ಹಾಗೆಂದು ನರಿಮೊಗರು ಪಂಚಾಯತ್ ಪುತ್ತೂರಿನ ಪ್ರತಿಷ್ಠಿತ, ದೊಡ್ಡ ಪಂಚಾಯತ್. ರೆವೆನ್ಯೂ ವಿಷಯದಲ್ಲೂ ಬೇರೆ ಪಂಚಾಯತ್ ಗಳಿಗೆ ಹೋಲಿಸಿದರೆ ನರಿಮೊಗರು ಪಂಚಾಯತ್ ಸಿರಿವಂತ ಪಂಚಾಯತ್. ಪುರುಷರ ಕಟ್ಟೆಯ ನ್ನು ರಾಜಧಾನಿ ಮಾಡಿಕೊಂಡಿರುವ ನರಿಮೊಗರು ಪಂಚಾ ಯತ್ ವ್ಯಾಪ್ತಿಯಲ್ಲಿಯೇ ಜಿಲ್ಲೆಯ ಪ್ರತಿಷ್ಠಿತ ನೀರಿನ ಫ್ಯಾಕ್ಟರಿ ಯೂ ಬರುತ್ತದೆ. ಸದ್ರಿ ನರಿಮೊಗರು ಪಂಚಾಯತ್ ದೇಶ ಭಕ್ತ ರ ಆಡಳಿತದಲ್ಲಿದ್ದು ಇದೀಗ 26 ಸದಸ್ಯ ಬಲದ ಪಂಚಾಯತ್ ಗೆ ಮುಂದಿನ ಅವಧಿಗೆ ಅಧ್ಯಕ್ಷ ಕುರ್ಚಿಗೆ ಆಯ್ಕೆ ಪ್ರಕ್ರಿಯೆ ನಡೆಯ ಬೇಕಾಗಿದ್ದು ಹಿಂದುಳಿದ ವರ್ಗಗಳ ಎ ಕೆಟಗರಿ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ಈ ಕೆಟಗರಿಯಲ್ಲಿ ನಾಲಕ್ಕು ಜನ ಮಹಿಳಾ ಸದಸ್ಯರು ಇದ್ದು ಅವರಲ್ಲಿ ಮೂರು ಜನ ಅಧ್ಯಕ್ಷ ಕುರ್ಚಿಗೆ ಟವೆಲ್ ಹಾಕಿದ್ದಾರೆ. ಹೇಳಿ ಕೇಳಿ ನರಿಮೊಗರು ಪಂಚಾಯತ್ ಒಂದು ಪ್ರತಿಷ್ಠಿತ ಪಂಚಾಯತ್ ಆಗಿರುವ ಕಾರಣ ಇಲ್ಲಿಗೆ ಅರ್ಹ ಅಧ್ಯಕ್ಷರ ಆಯ್ಕೆಯನ್ನೇ ಮಾಡ ಬೇಕಾಗುತ್ತದೆ. ಇಪ್ಪತ್ತಾರು ಸದಸ್ಯರಲ್ಲಿ ಏಳು ಜನ ಕೈಗಳಿದ್ದು ಒಂದು ಮೆಂಬರನ್ನು ಎಸ್ಡಿಪಿಐಯವರು ಕಳಿಸಿ ಕೊಟ್ಟಿದ್ದಾರೆ. ಇಲ್ಲಿ ವಿರೋಧ ಪಕ್ಷಗಳ ಹಾರಾಟ, ಚೀರಾಟಗಳೂ ಜಬರ್ದಸ್ತ್ ನಲ್ಲಿದ್ದು ಅವರನ್ನೆಲ್ಲ ಟ್ಯಾಕಲ್ ಮಾಡುವ ಅಧ್ಯಕ್ಷರ ಅವಶ್ಯಕತೆ ಇದೆ. ಇದೀಗ ಈ ಸೀಟಿಗೆ ಮೂರು ಜನ ಟವೆಲ್ ಹಾಕಿದ್ದು ಅವರಲ್ಲಿ ಯಾರು ಆಯ್ಕೆ ಅಗಲಿದ್ದಾರೆ ಎಂಬುದನ್ನು ದೇಶ ಭಕ್ತರ ಹೈಕಮಾಂಡು ನಿರ್ಧರಿಸಿಸಲಿದೆ. ಹಾಗೆಂದು ಈ ಮೂವರೂ ಸೀಟಿಗೆ ಅರ್ಹರಿ ದ್ದು ಅವರಲ್ಲೂ ಎಜುಕೇಟೆಡ್ ಸದಸ್ಯರೊಬ್ಬರು ತಮ್ಮ ಅಧ್ಯಕ್ಷ ರಾಗಲಿ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಒಬ್ಬ ವಿದ್ಯಾ ವಂತೆ ಪಂಚಾಯತ್ ಅಧ್ಯಕ್ಷೆಯಾದರೆ ನರಿಮೊಗರು ಪಂಚಾ ಯತ್ ನ ಕಿರೀಟಕ್ಕೆ ಒಂದು ಚಿನ್ನದ ಗರಿ ಇದ್ದಂತೆ ಎಂಬ ಮಾತು ನರಿಮೊಗರು ತುಂಬಾ ಹರಡಿದೆ. ವಿದ್ಯಾವಂತ ಮಗಳು ಮನೆಯನ್ನು ಬೆಳಗಿದಂತೆ ವಿದ್ಯಾವಂತ ಅಧ್ಯಕ್ಷರು ಪಂಚಾಯ ತ್ ನ ಹಿರಿಮೆ ಗರಿಮೆ ಹೆಚ್ಚಿಸುವರೆಂಬ ನಂಬಿಕೆ ಜನರಲ್ಲಿದೆ.
Post a Comment