ಈ ಪೀಡೆ ಪಿಶಾಚಿಗಳಿಗೆ ಯಾರದೋ ಮನೆಗೆ ಪೊಯ್ಯೆ ಬಿಸಾಡೋದು, ಕಲ್ಲು ಬಿಸಾಡೋದು ಒಂದು ಬ್ಯಾಡ್ ಹೇಬಿಟ್. ರೊಯ್ಯನೆ ಪೊಯ್ಯೆ ಬಿಸಾಡಿ, ಕಟ ಕಟ್ ಅಂತ ಕಲ್ಲು ಬಿಸಾಡಿ ಜನರನ್ನು ಹೆದರಿಸಿ ಕಿಟಿಕಿಟಿ ನಗೋದು ಪೀಡೆಗಳ ಹುಟ್ಟುಗುಣ. ಇದೀಗ ಕಲ್ಲುಗುಂಡಿ ಸಮೀಪದ ಕಡೇಪಾಲದಲ್ಲಿ ಗುಗ್ಗುರು ಗುರುವ ಪೀಡೆಯ ಪೀಡನೆ ಶುರುವಾಗಿದ್ದು ಪೀಡೆಯನ್ನು ಆದಷ್ಟು ಬೇಗ ಕುಪ್ಪಿಯಲ್ಲಿ ತುಂಬಿಸಿ ಮೂಜಿ ಸಾದಿ ಸೇರುವಲ್ಲಿ ಗುಂಡಿಗೆ ಹಾಕಿ ಮುಚ್ಚುವುದು ಉತ್ತಮ.
ಇದು ಗುಗ್ಗುರು ಗುರುವ. ದಂಡಕಜೆಯ ಆಂಟಿಗಾಗಿ ತನ್ನ ಹೆಂಡತಿಯನ್ನೇ ಚಿಮಿಣಿ ಎಣ್ಣಿಯಲ್ಲಿ ಪ್ರೈಯಿ ಮಾಡಿ ಅವಳೇ ಸೂ ಕೊಟ್ಟು ಕೊಂಡಳು ಎಂದು ಆನೆ ಘೀಳಿಟ್ಟ ಹಾಗೆ ಅತ್ತು ಪೋಲಿಸರನ್ನು ಮತ್ತು ಲೋಕವನ್ನು ನಂಬಿಸಿದವನು. ಇದೀಗ ಗುರುವನ ಬಾಧೆ ಗಂಡು ಮಕ್ಕಳಿಲ್ಲದ ಮನೆಯೊಂದಕ್ಕೆ ಶುರುವಾಗಿದ್ದು ಗುಗ್ಗುರು ಯಾಕೆ ಹೀಗೆ ಮಾಡುತ್ತದೆ ಎಂದು ಪ್ರಶ್ನೆಯಲ್ಲೇ ಕೇಳ ಬೇಕಷ್ಟೇ. ಕಡೇಪಾಲದ ಗಂಡು ಮಕ್ಕ ಳಿಲ್ಲದ ಮನೆಯೊಂದರ ಬಾವಿಗೆ ಗುರುವ ಯಾವುದೋ ರಾಸಾಯನಿಕ ಹಾಕಿದ್ದು ಬಾವಿ ನೀರು ಮಲೀನಗೊಂಡಿದೆ. ಇದೀಗ ಬಾವಿ ನೀರಿನಲ್ಲಿ ನೊರೆ ಬರುತ್ತಿದ್ದು ಅದನ್ನು ಗುರುವ ಮಾತ್ರ ಕುಡಿಯ ಬಹುದು. ಇಷ್ಟೂ ಅಲ್ಲದೆ ಗುರುವ ಆ ಗಂಡು ಮಕ್ಕಳು ಇಲ್ಲದ ಶೀಟ್ ಹಾಕಿದ ಮನೆಗೆ ದೊಡ್ಡ ದೊಡ್ಡ ಕಲ್ಲು ಬಿಸಾಡಲು ಶುರು ಮಾಡಿದ್ದು ಮೊನ್ನೆ ಬಿಸಾಡಿದ ಕಲ್ಲು ಶೀಟ್ ಮುರಿದು ಮನೆಯ ಒಳಗೆ ಬಿದ್ದಿದೆ. ಇದು ಹೀಗೆ ಮುಂದು ವರೆದರೆ ಆ ಮನೆಯಲ್ಲಿ ವಾಸ್ತವ್ಯ ಮಾಡುವುದೇ ಕಷ್ಟ. ಇಷ್ಟಕ್ಕೂ ಗುರುವನಿಗೆ ಏನು ಗಿರ್ಮಿಟ್ ಶುರುವಾಗಿದೆಯೆಂದೇ ಆ ಮನೆಯವರಿಗೆ ಅರ್ಥವಾಗುತ್ತಿಲ್ಲ. ಈ ಬಗ್ಗೆ ಕಲ್ಲುಗುಂಡಿ ಪೋಲಿಸರಿಗೆ ದೂರು ಕೊಡಲಾಗಿ ಅವರು "ಅವನು ಅಲ್ಲ ಗಡ" ಅಂತ ಹೇಳಿ ಫೈಲ್ ಕ್ಲೋಸ್ ಮಾಡಿ ಕೈ ತೊಳೆದು ಕ್ಕೊಂಡಿದ್ದಾರೆ. ಹಾಗಾದರೆ ಕಡೇಪಾಲದ ಆ ಗಂಡು ಮಕ್ಕ ಳಿಲ್ಲದ ಮನೆಯ ಬಾವಿಗೆ ವಿಷ ಹಾಕೋದು ಯಾರು? ಕಲ್ಲು ಬಿಸಾಡೋದು ಯಾರು? ಗುರುವನ ಅಪ್ಪನಾ ಅಥವಾ ಗುರುವನ ಅಜ್ಜನಾ? ಸುಳ್ಯ ಪೊಲೀಸರು ಒಂದು ಸಲ ಗುರುವನ ಮೈಯಲ್ಲಿ ಏನು ಹಿಡಿದಿದೆ ಎಂದು ನೋಡಿ ಅದನ್ನು ಬಿಡಿಸೋದು ಒಳ್ಳೇದು.
Post a Comment