ಹಾಗೆಂದು ಗ್ರಾಮಗಳ ಮಾರಿ ಓಡಿಸುವ ಕ್ರಮ ಡಿಸೆಂಬರ್ ನಿಂದ ಹಿಡಿದು ಜನವರಿ ಎಂಡ್ ನಂತರ ಫೆಬ್ರವರಿ ಅರ್ಧ ಮುಟ್ಟ ನಡೆಯುವುದು ರೂಢಿ. ಆವಾಗ ಮಾರಿ ಓಡಿಸುವಲ್ಲಿ ಗ್ರಾಮ ದೈವದ ಜೊತೆಗೆ ಗುಳಿಗ್ಗ ಇರುತ್ತದೆ. ಆವಾಗೆಲ್ಲ ದೊಡ್ಡವನು ಇರುವಾಗ ಗುಳಿಗ್ಗ ಸ್ವಲ್ಪ ಅಸ್ಕಿ ಇರುತ್ತಾನೆ. ಆದರೆ ಕಾಣಿಯೂರು ಕೂಡುಕಟ್ಟಿನವರು ತಮ್ಮ ಮಾಮೂಲು ಗ್ರಾಮ ದೈವಗಳ ಕೋಲದ ಜೊತೆ ಜೊತೆಗೆ ಆಟಿ ತಿಂಗಳಲ್ಲಿ ಕೂಡ ಆಟಿ ಮಾರಿ ಓಡಿಸುವ ಸಂಪ್ರದಾಯ ನಡೆಸಿಕ್ಕೊಂಡು ಬಂದಿ ದ್ದಾರೆ. ಕಾಣಿಯೂರುನಲ್ಲಿ ಆಟಿ ಮಾರಿಗೆ ಆಟಿ ಗುಳಿಗ್ಗ ಮಾತ್ರ. ಗ್ರಾಮ ದೈವ ಇರಲ್ಲ.
ಇದು ಕಾಣಿಯೂರು. ಅಷ್ಟ ಮಠಗಳ ಪೈಕಿ ಒಂದು ಮಠ ಕಾಣಿಯೂರಿದ್ದು. ಇಲ್ಲಿನ ಕೂಡುಕಟ್ಟಿನವರು ಸಂಪ್ರದಾಯ ದಂತೆ ನಡೆಸಿಕೊಂಡು ಬರುವ ಆಟಿ ಮಾರಿಯನ್ನ ಮೊನ್ನೆ ಶನಿವಾರ ನಡೆಸಿದ್ದಾರೆ. ಆವತ್ತು ಕಾಣಿಯೂರು ಕೂಡುರಸ್ತೆ ಯಲ್ಲಿರುವ ಗುಳಿಗ್ಗ ಬನದಲ್ಲಿ ಗುಳಿಗ್ಗನ ಆವಾಹನೆ ಮಾಡಿ ಅಲ್ಲಿಂದ ಪುಣ್ಚಾತ್ತಾರು ಗಡಿ ತನಕ ಗುಳಿಗ್ಗ ಕೇವಲ ಎಂಬರೆಯಲ್ಲಿ ಸಾಗಿ ಅಲ್ಲಿ ಬಲಿ ಪಡೆದು ಕೂಡುಕಟ್ಟಿಗೆ ಅಭಯ ಕೊಡುತ್ತಾನೆ. ಈ ಆಟಿ ಮಾರಿಯಲ್ಲಿ ಗ್ರಾಮದ ಪ್ರತೀ ಮನೆಯಿಂದಲೂ ಗ್ರಾಮಸ್ಥರು ಭಕ್ತಿಭಾವದಿಂದ ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಾರೆ.
ಹಾಗೆಂದು ಕಾಣಿಯೂರಿನಲ್ಲಿ ಆಟಿ ಗುಳಿಗ್ಗನಿಗೆ ಇತ್ತೀಚಿನ ದಿನಗಳಲ್ಲಿ ಹಂದಿ ಬಲಿ ಕೊಡಲಾಗುತ್ತಿದೆ. ಹಿಂದೆ ಈ ಸಂಪ್ರ ದಾಯ ಇರಲಿಲ್ಲ. ಕೊರೋನ ಸಂದರ್ಭದಲ್ಲಿ ಮಹಾ ಮಾರಿ ಕಾಣಿಯೂರು ಗ್ರಾಮದೊಳಗೆ ಎಂಟ್ರಿ ಹಾಕದಿರಲಿ ಎಂದು ಗ್ರಾಮಸ್ಥರು ಗುಳಿಗ್ಗನಿಗೆ ಹಂದಿ ಹರಿಕೆ ಹೊತ್ತಿದ್ದರು. ಆ ದಿನಗಳಲ್ಲಿ ಗುಳಿಗ್ಗನೂ ಗ್ರಾಮವನ್ನು ಕೊರೋನದಿಂದ ಕಾಪಾ ಡಿದ್ದ ಎಂಬ ನಂಬಿಕೆಯಿಂದ ಗ್ರಾಮಸ್ಥರು ಆಟಿ ಗುಳಿಗ್ಗನಿಗೆ ಹಂದಿ ಬಲಿ ಕೊಡಲಾರಂಬಿಸಿದ್ದರು.
Post a Comment