ಅಲ್ಲಿ ಕೊಲ್ಲಮೊಗ್ರ-ಕಲ್ಮಕಾರ್ ಸೈಡಿನ ಪಡ್ಡೆ ಹುಡುಗರು ಯಾವ ಸೈಜಲ್ಲಿ ಬ್ಯಾಡ್ ಬಾಯ್ಸ್ ಆಗುತ್ತಿದ್ದಾರೆಂದರೆ ಅದನ್ನು ಯಾವ ಭಾಷೆಯಲ್ಲಿ ಹೇಳಬೇಕೋ ಗೊತ್ತಾಗುತ್ತಿಲ್ಲ. ಮೊದ ಮೊದಲೆಲ್ಲ ಈ ಭಾಗದ ಪಡ್ಡೆ ಹುಡುಗರು ಜರ್ಸಿ ಪೆತ್ತದ ಬೋರಿ ಕಂಜಿಯಂತೆ ಪಾಪ ಇದ್ದರು. ಸಣ್ಸಣ್ಣ ಮರ, ಸುಟ್ಟತ್ ಮಲೆಯ ಕಲ್ಲು ಮತ್ತು ಸಂಜೆಗೆ ನೈಂಟಿಗೆ ಹೋದಗಡ ಬಂದಗಡ ಮಾಡುತ್ತಿದ್ದರು ಅಷ್ಟೇ. ಪಾ......ಪ ಆಗಿದ್ದರು ಅವರು. ಆದರೆ ಯಾವಾಗ ಹರಿಹರದಲ್ಲಿ, ಕೊಲ್ಲಮೊಗ್ರದಲ್ಲಿ ಒಂದೇ ಏಟಿಗೆ ಎರಡೆರಡು ಗಡಂಗ್ ಶುರುವಾಯಿತೋ ಕೊಲ್ಲಮೊಗ್ರ ಪಡ್ಡೆಗಳು ಏಕಾಏಕಿ ಜರ್ಸಿ ಪೆತ್ತದ ಬೋರಿ ಕಂಜಿಯಂತೆ ಇದ್ದವರು ದೊಡ್ಡ ಬೋರಿಗಳಾಗಿ ಬಿಟ್ಟರು. ಈಗ ಸಂಜೆ ನಾಲ್ಕು ಗಂಟೆಯ ನಂತರ ಅಲ್ಲೇ ಗಡಂಗಿನಲ್ಲಿ ನೈಂಟಿ ಹಾಕೋದು ಮೊಬೈಲ್ ನೋಡ್ಕೊಂಡು ಯಾವುದಾದರೂ ಕಟ್ಟೆ ಮೇಲೆ, ಮೋರಿ ಮೇಲೆ ಕೂತ್ತೊಂಡು "ತೋರ್ಸು.. ತೋರ್ಸು" ಎಂಬ ಜಪ ಬಿಟ್ಟರೆ ಬೇರೆ ಕೆಲಸ ಇಲ್ಲ.
ಇದು ಕೊಲ್ಲಮೊಗ್ರ. ಇಲ್ಲಿಂದ ಅಂಚಿ ಹೋದರೆ ಕಲ್ಮಕಾರು. ದಕ್ಷಿಣ ಕನ್ನಡ ಜಿಲ್ಲೆಯ ಗಡಿ. ಎರಡೂ ಊರುಗಳೂ ದೊಡ್ಡ ಅಂಡಮಾನ್. ಇಲ್ಲಿನ ಪಡ್ಡೆಗಳಿಗೆ ಮನರಂಜನೆ ಕಡಿಮೆ. ಹಾಗಾಗಿ ಯಾವಾಗ ಅಂಗೈಯಗಲದ ಮೊಬೈಲ್ ಗಳು ಮಾರು ಕಟ್ಟೆಯಲ್ಲಿ ಬಂತೋ ಪಡ್ಡೆಗಳು ಭಾರೀ ಖುಷಿ ಪಟ್ಟರು. ಇದೀಗ ಗಡಂಗ್ ಗಳೂ ಅಲ್ಲೆ ಇರುವ ಕಾರಣ ಪಡ್ಡೆಗಳ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಪರಿಸ್ಥಿತಿ ಶುರುವಾಗಿತ್ತು. ಆದರೆ ಅಲ್ಲಿ ಒಂದು ಸಮಸ್ಯೆ ಇತ್ತು ಪಡ್ಡೆಗಳಿಗೆ. ಪಡ್ಡೆಗಳಿಗೆ ಸ್ಪೀಕಿಂಗ್ ಗೆ, ಚಾಟಿಂಗ್ ಗೆ, ವೀಡಿಯೋ ಕಾಲಿಂಗ್ ಗೆ ಹುಡುಗಿಯರು ಸಿಗುತ್ತಿರಲಿಲ್ಲ. ಈಗ ಅದನ್ನೂ ಸೆಟ್ ಮಾಡಿಕ್ಕೊಂಡಿದ್ದಾರೆ. ಈಗ ಸದ್ಯಕ್ಕೆ ಇಲ್ಲಿ "ತೋರ್ಸು ತೋರ್ಸು" ಜೋರಾಗಿದೆ.
ಹಾಗೆಂದು ಈ ಭಾಗದಲ್ಲಿ ಇವರನ್ನೆಲ್ಲ ಕೇಳೂವವರೂ ಯಾರೂ ಇಲ್ಲ. ಇನ್ನು ಇಲ್ಲಿ ಪೋಲಿಸರ ಒಂದು ಪಾಸ್ಪೋರ್ಟ್ ಸೈಜು ಕೂಡ ಸಿಗಲ್ಲ. ಇಲ್ಲಿ ಪೋಲಿಸರನ್ನು ನೋಡಬೇಕಾದರೆ ಒಂದೋ ಟಿವಿ ನೋಡಬೇಕು ಇಲ್ಲಾಂದ್ರೆ ಸುಬ್ರಹ್ಮಣ್ಯಕ್ಕೆ ಬರಬೇಕು. ಯಾರದೋ ಮನೆಯ ಹುಡುಗಿ, ಯಾರದೋ ಹೆಂಡತಿ, ಯಾರೋ ವಿಧವೆ, ಇನ್ಯಾರೋ ಡೈವೋರ್ಸೀ ಹೀಗೆ ಟೋಟಲಿಯಾಗಿ ಚೂಡಿ ಸಿಕ್ಕಿಸಿಕೊಂಡಿದ್ದಾರೆ ಸಾಕು ಅವ ರೊಂದಿಗೆ ಲೈನ್ ಕನೆಕ್ಟ್ ಮಾಡಿಕ್ಕೊಂಡು ವೀಡಿಯೋ ಪಟ್ಟಾಂಗ ಶುರುವಿಟ್ಟುಕೊಳ್ಳುತ್ತಾರೆ. ನಂತರದ ಬೆಳವಣಿಗೆ ಯೇ "ತೋರ್ಸು ತೋರ್ಸು".
ಇದೀಗ ಮೊನ್ನೆ ಕೊಲ್ಲಮೊಗ್ರದ ಒಬ್ಬಳು ದೇಶ ಭಕ್ತರ ನಾಯಕಿ ತೋರಿಸಲು ಹೋಗಿ, ನಡುಗುವ ಕೈಗಳಿಂದ ತೋರಿಸಲು ಹೇಳಿದವನ ನಂಬರ್ ಒತ್ತುವ ಬದಲು ಒಂದು ನಂಬರ್ ಅಂಚಿಂಚಿ ಆಗಿ ಅದು ಗುತ್ತಿಗಾರಿನ ಯಾವುದೋ ಗ್ರೂಪಿಗೆ ಸೆಂಡ್ ಆಗಿ, ಅವರು ಅದನ್ನು ನೋಡಿ ಹೆದರಿ, ಬೆದರಿ, ಬೆವರಿ ಜ್ವರ ಬಂದು ಮಲಗಿದವರು ಒಂದು ವಾರ ಸೈಲೆಂಟ್ ಮೂಡಿಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಯಾಕೆ ಪಡ್ಡೆಗಳಿಗೆ ಈ ಕೆಲಸ ಎಂದೇ ಅರ್ಥವಾಗುತ್ತಿಲ್ಲ. ಅದರಲ್ಲೂ ಈ ಮದುವೆ ಆಗಿ, ಎರಡೆರಡು ಮಕ್ಕಳಿರುವ ದಗಣೆಗಳಿಗೂ ಎಂಥ ಮರ್ಲ್ ಮಾರಾಯ್ರೆ. ಮೊನ್ನೆ ವಿಶ್ವರೂಪ ತೋರಿಸಿ ಸಿಕ್ಕಿ ಬಿದ್ದದ್ದೂ ದೊಡ್ಡ ದಗಣೆಯೇ. ಈ ಥರ್ಡ್ ಕ್ಲಾಸ್ ಪಡ್ಡೆ ಗಳಿಗಾಗಿ ತಮ್ಮ ಕೌಟುಂಬಿಕ ಜೀವನವನ್ನೇ ಹಾಳು ಮಾಡಿ ಕೊಳ್ಳುತ್ತಾರಲ್ಲ ಈ ಆಂಟಿಗಳು. ಸುಬ್ರಹ್ಮಣ್ಯ ಪೊಲೀಸರು ಒಂದು ರೌಂಡ್ ನೈಟ್ ಹತ್ತು ಗಂಟೆ ನಂತರ ನಡುಗಲ್ಲು - ಕಲ್ಮಕಾರು ರಸ್ತೆಯಲ್ಲಿ ಸಾಗಿ "ಓಡ್ಸು...ಓಡ್ಸು" ಅಂದರೂ ಸಾಕು "ತೋರ್ಸು ತೋರ್ಸು" ನಿಂತು ಬಿಡುತ್ತವೆ. ಇಲ್ಲದಿದ್ದರೆ ಈ ಬೆಳವಣಿಗೆಗಳು ಮುಂದೆ 302, 307 ಸೆಕ್ಷನ್ ಗಳಿಗೆ ಲಿಂಕ್ ಆಗುವ ಅಪಾಯಗಳಿವೆ.
ಹಾಗೆಂದು ಕೊಲ್ಲಮೊಗ್ರ ಮೊದಲೇ ಅಂಡಮಾನ್. ಮರಗಳ್ಳರು, ಮರಳು ಕಳ್ಳರು, ಹರಳು ಕಳ್ಳರು ಹೀಗೆ ಡಿಫರೆಂಟ್ ಸೈಜಿನ ಕಳ್ಳರ ನಡುವೆ ಈ ತೋರ್ಸು ತೋರ್ಸು ಗ್ಯಾಂಗ್. ಕೊಲ್ಲಮೊಗ್ರ ಸಮಾಜ ಕಂಟಕರ ಅಡ್ಡ ಆಗುವ ಮೊದಲು ಸುಬ್ರಹ್ಮಣ್ಯ ಪೊಲೀಸರು ಅಲ್ಲೊಂದು ಓಪಿ ಓಪನ್ ಮಾಡಿದರೆ ಮೂಡಾಯಿ ಕಳ್ಳರ ಉಸ್ಕುದಮ್ಮು ಸ್ವಲ್ಪ ಕಂಟ್ರೋಲ್ ಗೆ ತರಬಹುದು.
Post a Comment