ಒಂದು ನಗರದ ಜೀವನಾಡಿಗಳು ಅಂದರೆ ಆಟೋ ರಿಕ್ಷಾಗಳು. ಇವರ ನಿಸ್ವಾರ್ಥ ಸೇವೆ ನಾಗರಿಕ ಜಗತ್ತಿನಲ್ಲಿ ಶ್ಲಾಘನೀಯವಾದುದು. ಒಂದು ದಿನ ಆಟೋ ರಿಕ್ಷಾಗಳು ಇಲ್ಲದಿದ್ದರೆ ಇಡೀ ನಗರವೇ ಸ್ಥಬ್ದ ಆದಂತೆ. ಆಟೋ ಬಗ್ಗೆ ಯಾಕೆ ಇಷ್ಟೆಲ್ಲ ಅಂದರೆ ಈವತ್ತು ಬಿಎಂಎಸ್ ಸ್ಥಾಪಕರ ದಿನಾಚರಣೆ. ಸುಳ್ಯ ತಾಲೂಕಿನ ಗುತ್ತಿಗಾರು ಜಂಕ್ಷನ್ ಆಟೋ ಚಾಲಕರು ಈವತ್ತು ಬಿಎಂಎಸ್ ಸ್ಥಾಪಕರ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ.
ಬಿಎಂಎಸ್ ಗುತ್ತಿಗಾರು ಘಟಕ ಮತ್ತು ಸುಳ್ಯ ಆಟೋ ಚಾಲಕರ ಸಂಘ (ರಿ) ಇದರ ಆಶ್ರಯದಲ್ಲಿ ಈವತ್ತು ಬೆಳಿಗ್ಗೆ ಗುತ್ತಿಗಾರು ಆಟೋ ನಿಲ್ದಾಣದಲ್ಲಿ ಸ್ಥಾಪಕರ ಫೋಟೋಗೆ ಹಾರ ಹಾಕುವ ಮೂಲಕ ಅವರ ಸಂದೇಶವನ್ನು ನೆನಪಿಸಿ ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬಿಎಂಎಸ್ ಸಂಘಟ ನೆಯ ಧ್ಯೇಯ ವಾಕ್ಯಗಳನ್ನು ಕೊಂಡಾಡಲಾಯಿತು. ಆ ಮೂಲಕ ಗುತ್ತಿಗಾರು ಆಟೋ ನಿಲ್ದಾಣದಲ್ಲಿ ಈವತ್ತು ಹಬ್ಬದ ವಾತಾವರಣ ಸೃಷ್ಟಿಯಾಯಿತು. ಗುತ್ತಿಗಾರಿನಲ್ಲಿ ಈವತ್ತು ಆಟೋ ಚಾಲಕರ ರೈಸಿಂಗ್, ಮಿಂಚಿಂಗ್ ಜೋರಾಗಿತ್ತು.
Post a Comment