ಹಾಗೆಂದು ಬೆಳಂದೂರು, ಕುದ್ಮಾರು ಗ್ರಾಮಗಳ ರಣ ಕುಡುಕರಿಗೆ ದೊಂಡೆ ಪಸೆ ಆಜಿದಾಗಲೆಲ್ಲ ಒಂದೋ ಸವ ಣೂರು ಅಥವಾ ಕಾಣಿಯೂರಿಗೆ ಬಸ್ ಹತ್ತಬೇಕಿತ್ತು, ಇಲ್ಲ ಆಟೋ ಮಾಡ್ಕೊಂಡು ಹೋಗಿ ಲಿವರ್ ತುಂಬಾ ತುಂಬ್ಕೊಂ ಡು ಬರಬೇಕಿತ್ತು. ಕುಡುಕರ ಈ ಸಮಸ್ಯೆಯನ್ನು ಮನಗಂಡು ಅವರಿಗೊಂದು ಶಾಶ್ವತ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕುದ್ಮಾರು ಗ್ರಾಮದ ಹಿಂದಿನ ರಾಜಧಾನಿ ಬರೆಪ್ಪಾಡಿಯಲ್ಲಿ ಒಂದು ಗಡಂಗ್ ಓಪನ್ ಮಾಡುವರೇ ಕೆಲಸ ಟ್ವೆಂಟಿ ಫೋರ್ ಇನ್ ಟೂ ಸೆವೆನ್ ವೇಗದಲ್ಲಿ ನಡೆಯುತ್ತಿದೆ. ಅವಳಿ ಗ್ರಾಮಗಳ ಟೈಟ್ ಮಾಸ್ತರ್ ಗಳ ಮುಖದಲ್ಲಿ ಮುಗುರು ತೆಲಿಕೆ, ಮಂದಹಾಸ ಮೂಡಿದ್ದು ಕೆಲವರಂತೂ ಹಿರಿ ಹಿರಿ ಹಿಗ್ಗುತ್ತಿದ್ದಾರೆ, ಕುಣಿದು ಕುಪ್ಪಳಿಸುತ್ತಿದ್ದಾರೆ.
ಹಾಗೆಂದು ಬರೆಪ್ಪಾಡಿಯಲ್ಲಿ ಓಪನ್ ಆಗುತ್ತಿರುವ ಬಾರ್ ಎಲ್ಲೋ ಅಂಡಮಾನ್ ನಲ್ಲಿ ಅಲ್ಲ. ಅದು ಸರಿಯಾಗಿ ಕುದ್ಮಾರು ಶಾಲೆಯ ಎದುರುಗಡೆಯೇ ಓಪನ್ ಆಗುತ್ತಿದೆ. ಶಾಲಾ ಮಕ್ಕಳಿಗೆ ಇನ್ನು ಕುಡುಕರನ್ನು ನೋಡಲು ಸವಣೂರು, ಕಾಣಿಯೂರು ಎಂದು ಅಲೆದಾಡಬೇಕಿಲ್ಲ. ತಮ್ಮ ತಮ್ಮ ಕ್ಲಾಸಿ ನಿಂದಲೇ ನೋಡಬಹುದು. ಆತ್ ಮುಟ್ಟ.
Post a Comment