ಹಾಗೆಂದು ಬರಬರುತ್ತಾ ಮರ್ಧಾಳ ಎಂಬ ಪುಟ್ಟ ಗ್ರಾಮ ಪುಂಡ ಪೋಕ್ರಿಗಳ, ವಿವಿಧ ಸೈಜಿನ ಕಳ್ಳ ಕಾಕರ ಅಡ್ಡೆಯಾಗು ತ್ತಿರುವುದು ವಿಪರ್ಯಾಸವೇ ಸರಿ. ಕಡಬದ ಯಾವುದೇ ಕ್ರಿಮಿ ನಲ್ ಕೇಸ್ ಗಳ ಲಿಸ್ಟ್ ತೆಗೆದರೂ ಅದರಲ್ಲಿ ಮರ್ಧಾಳದ ಬಾಲೆಕ್ಕಾರ್ ಗಳ ಒಂದು ಪಾಸ್ ಪೋರ್ಟ್ ಸೈಜು ಇದ್ದೇ ಇದೆ. ಇದೀಗ ಮೊನ್ನೆ ರೈಲ್ವೇ ಸಾಮಾನುಗಳನ್ನು ಕದ್ದು ಪುತ್ತೂರಿಗೆ ಸಾಗಿಸುತ್ತಿದ್ದ ಇಬ್ಬರು ಬಹುಮಾನ ಪಟ್ಟವರನ್ನು ಕಡಬದ ಡೀಸೆಂಟ್ ಪೋಲಿಸ್ ರೆಡ್ಡಿಗಾರು ಗ್ಯಾಂಗ್ ಹಿಡಿದು ಅಂದರ್ ಗೆ ಕಳಿಸಿದೆ.
ಓ ಮೊನ್ನೆ ಜುಲೈ 31 ರ ನೈಟ್ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ & ಟೀಂ ಕಡಬ ಠಾಣಾ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದಲಾಗಿ ಒಂದು ಕಾರನ್ನು ನೋಡಿ ಅನುಮಾನ ಬಂದು ಸೈಡಿಗೆ ಹಾಕಲು ಹೇಳಿದ್ದಾರೆ. ಕಾರೋಳಗೆ ಕಂಜಿ ಕೈಕಂಜಿ ಏನಾದರೂ ಪ್ಯಾಕ್ ಆಗಿದೆಯ ಎಂದು ಕಾರಿನೊಳಗೆ ಪೋಲಿಸ್ತಾರ್ ಬಗ್ಗಿ ನೋಡಿದರೆ ಕಾರೋಳಗೆ ರೈಲಿನ ಸಾಮಾನು. "ನೀವೆಂತ ರೈಲಿನ ಕೆಲಸದವರ" ಎಂದು ಕೇಳಲಾಗಿ ಕಾರಲ್ಲಿದ್ದವರು ಬ್ಬೆ ಬ್ಬೆ ಬ್ಬೆ ಅಂತ ಹೇಳಿದ್ದಾರೆ. ಕೂಡಲೇ ಅಲರ್ಟ್ ಆದ ಪೋಲಿಸರು ಅವರನ್ನು ವಶಕ್ಕೆ ಪಡೆದು ಕೆಬಿತ್ತ ಕಂಡೇಗೆ ಎರಡ್ಡು ಕೊಟ್ಟಾಗ ಕಳ್ಳರು ಸೂಸು ಮಾಡಿಕ್ಕೊಂಡು ಬಾಯಿ ಬಿಟ್ಟಿದ್ದಾರೆ. ಮತ್ತೆ ನೋಡುವಾಗ ಅವರಿಗೆ ವೈವಾಟೇ ಅದೇ ಅಂತೆ ಮಾರಾಯ್ರೆ. ರೈಲಿನ ಸಾಮಾನು ಕದ್ದೇ ಅವರಿಗೆ ಮನೆಗೆ ಅಕ್ಕಿ ಕೊಂಡೋಗ ಬೇಕಂತೆ. ಇದೀಗ ರೈಲಿನ ಸಾಮಾನು ಕದ್ದ ಮರ್ಧಾಳದ ಆಟೋ ಚಾಲಕ ರಫೀಕೆ ಮತ್ತು ಸಿದ್ದಿಕ್ ಎಂಬ ಇಬ್ಬರನ್ನು ಕಡಬ ಪೊಲೀಸರು ಬೆಂಡ್ ತೆಗೆದು ರೀ ಪೈಂಟ್ ಮಾಡಲು ಸಕಲೇಶಪುರ ರೈಲ್ವೆ ಪೋಲಿಸರಿಗೆ ಸೆಂಡ್ ಮಾಡಿದ್ದಾರೆ. ಸೆಂಟ್ರಲ್ ಗವರ್ನಮೆಂಟ್ ಕೇಸ್ ಅದು. ಅದರಿಂದ ಹೊರಗೆ ಬರಲು ಕನಿಷ್ಠ ಒಂದು ಗೂಡ್ಸ್ ಡಬ್ಬಿಯಾದರೂ ಇನ್ನೊಮ್ಮೆ ಕದಿಯ ಬೇಕಷ್ಟೇ. ಬೇರೆ ಉಪಾ ಯವಿಲ್ಲ.
ಹಾಗೆಂದು ಈ ರೈಲು ಕಳ್ಳರು ಇದೇ ಮೊದಲಲ್ಲ ರೈಲಿನ ಸಾಮಾನಿಗೆ ಕೈ ಕೊಡೋದು. ಈ ಹಿಂದೆ ಕೋರಿಯಾರ್- ಬಜಕೆರೆ ರೈಲ್ವೆ ಗೇಟ್ ನಲ್ಲಿಯೂ ಇವರು ಅದೇನೋ ಕದ್ದು ಸಿಕ್ಕಿ ಬಿದ್ದಿದ್ದರು. ಎರಡೂ ಗೇಟ್ ನವರು ಗೇಟ್ ಹಾಕಿ ಇವರನ್ನು ಹಿಡಿಯಲು ಬಂದಾಗ ಈ ಕಳ್ಳರು ಅವರ ಮೇಲೆಯೇ ಕಾರು ಹತ್ತಿಸಲು ಹೋಗಿ ಎಸ್ಕೇಪ್ ಆಗಿದ್ದರು. ಇದೀಗ ಈ ಕಳ್ಳರ ಪರವಾಗಿ ಸಕಲೇಶಪುರ ರೈಲ್ವೇ ಪೋಲಿಸ ರೊಂದಿಗೆ ಡೀಲ್ ಕುದುರಿಸಲು ಕಡಬ - ಮರ್ಧಾಳ ಭಾಗದ ಡೀಲರ್ ಗಳು ಘಟ್ಟ ಹತ್ತಿದ್ದಾರೆಂದು ಸುದ್ದಿ.
Post a Comment