ಹಾಗೆಂದು ಕಡಬ ಪೇಟೆಯಲ್ಲಿ ಸಾಕು ಪ್ರಾಣಿಗಳ ಕಿರಿಕ್ ಇಂದು ನಿನ್ನೆಯದಲ್ಲ. ಕಡಬದ ಅಷ್ಟೂ ನಾಯಿಗಳಿಗೆ ರಸ್ತೆಯೇ ಮನೆಯಂಗಳ. ಎಲ್ಲಾ ಆಡುಗಳಿಗೆ ಉಪ್ಪಿನಂಗಡಿ- ಸುಬ್ರ ಹ್ಮಣ್ಯ ರಸ್ತೆಯೇ ವಿಹಾರ ಧಾಮ. ಇನ್ನು ಕೋಳಿಗಳು, ಪುಚ್ಚೆ, ಪೆತ್ತ, ಪೆತ್ತದ ಮಕ್ಕಳು, ಗಂಡ, ಎರ್ಮೆ, ಪಾರೋಳು, ಗೋಣ ಹೀಗೆ ಎಲ್ಲಾ ಸಾಕು ಪ್ರಾಣಿಗಳ ಸಂತೆ ಕಡಬದಲ್ಲಿ ನಿತ್ಯ ನೂತನ. ಹಿಂದೆ ಕಡಬ ಪಂಚಾಯತ್ ಅಧ್ಯಕ್ಷರಾಗಿದ್ದ ಹನೀಫ್ ಹಾಜಿ ಕಾಲದಲ್ಲಿ ಸಾಕು ಪ್ರಾಣಿಗಳ ವಂಶಸ್ಥರೆಲ್ಲರಿಗೆ ನೋಟಿಸ್ ಕೊಟ್ಟು ಬಿಸಿ ಮುಟ್ಟಿಸಲಾಗಿತ್ತು.
ಇದೀಗ ಆ ಬಿಸಿ ಆರಿದೆ. ಇದೀಗ ಕಡಬ ತುಂಬಾ ಬೌಬೌ, ಮೇ......, ಅಂಬಾ ಗಳದ್ದೇ ಕಾರುಬಾರು. ಇವುಗಳ ಉಪದ್ರದಿಂದಾಗಿ ಎಷ್ಟೋ ದ್ವಿಚಕ್ರ ವಾಹನ ಸವಾರರು ಕೈಕಾ ಲುಗಳನ್ನು ಮುರಿದುಕೊಂಡಿದ್ದಾರೆ. ಪಟ್ಟಣ ಪಂಚಾಯಿತಿಗೆ ಈ ಬಗ್ಗೆ ಗೊತ್ತೇ ಇಲ್ಲ. ಪಂಚಾಯಿತಿಗೆ ಕಡಬದಲ್ಲಿ ನಾಯಿ ಬೊಗಳೋದು ಕೇಳಲ್ಲ, ರಸ್ತೆಯ ದನ ಕಾಣಲ್ಲ. ಇದಕ್ಕೆಲ್ಲ ಕಿರೀಟ ಎಂಬಂತೆ ನನ್ನ ಫ್ರೆಂಡ್ ಒಬ್ಬರು ಕಡಬ ರಸ್ತೆಗೆ ಕುದುರೆ ಯೊಂದನ್ನು ಬಿಟ್ಟು ನಾಯಿಗಳಿಗೆ ಮತ್ತು ಆಡುಗಳಿಗೆ ಒಳ್ಳೇ ಕಂಪೆನಿ ಕೊಟ್ಟಿದ್ದಾರೆ. ಈ ಕುದ್ರೆ ಇದ್ದವರ ತೋಟಕ್ಕೆಲ್ಲ ನುಗ್ಗೋದು, ಅವರು ಇದನ್ನು ಅಶ್ವಮೇಧದ ಕುದುರೆ ಕಟ್ಟಿದ ಹಾಗೆ ಕಟ್ಟಿ ಹಾಕೋದು ಮಾಮೂಲು. ಇವರಿಗೆ ಯಾಕೆ ಮಾರಾಯ್ರೆ ಕುದುರೆ? ಈ ಬಗ್ಗೆ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇನ್ನು ಕಡಬ ರಸ್ತೆ ಬದಿಯಲ್ಲಿ ಅಂಚಿಂಚಿ ನಡೆದಾಡಲೂ ಕಷ್ಟ ಆಗಬಹುದು.
Post a Comment