ಕೊಡಗು: ಸಂಪಾಜೆ ಪಂಚಾಯತ್ ಗೆ ಕಳಗಿ ಅಧ್ಯಕ್ಷೆ?

                 



      ಕೊಡಗು ಸಂಪಾಜೆ ಯಾವಾಗ ಬಾಲಚಂದ್ರ ಕಳಗಿ ಎಂಬ ಅಜಾತಶತ್ರುವನ್ನ, ಬಿಜೆಪಿ ಯುವ ನಾಯಕನನ್ನು ಕಳೆದು ಕೊಂಡಿತೋ ಆವತ್ತೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ದೇಶ ಭಕ್ತರ ಅವನತಿ ಶುರುವಾಗಿತ್ತು. ಬೋಪಯ್ಯ ಸೋತು ಹೋದರು.
    ಇದೀಗ ‌ಸಂಪಾಜೆ ಪಂಚಾಯತ್ ಅಧ್ಯಕ್ಷ ಕುರ್ಚಿಗೆ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಮೀಸಲಾತಿ ನಿಗದಿಯಾಗಿದ್ದು ಅದು ಸಾಮಾನ್ಯ ಸದಸ್ಯ ವರ್ಗಕ್ಕೆ ಬಂದಿದೆ. ಹಾಗಂತ ಸಾಮಾನ್ಯ ಅಂದ ಕೂಡಲೇ ಪಂಚಾಯತ್ ನ ಅಷ್ಟೂ ಸದಸ್ಯರೂ ಅಧ್ಯಕ್ಷ ಕುರ್ಚಿಗೆ ಎಲಿಜಿಬಲ್ ಆಗುತ್ತಾರೆ. ಹಾಗಾಗಿ ಸಂಪಾಜೆಯಲ್ಲಿ ದಿನದಿಂದ ದಿನಕ್ಕೆ ಬಿಪಿ, ಬಿಸಿ ಏರುತ್ತಿದೆ. ಹಾಗೆಂದು ಸಂಪಾಜೆ ಯುವ ನಾಯಕನಾಗಿದ್ದ ದಿವಂಗತ ಬಾಲಚಂದ್ರ ಕಳಗಿ ಪತ್ನಿ ರಮಾ ದೇವಿ ಕಳಗಿ ಅಧ್ಯಕ್ಷ ಕುರ್ಚಿಗೆ ಪ್ರಬಲ ಆಕಾಂಕ್ಷಿಯಾಗಿದ್ದು ತನ್ನ ಪತಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುವ ಭರವಸೆ ನೀಡಿದ್ದಾರೆ. ಅದೂ ಅಲ್ಲದೆ ರಮಾದೇವಿಯವರನ್ನು ಅಧ್ಯಕ್ಷ ಮಾಡುವ ಮೂಲಕ ಜನಸೇವೆಗೆ ತನ್ನ ಜೀವನವನ್ನೇ ಮುಡಿ ಪಾಗಿಟ್ಟ ಬಾಲಚಂದ್ರ ಕಳಗಿ ಸಾವಿಗೆ ನ್ಯಾಯ ಒದಗಿಸುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ ಎಂಬ ನಂಬಿಕೆ ಸಂಪಾಜೆ ಜನರಲ್ಲಿದೆ. ಅದೂ ಅಲ್ಲದೆ ರಮಾದೇವಿ ಕಳಗಿ ಎಂ.ಎ ಪದವೀಧರೆಯೂ ಆಗಿದ್ದು ಸಂಪಾಜೆ ಪಂಚಾಯತನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಅರ್ಹತೆ ಹೊಂದಿದ್ದಾರೆ.
   ಹಾಗಂತ ಸಂಪಾಜೆ ಪಂಚಾಯತ್ ಅಧ್ಯಕ್ಷ ಕುರ್ಚಿಗೆ ಇನ್ನೂ ಹಲವರು ಆಕಾಂಕ್ಷಿಗಳಿದ್ದು ಪಂಚಾಯತ್ ಮಾಜೀ ಅಧ್ಯಕ್ಷ ಕುಮಾರ್ ಚಿದ್ಕಾರ್ ಕೊನೆಯ ಬಾರಿ ಕುರ್ಚಿ ಕೊಟ್ಟು ಬಿಡಿ ಮುಂದೆ ಕೇಳಲ್ಲ ಎಂದು ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. ಇನ್ನು ಪರಮಲೆಯ ದೇಶ ಭಕ್ತ ಕೂಡ ಅಧ್ಯಕ್ಷ ಕುರ್ಚಿಗಾಗಿ ಮೇಲೆ ಕೆಳಗೆ ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಕುರ್ಚಿ ಮೀಸಲಾತಿ ಇರುವುದರಿಂದ ಹಾಲೀ ಅಧ್ಯಕ್ಷರೂ ಕುರ್ಚಿಯಲ್ಲಿ ಮುಂದುವರೆದರೆ ಹೇಗೆ ಎಂದು ತಮ್ಮ ಬೆಂಬಲಿಗರಲ್ಲಿ ‌ಅಭಿಪ್ರಾಯ ಕೇಳುವ ಆಲೋಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
   ಬಾಕಿ ವಿಷಯಗಳೇನೇ ಇರಲಿ, ಕಳಗಿ ಸಾವಿನ ನಂತರ ಸರಿಯಾದ ನಾಯಕತ್ವ ಇಲ್ಲದೆ ಸೊರಗಿರುವ ಸಂಪಾಜೆ ಬಿಜೆಪಿಗೆ ರಮಾದೇವಿ ಆಯ್ಕೆ ಒಂದು ಬೂಸ್ಟರ್ ಆಗಲಿದೆ. ಇನ್ನು ಕಳೆದ ಪಂಚಾಯತ್ ಎಲೆಕ್ಷನ್ ನಲ್ಲಿ ಆಶ್ಚರ್ಯಕರವಾಗಿ ಸೋತ ಸಂಪಾಜೆಯ ಇನ್ನೊಬ್ಬ ಬಿಜೆಪಿ ನಾಯಕ ಕೆದಂಬಾಡಿ ಜಗದೀಶ್ ಕೂಡ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಯೋಗ್ಯ ಅಭ್ಯರ್ಥಿಯ ಆಯ್ಕೆಯಲ್ಲಿ ಮುಂಚೂಣಿಯಲ್ಲಿ ನಿಂತರೆ ಮಾತ್ರ ಸಂಪಾಜೆಯಲ್ಲಿ ಬಿಜೆಪಿ ತನ್ನ ಹಿಂದಿನ ವೈಭವವನ್ನು ಮುಂದುವರೆಸ ಬಹುದು. ಇಲ್ಲದಿದ್ದರೆ ಒಂದು ಸೀಟಿನ ಕೈ ಐದು ಆರರಲ್ಲಿ ಬಂದು ಕೂರುವ ಅಪಾಯಗಳಿವೆ.
   












Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget