ಅಲ್ಲಿ ಕಲ್ಲೆಗದಲ್ಲಿ ಇನ್ನು ನಡೆದಾಡಲೂ ಕಷ್ಟ ಅನ್ನುವಂತಹ ವಾತಾವರಣ ಕ್ರಿಯೇಟ್ ಆಗಿದೆ. ಕಲ್ಲೆಗದಲ್ಲಿ ಉದಯ ವಾಗಿರುವ ಗಾಂಜಾ ಪೋಕ್ರಿಗಳ ಗ್ಯಾಂಗ್ ಒಂದು ತಮ್ಮ ಗಾಂಜಾ ಅಮಲನ್ನು ಇಡೀ ಪುತ್ತೂರಿಗೆ ಪಸರಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಇದರ ಉದ್ಘಾಟನೆ ನಿನ್ನೆ ನಡೆದಿದ್ದು ಕಾಂಗ್ರೆಸ್ ನಾಯಕನ ಕಾರು ದರೋಡೆ ಮಾಡುವ ಮೂಲಕ ಇದೀಗ ಫಸ್ಟ್ ಸ್ಟೆಪ್ ಇಟ್ಟಾಗಿದೆ. ಪುತ್ತೂರು ಪೋಲಿಸರ ಮೂಗಿನ ಒಟ್ಟೆಗೆ ಒಮ್ಮೆ ಅಜ್ಜನ ಮೀಸೆ ಹಾಕಿಯಾದರೂ ಒಂದು ಅಕ್ಷಿ ತೆಗೆಸೋದು ಒಳ್ಳೇದು. ಇಲ್ಲದಿದ್ದರೆ ಕಲ್ಲೆಗದ ಬ್ಯಾಡ್ ಬಾಯ್ಸ್ ಗಳಿಗೆ ಪೋಲಿಸರೂ ಈ ಲೋಕದಲ್ಲಿ ಇದ್ದಾರೆಂದು ಗೊತ್ತೇ ಆಗಲ್ಲ.
ಕಳೆದ ತಿಂಗಳಷ್ಟೇ ಕಲ್ಲೆಗ ಬ್ಯಾಡ್ ಬಾಯ್ಸ್ ಗಳ ಕಾರು ಸೈಕಲ್ ಸಾಗಿಸುವಾಗ ಆಕ್ಸಿಡೆಂಟ್ ಆಗಿ ಸಿಕ್ಕಿ ಬಿದ್ದು ಪೋಲಿಸರ ಸಹಕಾರದಿಂದ ಬ್ಯಾಡ್ ಬಾಯ್ಸ್ ಮತ್ತು ಸೈಕಲ್ ಗಳು ಬಚಾವ್ ಆಗಿದ್ದರು. ಆ ಘಟನೆ ಕಾರ್ತೆಲ್ ತಿಂಗಳಲ್ಲಿ ನಡೆದಿದ್ದು ಇದೀಗ ಆಟಿಯಲ್ಲಿ ಇನ್ನೊಂದು. ಪ್ರಗತಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಪೇಶೆಂಟ್ ಒಬ್ಬರಿಗೆ ಊಟ ಕೊಂಡೊಯ್ಯುತ್ತಿದ್ದ ಮಾಜೀ NSUI ಅಧ್ಯಕ್ಷ, ಪುತ್ತೂರು ಕಾಂಗ್ರೆಸ್ ನಾಯಕ ಪ್ರದೀಪ್ ರೈ ಪಾಂಬಾರ್ ಕಾರು ಅಡ್ಡ ಹಾಕಿದ ಇದೇ ಕಲ್ಲೆಗ ಗ್ಯಾಂಗ್ ನ ಇಬ್ಬರು ಬ್ಯಾಡ್ ಬಾಯ್ಸ್ ರೈಗಳನ್ನು ಕಾರಿಂದ ಎಳೆದು ಹಾಕಿ, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರ ಬೆರಳಿನಲ್ಲಿದ್ದ ಉಂಗುರ, ಬ್ರಾಸ್ ಲೈಟ್ ಮತ್ತು ಪರ್ಸಿನಲ್ಲಿದ್ದ ಒಂಬತ್ತು ಸಾವ್ರ ದುಡ್ಡು ದರೋಡೆ ಮಾಡಿ ಇದೀಗ ತಲೆ ತಪ್ಪಿಸಿ ಕೊಂಡಿದ್ದಾರೆ. ಎಂಥ ಪೋಕಾಲ ಮಾರಾಯ್ರೆ ಹುಡುಗರಿಗೆ! ಪೆಟ್ಟು ತಿಂದು ಸಾಯ್ತಾರಾ?
ಇದೀಗ ಪಾಂಬಾರ್ ರೈಗಳು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ಪುತ್ತೂರು ಪೋಲಿಸರಿಗೆ ದೂರು ನೀಡಿದ್ದಾರೆ. ರೈ ಕಡೆಯಿಂದ ಕಂಪ್ಲೈಂಟ್ ಆಗುತ್ತಿದ್ದಂತೆ ಅತ್ತ ಕಡೆಯಿಂದಲೂ ಒಬ್ಬನನ್ನು ಅಡ್ಮಿಟ್ ಮಾಡಲಾಗಿದ್ದು ಅವನೂ ಗುಲ್ಗುಸು ಸಿಕ್ಕಿಸಿ ಮಂಚ ಹತ್ತಿದ್ದಾನೆ ಎಂದು ತಿಳಿದುಬಂದಿದೆ. ಹೀಗೆಲ್ಲ ಆದರೆ ಪೋಲಿ ಸರಿಗೆ ಪಾಪ ದೊಡ್ಡ ಉಭಯ ಸಂಕಟ. ಕುರ್ಚಿ ಬಿಸಿ ಮಾಡುತ್ತಾ ಕೌಂಟರ್ ಕೇಸ್ ಬಗ್ಗೆ ಈಗ ಸ್ಕೇಚ್ ಹಾಕಿರ ಬಹುದು.
ಅಲ್ಲಿ ಕಲ್ಲೆಗದಲ್ಲಿ ವಿವೇಕಾನಂದ ಕಾಲೇಜಿನ ಹುಡುಗಿ ಯರಿಗೇ ಓಂಗುತ್ತಾ, ಅವರಿಗೆ ವಿವಿಧ ಆಯಾಮಗಳಲ್ಲಿ ಕಿರಿಕ್ ಮಾಡುತ್ತಾ, ಅವರನ್ನು ಚುಡಾಯಿಸುತ್ತಾ, ಮೂಂಕು ಮುಟ್ಟ ಟೈಟಾಗಿ ಸಾರ್ವಜನಿಕ ಶಾಂತಿ ಭಂಗ ಮಾಡುತ್ತಾ, ಬೆದರಿಕೆ ಹಾಕುತ್ತಾ, ಗಾಂಜಾ ಎಳೆಯುತ್ತಾ, ಸೈಕಲ್ ಸಪ್ಲೈ ಮಾಡುತ್ತಾ ಇಡೀ ಪುತ್ತೂರಿನ ಶಾಂತಿ ನೆಮ್ಮದಿಗೆ ಕಂಟಕವಾಗಿ ಬೆಳೆ ಯುತ್ತಿರುವ ಈ ಟೀಮನ್ನು ಸರ್ಕಲ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ಒಂದು ಕೈ ನೋಡಿ ಕೈಗೊಳ್ಳದಿದ್ದರೆ ಇದೆ ಟೀಮು ಪೋಲಿಸರ ಸಮೇತ ಇಡೀ ಪುತ್ತೂರಿಗೆ ಒಂದು ಪಾಠ ಕಲಿಸುವುದರಲ್ಲಿ ಸಂಶಯವೇ ಇಲ್ಲ. ಈವತ್ತು ಪ್ರದೀಪ್ ರೈ ಪಾಂಬಾರ್ ಗೇ ಹಲ್ಲೆ ಮಾಡಿದವರು ನಾಳೆ ಜನ ಸಾಮಾನ್ಯ ರೊಂದಿಗೆ ಹೇಗೆ ಸರ್ಕಸ್ ಮಾಡಬಹುದು? ಪುತ್ತೂರು ಪೋಲಿಸರು ಒಮ್ಮೆ ಇವರ ಬೆಂಡ್ ತೆಗೆದು ರೀ ಪೈಂಟ್ ಮಾಡಿ ಸನ್ಮಾನ ಮಾಡಿದರೆ ಸಾಕು. ಬುದ್ಧಿ ಬರ್ತದೆ.
Post a Comment