ಕೊಡಗಿನಲ್ಲಿ ಕೊಡವರ ಮೇಲೆ ಹಲ್ಲೆಗಳು ವ್ಯವಸ್ಥಿತವಾಗಿ ಮುಂದುವರೆಯುತ್ತಿದೆ. ಒಂದಲ್ಲ ಎರಡಲ್ಲ ಬೇರೆ ಬೇರೆ ಕಾರಣಗಳಿಗಾಗಿ ಕೊಡವರ ತವರಿನಲ್ಲೇ ಕೊಡ ವರನ್ನು ಸದೆ ಬಡಿಯುವ ಕೆಲಸ ಸದ್ದಿಲ್ಲದೆ ಶುರುವಾಗಿದೆ. ಇದಕ್ಕೆ ಪೂರಕವಾದ ಘಟನೆ ಮೊನ್ನೆ ಮಡಿಕೇರಿಯಲ್ಲಿ ನಡೆದಿದೆ.
ಮೊನ್ನೆ ಮಡಿಕೇರಿ ನಗರ ಸಭಾ ಸದಸ್ಯ ಕಾಳಚಂಡ ಅಪ್ಪಣ್ಣ ಮೇಲೆ ಅವರದೇ ವಾರ್ಡ್ ನ ಪುಂಡ ಪೋಕ್ರಿಗಳು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಮಡಿಕೇರಿ ಸಿಟಿ ಮೈತ್ರಿ ಜಂಕ್ಷನ್ ಬಳಿ ಇರುವ ಹೋಟೆಲ್ ಮಂದಿ ಮತ್ತು ಅಪ್ಪಣ್ಣ ನಡುವೆ ವಾರ್ಡ್ ಗೆ ಸಂಬಂಧಿಸಿದ ಒಂದು ವಿವಾದ ಇದ್ದು ಮೊನ್ನೆ ಅದು ತಾರಕಕ್ಕೇರಿ ಅಪ್ಪಣ್ಣ ಮೇಲೆ ಹಲ್ಲೆಯಾಗಿದೆ. ಒಬ್ಬ ನಗರ ಸಭಾ ಸದಸ್ಯನ ಮೇಲೆ ಅವನದೇ ವಾರ್ಡ್ ನ ಜನ, ಅದರಲ್ಲೂ ಕೊಡವೇತರ ಜನ ಹಲ್ಲೆ ನಡೆಸುತ್ತಾರೆಂದರೆ ಅದೊಂದು ವಿಪರ್ಯಾಸವೇ ಸರಿ. ಸದ್ರಿ ಹೋಟೆಲ್ ನ ದಾಖ ಲೆಗಳ ಬಗ್ಗೆಯೂ ಸಂಶಯಗಳಿದ್ದು ರೋಡ್ ಮಾರ್ಜಿನನ್ನು ಹೋಟೆಲ್ ನುಂಗಿ ನೀರು ಕುಡಿದಿದೆ ಎಂದು ತಿಳಿದುಬಂದಿದೆ.
ಇದೀಗ ಅಪ್ಪಣ್ಣ ಆಸ್ಪತ್ರೆ ಪಾಲಾಗಿದ್ದು ಮಡಿಕೇರಿ ಪೋಲಿಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಬ್ಯಾಡ್ ಬಾಯ್ ಗಳನ್ನು ಮಡಿಕೇರಿ ಪೋಲಿಸರು ಬೆಂಡೆತ್ತಿದ್ದಾರೆ. ಅದೂ ಅಲ್ಲದೆ ಮೈತ್ರಿ ಜಂಕ್ಷನ್ ನಲ್ಲಿ ಗಾಂಜಾ ವಾಸನೆ ಕೂಡ ಇದೆ ಎಂದು ತಿಳಿದುಬಂದಿದೆ.
ಇಲ್ಲಿ ವಿಷಯ ಅದಲ್ಲ. ಒಬ್ಬ ಕೊಡವನ ಮೇಲೆ ಒಬ್ಬ ಅಲೆಮಾರಿ ಮಲೆಯಾಳಿ ಹಲ್ಲೆ ನಡೆಸುತ್ತಾನೆಂದರೆ, ಕೊಲೆ ಬೆದರಿಕೆ ಹಾಕುತ್ತಾನೆಂದರೆ ಮಡಿಕೇರಿಯಲ್ಲಿ ಕೊಡವರ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂದು ನೀವೇ ಯೋಚಿಸಿ. ಕೊಡಗಿನಲ್ಲಿ ಕೊಡವರಿಗೆ ಅಪಾಯ ಅಂತ ಇದ್ದರೆ ಅದು ಅಲೆಮಾರಿ ಮಲೆಯಾಳಿಗಳಿಂದ ಮಾತ್ರ.
ಹಾಗಂತ ಈ ಹಲ್ಲೆ ವಿಷಯ ಇಲ್ಲಿಗೇ ಮುಗಿಯುವುದಿಲ್ಲ. ಯಾಕೆಂದರೆ ಮೈತ್ರಿ ಜಂಕ್ಷನ್ ನಲ್ಲಿ ಗಾಂಜಾ ವಾಸನೆ ಇದೆ. ಈ ವಿಷಯದಲ್ಲಿ ಮಡಿಕೇರಿ ಪೋಲಿಸರು ಒಂದು ದಿನ ಸೆಕ್ಷನ್ 307,302 ದಾಖಲಿಸಿ ಎಫ್ ಐಆರ್ ದಾಖಲು ಮಾಡಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರೀತ ಮಲೆಯಾಳಿ ವಲಸೆಯಿಂದ ಕೊಡಗಿನ ಶಾಂತಿ ಕದಡಿದೆ. ಅವರ ವಲಸೆ ಕೊಡವ ಸಂಸ್ಕೃತಿಯನ್ನು ವಿನಾಶದತ್ತ ಕೊಂಡೊಯ್ಯುವ ಅಪಾಯಗಳಿವೆ. ಕೊಡಗು ಫ್ರಾನ್ಸ್ ಆಗುವ ದಿನ ದೂರದಲ್ಲಿಲ್ಲ. ಎಲ್ಲಿದೆ ಕೊಡವ ಸಮಾಜ?
Post a Comment