ಇದು ಸುಳ್ಯ ದುಗಲಡ್ಕದ ಕತೆ. ಆಚೆ ಕೇರಳ ಸ್ಟೇಟ್ ನಿಂದ ಈ ರಬ್ಬರ್ ತೋಟ ಲೀಸ್ ಗೆ ಮಾಡಿ ಕೊಳ್ಳಲು ಚೇಟಗಳು ಬರ್ತಾ ಇರುತ್ತವೆ. ಅಲ್ಲಿ ಸುಳ್ಯ ಸೈಡ್ ರಬ್ಬರ್ ಕೂಪು ಸ್ವಲ್ಪ ಜಾಸ್ತಿ. ಹಾಗೆ ಲೀಸಿಗೆ ಬಂದ ಚೇಟಗಳು ಇಲ್ಲೇ ಒಂದು ವರ್ಷ ಎಲ್ಲಾ ನಿಂತು ಬಿಡುತ್ತವೆ. ಆ ಟೈಮಲ್ಲಿ ಇಂಥ ಚೇಟಗಳ ಲಾಲನೆ ಪಾಲನೆ ನೋಡಿಕೊಳ್ಳಲು ದುಗಲಡ್ಕದಲ್ಲಿ ಮರಿಯ ದಾಸು ಅಂತ ಒಬ್ಬರಿದ್ದಾರೆ. ಭಾರೀ ಒಲ್ಲೆ ಜನ. ಕೇರಳದ ಚೇಟ ಗಳನ್ನು ಮಂಗ ಮಾಡುವುದರಲ್ಲಿ ಎತ್ತಿದ ಕೈ. ಹಾಗೆಂದು ಈ ಮರಿಯಾ ದಾಸರು ಕೂಡ ಬಹಳ ಹಿಂದೆ ಕೇರಳದಿಂದ ಬಂದ ಚೇಟನೊಬ್ಬನೊಟ್ಟಿಗೆ ಹಾಲು ತೆಗೆದು ತೆಗೆದು ಕಡೆಗೆ ಅವನನ್ನೇ ಮದುವೆ ಆಗಿದ್ದರು. ನಂತರ ಆ ಚೇಟ ಪಡ್ಚ ಆದ ಮೇಲೆ ಮರಿಯಾ ದಾಸರು ಬೇರೆ ಬೇರೆ ಚೇಟಗಳ ಜೊತೆಗೆ ಹಾಲು (ರಬ್ಬರ್) ತೆಗೆದ ಬಗ್ಗೆ ದುಗಲಡ್ಕದಲ್ಲಿ ದಂತಕತೆಗಳಿವೆ. ಇದೀಗ ಪಂಜ ಸೈಡಿನ ಚೇಟನೊಬ್ಬ ಬಂದು ಮಾರಿಯಾ ದಾಸರ ಮನೆಯಲ್ಲಿ ಟೆಂಟ್ ಹಾಕಿದ್ದು ನಾಯಿ ಬಿಟ್ಟರೂ ಮನೆ ಬಿಟ್ಟು ಕದಲಲ್ಲ ಎಂಬ ಮಾಹಿತಿ ಇದೆ.
ಹಾಗೆಂದು ಈ ಪಂಜದ ಚೇಟ ಬಂದು ಮಾರಿಯಾ ದಾಸರ ಮನೆಯಲ್ಲಿ ಟೆಂಟ್ ಹಾಕಿರುವ ಬಗ್ಗೆ ಗಲಾಟೆಗಳಾಗಿವೆ. ಚೇಟನ ಸಂಸಾರಕ್ಕೆ ಹುಳಿ ಬಿದ್ದು ಸಂಸಾರ ಬೀದಿಗೆ ಬಿದ್ದಿದೆ. ಕೇಸ್ ಪೋಲಿಸ್ ಸ್ಟೇಷನ್ ಲೆವೆಲ್ ನಲ್ಲಿದೆ. ಇಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೂ ಸುಳ್ಯದ ಲಾಂಡ್ರಿಗೆ ಒಂದು ಜನ ಇಲ್ಲದಾಗುವುದು ಗ್ಯಾರಂಟಿ.
Post a Comment