ಬೆಳಿಗ್ಗೆ ಎಂಟು ಗಂಟೆಗೆ ದ್ವಾರಕಾ ಹೋಟೆಲ್ ಹತ್ರ ಕೆಲಸಕ್ಕೆ ಬಾ ಎಂದು ನೀವು ಗಾಂಧಿ ನಗರದ ಯಾವುದೇ ಕೂಲಿಯಲ್ಲಿ ಹೇಳಿದರೆ ಅವನು ಒಂಭತ್ತುವರೆ ತನಕ ಉಡುಪಿ ಗಾರ್ಡನ್ ಗೆ ಸುತ್ತು ಬಂದು ಬಂದು ದ್ವಾರಕಾಗೆ ದಾರಿ ಸಿಗದೆ ಅಲ್ಲೇ ಎಲ್ಲಾ ದರೂ ಚರಂಡಿಯಲ್ಲಿ, ಬಾಗಿಲು ಬಂದ್ ಆಗಿರುವ ಅಂಗಡಿ ಜಗುಲಿಯಲ್ಲಿ ಲ್ಯಾಂಡಿಂಗ್ ಆಗಿ ಬಿಡುತ್ತಾರೆ. ಇದಕ್ಕೆಲ್ಲ ಕಾರಣ ಗಾಂಧಿ ನಗರದ ಗಡಂಗ್ ಗಳು. ಬೆಳಿಗ್ಗೆ ಐದು ಗಂಟೆಗೆ ಗಾಂಧಿ ನಗರದಲ್ಲಿ ಗಡಂಗ್ ಓಪನ್ ಆಗಿ ಬಿಡುತ್ತದೆ.
ಹಾಗೆಂದು ಭೂಲೋಕದಲ್ಲಿ ಗಡಂಗ್ ಗಳು ಓಪನ್ ಆಗೋದೇ ಬೆಳಿಗ್ಗೆ ಹನ್ನೊಂದರ ನಂತರ. ಅಲ್ಲಿ ತನಕ ಕುಡ್ಚೆ ಲರಿಗೆ ಬಾಯಲ್ಲಿ ಎಷ್ಟು ಚಪ್ಪೆ ಚಪ್ಪೆ ಉಬ್ಬಿ ಬಂದರೂ ಮಾರುತಿ ತಿಂದೇ ಸುಧಾರಿಸಬೇಕಷ್ಟೇ. ಆದರೆ ಸುಳ್ಯದಲ್ಲಿ ಕಾಫಿ ಹೋಟೆಲ್ ಗಳಿಗಿಂತಲೂ ಮುಂದೆ, ಹಕ್ಕಿಗಳು ಏಳುವುದ ಕ್ಕಿಂತಲೂ ಮೊದಲೇ ಗಡಂಗ್ ಗಳು ಓಪನ್ ಆಗಿ ಬಿಡುತ್ತದೆ. ಬಿಜಾಪುರ, ಧಾರವಾಡದ ದಿನಗೂಲಿಗಳು, ಕಟ್ಟಡ ಕೆಲಸ ದವರು, ನಾರ್ತ್ ಇಂಡಿಯನ್ ಕೆಲಸದವರು ಹೀಗೆ ಬೆಳಿಗ್ಗೆ ಎಲ್ಲರ "ಒಂದು ರೌಂಡ್ ನಡಿಗೆ ಗಾಂಧಿ ನಗರದ ಗಡಂಗ್ ಕಡೆಗೆ" ಎಂಬ ಪರಿಸ್ಥಿತಿ ಸುಳ್ಯದಲ್ಲಿದೆ. ಇದೆಲ್ಲ ಯಾಕೆ ಎಂದು ಕೇಳಿದರೆ ಗಡಂಗ್ ಗಳ ಮಧ್ಯೆ ಸ್ಪರ್ಧೆ ಇರುವ ಕಾರಣ ಬಾಕಿಯವರು ಇಡೀ ದಿನ ಮಾಡುವ ಕಲೆಕ್ಷನ್ ನಾವು ಬೆಳಿಗ್ಗೆ ಹತ್ತರ ವೇಳೆಗೆ ಬಾಚಿ ಬಿಡುತ್ತೇವೆ ಎಂಬ ಉತ್ತರ ಬರುತ್ತದೆ. ಮಾಮೂಲಿಯಾಗಿ ಬೆಳಿಗ್ಗೆ ಎದ್ದು ಬಿಸಿ ಬಿಸಿ ಕಾಫಿ ಟೀ ಕುಡಿಯುವುದು ಎಲ್ಲರ ಕ್ರಮ ಮತ್ತು ರೂಢಿ. ಅದು ಕುಡುಕರ ತವರು ಗೋವದಲ್ಲೂ ಹಾಗೆ. ಬರಿದಾದ ಹೊಟ್ಟೆಗೆ ಒಂದು ಟ್ರಿಪ್ ಇಡ್ಲಿ ವಡೆ ಅಥವಾ ಕಾಂಕ್ರೀಟ್ ಹಾಕಿ ದ ಹಾಗೆ ಕಡ್ಲೆ ಬಜಿಲ್ ಹೋದ ಮೇಲೆಯೇ ವಿಜಯ್ ಮಲ್ಯ, ಕೋಡೆಸ್ ಎಲ್ಲಾ ಇಳಿಯೋದು. ಆದರೆ ಸುಳ್ಯದಲ್ಲಿ ಉಲ್ಟಾ. ಎಂಥ ಅವಸ್ಥೆ ಮಾರಾಯ್ರೆ ಈ ಕುಡ್ಚೆಲರದ್ದು. ಇಂಥ ಕುಡುಕರಿಗೆಲ್ಲ ಇನ್ನು ಲಿವರ್ ಬದಲು ಪಿವಿಸಿ ಪೈಪು ಫಿಕ್ಸ್ ಮಾಡುವ ಒಂದು ಶಿಬಿರ ಮಾಡುವುದು ಸೇಫ್. ಈಗಾಗಲೇ ಇಲ್ಲಿನ ಕುಡುಕರ ಲಿವರ್ ಗಳು ಕಾರಂಜಿಯಂತೆ ಆಗಿರ ಬಹುದು.
ಹಾಗೆಂದು ಸುಳ್ಯದಲ್ಲಿ ಗಡಂಗ್ ಗಳು ಪಕ್ಕಿ ಏಳುವ ಮೊದಲೇ ಓಪನ್ ಆಗಿ ಸಾರ್ವಜನಿಕ ಸೇವೆಗೆ ಶುರುವಿಟ್ಟು ಕೊಳ್ಳುತ್ತದೆ ಎಂಬ ವಿಷಯ ಪಾಪ ಪೋಲಿಸರಿಗೆ ಗೊತ್ತೇ ಇರಲಿಕ್ಕಿಲ್ಲ. ಗೊತ್ತಿದ್ದರೆ ಅವರು ಗಡಂಗ್ ಸೇವೆ ಮಾಡು ವವರಿಗೆ ಕರೆದು ಮಂಗಳಾರತಿ ಮಾಡಿ ಪ್ರಸಾದ ವಿತರಣೆ ಮಾಡುತ್ತಿದ್ದರು. ಇನ್ನು ಅಬಕಾರಿಗಳು ಗಾಂಧಿ ನಗರದ ಕಡೆಗೆ ಕಾಲು,ಕೈ, ಮಂಡೆ, ಬೆರಿ ಯಾವುದನ್ನೂ ಹಾಕಿ ಮಲಗಲ್ಲ.
Post a Comment