ಹಾಗೆಂದು ವಿಟ್ಲ ಎಂಬ ಇಂಟರ್ ಸ್ಟೇಟ್ ಗಡಿಯಲ್ಲಿ ಅಂಚಿ ನಿಂತರೆ ಕೇರಳ ಇಂಚಿ ನಿಂತರೆ ಕರ್ನಾಟಕ ಎಂಬ ಪರಿಸ್ಥಿತಿ ಇರುವಾಗ ಯಾರಿಗೇ ಆದರೂ ಕದಿಯದೆ, ಸಮಾಜ ಕಂಟಕ ಕೆಲಸ ಮಾಡದೆ ಮನಸು ಬರಲಿಕ್ಕಿಲ್ಲ. ಇಲ್ಲಿ ಮಾಡಿ ಆಚೆ ಪದ್ರಾಡ್, ಅಲ್ಲಿ ಮಾಡಿ ಇಂಚಿ ಪದ್ರಾಡ್ ಹಾಕುವವರೇ ಇಲ್ಲಿ ಜಾಸ್ತಿ. ಇಲ್ಲಿ ಪೋಲಿಸರಿಗೆ ಒಮ್ಮೊಮ್ಮೆ ಪುರುಸೊತ್ತೇ ಇರಲ್ಲ. ಅಷ್ಟು ಕಲರ್ ಕಲರ್ ಕಳ್ಳರು, ಕಾಕರು.
ಓ ಮೊನ್ನೆ ಅಂದರೆ ಜುಲೈ ತಿಂಗಳ 20ರಂದು ಮಟ ಮಟ ಮಧ್ಯಾಹ್ನ ವಿಟ್ಲ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುವ ಮಾಹಿತಿ ವಿಟ್ಲ ಪೊಲೀಸರಿಗೆ ಸಿಕ್ಕಿದೆ. ಕೂಡಲೇ ಅಲರ್ಟ್ ಆದ ವಿಟ್ಲ ಎಸ್ಸೈ ವಿದ್ಯಾ ಕೈಗೆ ಸಿಕ್ಕ ಎರಡು ಪೋಲಿಸರನು ಜೀಪ್ ಗೆ ಹಾಕೊಂಡು ಸ್ಪಾಟ್ ಗೆ ಬಂದಿದ್ದಾರೆ. ಬಂದು ನೋಡಿದರೆ ಮುಳಿಯ ಜಗ್ಗಣ್ಣನ ಮಗ ರಾಕೇಶ ಮತ್ತು ಬಂದ್ಯೋಡ್ ಮಹೇಶ್ ಮಟ್ಕಾದಲ್ಲಿ ಫುಲ್ ಬ್ಯುಸಿ. ಇಬ್ಬರೂ ಚೀಟಿಯಲ್ಲಿ ಅದೇನೋ ಬರೆಯುತ್ತಿದ್ದರು, ದುಡ್ಡು ಕಲೆಕ್ಷನ್ ಮಾಡುತ್ತಿದ್ದರು. ಆಗ ಇವರ ಹತ್ತಿರವೇ ಒಂದು ನೀಲಿ ಜೀಪ್ ಬಂದು ನಿಂತಿದೆ. ಯಾರೋ ದೊಡ್ಡ ಮಿಕ ಬಂದಿದೆ ಎಂದು ಜಗ್ಗಣ್ಣನ ಮಗ ತಲೆ ಎತ್ತಿ ನೋಡಿದರೆ ಪೊಣ್ಣು ಪೋಲಿಸ್. ಬಂದಿದ್ದು ವಿಟ್ಲ ಎಸ್ಸೈ ವಿದ್ಯಾ. ಜಗ್ಗಣ್ಣನ ಮಗನಿಗೆ ಅವರ ಗುರ್ತ ಇತ್ತು. ಹಾಗಾಗಿ ಓಡದೆ, ಬೊಬ್ಬೆ ಹಾಕದೆ ಬಾಲ ಮಡಚಿ ಸೀದಾ ಬಂದು ನೀಲಿ ಜೀಪ್ ಹತ್ತಿದ್ದಾರೆ.
ಹಾಗೆ ವಿಟ್ಲ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಡಿ ಶಾಂತಿ ಭಂಗ ಮಾಡುತ್ತಿದ್ದ ಇಬ್ಬರಿಗೂ ಎಸ್ಸೈ ವಿದ್ಯಾ ಪೋಲಿಸ್ ಸನ್ಮಾನ ಮಾಡಿ ಎಫ್ಐಆರ್ ಮಾಡಿದ್ದಾರೆ. ವಿಟ್ಲದಲ್ಲಿ ಇನ್ನೂ ಅನೇಕ ಕಡೆ ಮಟ್ಕಾ ದಂಧೆ, ಜೂಜು ನಡೆಯುತ್ತಿದ್ದು ಎಲ್ಲಾ ಆಟಗಾರರು ಪೊಣ್ಣು ಪೋಲಿಸ್ ಬಗ್ಗೆ ಎಚ್ಚರಿಕೆಯಿಂದ ಇರೋದು ಒಳ್ಳೇ ದು. ಯಾಕೆಂದರೆ ಯಾವಾಗ, ಎಲ್ಲಿಂದ ಬಂದು ನೀಲಿ ಜೀಪು ನಿಲ್ತದೆ ಎಂದೇ ಗೊತ್ತಾಗಲ್ಲ.
Post a Comment