಮಾಹಿತಿ ಲಭ್ಯ ವಾಗಿದೆ. ಸ್ಥಳಕ್ಕೆ ಬಂದಿದ್ದ ಕಲ್ಲುಗುಂಡಿ ಪೋಲಿಸರು ಅಣ್ಣಾಚೀ ಬೈಕನ್ನು ತೆಗೆದ್ದು ಒಳಗೆ ಇಟ್ಟು ಅಣ್ಣಾಚೀ‌ಯನ್ನು ಹಾಗೆ ಬಿಟ್ಟಿದ್ದಾರೆ. ಇಲ್ಲಿ ಪೋಲಿಸರು ಒಂದು ಮಿಸ್ಟೇಕ್ ಮಾಡಿದ್ದು ಅಣ್ಣಾಚೀ ಬಾಯಿಯಿಂದ ಏನೆಲ್ಲಾ ಪರಿಮಳ ಬರುತ್ತಿದೆ ಎಂದು ಟೆಸ್ಟ್ ಮಾಡಿಸುತ್ತಿದ್ದರೆ ಗಾಂಜಾ ವಾಸನೆ ಗ್ಯಾರಂಟಿ ಬರುತ್ತಿತ್ತು ಎಂದು ಜನ ಮಾತಾಡಿ ಕೊಳ್ಳುತ್ತಿದ್ದಾರೆ. ಆದರೆ ಪಾಪ ಕಲ್ಲುಗುಂಡಿ ಪೋಲಿಸರು ಯಾವ ಪರಿಸ್ಥಿತಿಯಲ್ಲಿ ದ್ದರೋ ಆ ದೇವರಿಗೇ ಗೊತ್ತು
     ಇನ್ನು ಅಲ್ಲಿ ಕಲ್ಲುಗುಂಡಿಯಲ್ಲಿ ಗಾಂಜಾ ವಾಸನೆ ಬರುತ್ತಿದ್ದು ಈಗಾಗಲೇ ಕುತ್ತಿ ಮೀಸೆ ಹುಡುಗರು  ಗಾಳಿಯಲ್ಲಿ ತೇಲುವ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿ ಕೆನರಾ ಬ್ಯಾಂಕ್ ಎದುರು ಇರುವ ಕ್ಯಾಂಟೀನ್ ಒಂದರಲ್ಲಿ ಹೊಗೆ ಬಿಡಲು ಹುಡುಗರು ಬಂದು ಜಮಾವಣೆ ಆಗುತ್ತಾರೆ ಎಂಬ ಮಾಹಿತಿ ಇದೆ. ಪಾಪ ಕ್ಯಾಂಟೀನ್ ರವರಿಗೆ ಇವರನ್ನು ಹೊರ ಹಾಕಲೂ ಗೊತ್ತಿಲ್ಲ, ಒಳಗೆ ಬಿಡಲೂ ಆಗಲ್ಲ. ಅವರ ವ್ಯಾಪಾರ ಅಷ್ಟೇ.

















       



 

       


      ಪುತ್ತೂರು, ಕಡಬ ತಾಲೂಕು ಮಟ್ಟದ ‌ಜುಗಾರಿಕೋರರು ಇದೀಗ ಸವಣೂರು ಸಮೀಪದ ಚಾಪಳ್ಳ ಬಿರುಮಜಲಿನಲ್ಲಿ ಹೊಸ ಜುಗಾರಿ ಕಲ ಹಾಕಿದ್ದು ಪೋಲಿಸ್ ದಾಳಿ ಬಗ್ಗೆ  ಇದು ಸೇಫ್ ಜಾಗ ಎಂದು ತಿಳಿದುಬಂದಿದೆ. ಈ ಜಾಗ ಕುದ್ಮಾರು, ಸವಣೂರು ಗ್ರಾಮಗಳ ಗಡಿಯಲ್ಲಿದ್ದು, ಇಲ್ಲಿ ಒಂದು ದೊಡ್ದ ಮೈದಾನದ ಬದಿಯಲ್ಲಿ ಜುಗಾರಿ ನಡೆಯುತ್ತಿದೆ. ಇಲ್ಲಿ ಜುಗಾರಿಕೋರಿಗೆ ಪೂರಕ ವಾತಾವರಣ ಇದ್ದು ಓಡೋಡಿ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಿದೆ. ಎಲ್ಲಿಯಾದರೂ ಪೋಲಿಸರು ಈಚೆ ಗ್ರೌಂಡ್ ಕಡೆಯಿಂದ ಬಂದರೆ ಆಚೆ ಅಕೇಶಿಯಾ ಕೂಪಲ್ಲಿ ಪದ್ರಾಡ್ ಹಾಕ ಬಹುದು. ಅಥವಾ ಪೋಲಿಸರು ಅಕೇಶಿಯಾ ಕೂಪಿಂದ  ಬಂದರೂ ಈಚೆ ಗ್ರೌಂಡ್ ಗೆ ಇಳಿದು ಒಯ್ತ ಬುಡಿ ಮಾಡಬಹುದು ಎಂಬುದು ಜುಗಾರಿ ಕೋರರ ಲೆಕ್ಕಾಚಾರ. ಈ ಮೈದಾನದಲ್ಲಿ ಆಚೆ ಓಡಿ ಕುಮಾರಧಾರ ಸಂಕ ದಾಟಿದರೆ  ಜುಗಾರಿಕೋರರು ಕಡಬ ಪೊಲೀಸರ ಸ್ವತ್ತು. ಆ ದಿಕ್ಕು ಬದಲಿಸಿ ಈಚೆ ತೆನ್ಕಯಿ ದಿಕ್ಕಿನಲ್ಲಿ ಓಡಿದರೆ ಜುಗಾರಿಕೋರರು ಬೆಳ್ಳಾರೆ ಪೋಲಿಸರ ಆಪ ತ್ಪಾಭಾಂಧವರು. ಇಲ್ಲಿ ಆಚೆ ನಿಂತರೆ ಕಡಬ ಠಾಣಾ ವ್ಯಾಪ್ತಿ, ಈಚೆ  ನಿಂತರೆ ಬೆಳ್ಳಾರೆ ಪೋಲಿಸರ ವ್ಯಾಪ್ತಿ.
        ಹಾಗಂತ ಇಲ್ಲಿ ಈ ಜುಗಾರಿ ಜನರಿಂದ ಜನ ರೋಸಿ ಹೋಗಿದ್ದಾರೆ. ಒಂದು ಮನೆಯವರಂತೂ ಮನೆ ಸೇಲ್ ಮಾಡಲು ಹೊರಟಿದ್ದಾರೆ. ಮಂಗಳೂರು ಕಡೆಯಿಂದಲೂ ಇಲ್ಲಿಗೆ ಜಿಲ್ಲಾ ಮಟ್ಟದ ‌ಜುಗಾರಿಕೋರರು ಬರುತ್ತಾರೆ ಎಂಬ  ಮಾಹಿತಿ ಲಭ್ಯವಾಗಿದೆ. ಸದ್ರಿ ಅಡ್ಡೆಗೆ  ಮಸೀದಿಯೊಂದರ ಪದಾ ಧಿಕಾರಿಯೂ ಬಂದು ಜುಗಾರಿ ಆಟಕ್ಕೆ ಕೂರುತ್ತಾರೆ ಎಂಬ ಮಾಹಿತಿ ಲಭಿಸಿದೆ. ಬೆಳ್ಳಾರೆ ಪೋಲಿಸರು ಒಂದು ಗಳಿಗೆ ಪುರುಸೊತ್ತಿದ್ದರೆ ಬಿರುಮಜಲಿಗೆ ಬಂದು ಹೋಗೋದು ಜುಗಾರಿ ಕೋರರ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

















       



 

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget