ಕಡಬದ ಪಟ್ಟಣ ಪಂಚಾಯಿತಿಗೆ ಕಿವಿ ಕೇಳಲ್ಲ, ಕಣ್ಣು ಕಾಣಲ್ಲ. ಅದು ಪಟ್ಟಣ ಪಂಚಾಯಿತಿಯೋ ಅಥವ ಪೊಟ್ಟಣ ಪಂಚಾಯಿತಿಯೋ ಎಂಬ ಅನುಮಾನಗಳು ಶುರುವಾಗಿದೆ. ಯಾಕೆಂದರೆ ಕಡಬ ಪೇಟೆ ತುಂಬಾ ಜನರಿಗೆ ಮತ್ತು ವಾಹನ ಸವಾರರಿಗೆ ನಿತ್ಯ ರಗಳೆಯಾಗಿರುವ ಸಾಕು ಪ್ರಾಣಿಗಳ ಅಪ್ಪಂದಿರ ಮೇಲೆ ಯಾವು ದಾದರೂ ಒಂದು ಅಂಡಿಗುಂಡಿ ಕ್ರಮ ಕೈಗೊಳ್ಳಿ ಎಂದು ಎಲ್ಲಾ ರೀತಿಯಲ್ಲೂ ಕಾಡಿ ಬೇಡಿಯಾ ಯಿತು. ಏನೂ ರಿಸಲ್ಟ್ ಇಲ್ಲ. ಸಾಕು ಪ್ರಾಣಿಗಳು ಪೇಟೆಯಲ್ಲಿ, ಸಾಕುವ ಪ್ರಾಣಿಗಳು ಮನೆಯಲ್ಲಿ ಅಂತ ಆಯೀತೇ ವಿನಃ ಬೇರೇನೂ ಆಗಿಲ್ಲ. ಸಾಯಲಿ ನಮ್ಮ ಅಧಿಕಾರಿ ವರ್ಗದ ಕತೆ, ಉಪ ಕತೆಗಳು ನಮಗೆ ಗೊತ್ತಿದ್ದದ್ದೇ. ಅವರನ್ನು ಆಚೆ ಸೈಲೆಂಟಾಗಿ ಸೈಡಲ್ಲಿಟ್ಟು ಬಿಡಿ. ಈಗ ಸಾಕು ಪ್ರಾಣಿಗಳ ಸಾಕುವ ಪ್ರಾಣಿಗಳ ಕತೆ ಎಂಥದು ಎಂದೇ ಅರ್ಥವಾಗುತ್ತಿಲ್ಲ ಮಾರಾಯ್ರೆ. ಕಡಬ ಪೇಟೆ ಈ ಲೋಫರ್ಸ್ ಗಳ ಅಜ್ಜನ ಪ್ರಾಪ ರ್ಟಿಯಾ? ಈ ಬೇಜವಾಬ್ದಾರಿ ಜನರು ಯಾಕೆ ಆಡು, ದನ ಕರು, ನಾಯಿಗಳನ್ನೆಲ್ಲ ಹುಟ್ಟಿಸಿ ಹುಟ್ಟಿಸಿ ರೋಡಿಗೆ ಬಿಡುತ್ತಾರೆ? ಇದೀಗ ಯಾರೋ ಒಬ್ಬ ಕುದುರೆ ಹುಟ್ಟಿಸಿ ಕಡಬ ಪೇಟೆ ರೋಡಿಗೆ ಬಿಟ್ಟಿದ್ದಾನೆ. ಅವನು ಯಾರು ಮಾರಾಯ್ರೆ? ಕುದುರೆಗೂ ಅವನಿಗೂ ಏನು ಸಂಬಂಧ? ಆ ಕುದ್ರೆಯನ್ನು ಯಾರಾದರೂ ಹೊತ್ತುಕ್ಕೊಂಡು ಹೋದರೆ ಯಾರು ಗತಿ. ಇಷ್ಟಕ್ಕೂ ಈ ಕುದ್ರನಿಗೆ ಕುದ್ರೆ ಯಾಕೆ? ದಂಡಿಗೆ ಹೋಗ್ಲಿಕ್ಕೆ ಉಂಟಾ?
ಹಾಗೆಂದು ನಾಗರಿಕ ಜಗತ್ತು ಅಂತ ಒಂದು ಇದೆ. ಅಲ್ಲಿ ಒಂದು ಅಲಿಖಿತ ನಿಯಮವಿದೆ. ಅಲ್ಲಿ ಸಾಕು ಪ್ರಾಣಿಗಳು ಮನೆಯಲ್ಲಿ, ಕಾಡು ಪ್ರಾಣಿಗಳು ಕಾಡಿನಲ್ಲಿ ಅಂತ ಒಂದಿದೆ. ಎರಡೂ ವರ್ಗದವೂ ಕೂಡ ಪೇಟೆಗೆ ಬರ್ಲಿಕ್ಕೆ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಎರಡೂ ಪೇಟೆಯಲ್ಲಿ ಬಂದು ಅವಾಂತ ರಗಳನ್ನೆ ಮಾಡಿ ಬಿಡುತ್ತದೆ. ಮರ್ಲರು ಬಿಟ್ಟ ನಾಯಿಗಳು ಬೈಕ್ ಗಳನ್ನು ಮುಗುಚಿ ಹಾಕಿದರೆ ಅವರ ಆಡುಗಳಿಗೆ ಡಿಚ್ಚಿ ಹೊಡೆದು ಕೊಳ್ಳಲು ರಸ್ತೆಯೇ ಆಟದ ಮೈದಾನ. ಇನ್ನು ಜನ ಬಿಟ್ಟ ದನಕ್ಕೆ ಕೊಡಪಾನ ಲೆಕ್ಕದಲ್ಲಿ ಸೂಸು ಮಾಡಲು, ಪಚ ಪಚ ಅಂತ ಬೆಚ್ಚ ಬೆಚ್ಚ ನೀರಂಬಿ ಹಾಕಲು ರಸ್ತೆಯೇ ಕಕ್ಕುಸು. ಜೊತೆಗೆ ಈಗ ಕುದ್ರೆ ಬೇರೆ. ಅದಕ್ಕೂ ಕುದ್ರೆ ಸೀಕ್ ಜೋರು. ಆದ್ದರಿಂದ ಇನ್ನಾದರೂ ಕಡಬದಲ್ಲಿ ಸಾಕು ಪ್ರಾಣಿಗಳನ್ನು ಸಾಕುವ ಪ್ರಾಣಿಗಳೇ ಪೇಟೆಗೆಲ್ಲ ನಿಮ್ಮ ಮರ್ಲ ಸಂತಾನ ಗಳನ್ನು ಬಿಟ್ಟು ರಗಳೆ ಮಾಡಬೇಡಿ, ಶಾಂತಿ ಭಂಗ ಮಾಡಬೇಡಿ. ಇನ್ನು ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕೋ ಗೊತ್ತಾಗು ತ್ತಿಲ್ಲ.
Post a Comment