ಅಲ್ಲಿ ಕಾಣಿಯೂರು - ಸುಬ್ರಹ್ಮಣ್ಯ ರಸ್ತೆಯ ಪುರುಷರ ಕಟ್ಟೆಯಲ್ಲಿ ಅನ್ನಭಾಗ್ಯದ ಅಕ್ಕಿ ಓಪನ್ ಮಾರ್ಕೆಟ್ ನಲ್ಲಿ ರಾಜಾರೋಷವಾಗಿ ಸೇಲ್ ಆಗುತ್ತಿದೆ. ಬಿಪಿಎಲ್ ಕುಟುಂಬ ಗಳಿಗೆ, ಬಡಬಗ್ಗರಿಗೆ, ದೀನ ದಲಿತರಿಗೆ ಸರ್ಕಾರದಿಂದ ಬರುವ ಅಕ್ಕಿಯನ್ನು ಕಡಿಮೆ ದುಡ್ಡಿಗೆ ಪರ್ಚೆಸ್ ಮಾಡಿ ಅದನ್ನು ಜಾಸ್ತಿ ರೇಟ್ ಗೆ ಮಾರಿ ದುಡ್ಡು ಮಾಡುವ ಅಂಗಡಿಯೊಂದು ಪುರುಷರ ಕಟ್ಟೆಯ ಸೊಸೈಟಿ ಬಳಿಯೇ ಕಾರ್ಯಾಚರಿಸುತ್ತಿದೆ.
ಹಾಗಂತ ಈ ಕಳ್ಳ ವ್ಯವಹಾರ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಯಾಕೆಂದರೆ ಪುರುಷರ ಕಟ್ಟೆಯಲ್ಲಿ ಬಿಪಿಎಲ್ ಕುಟುಂಬಗಳ ದೊಡ್ಡ ರಾಶಿಯೇ ಇದೆ. ಇಂತಹ ಬಿಪಿಎಲ್ ಕುಟುಂಬಗಳ ಜನ ಟೈಟಾಗಲು ಟೈಟಾದಾಗಲೆಲ್ಲ ಧರ್ಮಕ್ಕೆ ಸಿಕ್ಕಿದ ಅಕ್ಕಿಯನ್ನು ಕೆ.ಜಿಗೆ ಹತ್ತು ರೂಪಾಯಿಯಂತೆ ಈ ಅಂಗಡಿಗೆ ಸೇಲ್ ಮಾಡುತ್ತಾರೆ. ಅಂಗಡಿಯವನು ಅದೇ ಅಕ್ಕಿಯನ್ನು "ನಲ್ಲೇ ಉಂಡು" ಎಂದು ಮೂವತ್ತಕ್ಕೆ ಹೊರಗೆ ಮಾರುತ್ತಾನೆ.
ಹಾಗಂತ ಪುರುಷರ ಕಟ್ಟೆ ಕಾಣಿಯೂರು ಲೈನಿನ ನಂಬರ್ ವನ್ ಬ್ಯುಸಿ ಜಂಕ್ಷನ್. ಇಲ್ಲಿ ಜನಸಂಖ್ಯೆ ಕೂಡ ಪಿಜಿನ್ ಲೆಕ್ಕದಲ್ಲಿ ಇದೆ. ಇಲ್ಲಿ ಒಂದು ನೀರಿನ ಫ್ಯಾಕ್ಟರಿ ಕೂಡ ಇದ್ದು ಅಲ್ಲಿಗೆ ಬರುವ ಲಾರಿ ಡ್ರೈವರ್ ಗಳಿಗೂ ಈ ಅಕ್ಕಿ ಅಂಡಿಗುಂಡಿ ರೇಟಿಗೆ ಸೇಲ್ ಆಗುತ್ತಿದೆ. ಅದರಲ್ಲೂ ಪುರುಷರ ಕಟ್ಟೆಯ ಸೊಸೈಟಿ ಬಳಿಯೇ ಕಾರ್ಯಾಚರಿಸುತ್ತಿರುವ ಈ ಅಂಗಡಿಗೆ ಅನ್ನಭಾಗ್ಯದ ಗೋಣಿ ಯೊಂದಿಗೆ ಎಲ್ಲಿಯಾದರೂ ಅನೈತಿಕ ಸಂಬಂಧ ಬೆಳೆದರೆ ಅಂಗಡಿಯವನು ಪುರುಷರ ಕಟ್ಟೆಯಲ್ಲಿ ಮಾಳಿಗೆ ಹಾಕುವುದರಲ್ಲಿ ಸಂಶಯವೇ ಇಲ್ಲ. ಸಂಬಂಧ ಪಟ್ಟ ವರು ಒಮ್ಮೆ ಪುರುಷರ ಕಟ್ಟೆ ಗೆ ಬಂದು "ಆಡೂ ಆಡಂ ಆಡು" ಎಂದು ಪದ್ಯ ಹೇಳಿದರೂ ಸಾಕು ಅಕ್ಕಿ ಆಡು ಬಲೆಗೆ ಬೀಳು ತ್ತದೆ.
Post a Comment