ಅಲ್ಲಿ ಗುತ್ತಿಗಾರು ಚತ್ರಪ್ಪಾಡಿಯಲ್ಲಿ ದಲಿತರು ನಡೆದು ಹೋಗುವ ಕಾಲು ದಾರಿಯೊಂದನ್ನು ಕಾಂಗ್ರೆಸ್ ನಾಯಕ ಡಿ.ಜೆ ಜನ್ನಣ್ಣ ಬಂದ್ ಮಾಡಿ ದಲಿತರು ಮನೆಗೆ ಹೋಗಲು ಹೆಲಿ ಕಾಪ್ಟರ್ ಬಳಸಿ ಕೊಳ್ಳುವ ಪರಿಸ್ಥಿತಿ ತಂದದ್ದು ಮಾತ್ರ ಆತಂಕಕಾರಿ ಬೆಳವಣಿಗೆ. ಹಾಗೆಂದು ಕೆಲವು ವರ್ಷಗಳ ಹಿಂದೆ ಡಿ.ಜೆ ಜನ್ನಣ್ಣನ ತಂದೆಯವರೇ ಈ ಜಾಗದಲ್ಲಿ ನಾಲ್ಕು ಫೀಟ್ ಕಾಲುದಾರಿಯನ್ನು ಚತ್ರಪ್ಪಾಡಿಯ ಕುಂಞಪ್ಪಣ್ಣ, ನೇತ್ರಕ್ಕ, ರ ಮೇಶಣ್ಣ, ಕೆಂಬಾರೆ ವಿಶ್ವಣ್ಣ ಮತ್ತು ದಿನಕರಣ್ಣನವರ ಮನೆಗೆ ಹೋಗಲು ಬಿಟ್ಟಿದ್ದರು. ಅವರ ನಂತರ ಡಿ.ಜೆ ಜನ್ನಣ್ಣ ಕೂಡ ಆ ಕಾಲುದಾರಿಯ ಬಗ್ಗೆ ಯಾವುದೇ ಇಂಗ್ಲೀಷ್ ಮಾತಾಡಿರಲಿಲ್ಲ. ಆದರೆ ಡಿ.ಜೆಗೆ ಮೊನ್ನೆ ಏನಾಯಿತೋ ಗೊತ್ತಿಲ್ಲ. ಜೆಸಿಬಿ ತಂದು ಕಾಲು ದಾರಿ ಬಂದ್ ಮಾಡಿ ಇದು ಜಾಗ ನನ್ನದು ಎಂದು ಘೋಷಣೆ ಮಾಡಿದ್ದಾರೆ.
ಹಾಗೆ ಕಾಲು ದಾರಿ ಬಂದ್ ಆದ ತಕ್ಷಣ ಸ್ಥಳೀಯ ಮುಂದಾಳು ವಸಂತ ಎಂಬವರು ಸದ್ರಿ ದೂರನ್ನು ಅಂಬೇ ಡ್ಕರ್ ರಕ್ಷಣಾ ವೇದಿಕೆಗೆ ಮುಟ್ಟಿಸಿ ಬಿಟ್ಟರು. ವೇದಿಕೆಯ ಪದಾಧಿಕಾರಿಗಳು ಆಗಸ್ಟ್ 4ರಂದು ಚತ್ರಪ್ಪಾಡಿಗೆ ಭೇಟಿ ಕೊಟ್ಟಿದ್ದು ಅಲ್ಲಿ ಡಿ.ಜೆ ಮತ್ತು ಸುಬ್ರಹ್ಮಣ್ಯ ಪೊಲೀಸ ರೊಂದಿಗೆ ಕುಂತು ಮಾತಾಡಿ ದಲಿತರ ಮನೆಗೆ ಆರು ಫೀಟ್ ರಸ್ತೆಯ ಜಾಗವನ್ನೇ ಬಿಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಅದೊಂದು ಸಿವಿಲ್ ಮ್ಯಾಟ್ರಪ್ಪ ಎಂದು ಸುಬ್ರಹ್ಮಣ್ಯ ಪೊಲೀಸರು ಅದೇ ರಾಗ ಅದೇ ಹಾಡು ಹಾಡಿದ್ದು ಅಳತೆ ಮಾಡಿ ಇತ್ಯರ್ಥ ಮಾಡಿಕೊಳ್ಳಲು ಹೇಳಿ ಪುಸ್ಕ ಜಾರಿದ್ದಾರೆ. ಆದರೆ ಅಳತೆ ಯಾವಾಗ? ಮಾಡುವವರು ಯಾರು? ಮಾಡಿ ಸುವವರು ಯಾರು?
ನಂತರದ ಬೆಳವಣಿಗೆಯಲ್ಲಿ ಡಿ.ಜೆ ವಸಂತ ಮತ್ತಿತರರ ವಿರುದ್ಧ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದು ವಸಂತ ಟೀಮಿನಿಂದ ನನಗೆ ಜೀವ ಬೆದರಿಕೆ ಇದೆ ಎಂದು ಪೋಲಿಸರಲ್ಲಿ ಹೇಳಿದ್ದರು. ಈ ಬಗ್ಗೆ ಇದೀಗ ಮಾತು ಕತೆ ಮುಂದುವರೆದಿದ್ದು ಅಂತೂ ಇಂತೂ ಕುಂತಿ ಮಕ್ಕಳಿಗೆ ಮನೆಗೆ ಹೋಗಲು ದಾರಿ ಇಲ್ಲದಾಗಿದೆ. ಯಾವಾಗಲೂ ಮನೆಗೆ ಹೋಗುವ ದಾರಿ ಇದೀಗ ಬಂದ್ ಆಗಿರುವ ಕಾರಣ ದಲಿತರು ಒಂದೂವರೆ ಕಿಲೋ ಜಾಸ್ತಿ ನಡೆದು, ಸ್ಮಶಾನದಲ್ಲಿ ಹಾದು ಕುಲೆಗಳೊಂದಿಗೆ ಮಾತಾಡಿ ಮನೆ ಸೇರುವ ಕಷ್ಟವಿದೆ. ಈ ಬಗ್ಗೆ ಯಾರಲ್ಲಿ ಮಾ ತಾಡಿದರೂ ಅಳತೆ ಅಗ್ಲಿ ಅಂತ ಹೇಳುವವರೇ ವಿನಃ ಅದ ಕ್ಕೊಂದು ಪರಿಹಾರದ ವಿಷಯವೇ ಇಲ್ಲ. ಈ ಬಗ್ಗೆ ಡಿ.ಜೆ ಹೇಳುವುದು ಏನೆಂದರೆ ಅದು ಅವರದ್ದೇ ಜಾಗವಂತೆ, ಕಳೆದ ವರ್ಷವೇ ತಹಶೀಲ್ದಾರ್ ಆದೇಶದ ಮೇರೆಗೆ ಆರ್ ಐ ಇದ್ದು ಸರ್ವೇ ಇಲಾಖೆ ಅಳತೆ ಮಾಡಿ ಗಡಿ ಗುರುತು ಮಾಡಿದ್ದಾರೆ. ಆ ಜಾಗದಲ್ಲಿ ನಾನು ಅಗಳು ತೆಗೆದಿದ್ದು ಅದರೊಳಗೆ ನಾಲ್ಕು ಫೀಟ್ ಅವರಿಗೆ ಕಾಲುದಾರಿ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಹಾಗಾದ್ರೆ ಅಗಳಿನಲ್ಲಿ ಅಂಚಿಂಚಿ ಹೋಗಲು ಅವರೇನು ಕಂಜಿಕೈಕಂಜಿಯಾ? ಆದರೆ ವಸಂತರ ಪ್ರಕಾರ ಡಿ.ಜೆ ಸರ್ಕಾರೀ ಜಾಗವನ್ನು ಗುಳುಂ ಮಾಡಲು ಅಗಳು ತೆಗೆದಿದ್ದು ನಮ ಗೆಲ್ಲರಿಗೂ ಮನೆಗೆ ಹೋಗಲು ರಸ್ತೆ ಬೇಕು, ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಚತ್ರ ಪ್ಪಾಡಿಯಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ ಒಬ್ಬರು ರಚ್ಚೆಯಿಂದ ಬಿಡಲ್ಲ ಇನ್ನೊಬ್ಬರು ಕೂಂಜಿಯಿಂದ ಬಿಡಲ್ಲ ಎಂಬಂತಹ ಸ್ಥಿತಿ ಇದೆ. ವಿವಾದ ಮುಗಿಯುವ ತನಕ ದಲಿತ ಮನೆಗಳಿಗೆ ಒಂದೂವರೆ ಕಿಲೋ ದೂರದ ಕುಲೆಗಳ ದಾರಿಯೇ ಗತಿ.
Post a Comment