ಹಾಗೆಂದು ಮೊನ್ನೆ ಆಧಾರ್ ಕಾರ್ಡ್ ರಿಪೇರಿಗೆಂದು ಅರಂತೋಡಿಗೆ ಬಂದು ಕಾಣೆಯಾದ ಮತ್ತು ಅರಂಬೂರು ಪಾಲಡ್ಕದ ಪಯಸ್ವಿನಿ ನದಿಯಲ್ಲಿ ಶವವಾಗಿ ಸಿಕ್ಕಿದ ಮಿನುಂ ಗೂರು ಬಾಲಣ್ಣನ ಸಾವಿನ ಹಿಂದೆ ಕತೆಯಿದೆ. ತೀರಾ ಸಾಧು ಆಗಿದ್ದ ಬಾಲಣ್ಣ ಎಲ್ಲರಿಗೂ ಬೇಕಾದವರಾಗಿದ್ದರು. ಆದರೆ ಕೆಲವರು ಬಾಲಣ್ಣನಿಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದ ಕಾರಣ ಆ ಕಿರುಕುಳದಿಂದ ಬೇಸತ್ತು ಬಾಲಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎರಡೂ ಚೆಂಬುಗಳಲ್ಲಿ ಸುದ್ದಿ ಯಾಗಿದೆ.
ಹಾಗಾದರೆ ಬಾಲಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ತನಕ ಅವರಿಗೆ ಕಿರುಕುಳ ಕೊಟ್ಟವರು ಯಾರು ಎಂಬುದನ್ನು ಹೇಳಲು ಹೋದರೆ ಅದೇ ದೊಡ್ಡ ಸುದ್ದಿಯಾದೀತು. ಅಲ್ಲಾ ಮಾರಾಯ್ರೆ ಬಾಲಣ್ಣ ಹೇಗೂ ಪಯಸ್ವಿನಿಗೆ ಹಾರಿ ಹೋಗಿ ಬಿಟ್ಟರು, ಆದರೆ ಅವರ ಡೆಡ್ ಬಾಡಿಯನ್ನು ಅವರ ಮನೆಗೆ ಕೊಂಡು ಹೋಗಲಾಗದಷ್ಟು ಅವರು ಯಾರಿಗಾದರೂ ಅನ್ಯಾಯ ಮಾಡಿದ್ದಾರಾ? ಅವರಿಗೆ ಅವರ ಸ್ವಂತ ಆಸ್ತಿ, ಭೂಮಿ ಇತ್ತಲ್ಲ. ಅಲ್ಲಿ ಅವರ ಅಂತ್ಯಕ್ರಿಯೆ ಮಾಡುವ ಬದಲು ಯಾವುದೋ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ಮಾಡಿದ ಬಗ್ಗೆ ಚೆಂಬು ಗ್ರಾಮಸ್ಥರಿಗೆ ಅಸಹನೆ ಇದೆ. ಸಜ್ಜನನ ಸಾವು ಈ ರೀತಿ ಆಗಬಾರದಿತ್ತು.
Post a Comment