ಈಗ ಸಿಂಗಲ್ ನಂಬರ್ ಲಾಟರಿ ಇಲ್ಲ. ಎಲ್ಲಿಯಾದರೂ ಅದು ಈವತ್ತು ಇರುತ್ತಿದ್ದರೆ ಜನ ಮನೆ ಮಠ ಬಿಟ್ಟು ಬೀದಿ ಬೀದಿಗಳಲ್ಲಿ ಇರುತ್ತಿದ್ದರು. ಇದೀಗ ಸುಳ್ಯದಲ್ಲಿ ಕೇರಳ ರಾಜ್ಯದ ಲಾಟರಿ ಮೇಲೆ ಬೆಟ್ಟಿಂಗ್ ಶುರುವಾಗಿದ್ದು ಬಡ ಜನರು ಕೋಮಣ ಮಾತ್ರ ಉಳಿದರೆ ಸಾಕು ಎಂಬಲ್ಲಿ ತನಕ ದುಡ್ಡು ಕಟ್ಟೀ ಕಟ್ಟೀ ಹೈರಾಣಾಗಿ ಹೋಗಿದ್ದಾರೆ.
ಹಾಗಂತ ಇದು ಕೂಡ ಒಂದು ಜೂಜು. ಕೇರಳ ಸರ್ಕಾರ ಡೈಲಿ ಲಾಟರಿ ಡ್ರಾ ಮಾಡುತ್ತದೆ. ಅಲ್ಲಿನ ವಿನ್ನಿಂಗ್ ನಂಬರ್ ಮೇಲೆ ಇಲ್ಲಿ ಸುಳ್ಯದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಉದಾ ಹರಣೆಗೆ ಕೇರಳ ಲಾಟರಿಯ ವಿನ್ನಿಂಗ್ ನಂಬರ್ ನ ಲಾಸ್ಟ್ ಮೂರು ಸಂಖ್ಯೆ 250 ಎಂದು ನೀವು ಹತ್ತು ರೂಪಾಯಿ ಬೆಟ್ ಕಟ್ಟಿದರೆ ನಿಮ್ಮ ಅಜ್ಜಿ ಪುಣ್ಯಕ್ಕೆ ಅದೇ ಸಂಖ್ಯೆ ಪಾಸಾದರೆ ನಿಮಗೆ ಒಂದು ಸಾವಿರ ಬರುತ್ತದೆ. ಬಾರದಿದ್ದರೆ ಹತ್ತು ಗೋವಿಂದ. ಅದೇ ರೀತಿ ವಿನ್ನಿಂಗ್ ನಂಬರ್ ನ ಕೊನೇಯ ಎರಡು ಸಂಖ್ಯೆಗೆ ಅಂದರೆ 50 ಎಂದು ಹತ್ತು ರೂಪಾಯಿ ಕಟ್ಟಿದರೆ ಅದು ಪಾಸಾದರೆ ನಿಮಗೆ ನೂರು ರೂಪಾಯಿ ಕೊಡಲಾಗುವುದು. ಅದೇ ರೀತಿ ವಿನ್ನಿಂಗ್ ನಂಬರ್ ನಲ್ಲಿ ನಿಮ್ಮ ಹತ್ತು ರೂಪಾಯಿಗೆ ಕೊನೆಯ ನಾಲ್ಕು ಸಂಖ್ಯೆ ಪಾಸಾದರೆ ನಿಮಗೆ ಐದು ಸಾವಿರ ಸಿಗುತ್ತದೆ. ಇದು ಬೆಟ್ಟಿಂಗ್ ನ ರೂಪುರೇಷೆ.
ಸುಳ್ಯ ಗಾಂಧಿನಗರದ ಮೊಬೈಲ್ ಶಾಪ್ ಒಂದರಲ್ಲಿ ಈ ಕೇರಳ ಬೆಟ್ಟಿಂಗ್ ಗೆ ದುಡ್ಡು ಕಲೆಕ್ಷನ್ ಮಾಡಲಾಗುತ್ತಿದೆ. ಬಡವರು, ಕಾಲೇಜು ವಿದ್ಯಾರ್ಥಿಗಳು, ದಿನಗೂಲಿ ಕೆಲಸ ದವರು, ಟೈಟ್ ಮಾಸ್ತರ್ ಗಳು, ನಿರುದ್ಯೋಗಿಗಳು ಈ ಬೆಟ್ಟಿಂಗ್ ನಲ್ಲಿ ಕೋಮಣದವರೆಗೆ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಿಯವರೆಗೆ ಇದರ ಅತಿರೇಕ ಮುಂದುವರೆದಿದೆ ಅಂದರೆ ಬೆಳಗ್ಗೆ ಎದ್ದು ಮೊದಲು ಯಾವ ನಂಬರ್ ಕಣ್ಣಿಗೆ ಬೀಳುತ್ತ ದೋ ಅದೇ ನಂಬರ್ ಮೇಲೆ ಸಾವಿರಾರು ರೂಪಾಯಿ ಬೆಟ್ ಕಟ್ಟಿ ಜನ ದುಡ್ಡು ಕಳೆದುಕೊಳ್ಳುತ್ತಿದ್ದಾರೆ. ಆಕ್ಸಿಡೆಂಟ್ ಆದ ಗಾಡಿ ನಂಬರ್, ಬಸ್ ಟಿಕೆಟ್ ನಂಬರ್, ಹೋಟೆಲ್ ಬಿಲ್ ನಂಬರ್, ಮಿಸ್ ಕಾಲ್ ನಂಬರ್ ಹೀಗೆ ಯಾವುದೇ ನಂಬರ್ ಕಂಡರೂ ಸಾಕು ಅದರ ಮೇಲೆ ಅಮಾಯಕ ಜನ ದುಡ್ಡು ಕಟ್ಟಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಸುಳ್ಯ ಪೊಲೀಸರಿಗೆ ಪು ರುಸೊತ್ತು ಸಿಕ್ಕರೆ ಒಮ್ಮೆ ಗಾಂಧಿ ನಗರಕ್ಕೆ ಹೋದರೂ ಸಾಕು ಊಟ ಮಾಡಿ ಬರಬಹುದು.
Post a Comment