ಹಾಗೆಂದು ವಿಟ್ಲ ಎಂಬ ಊರಿನಲ್ಲಿ ಕ್ರಿಮಿನಲ್ ಗಳ ಸಂತೆ ಇಂದು ನಿನ್ನೆಯದಲ್ಲ. ವಿಟ್ಲದಲ್ಲಿ ಅವರ ಕತೆ ಮುಗಿಯಲ್ಲ. ಅದೊಂದು ಟಿವಿ ಧಾರಾವಾಹಿ ಇದ್ದ ಹಾಗೆ. ಇದೀಗ ಮೊನ್ನೆ ವಿಟ್ಲದ ಕಾವೇರಿ ಬಾರ್ ನಲ್ಲಿ ಕುಡ್ಕೊಂಡು ಹೊಡ್ಕೊಂಡು ಒಬ್ಬನ ಮಂಡೆ ಶರ್ಬತ್ ಆಗಿದೆ. ಶರ್ಬತ್ ಮಾಡಿದವರ ಮೇಲೆ ಟೈಟ್ ಕೇಸ್ ಜಡಿಯಲಾಗಿದೆ.
ವಿಷಯ ಏನೆಂದರೆ ಓ ಮೊನ್ನೆ ಕೇಪು ಗ್ರಾಮದ ಬಡಕ್ಕೋಡಿ ಸುರೇಶ ಅನ್ನುವವರು ನೈಟ್ ತನ್ನ ಗೆಳೆಯರಾದ ಕೇಪು ಗಣೀಶ ಮತ್ತು ವಿಟ್ಲದ ಸುರೇಶ ಎಂಬವರೊಂದಿಗೆ ವಿಟ್ಲದ ಕಾವೇರಿ ಬಾರ್ ನಲ್ಲಿ ಊಟಕ್ಕೆ ಕುಂತಿದ್ದರು. ಅದೇ ಸಮಯದಲ್ಲಿ ಅದೇ ಬಾರ್ ಗೆ ಟೈಟಾಗಲು ನಿಶಾಂತ್ ಶೆಟ್ಟಿ, ಚೇತನ್ ಮತ್ತುರಾಕೆಟ್ ಎಂಬವರೂ ಬಂದಿದ್ದಾರೆ. ಬಂದವರೇ ಬಾರಲ್ಲಿ ಬಡಕ್ಕೊಡಿ ಸುರೇಶನೊಂದಿಗೆ ಊಟ ಮಾಡುತ್ತಿದ್ದ ಗಣೇಶನೊಂದಿಗೆ ಪೆಟ್ಟಿಗೆ ನಿಂತಿದ್ದಾರೆ. ಗಣೀಶನ ಮೇಲೆ ಅದ್ಯಾವುದೋ ಓಬೀ ರಾಯನ ಕಾಲದ ಬೆಚ್ಚ ಇದ್ದ ಕಾರಣ ನಿಶಾಂತ್ ಶೆಟ್ಟಿ ಗಣೀಶನನ್ನು ಎಳೆದು ಹಾಕಿ ರಂ ಮಗನೇ,ಬೋ ಮಗನೇ,ಸೂ ಮಗನೇ, ಮುಂ ಮಗನೇ ನಿಮ್ಮ ಸಂತಾನ ಮಾಡಿಸುತ್ತೇನೆ ಎಂದು ಹಲ್ಲೆ ಮಾಡಿದ್ದಾನೆ. ಹಾಗೆ ಗಣೇಶ್ ಮೇಲೆ ಹಲ್ಲೆ ಆಗುತ್ತಿದ್ದಂತೆ ಅವನ ರಕ್ಷಣೆಗೆ ವಿಟ್ಲ ಸುರೇಶ ಮತ್ತು ಬಡಕ್ಕೋಡಿ ಸುರೇಶ ಬಂದಿದ್ದಾರೆ. ಅಷ್ಟರಲ್ಲಿ ಚೇತನ್ ಮತ್ತುರಾಕೆಟ್ ಕೂಡ ಪೆಟ್ಟಿಗೆ ಸೇರಿಕೊಂಡು ಉರ್ಡ ಪತ್ತ ಆಗಿದೆ. ಆಗ ಬಾರ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಜಗಳ ಬಿಡಿಸಲು ಬಂದಿದ್ದು ಎಲ್ಲರನ್ನು ಬಿಡಿಸಿ ದೂರ ದೂರ ಮಾಡಿದ್ದಾರೆ. ಆದರೆ ಬಡಕ್ಕೋಡಿ ಸುರೇಶ ಸುಮ್ಮನಿರದೆ ಗಣೀಶನಿಗೆ ಯಾಕೆ ಹೊಡೆದಿದ್ದು ಎಂದು ನಿಶಾಂತ್ ಶೆಟ್ಟಿಯಲ್ಲಿ ಕೇಳಿದ್ದಾನೆ.ಅಷ್ಟೇ. ನಿಶಾಂತ್ ಶೆಟ್ಟಿ ಲಾಸ್ಟ್ ಓವರಿನ ಲಾಸ್ಟ್ ಬಾಲ್ ಗೆ ಸಿಕ್ಸ್ ಹೊಡೆದಂತೆ ಸುರೇಶನನ್ನು ದೂಡಿ ಹಾಕಿದ್ದಾನೆ.
ಹಾಗೆ ನಿಶಾಂತ್ ಶೆಟ್ಟಿ ದೂಡಿ ಹಾಕಿದ ಸುರೇಶ ಬೀಳುತ್ತಿದ್ದಂತೆ ಸುರೇಶನ ಮಂಡೆ ಹೂವಿನ ಚಟ್ಟಿಗೆ ಬಡಿದು ಪುಣರ್ಪುಳಿ ಜ್ಯೂಸ್ ಬಂದಂತೆ ತಲೆಯಿಂದ ರಕ್ತ ಒಸರಿದೆ. ಕೂಡಲೇ ಸುರೇಶನನ್ನು ವಿಟ್ಲ ಆಸ್ಪತ್ರೆಗೆ ಅಲ್ಲಿಂದ ಪುತ್ತೂರು ಆಸ್ಪತ್ರೆಗೆ ನಂತರ ಸೀದಾ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಡುಂಯ್ ಡುಂ ಯ್ ಎಂದು ರವಾನೆ ಮಾಡಲಾಗಿದೆ. ಇತ್ತ ಪೆಟ್ಟಿಸ್ಟ್ ಗಳ ಮೇಲೆ ವಿಟ್ಲ ಪೊಲೀಸರು 504, 341, 323, 506ಮತ್ತು 34 ಐಪಿಸಿ ಅಡಿಯಲ್ಲಿ ಕೇಸ್ ದಾಖಲಿಸಿ ಬೆಂಡ್ ತೆಗೆಯಲು ಮಂಡಲ ರೆಡಿ ಮಾಡಿದ್ದಾರೆ.
Post a Comment