ಹತ್ರ ಹತ್ರ ಆರು ತಿಂಗಳು ಕಳೆದು ಹೋಗಿದೆ ಗುತ್ತಿಗಾರು ಹೈಸ್ಕೂಲ್ ಸುವರ್ಣ ಮಹೋತ್ಸವ ಮುಗಿದು. ಅದರ ಸವಿ ನೆನಪು, ಕಹಿ ನೆನಪು ಎಲ್ಲವೂ ಮಸ್ಕ್ ಮಸ್ಕ್ ಆಗುತ್ತಾ ಬರುತ್ತಿದ್ದರೂ ಒಂದು ನೆನಪು ಮಾತ್ರ ಗುತ್ತಿಗಾರು ಜನತೆ ಯನ್ನು ಇನ್ನೂ ಕಾಡುತ್ತಿದೆ ಮಾರಾಯ್ರೆ. ಆ ವಿಷಯ ಜನರನ್ನು ಕಾಡಿ ಕಾಡಿ ಅವರ ಬಿ.ಪಿ ಕೊಡಿ ಏರಿಸಿ ಬಿಟ್ಟಿದೆ. ಸುವರ್ಣ ಮಹೋತ್ಸವದ ಲೆಕ್ಕಾಚಾರ ಆಗಿಲ್ಲ ಗಡ. ಯಾಕೆ ಆಗಿಲ್ಲ ಎಂದು ಕೇಳಲೂ ಯಾರಿಗೂ ಬೆಟ್ರಿ ಇಲ್ಲ.
ಕಳೆದ ಆರು ತಿಂಗಳ ಹಿಂದೆ ಗುತ್ತಿಗಾರು ಹೈಸ್ಕೂಲ್ ಗೆ ಸುವರ್ಣ ಮಹೋತ್ಸವ ಸಂಭ್ರಮ. ಸಮಾರಂಭವನ್ನು ಗೌಜಿ ಯಿಂದ ಮಾಡಲು ಹೈಸ್ಕೂಲ್ ಹಳೇ ವಿದ್ಯಾರ್ಥಿಗಳು, ಹೊಸ ವಿದ್ಯಾರ್ಥಿಗಳು, ಊರ ಪರ ಊರುಗಳ ಮಹನೀಯರುಗಳು, ಸಾರ್ವಜನಿಕರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದರು. ಸುವರ್ಣ ಮಹೋತ್ಸವದ ಹೆಸರಿನಲ್ಲಿ ಅಂದಾಜು ಇಪ್ಪತ್ತು ನಾಲ್ಕು ಲಕ್ಷ ಕಲೆಕ್ಷನ್ ಕೂಡ ಮಾಡಲಾಯಿತಂತೆ ಗಡ. ಆದರೆ ಸುವರ್ಣ ಮಹೋತ್ಸವ ಕಳೆದು ಆರು ತಿಂಗಳು ಕಳೆದರೂ ಇನ್ನೂ ಖರ್ಚು ವೆಚ್ಚಗಳ ಲೆಕ್ಕಾಚಾರ ಆಗಿಲ್ಲ ಗಡ. ಅದರಲ್ಲೂ ಸುವರ್ಣ ಮಹೋತ್ಸವ ಸಮಾರಂಭವನ್ನು ಗುತ್ತಿಗಾರುನ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತೆ ಆಚ ರಿಸುವ ಬದಲು ಕಲೆಕ್ಷನ್ ಆದ 24 ರಲ್ಲಿ ಎಷ್ಟು ಕಿಸೆಗೆ ಹಾಕಿ ಕೊಳ್ಳುವುದು ಎಂದೇ ಲೆಕ್ಕಾಚಾರ ಮಾಡಿ ಕಡೇಗೆ ಫಂಕ್ಷನ್ ಕೂಡ ಆಕಳಿಕೆ ತರಿಸಿತ್ತು. 24 ಲಕ್ಷ ಕಲೆಕ್ಷನ್ ಮಾಡಿದ ಮಂದಿ ದುಡ್ಡು ಕೊಟ್ಟ ಜನರಿಗೆ ಒಂದು ಒಳ್ಳೆಯ ಊಟವನ್ನೂ ಹಾಕಿಸದೆ ದೇವಸ್ಥಾನ ಒಂದರ ಅನ್ನಪ್ರಸಾದ ಕೊಟ್ಟು ಕೈ ತೊಳೆದುಕೊಂಡಿದ್ದರು. ಆಯ್ತು ಅವರ ಊಟವೂ ಬೇಡ, ಟಿಫಿನೂ ಬೇಡ, ಸುವರ್ಣ ಮಹೋತ್ಸವದ ಹೆಸರಿನಲ್ಲಿ ಕಲೆಕ್ಷನ್ ಆದ ದುಡ್ಡಿನ ಲೆಕ್ಕ, ಸಮಾರಂಭದ ಖರ್ಚು ವೆಚ್ಚಗಳು, ಉಳಿತಾಯದ ಹಣ ಇವುಗಳ ಲೆಕ್ಕ ಕೊಡಿ, ಒಂದು ಮೀಟಿಂಗ್ ಮಾಡಿ ಅಂದರೆ ನಾಳೆ ಗಡ, ನಾಡಿದ್ದು ಗಡ, ಮುಂದಿನ ವಾರ ಗಡ ಅಂತ ಗಡ ಗಡ ಮಾತಾಡಿ ಕ್ಯಾಲೆಂಡರ್‌ನ ಎಲ್ಲಾ ಡೇಟುಗಳು ಮುಗಿದು ಹೋದರೂ ಇನ್ನೂ ಹಾವು ಬಿಟ್ಟಿಲ್ಲ.
ಹಾಗಾದರೆ ಸುವರ್ಣ ಮಹೋತ್ಸವದ ದುಡ್ಡು ಯಾರ ಕಿಸೆಯಲ್ಲಿದೆ? ಅವರು ಯಾಕೆ ಲೆಕ್ಕಾಚಾರ ಇಡುತ್ತಿಲ್ಲ? ಸುವರ್ಣ ಮಹೋತ್ಸವದ ಹೆಸರಿನಲ್ಲಿ ಎಷ್ಟು ಗುಳುಂ ಮಾಡಿರ ಬಹುದು? ಈ ಬಗ್ಗೆ ಕಮಿಟಿಯಲ್ಲಿ ಕೇಳಿದರೆ ಅವರು ಬಂಟಮಲೆಯತ್ತ ಕೈ ತೋರಿಸಿ ಪಗೆಲ ನಗು ನಗುತ್ತಾರೆ. ಹೈಸ್ಕೂಲ್ ಮಾಸ್ತರ್ ಗಳಲ್ಲಿ ಕೇಳಿದರೆ ಅವರು ಬೇಂಗ ಮಲೆ ತೋರಿಸುತ್ತಾರೆ. ಅಂತೂ ಇಂತೂ ಕಡೇಗೂ ಸುವರ್ಣ ಮಹೋತ್ಸವದ ಹೆಸರಿನಲ್ಲಿ ಉಂಡೂ ಹೋದವನು ಕೊಂಡೂ ಹೋದವನು ಯಾರೆಂದು ಜನತೆಗೆ ಮಸ್ಕ್ ಮಸ್ಕ್ ಆಗಿ ಅರ್ಥ ಆಗಿದೆ. ಇನ್ನು ಅವನನ್ನು ಕರೆ ತಂದು ಮಂಡಲದಲ್ಲಿ ಕೂಂದ್ರಿ ಸುವುದಷ್ಟೇ ಕೆಲಸ. ಆ ಕೆಲಸ ಮಾಡುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅವಳೆಲ್ಲಿದ್ದಾಳೆ ಬಾಕಿಲದ ಮುಸ್ಲಿಂ ಆಂಟಿ ಐಶೂ?
Post a Comment