ಇದು ಕುದುರೆ ಮುಖ ರಾಷ್ಟ್ರೀಯ ಉದ್ಯಾನ. ಇಲ್ಲಿ ಹುಲಿ ಸಂತತಿ ಬೆಳೆಯಲು ಪೂರಕವಾದ ವಾತಾವರಣ ಇದೆ ಎಂದು ದಶಕಗಳ ಹಿಂದೆ ಇಲ್ಲಿ ಕಬ್ಬಿಣದ ಅದಿರು ತೆಗೆಯುವುದನ್ನೇ ನಿಲ್ಲಿಸ ಲಾಯಿತು. ಕುದುರೆಮುಖ ಪೇಟೆಯನ್ನೇ ಬಂದ್ ಮಾಡಲಾಯಿತು. ವಾಸ ಇದ್ದವರ ಒಕ್ಕಲೆಬ್ಬಿಸಲಾಯಿತು. ಇಷ್ಟೆಲ್ಲ ಮಾಡಿದರೂ ಹುಲಿ ಬಂತಾ? ಇಲ್ಲ. ಇದೀಗ ಸರಕಾರವೇ ಈ ರಾಷ್ಟ್ರೀಯ ಉದ್ಯಾನವನ್ನು ವಿರೂಪಗೊಳಿಸಲು ಹೊರಟಿದೆ. ಉದ್ಯಾನವನದಲ್ಲಿ ಮೋಜು ಮಸ್ತಿ ಗೆ ಅವಕಾಶ ಕಲ್ಪಿಸಲಾಗಿ ಆ ಮೂಲಕ ಚಿಲ್ಲರೆ ಹಣ ಮಾಡುವ ದಂಧೆಗೆ ಸರ್ಕಾರ ಇಳಿದಿದೆ. ಪರ ಊರುಗಳಿಂದ ಬರುವ ಪ್ರವಾಸಿ ಗರಿಂದ ಮಂಡೆಗೆ ರೂ 500ರಂತೆ ವಸೂಲು ಮಾಡಿ ಅಭಯಾ ರಣ್ಯದೊಳಗೆ ಅವರನ್ನು ಮೋಜು ಮಾಡಲು ಬಿಡಲಾಗುತ್ತಿದೆ. ಬಾಲರಾಯನ ದುರ್ಗ, ಕ್ಯಾತನ ಮಕ್ಕಿ ಗುಡ್ಡ ಮುಂತಾದ ಕಡೆ ಪ್ರವಾಸಿಗರ ಉಪಟಳ ಹೇಳ ತೀರದು. ತಿಂದುಳಿದ ತ್ಯಾಜ್ಯ, plastic, ಸಿಗರೇಟು, ಬಾಟಲಿಗಳು, ನಿರೋಧ್ ಇತ್ಯಾದಿ ಎಲ್ಲವೂ ಕಾಡಿನಲ್ಲಿ ಉಳಿದು ಬಿಡುತ್ತದೆ. ಇವನ್ನು ಕಾಡು ಪ್ರಾಣಿಗಳು ತಿಂದು ಅವುಗಳಿಗೆ ಇಲ್ಲದ ಮಂಡೆ ಸೀಕ್ ಶುರುವಾಗುವ ಅಪಾಯಗಳಿವೆ. ಇಷ್ಟೂ ಅಲ್ಲದೆ ಇಲ್ಲಿ ಸರ್ಕಾರದ ವತಿಯಿಂದ ಟ್ರಕ್ಕಿಂಗ್ ಮಾಡಲು ಅವಕಾಶಗಳಿವೆ. ಇದೂ ಅಪಾಯಕಾರಿಯಾಗಿದ್ದು ಮೊನ್ನೆ ತಾನೇ ಒಬ್ಬ ಟಿಕೇಟ್ ತಗೋಂಡಿದ್ದಾನೆ.
ಇನ್ನು ಇಲ್ಲಿರುವ ಹೋಂ ಸ್ಟೇ ಗಳಂತೂ ಕುದುರೆಮುಖವನ್ನು ಲಗಾಡಿ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸಂಸೆ ಸುತ್ತ ಮುತ್ತ ಲಿನ ಪರಿಸರದಲ್ಲಿಯೇ 150 ಕ್ಕೂ ಹೆಚ್ಚು ಹೋಂ ಸ್ಟೇಗಳಿವೆ.
ಇನ್ನುಳಿದಂತೆ ಕಳಸ ಸುತ್ತ ಮುತ್ತಲಿನ ಹೋಂ ಸ್ಟೇ ಗಳಂತೂ ಅನೈತಿಕ ಚಟುವಟಿಕೆಗಳ ಜಾತ್ರೆಯನ್ನೇ ನಡೆಸುತ್ತಿವೆ. ಅಷ್ಟೂ ಹೋಂ ಸ್ಟೇಗಳ ಪ್ರವಾಸಿಗರು ಬಂದು ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದಲ್ಲಿ ಗುಳಿಗ್ಗ ಬೊಬ್ಬೆ ಹಾಕಿದ ಹಾಗೆ ಬೊಬ್ಬೆ ಹಾಕಿದರೆ ಹುಲಿ ಇಲ್ಲಿ ನಿಂತಿತಾ? ಇನ್ನು ವೀಕ್ ಎಂಡ್ ದಿನಗಳಲ್ಲಿ ಪ್ರವಾಸಿಗರ ಅವತಾರ ಕೇಳುವುದೇ ಬೇಡ. ಭೂತ ಹಿಡಿದೇ ಬರುತ್ತಾರೆ, ಕೋಲ ಉದ್ಯಾನ ವನದಲ್ಲಿ ನಡೆಸುತ್ತಾರೆ. ಇವರ ಗಲಾಟೆಯಲ್ಲಿ ಹುಲಿಗೆ ಗುಡ್ಡೆ ಗುಡ್ಡೆ ಓಡುವ ಪರಿಸ್ಥಿತಿ. ಕುದುರೆಮುಖವನ್ನು ಹುಲಿಗೆ ಅಂತ ಬಿಟ್ಟ ಮೇಲೆ ಅಲ್ಲಿಗೆ ಮನುಷ್ಯರನ್ನು ಯಾಕೆ ಬಿಡಬೇಕು ಎಂದೇ ಅರ್ಥವಾಗುತ್ತಿಲ್ಲ. ಸರ್ಕಾರಕ್ಕೆ ಒಂದು ಕುರೆ ಆಸೆಯಾ? ಈ ಬಗ್ಗೆ ಹೋಂ ಸ್ಟೇ ಓನರ್ ಗಳಲ್ಲಿ ಮಾತಾಡಿದರೆ ಅವರು ಅಟ್ಟಕ್ಕೆ ಹಾರಿ ಬಿಡುತ್ತಾರೆ. ಹೋಂ ಸ್ಟೇಗಳು ಇರೋದೇ ಮೋಜು ಮಸ್ತಿ ಮಾಡಲು. ಅಲ್ಲಿ ಭಜನೆ ಮಾಡಲಾಗುತ್ತಾ ಎಂಬ ಖಡಕ್ ಡೈಲಾಗ್ ಡೆಲಿವರಿ ಅವರಿಂದ ಬರುತ್ತದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹುಲಿಗೆ ಕಳಸೇಶ್ವರನೇ ಗತಿ.
Post a Comment