ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಕ್ಷೇತ್ರದಲ್ಲಿ ವಾಸ್ತವ್ಯವಿದ್ದ ಆಚಾರ್ಯ ಮುನಿಶ್ರೀ ಕಾಮಕುಮಾರ ನಂದಿ ಮಹಾರಾಜ ರನ್ನು ಹತ್ಯೆ ಮಾಡಿರುವುದು ಖಂಡನೀಯ. ಈ ಹೇಯ ಕೃತ್ಯ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿ.ಹಿಂ.ಪ. ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಆಗ್ರಹಿಸಿದರು.
ಅವರು ಕಡಬದ ಮುಖ್ಯ ರಸ್ತೆಯಲ್ಲಿ ಕಡಬ ಪ್ರಖಂಡ ವಿ.ಹಿಂ.ಪ, ಬಜರಂಗದಳ, ಮಾತೃಶಕ್ತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಮುನಿಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಇಡೀ ಹಿಂದೂ ಹಾಗೂ ಜೈನ ಸಮಾಜಕ್ಕೆ ಆಘಾತವನ್ನು ಉಂಟು ಮಾಡಿದೆ. ಅಹಿಂಸೆ ಮತ್ತು ತ್ಯಾಗದ ಪ್ರತಿಪಾದಕರು ಹಾಗೂ ಶಾಂತಿ ಪ್ರಿಯರು ಆಗಿರುವ ಜೈನ ಮುನಿಗಳ ಅಥಾವ ಯಾರ ಮೇಲೂ ಇಂತಹ ಕೃತ್ಯಗಳು ಮುಂದೆ ನಡೆಯದಂತೆ ರಕ್ಷಣೆ ನೀಡಬೇಕು. ಸರಕಾರ ಬದಲಾದ ಕೂಡಲೇ ಹಿಂದೂ ಸಮಾಜದ ಮೇಲೆ ದಾಳಿಗಳು ನಿರಂತರವಾಗಿ ನಡೆಯುತ್ತಿದೆ, ಅಲ್ಲದೆ ಗೋಹತ್ಯೆ, ಮತಾಂತರಗಳು ನಡೆಯುತ್ತಿದೆ, ಇವರಿಗೆ ಕಾನೂನಿನ ಯಾವ ಭಯವೂ ಇಲ್ಲದಂತಾಗಿದೆ. ಇಂತಹ ಕಾನೂನುಬಾಹಿರ ಕೃತ್ಯಗಳನ್ನು ಎಸಗಿದಿದರೆ ಹಿಂದೂ ಕಾರ್ಯಕರ್ತರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ತಕ್ಕ ಉತ್ತರ ನೀಡಲಿದ್ದೇವೆ. ಸರಕಾರ ಬದಲಾದರೂ ಕಾರ್ಯ ಕರ್ತರು ಬದಲಾಗಿಲ್ಲ ಎಂದು ಹೇಳಿದರು. ರೆಂಜಿಲಾಡಿ ಬೀಡಿನ ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಅವರು ಮಾತನಾಡಿ ಜೈನ ಹತ್ಯೆಯನ್ನು ಖಂಡಿಸಿದರು.
ವಿ.ಹಿಂ.ಪ. ನಗರ ಅಧ್ಯಕ್ಷ ಸತ್ಯನಾರಾಯಣ ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿ.ಹಿಂ.ಪ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ವಂದಿಸಿದರು. ಈ ಸಂದರ್ಭದಲ್ಲಿ ವಿ.ಹಿಂ.ಪ ಕಾರ್ಯ ದರ್ಶಿ ಪ್ರಮೋದ್ ರೈ ನಂದುಗುರಿ, ಪ್ರಮುಖರಾದ ಮೋನಪ್ಪ ಗೌಡ ನಾಡೋಳಿ, ದಯಾನಂದ ಅಡ್ಡೋಳೆ, ವೆಂಕಟ್ರಮಣ ರಾವ್, ಪ್ರಕಾಶ್ ಎನ್.ಕೆ, ಪುಲಸ್ತ್ಯ ರೈ, ಪ್ರಮೀಳಾ ಲೋಕೇಶ್, ಪುಷ್ಪಪ್ರಸಾದ್, ಸತೀಶ್ ನಾಯಕ್, ಸಂದೀಪ್ ಶಿಶಿಲ, ಕರುಣಾಕರ ಶಿಶಿಲ, ಸುರೇಶ್ ದೆಂತಾರು, ರಘುರಾಮ ನಾಯ್ಕ್ ಕುಕ್ಕೆರೆಬೆಟ್ಟು, ಉಮೇಶ್ ಆಚಾರ್ಯ, ರಾಜೇಶ್ ಉದನೆ, ದೇವಿಪ್ರಸಾದ್ ಮರ್ದಾಳ, ಮೇದಪ್ಪ ಗೌಡ ಡೆಪ್ಪುಣಿ, ತುಳಸಿಧರ, ಧನುಷ್, ಬಾಲಕೃಷ್ಣ ಡಿ ಕೋಲ್ಪೆ, ತಿಲಕ್ ರೈ, ಸದಾನಂದ ಬಿರ್ವಾ, ಬಾಲಚಂದ್ರ ಬಜೆತ್ತಡ್ಕ, ಮನೋಜ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Post a Comment