ಸುಳ್ಯ: ಉಬರಡ್ಕ ಆತ್ಮಹತ್ಯೆಯ ಗನ್ ಸೀಝ್ ಆಗಿಲ್ಲ?

  


         ಕಳೆದ ವಾರ ಸುಳ್ಯ ಉಬರಡ್ಕದಲ್ಲಿ ಯುವಕನೋರ್ವ ಶೂಟ್ ಮಾಡಿಕ್ಕೊಂಡು ಆತ್ಮಹತ್ಯೆ ಮಾಡಿಕ್ಕೊಂಡಿದ್ದ. ಅರಂ ತೋಡಿನ ರವಿ ಎಂಬಾತ ಉಬರಡ್ಕ ಗ್ರಾಮದ ಬೆಳ್ರಂಪಾಡಿಯ ಮನೆಯೊಂದರಲ್ಲಿ ಕೆಲಸಕ್ಕಿದ್ದು ವಿಪರೀತ ಟೈಟ್ ಮಾಸ್ತರ್ ಆಗಿದ್ದ ಎಂದು ತಿಳಿದು ಬಂದಿತ್ತು. ಕಳೆದ ವಾರ ಬೆಡಿ ಹಿಡ ಕ್ಕೊಂಡು ರಾತ್ರಿ ಸಮಯದಲ್ಲಿ ಗುಡ್ಡೆ ಹತ್ತಿದ್ದ ರವಿ ಗುಡ್ಡೆಯ ಲ್ಲಿಯೇ ಶೂಟ್ ಮಾಡಿಕ್ಕೊಂದು ಟಿಕೆಟ್ ಪಡೆದಿದ್ದ. ಈ ಬಗ್ಗೆ ಸುಳ್ಯ ಪೋಲಿಸರಿಗೆ ಮಾಹಿತಿ ಹೋಗಲಾಗಿ ಅವರು ರಾತ್ರೋ ರಾತ್ರಿ ಬಂದು ಸ್ಥಳ ಮಹಜರು ನಡೆಸಿದ್ದರು.
        ಹಾಗೆ ಗುಡ್ಡೆಯಲ್ಲಿ ಸ್ಥಳ ಮಹಜರು ನಡೆಸಿದ್ದ ಸುಳ್ಯ ಪೋಲಿಸರು ಕೆಲವೊಂದು ಸಾಕ್ಷ್ಯಗಳ ಕಲೆ ಹಾಕಿದ್ದರು. ಆದರೆ ಸುಳ್ಯ ಪೋಲಿಸರಿಗೆ ಮರೆವು ಜಾಸ್ತಿ. ರವಿ ಆತ್ಮಹತ್ಯೆ ಮಾಡಿ ಕ್ಕೊಂಡಿದ್ದ ಬೆಡಿಯನ್ನು ಮಾತ್ರ ವಾಪಾಸ್ ಹೋಗುವಾಗ ಮರೆತೇ ಹೋಗಿದ್ದಾರೆ. ಆತ್ಮಹತ್ಯೆ ಮಾಡಿಕ್ಕೊಂಡಿದ್ದ ಬೆಡಿ ಯಾಕೆ ಸೀಝ್ ಆಗಿಲ್ಲ? ಹಗ್ಗದಲ್ಲಿ ನೇತಾಡಿದವನ, ಗಟಗಟ ಎಂದು ವಿಷ ಕುಡಿದವರ ಮಹಜರು ಮಾಡುವಾಗ ಹಗ್ಗ, ವಿಷದ ಬಾಟ್ಲಿ ಮುಂತಾದ ಟಿಕೆಟ್ ತೆಗೆಯಲು ಬಳಸುವ ಪರಿಕರಗಳನ್ನು ಸೀಝ್ ಮಾಡುವುದು ಪೋಲಿಸರ ಕೆಲಸ. ಆದರೆ ಉಬರಡ್ಕ ಕೇಸಲ್ಲಿ ಪೋಲಿಸರು ಬೆಡಿ ಮುಟ್ಟಿಲ್ಲ. ಯಾಕೆ? ಯಾಕೆ?
      ಒಂದು ಮೂಲದ ಪ್ರಕಾರ ಉಬರಡ್ಕ ಕೇಸಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯೂಸ್ ಮಾಡಿದ ಬೆಡಿ ಉಬರಡ್ಕದ ಶೆಟ್ಟಿಲೋಗ್‌ ಗಳದ್ದು ಎಂದು ತಿಳಿದು ಬಂದಿದೆ. ಸದ್ರಿ ಶೆಟ್ಟಿ ಲೋಗ್‌ಗಳಿಗೆ ಮತ್ತು ಸುಳ್ಯ ಪೋಲಿಸರಿಗೆ ಕುಚುಕು ಕುಚುಕು ಇದ್ದ ಕಾರಣ ಸುಳ್ಯ ಪೋಲಿಸರು ಶೆಟ್ಟಿಲೋಗ್‌ಗಳ ಬೆಡಿ ಮುಟ್ಟಿಲ್ಲ ಎಂಬ ದೂರಿದೆ. ಬೆಡಿ ಯಾರದ್ದಾದರೇನು ಮಾರಾ ಯ್ರೇ ಅದನ್ನು ತೆಗ್ದು ಒಳಗೆ ಇಡೋದು ಬಿಟ್ಟು ಈ ಪೋಲಿಸರು ಯಾಕೆ ಹೀಗೆಲ್ಲ ದಾಕ್ಷಿಣ್ಯ ಪಡುತ್ತಾರೆಂದೇ ಗೊತ್ತಿಲ್ಲ. ಪಾಪ ಸುಳ್ಯ ಪೋಲಿಸರಿಗೆ ಸ್ವಲ್ಪ ದಾಕ್ಷಿಣ್ಯ ಜಾಸ್ತಿ.             




       



 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget