ಇದು ಕಳಸ-ಮಂಗಳೂರು ಹೈವೇ. ಮೊದಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಆಗಿ ಈ ರಸ್ತೆ ಹೆತ್ತವರಿಲ್ಲದ ಅನಾಥ ಮಗುವಿನಂತಾಗಿತ್ತು. ಈ ಹೈವೇಯ ರಿಪೇರಿಗಳನ್ನೇ ನಿಲ್ಲಿಸಲಾಗಿತ್ತು. ಕೆಳಗೆ ಕಾರ್ಕಳದಿಂದ ಮೇಲೆ ಕಳಸಕ್ಕೆ ಹೋಗುವುದೆಂದರೆ ಸೊಂಟ ಸೋಬಾನೆ ಆಗುತ್ತಿತ್ತು. ಕಳೆದ ವರ್ಷ ಕಳಸ ಹತ್ತಿರ ಬೇಡಕ್ಕಿ ಎಂಬಲ್ಲಿ ಗುಡ್ಡೆ ಕುಸಿತ ಆಗಿತ್ತು.
ನಂತರ ನಾಲಕ್ಕು ತಿಂಗಳ ಹಿಂದೆ ಅದಕ್ಕೊಂದು ತಡೆಗೋಡೆ ಕಟ್ಟಲಾಗಿತ್ತು. ಇದೀಗ ತಡೆಗೋಡೆ ಕುಸಿಯುವ ಭೀತಿಯಲ್ಲಿದ್ದು ಹೈವೇ ಬಾಯಿ ಬಿಟ್ಟಿದೆ. ಈ ಸಲ ಇದೇ ನಾದರೂ ಕುಸಿದರೆ ಮಂಗಳೂರು-ಕಳಸ ಹೈವೇ ಬಂದ್ ಆಗುವ ಅಪಾಯಗಳಿವೆ. ಯಾವುದಕ್ಕೂ ಮೊದಲು ಈ ತಡೆಗೋಡೆ ಕಟ್ಟಿದ ಇಂಜಿನೀಯರ್ ಮತ್ತು ಗುತ್ತಿಗೆದಾರರನ್ನು ಕರೆದು ಫಲಪುಷ್ಪ ಕೊಟ್ಟು ಶಾಲು ಹೊದೆಸೋದು ಒಳ್ಳೆದು. ಕಳಸದ ಯಮ ಚಳಿಗೆ ಅವರಾದರೂ ಬೆಚ್ಚಗಿರಲಿ.
Post a Comment