ಪುತ್ತೂರು, ಕಡಬ ತಾಲೂಕು ಮಟ್ಟದ ಜುಗಾರಿಕೋರರು ಇದೀಗ ಸವಣೂರು ಸಮೀಪದ ಚಾಪಳ್ಳ ಬಿರುಮಜಲಿನಲ್ಲಿ ಹೊಸ ಜುಗಾರಿ ಕಲ ಹಾಕಿದ್ದು ಪೋಲಿಸ್ ದಾಳಿ ಬಗ್ಗೆ ಇದು ಸೇಫ್ ಜಾಗ ಎಂದು ತಿಳಿದುಬಂದಿದೆ. ಈ ಜಾಗ ಕುದ್ಮಾರು, ಸವಣೂರು ಗ್ರಾಮಗಳ ಗಡಿಯಲ್ಲಿದ್ದು, ಇಲ್ಲಿ ಒಂದು ದೊಡ್ದ ಮೈದಾನದ ಬದಿಯಲ್ಲಿ ಜುಗಾರಿ ನಡೆಯುತ್ತಿದೆ. ಇಲ್ಲಿ ಜುಗಾರಿಕೋರಿಗೆ ಪೂರಕ ವಾತಾವರಣ ಇದ್ದು ಓಡೋಡಿ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಿದೆ. ಎಲ್ಲಿಯಾದರೂ ಪೋಲಿಸರು ಈಚೆ ಗ್ರೌಂಡ್ ಕಡೆಯಿಂದ ಬಂದರೆ ಆಚೆ ಅಕೇಶಿಯಾ ಕೂಪಲ್ಲಿ ಪದ್ರಾಡ್ ಹಾಕ ಬಹುದು. ಅಥವಾ ಪೋಲಿಸರು ಅಕೇಶಿಯಾ ಕೂಪಿಂದ ಬಂದರೂ ಈಚೆ ಗ್ರೌಂಡ್ ಗೆ ಇಳಿದು ಒಯ್ತ ಬುಡಿ ಮಾಡಬಹುದು ಎಂಬುದು ಜುಗಾರಿ ಕೋರರ ಲೆಕ್ಕಾಚಾರ. ಈ ಮೈದಾನದಲ್ಲಿ ಆಚೆ ಓಡಿ ಕುಮಾರಧಾರ ಸಂಕ ದಾಟಿದರೆ ಜುಗಾರಿಕೋರರು ಕಡಬ ಪೊಲೀಸರ ಸ್ವತ್ತು. ಆ ದಿಕ್ಕು ಬದಲಿಸಿ ಈಚೆ ತೆನ್ಕಯಿ ದಿಕ್ಕಿನಲ್ಲಿ ಓಡಿದರೆ ಜುಗಾರಿಕೋರರು ಬೆಳ್ಳಾರೆ ಪೋಲಿಸರ ಆಪ ತ್ಪಾಭಾಂಧವರು. ಇಲ್ಲಿ ಆಚೆ ನಿಂತರೆ ಕಡಬ ಠಾಣಾ ವ್ಯಾಪ್ತಿ, ಈಚೆ ನಿಂತರೆ ಬೆಳ್ಳಾರೆ ಪೋಲಿಸರ ವ್ಯಾಪ್ತಿ.
ಹಾಗಂತ ಇಲ್ಲಿ ಈ ಜುಗಾರಿ ಜನರಿಂದ ಜನ ರೋಸಿ ಹೋಗಿದ್ದಾರೆ. ಒಂದು ಮನೆಯವರಂತೂ ಮನೆ ಸೇಲ್ ಮಾಡಲು ಹೊರಟಿದ್ದಾರೆ. ಮಂಗಳೂರು ಕಡೆಯಿಂದಲೂ ಇಲ್ಲಿಗೆ ಜಿಲ್ಲಾ ಮಟ್ಟದ ಜುಗಾರಿಕೋರರು ಬರುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ರಿ ಅಡ್ಡೆಗೆ ಮಸೀದಿಯೊಂದರ ಪದಾ ಧಿಕಾರಿಯೂ ಬಂದು ಜುಗಾರಿ ಆಟಕ್ಕೆ ಕೂರುತ್ತಾರೆ ಎಂಬ ಮಾಹಿತಿ ಲಭಿಸಿದೆ. ಬೆಳ್ಳಾರೆ ಪೋಲಿಸರು ಒಂದು ಗಳಿಗೆ ಪುರುಸೊತ್ತಿದ್ದರೆ ಬಿರುಮಜಲಿಗೆ ಬಂದು ಹೋಗೋದು ಜುಗಾರಿ ಕೋರರ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.
Post a Comment