ಈ ದೇಶಭಕ್ತರೇ ಹೀಗೆ, ಧನಕ್ಕಾಗಿ ಜಯ ಕಳೆದು ಕೊಳ್ಳುವುದರಲ್ಲಿ ನಿಸ್ಸೀಮರು. ಈ ದೇಶಭಕ್ತರು ಇತ್ತೆತ್ತೆ ಭಾರೀ ದುರಂತ ನಾಯಕರಾಗುತ್ತಿದ್ದಾರೆ ಮಾರಾಯ್ರೆ. ಅವರ ಸ್ಥಿತಿ ಇತ್ತೀ ಚಿನ ದಿನಗಳಲ್ಲಿ ನೋಡಕ್ಕಾಗುತ್ತಿಲ್ಲ. ಇದೀಗ ಕಡಬ ತಾ ಲೂಕಿನ ಐತ್ತೂರು ಪಂಚಾಯಿತಿಯಲ್ಲೂ ದೇಶಭಕ್ತರು ಕೇಂಕ ಣ್ ಗೆ ಇಟ್ಟಿದ್ದು ಗುರಿ ತಪ್ಪಿದೆ. ಇಲ್ಲಿ ಧನ ದೇಶಭಕ್ತರು ಇಟ್ಟು ಕೊಂಡರೆ ಜಯ ವಿರೋಧಿಗಳ ಪಾಲಾಗಿದೆ.
ಹಾಗೆಂದು ಐತ್ತೂರು ಪಂಚಾಯ್ತಿಯಲ್ಲಿ ಯಾವಾಗಲೂ ಕುರ್ಚಿಗಾಗಿ ಸಣ್ಣಪುಟ್ಟ ಕುಸ್ತಿ ಕದನಗಳು ಇಂದು ನಿನ್ನೆಯದಲ್ಲ. ಇದೀಗ ಮುಂದಿನ ಎರಡೂವರೆ ವರ್ಷಗಳ ಉಪಾಧ್ಯಕ್ಷರ ಕುರ್ಚಿಗಾಗಿ ಮೇಲಾಟ ನಡೆದು ದೇಶಭಕ್ತರು ಇದ್ದ ಒಂದು ಮೆಂಬರನ್ನೂ ಕಳಕ್ಕೊಂಡು ಉಪಾಧ್ಯಕ್ಷರ ಕುರ್ಚಿಯನ್ನೂ ಕಳಕ್ಕೊಂಡು ನೆಮ್ಮದಿ ಇಲ್ಲದಂತಾಗಿ ಹೋಗಿದ್ದಾರೆ.
ಕಡಬ ತಾಲೂಕಿನ ಐತ್ತೂರು ಪಂಚಾಯ್ತಿಯಲ್ಲಿ ಟೋಟಲಿ ಹನ್ನೊಂದು ಜನ ಮೆಂಬರ್ ಗಳಿದ್ದಾರೆ. ಒಂದು ಕ್ರಿಕೆಟ್ ಟೀಮಿನ ಹಾಗೆ. ಅದರಲ್ಲಿ ಆರು ಜನ ದೇಶ ಭಕ್ತರ ಬ್ಯಾಟ್ಸ್ಮನ್ ಇದ್ದರೆ ಉಳಿದ ಐವರು ಕಾಂಗ್ರೆಸ್ ಬೌಲರ್ಸ್. ಇಲ್ಲಿ ಅಧ್ಯಕ್ಷರ ಕುರ್ಚಿಗೆ ಅದಾಗಲೇ ದೇಸ ಭಕ್ತರ ಟೀಮಿನ ವತ್ಸಲಕ್ಕ ಸೆಲೆಕ್ಟ್ ಆಗಿ ಕುರ್ಚಿ ಅಲಂಕರಿಸಿದ್ದರು. ಉಳಿದದ್ದು ಉಪಾಧ್ಯಕ್ಷರ ಕುರ್ಚಿ. ಅದಕ್ಕೆ ಇಬ್ಬರು ಲಕ್ಷ್ಮಿಗಳ ಮಧ್ಯೆ ಜಟಾಪಟಿ ಶುರು ಆಯಿತು. ಒಬ್ಬರು ಲಕ್ಷ್ಮಿ ರಚ್ಚೆಯಿಂದ ಬಿಡಲಿಲ್ಲ ಇನ್ನೊಬ್ಬರು ಲಕ್ಷ್ಮಿ ಕೂಂಜಿಯಿಂದ ಬಿಡಲಿಲ್ಲ. ಕಡೆಗೆ ದೇಶಭಕ್ತರ ಗಡಣ ಧನಲಕ್ಷ್ಮಿ ನಮ್ಮ ಕ್ಯಾಂಡಿಡೇಟ್ ಎಂದು ಘೋಷಣೆ ಮಾಡಿ ಬಿಟ್ಟಿತು. ಇದನ್ನೇ ಕಾಯುತ್ತಿದ್ದ ಕಾಂಗ್ರೆಸ್ ಕಲಿಗಳು ಜಯ ಜಯ ಜಯಲಕ್ಷ್ಮಿ ಅಂದು ಬಿಟ್ಟರು. ಜಯಲಕ್ಷ್ಮಿ ಇಂಚಿಗ್. ಯಾರಾಗ ಬಹುದೆಂದು ಓಟಾಯಿತು. ಧನಲಕ್ಷ್ಮಿಗೆ ದೇಶ ಭಕ್ತರ ಐದು ಓಟು ಸಿಕ್ಕರೆ, ಜಯಲಕ್ಷ್ಮಿಗೆ ಕಾಂಗ್ರೆಸ್ಸಿಗರ ಐದು ಮತ್ತು ಅವರದ್ದೇ ಒಂದಾಗಿ ಆರು ಬಿತ್ತು. ಹಾಗಾಗಿ ಜಯಲಕ್ಷ್ಮಿಗೆ ಜಯ ಎಂದು ಘೋಷಿಸಲಾಯಿತು. ಇದೀಗ ಪಂಚಾ ಯ್ತಿಯಲ್ಲಿ ದೇಶಭಕ್ತರ ಅಧ್ಯಕ್ಷರು ಮತ್ತು ಕಾಂಗ್ರೆಸಿಗರ ಉಪಾಧ್ಯಕ್ಷರ ಜುಗಲ್ ಬಂಧಿ ಶುರುವಾಗಿದೆ. ಯಾವಾಗ ಕಡಬ ಪೊಲೀಸರಿಗೆ ಕಾಲ್ ಬರ್ತದೆ ಅಂತ ಹೇಳಕ್ಕಾಗಲ್ಲ. ಲಕ್ಷ್ಮಿ ವರ್ಸಸ್ ಲಕ್ಷ್ಮಿ ಮುಂದುವರೆಯಲಿದೆ.
Post a Comment