ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ, ಸುಳ್ಯ ಕಾಂಗ್ರೆಸ್ ನಾಯಕ ಸಚಿನ್ ರಾಜ್ ಶೆಟ್ಟಿ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಲ್ಲಿ ಪೆರುವಾಜೆ ಗ್ರಾಮದ ಪೆಲತಡ್ಕ ಎಂಬಲ್ಲಿ ವ್ಯಕ್ತಿಗಳಿಬ್ಬರು ಅದ್ಯಾವುದೋ ಅಂಡಿಗುಂಡಿ ಕಾಮಗಾರಿಗಳನ್ನು ನಡೆಸುತ್ತಿದ್ದು ಆ ಕಾಮ ಗಾರಿಗಳ ಮಣ್ಣು ಪಂಚಾಯತ್ ರಸ್ತೆಯ ಚರಂಡಿಗೆ ಬಿದ್ದು ಮಳೆಗಾಲದ ನೀರು ಬ್ಲಾಕ್ ಆಗಿ ಸಮಸ್ಯೆ ಆಗಿತ್ತು. ಈ ಬಗ್ಗೆ ಪಂಚಾಯತ್ ಅನೇಕ ಬಾರಿ ನೋಟಿಸ್ ಕೊಟ್ಟರೂ ಆಸಾ ಮಿಗಳು ಆ ಮಣ್ಣನ್ನು ತೆಗೆದಿರಲಿಲ್ಲ. ಕಡೆಗೆ ಖುದ್ದು ಪಂಚಾ ಯ್ತಿಯೇ ಆ ಮಣ್ಣು ತೆಗೆಯಲು ಮುಂದಾಗಿದ್ದು ಬೆಳ್ಳಾರೆ ಪೋಲಿಸರ ಪ್ರೊಟೆಕ್ಷನ್ ತಗೊಂಡು ಮೊನ್ನೆ ಸ್ಪಾಟ್ ಗೆ ಹೋಗಿತ್ತು. ಆ ಸಮಯದಲ್ಲಿ ಸ್ಥಳೀಯ ವಾರ್ಡ್ ಮೆಂಬರ್ ಸಚಿನ್ ರಾಜ್ ಶೆಟ್ಟಿ ಕೂಡ ಸ್ಪಾಟಲ್ಲಿ ಹಾಜರಿದ್ದರು. ಆದರೆ ಮರುದಿನ ಅದೇ ಪಾರ್ಟಿ ಬೆಳ್ಳಾರೆ ಪೋಲಿಸರಿಗೆ ಸಚಿನ್ ರಾಜ್ ಶೆಟ್ಟಿ ಮೇಲೆ ಕಂಪ್ಲೈಂಟ್ ಮಾಡಿದ್ದು ಸಚಿನ್ ಮೇಲೆ ಕಲಂ 504,506 IPC & the SC ST amendment Act 2015 ರ ಪ್ರಕಾರ ಟೈಟ್ ಕೇಸ್ ಜಡಿಯಲಾಗಿದೆ. ಸದ್ರಿ ಕೇಸ್ ಬಗ್ಗೆ ಪೆರುವಾಜೆ ಗ್ರಾಮ ಪಂಚಾಯತ್ ಈವತ್ತು ತುರ್ತು ಸಭೆ ಕರೆದು ಪಂಚಾಯತ್ ಕೆಲಸಕ್ಕೆ ಅಡ್ಡಿ ಪಡಿಸಿದ ಪೆಲತ್ತಡ್ಕ ನಿವಾಸಿಗಳಿಬ್ಬರ ಮೇಲೆ ಪೋಲಿಸ್ ದೂರು ಕೊಡುವು ದುದೆಂದು ನಿರ್ಣಯ ಪಾಸ್ ಮಾಡಿತ್ತು. ಆದರೆ ಟೆಕ್ನಿಕಲ್ ಸಮಸ್ಯೆಯಿಂದ ಪೋಲಿಸರು ಪಂಚಾಯತ್ ದೂರು ಸ್ವೀಕ ರಿಸಿಲ್ಲ ಎಂದು ತಿಳಿದುಬಂದಿದೆ.
ಅಲ್ಲ ಮಾರಾಯ್ರೆ ಸಚಿನ್ ರಾಜ್ ಶೆಟ್ಟಿ ಒಬ್ಬ ವಾರ್ಡ್ ಸದಸ್ಯ, ಒಬ್ಬ ವಾರ್ಡ್ ಸದಸ್ಯನಾಗಿ ತನ್ನ ವಾರ್ಡ್ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗುವುದು ಮಾಮೂಲು. ಮೇಲಾಗಿ ಅಲ್ಲಿ ಸ್ಪಾಟಲ್ಲಿ ಪೋಲಿಸರೂ ಇದ್ದರು. ಅಲ್ಲಿ ಏನೇ ಮಾತು ಕತೆ ನಡೆದಿದ್ದರೂ ಅದಕ್ಕೆ ಪೋಲಿಸರೂ ಸಾಕ್ಷಿಯಾಗಿದ್ದಾರೆ. ಹಾಗಿ ರುವಾಗ ಮರುದಿನವೇ ಬಂದು ಸಚಿನ್ ಮೇಲೆ ದೂರು ಕೊಡು ವುದೆಂದರೆ ಪ್ರಜಾ ಪ್ರಭುತ್ವ ಎಲ್ಲಿಗೆ ಬಂದು ನಿಂತಿದೆ ಎಂದು ಗೊತ್ತಾಗುತ್ತಿದೆ.
Post a Comment