ಮೂಡಬಿದಿರೆ: ಬೀಜದ ಭಟ್ರ ಮೇಲೆ ಎಫ್‌ಐಆರ್!

   



         ಮೂಡಬಿದಿರೆಯ ಕರ್ಣ, ಕೊಡುಗೈ ದಾನಿ, ಹೆಸರಾಂತ ಬೀಜೋದ್ಯಮಿಯ ಮೇಲೆ ಲೋಕಲ್ ಠಾಣೆಯಲ್ಲಿ ಒಂದು ಕಿನ್ಯ ಎಫ್‌ಐಆರ್ ದಾಖಲಾಗಿದೆ ಎಂಬ ಗುಸುಗುಸು ಮೂಡಬಿದಿರೆ ತುಂಬಾ ಕಾರ್ತೇಲ್ ಮಳೆ ನೀರಿನೊಂದಿಗೆ ಹರಿಯುತ್ತಿದೆ. ಮೂಡ ಬಿದಿರೆಯ ಬೀಜೋದ್ಯಮಿ ಭಟ್ರು ತನ್ನಲ್ಲಿದ್ದ ಒಂದು ಬೀಜದ ಫ್ಯಾಕ್ಟರಿಯನ್ನು ಅಂದಾಜು ಹತ್ತು ವರ್ಷದ ಹಿಂದೆ ಪುತ್ತೂರಿನ ಯಾರೋ ಉದ್ಯಮಿಗಳಿಗೆ ಮಾರುವ ಬಗ್ಗೆ ಕುಂತು ಮಾತಾಡಿದ್ದರು. ಪುತ್ತೂರು ಪಾರ್ಟಿ ಭಟ್ರ ಕೈಗೆ ಇಪ್ಪತ್ತೊಂದು ಲಕ್ಷ ಮಡಗಿ ಎಗ್ರಿಮೆಂಟ್ ಮಾಡಿಕ್ಕೊಂಡಿತ್ತು. ಬಾಕಿ ಬಾಬ್ತು ಕೋಟಿ ದುಡ್ಡು ಪಿನ್ನೆ ತಂಡೆ ಎಂದು ಪುತ್ತೂರು ಪಾರ್ಟಿ ಎಗ್ರಿಮೆಂಟ್‌ನಲ್ಲಿ ನಮೂದಿಸಿತ್ತು. ಹಾಗೆ ಇಪ್ಪ ತ್ತೊಂದು ಕೈಯಲ್ಲಿ ಹಿಡಕ್ಕೊಂಡು ಭಟ್ರು ಫ್ಯಾಕ್ಟರಿ ಸೇಲ್‌ನ ಖುಷಿ ಯಲ್ಲಿದ್ದರು. 
      ಆದರೆ ಭಟ್ರ ಕೈಯಲ್ಲಿ ಇಪ್ಪತ್ತೊಂದು ಇಟ್ಟು ಜಾಗ ಖಾಲಿ ಮಾಡಿದ್ದ ಪುತ್ತೂರು ಪಾರ್ಟಿ ನಂತರ ಮೂಡಬಿದ್ರೆ ಬಿಡಿ ಪಡುಬಿದ್ರೆ ಕಡೆ ಕೂಡ ತಲೆ ಹಾಕಿ ಮಲಗಿರಲಿಲ್ಲ. ಭಟ್ರು ರಾಮನನ್ನು ಶಬರಿ ಕಾದ ಹಾಗೇ ಪುತ್ತೂರು ಪಾರ್ಟಿಯನ್ನು ಕಾದು ಕಾದು ಸೋತು ಹೋದರು. ಇನಿ ಬರ್ಪೆರ್ ಎಲ್ಲೆ ಬರ್ಪೆರ್ ಎಂದು ಹತ್ತು ವರ್ಷಗಳೇ ಕಳೆದು ಹೋಗಿದೆ. ಪುತ್ತೂರು ಪಾರ್ಟಿಯ ಎಗ್ರಿಮೆಂಟ್ ಸತ್ತು ಹೋಗಿ ದಶಮಾನೋತ್ಸವ ಕೂಡ ಆಗಿದೆ. ಈಗ ಭಟ್ರು ತನ್ನ ಬೀಜದ ಫ್ಯಾಕ್ಟರಿಯನ್ನು ಬೇರೆ ಪಾರ್ಟಿಗೆ ಸೇಲ್ ಮಾಡಲು ಎಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಈ ವಿಷ್ಯ ಪುತ್ತೂರು ಪಾರ್ಟಿ ಕೆಬಿಗೆ ಬೀಳು ತ್ತಿದ್ದಂತೆ ಪುತ್ತೂರು ಪಾರ್ಟಿಗೆ ಕಾಂತಾರ ಗುಳಿಗ್ಗ ಹಿಡಿದಿದೆ. ಮೂಡ ಬಿದಿರೆಗೆ ಹೋಗಿ ಭಟ್ರನ್ನು ಮೇಲೆ ಕೆಳಗೆ ಮಾಡಿದೆ. ಸಾಲದು ಎಂಬಂತೆ ಭಟ್ರ ಮೇಲೆ ಪೋಲಿಸು ಕೇಸ್ ಕೂಡ ಕೊಟ್ಟಿದೆ. ಆದರೆ ಮೂಡಬಿದಿರೆ ಪೋಲಿಸು ಬಂದ ದೂರು ಅರ್ಜಿ ಮೇಲೆ ಭಟ್ರ ಮೇಲೆ ಒಂದು ಕಿನ್ಯ ಕೇಸು ದಾಖಲಿಸಿ ಇದು ‘ಸಿವಿಲ್ ಮ್ಯಾಟ್ರಪ್ಪ’ ಎಂದು ಪುತ್ತೂರು ಪಾರ್ಟಿಗೆ ಕೋರ್ಟಿನ ಸಾದಿ ತೋರಿಸಿದೆ. ಅಲ್ಲ ಮಾರಾಯ್ರೇ ಇಪ್ಪತ್ತೊಂದು ಲಕ್ಷ ಕೊಟ್ಟು ಕೋಟಿಗಟ್ಟಲೆ ಎಗ್ರಿಮೆಂಟ್ ಮಾಡಿಕ್ಕೊಂಡಿರುವ ಪುತ್ತೂರು ಪಾರ್ಟಿ ಹತ್ತು ವರ್ಷ ಯಾವ ಕಡೆ ತಲೆ ಹಾಕಿ ಮಲಗಿತ್ತು ಎಂಬುದೇ ಯಕ್ಷ ಪ್ರಶ್ನೆ. ಹಾಗೆಂದು ಪುತ್ತೂರು ಪಾರ್ಟಿ ಕೊಟ್ಟಿರುವ ಇಪ್ಪತ್ತೊಂದನ್ನು ವಾಪಾಸ್ ಬಿಸಾಡುತ್ತೇನೆ ಎಂದು ಬೀಜದ ಭಟ್ರು ಸಾರಿ ಸಾರಿ ಹೇಳಿದರೂ ಪುತ್ತೂರು ಪಾರ್ಟಿ ಇಂಗ್ಲೀಷ್ ಮಾತಾಡುತ್ತಿದೆ. ಇವರ ಹಠಕ್ಕೆ ಪಾಪ ಬೀಜದ ಭಟ್ರು ಈ ನಟ್ಟ ಮರ್ಯಲದಲ್ಲೂ ಬೆವರಿ, ಹೆದರಿ ಚಂಡಿಮುದ್ದೆ. 








 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget