ಅಲ್ಲಿ ನೀವು ಪಂಜದಿಂದ ಕಡಬಕ್ಕೆ ಸರ್ಕಿಟ್ ಬರುವಾಗ ಕೋಡಿಂಬಾಳ ದಾಟಿದ ಕೂಡಲೇ ರೈಟಿಗೆ ಒಂದು ರಸ್ತೆ ಹೋಗುತ್ತದೆ. ಅದು ಕುಮಾರಧಾರ ನದಿ ತೀರದಲ್ಲೇ ಹಾದು ಕೋರಿಯಾರ್ ಮೂಲಕ ಮರ್ಧಾಳಕ್ಕೆ ಬಂದು ಸೇರುತ್ತದೆ. ಆ ರಸ್ತೆಯೇ ಇಡೀ ಕಡಬ-ಮರ್ಧಾಳ ಭಾಗದ ಕಳ್ಳಕಾಕರ ಸ್ವರ್ಗ. ನಾವು ಮೊನ್ನೆ ತಾನೇ ರೈಲ್ವೇ ಸಾಮಾನು ಕದ್ದ ರೈಲ್‌ಕಳ್ಳರ ಬಗ್ಗೆ ಬರೆದಿದ್ದೆವು. ಅದು ಸೆಂಟ್ರಲ್‌ಗೆ ಸಂಬಂಧ ಪಟ್ಟ ಕೇಸ್ ಅವರು ಪಕ್ಕ ಹೊರಗೆ ಬರಲಿಕ್ಕಿಲ್ಲ ಎಂದೂ ಬರೆದಿದ್ದೆವು. ಆದರೆ ಅವರು ಗೂಡ್ಸು ರೈಲೊಂದು ಯಡಮಂಗಲ ದಾಟಿ ಕೋಡಿಂ ಬಾಳ ಮುಟ್ಟುವ ಮೊದಲೇ ಮರ್ಧಾಳ ಮುಟ್ಟಿ ಆಗಿದೆ. ಅಷ್ಟು ಇನ್‌ಫ್ಲೂಯೆನ್ಸ್ ಈ ಕಳ್ಳರಿಗಿತ್ತು ಅಂದರೆ ಇನ್ನು ಕಡಬ-ಮರ್ಧಾಳ ಭಾಗದ ದೊಡ್ಡ ದೊಡ್ಡ ಕಳ್ಳರ ಕತೆ ಏನು. ಹಾಗೇ ಈ ಎಲ್ಲಾ ಕಳ್ಳರ ಸ್ವರ್ಗ ಸದ್ರಿ ಕೋರಿಯರ್ ರೋಡ್. ಅಲ್ಲಿ ಕೋಡಿಂಬಾಳದಲ್ಲಿ ಮುಳುಗಿದರೆ ಇತ್ತ ಮರ್ಧಾಳದಲ್ಲೇ ಏ ಳೋದು. ಗೂಗಲಣ್ಣನಿಗೂ ಸಿಗಲ್ಲ.
ಹಾಗೆಂದು ಈ ನದಿ ತೀರದಲ್ಲೇ ಕ್ರೈಂಗಳು ಹುಟ್ಟಲು ಪೂರಕವಾದ ವಾತಾವರಣ ಇದೆ. ಪೊಯ್ಯೆ ಕಂಡುಲು, ಮರ ಕಂಡುಲು, ರಬ್ಬರ್ ಕಂಡುಲು, ರೈಲ್ವೇ ಸಾಮಾಗ್ರಿ ಕಂಡುಲು, ಕುಲುರು ಮಾವು ಕೆತ್ತೆ ಕಂಡುಲು ಹೀಗೆ ಡಿಫರೆಂಟ್ ಸೈಜಿನ ಕಳ್ಳ ಕಾಕರು ಈ ಕೋರಿಯಾರ್ ರೋಡನ್ನು ತಮ್ಮ ಹೈವೇ ಮಾಡಿಕ್ಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಕೊರಿಯಾರ್ ನದಿ ತಟದಲ್ಲಿ ಸಬ್ಸಿಡಿಯಲ್ಲಿ ಗಾಂಜಾ ಬೆಳೆಯುವ ದುಸ್ಸಾ ಹಸಕ್ಕೂ ಮರ್ಧಾಳದ ಹುಡುಗರು ಶುರು ಮಾಡಿದ್ದರು ಎಂದು ತಿಳಿದು ಬಂದಿದೆ. ಇನ್ನು ಈ ನದಿ ತೀರ ಜುಗಾರಿಕೋರರ ತವರಿದ್ದ ಹಾಗೇ. ಕಡಬ ಪೋಲಿಸರು ಎಲ್ಲಿಯಾದರೂ ಜೋರಾಗಿ ಡುರ್ರ್ ಅಂಥ ಸಿಂಗಲ್ ಬಿಟ್ಟರೂ ಇವರು ನದಿಗೆ ಹಾರಿ, ಮೀಂದಿ ಅಂಚಿ ಕೇನ್ಯ ತಲುಪಿ ಬಿಡುತ್ತಾರೆ. ಕಡಬ ಪೋಲಿಸರಿಗೆ ಸ್ವಿಮ್ಮು ಬರಲ್ಲ.
ಇನ್ನು ಕೊರಿಯಾರ್ ಭಾಗ ನಕಲಿ, ಅಸಲಿ, ಪೊಕ್ಕಡೆ ಮಂತ್ರವಾದಿಗಳ ಅಡ್ಡೆ ಕೂಡ. ಇನ್ನು ಇಲ್ಲಿನ ಇನ್ನೊಂದು ಮನಕಲಕುವ ವಿಷಯ ಏನೆಂದರೆ ಇಲ್ಲಿ ಪಂಜೋಡಿ ಸೈಡ್ ಭಾರೀ ದೊಡ್ಡ ರಬ್ಬರ್ ಕೂಪಿದೆ. ಭಾರೀ ದೊಡ್ಡದು ಅಂದರೆ ಅದರ ಬಾಲ ಸುಂಕದ ಕಟ್ಟೆ ದಾಟಿ ಸುಬ್ರಹ್ಮಣ್ಯ ಕೈಕಂಬ ತನಕಷ್ಟು ದೊಡ್ಡದು. ಬಹುಷಃ ಎಂಟ್ನೂರು ಎಕ್ರೆ. ಇಲ್ಲಿ ಕೊರಿಯಾರ್, ಪಂಜೋಡಿ ಸೈಡಲ್ಲಿ ಹೈನುಗಾರಿಕೆಯೂ ಇದ್ದು ಹೈನುಗಾರರ ಜರ್ಸಿ ಪೆತ್ತಗಳಿಗೆ ಆಗುವ ಪುತ್ರ ಸಂತಾನ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ತಮ್ಮ ಪೆತ್ತಗಳು ಹಾಕುವ ಗಂಡು ಕರುಗಳನ್ನು ಈ ಹೈನುಗಾರರು ಅದು ರನ್ನಿಂಗ್ ಕಂಡೀಷನ್‌ಗೆ ಬರುವ ತನಕ ಸಾಕಿ ನಂತರ ಮೆಲ್ಲ ತಂದು ಈ ರಬ್ಬರ್ ಕೂಪಿನ ಮಧ್ಯದಲ್ಲಿ ಬಿಟ್ಟು ಟಾಟಾ ಮಾಡಿ ಕೂಪಿನಲ್ಲಿ ಜಾರಿ ಬಿಡುತ್ತಾರೆ. ಹಾಗೆ ಅವರು ಬಿಟ್ಟು ಹೋದ ಜರ್ಸಿ ಕರುಗಳು ಕೂಪಿನಲ್ಲಿ ಮೇದು ಮೇದು ಅಲೆಮಾರಿಗಳಂತೆ ಇತ್ತ ಮನೆಗೂ ಬಾರದೆ ಅತ್ತ ಅಜ್ಜಿ ಮನೆಗೂ ಹೋಗದೆ ಒಂದು ದಿನ ಕಾಣೆಯಾಗಿ ಬಿಡುತ್ತದೆ. ಈ ಕೇಸಿನಲ್ಲೂ ಮರ್ಧಾಳದ ಬಾಲೆ ಕ್ಕಾರ್‌ಗಳು ಪಿಕಪ್ ಹಿಡಕ್ಕೊಂಡು ರಬ್ಬರ್ ಕೂಪಿಗೆ ನೈಟ್ ಹೊಗಿ ಜರ್ಸಿ ಪೆತ್ತದ ಗಂಡು ಕರುಗಳಿಗೆ ಮೋಕ್ಷ ಕರುಣಿಸಿ ಅವುಗಳ ಆತ್ಮಕ್ಕೆ ಚಿರಶಾಂತಿ ಕೋರಿ ಕೇರಳ ಗಡಿಯಲ್ಲಿ ಅವುಗಳ ಉತ್ತರಾಧಿಕ್ರಿಯೆಗಳ ಊಟ ಮಾಡಿ ಬಂದು ಬಿಡುತ್ತಾರೆ ಎಂಬ ಸುದ್ದಿ ಇದೆ. ಕಡಬ ಪೋಲಿಸರು ಕೋರಿ ಯಾರ್‌ನಲ್ಲಿ ಒಂದು ಒ.ಪಿ ತೆರೆದರೆ ಹೇಗೆ?
Post a Comment