ಸುಳ್ಯ ತಾಲೂಕ ಪಂಚಾಯ್ತಿಯ ಆರು ಗ್ರಾಮ ಪಂಚಾಯ್ತಿಗಳಿಗೆ ಬಂದ ಸೋಲಾರ್ ಲೈಟ್ ಫೈಲ್ಸ್ನಲ್ಲಿ ಕೆಲವರ ಕಿಸೆ ತುಂಬಿ ತುಳುಕಾಡಿದೆ ಎಂಬ ಸುದ್ದಿ ಇದೆ. ಪ್ರತೀ ಗ್ರಾಮ ಪಂಚಾಯ್ತಿಗೆ ತಲಾ ನಾಲಕ್ಕು ಲಕ್ಷದಂತೆ ಸೋಲಾರ್ ಲೈಟ್ ಅಳವಡಿಸಿಕೊಳ್ಳಲು ದುಡ್ಡಿನ ಕಟ್ಟು ಬಂದಿದ್ದು ಪಂಚಾಯ್ತಿಗಳು ಬಂದ ದುಡ್ಡಿನ ಒಂದು ಪೀಸ್ ಕೂಡ ಉಳಿಯದಂತೆ ಖರ್ಚು ಮಾಡಿದೆ. ಆದರೆ ಪಂಚಾಯ್ತಿಗಳು ಅಳ ವಡಿಸಿದ ಸೋಲಾರ್ ಲೈಟುಗಳ ಕೆಲಸ ಕೇವಲ ಎರಡು, ಎರ ಡೂವರೆಯಲ್ಲಿ ಮುಗಿಸಬಹುದು ಎಂಬುದು ಸೋಲಾರ್ ತಜ್ಞರ ಅಭಿ ಪ್ರಾಯ.
ಹಾಗಾದರೆ ಬಾಕಿ ದುಡ್ಡು? ಬಾಕಿ ದುಡ್ಡು ಎಲ್ಲೂ ಪೋಲಾಗಬಾರದು, ಪಯಸ್ವಿನಿ ಪಾಲಾಗಬಾರದೆಂದು ಸಂಬಂಧಪಟ್ಟ ಅಧಿಕಾರಿಗಳು ಕಿಸೆಗೆ ಹಾಕಿಕ್ಕೊಂಡಿರಬಹುದು ಎಂಬುದು ತಿಳಿದು ಬಂದಿದೆ. ಸಾರ್ವಜನಿಕ ಕಕ್ಕ ಅವರ ಹೆಂಡ್ತಿ ಮಕ್ಕಳಿಗೆ, ಕುಟುಂಬ ಸಂಸಾರಕ್ಕಿರಲಿ ಎಂಬುದು ಸಾರ್ವಜನಿಕ ಅಭಿಪ್ರಾಯ. ಇನ್ನು ತಾಲೂಕ ಪಂಚಾಯ್ತಿ ಆಫೀಸಿಗೆ ಕೂಡ ಸೋಲಾರು ಸಿಕ್ಕಿಸಲು ಹದಿನೆಂಟು ಲಕ್ಷ ಬಂದಿದ್ದು ಮಳೆಗಾಲದಲ್ಲಿ ಸನ್ನು ಕಾಣದ ಕಾರಣ ಆಫೀಸಲ್ಲಿ ಲೈಟುಗಳು ಡಿಮ್ಮು ಡಿಪ್ಪು ಸ್ಟೇಜಲ್ಲಿ ಇದೆ ಎಂದು ತಿಳಿದು ಬಂದಿದೆ. ಬಂದ ಹದಿನೆಂಟರಲ್ಲಿ ಆಫೀಸಿಗೆ ಎಷ್ಟು ಬೊಲ್ಬು ಚಿಕ್ಕಿಸಿ ದ್ದಾರೆಂದು ಇನ್ನು ಲೆಕ್ಕ ಮಾಡಿದ್ರೆ ಎಷ್ಟು ತಿಂದಿರಬಹುದು ಎಂಬ ಲೆಕ್ಕ ಕೂಡ ಟ್ಯಾಲಿ ಆಗ ಬಹುದು. ಹಾಗೆಂದು ಈ ಸೋಲಾರ್ ಲೈಟ್ ಅಳವಡಿಕೆಯ ಕಾಂಟ್ರಾಕ್ಟನ್ನು ಹತ್ತು ಜಿಲ್ಲೆಗಳಿಗೆ ಒಬ್ಬನೇ ವಹಿಸಿ ಕ್ಕೊಂಡಿದ್ದು ಅವನ ದುಡ್ಡನ್ನು ಹೇಗೆ ಲೆಕ್ಕ ಹಾಕುವುದೆಂದು ಮಂಡೆಬಿಸಿ ಶುರುವಾಗಿದೆ ಮಾರಾಯ್ರೇ. ಹಾಗೆ ಕಾಂಟ್ರಾಕ್ಟ್ ವಹಿಸಿಕೊಂಡವರು ಪ್ರತೀ ಜಿಲ್ಲೆಯಲ್ಲೂ ಕಛೇರಿ ಹೊಂದಿರ ಬೇಕೆಂದು ನಿಯಮಗಳಿದ್ದರೂ ಇವನ ಆಫೀಸು ದ.ಕದ ಯಾವ ಮೂಲೆಯಲ್ಲೂ ಕಣ್ಣಿಗೆ ಕಂಡಿಲ್ಲ, ಕಿವಿಗೆ ಕೇಳಿಲ್ಲ. ಕಡೇ ಪಕ್ಷ ಅವನಿಗೆ ಒಂದು ಸಿಂಗಲ್ ಪೂಜೆ ಆದರೂ ಮಾಡೋಣವೆಂದರೆ ಅವನ ಭಾವಚಿತ್ರ ಕೂಡ ಇಲ್ಲ, ಸೋಲಾರಿಗೆ ಸರಿ ಸನ್ನು ಕೂಡ ಸಿಗುತ್ತಿಲ್ಲ.
Post a Comment