ಪಂಜ ಸೊಸೈಟಿಯಲ್ಲಿ ಹತ್ತು ಲಕ್ಷ ಹಣ ಅಂಚಿಂಚಿ ಆದ ಭಯಾನಕ ಘಟನೆ ನಡೆದಿದೆ. ಅಲ್ಲಿ ಬೀದಿಗುಡ್ಡೆ ಸೈಡಿನ ಸ್ಟಾಫ್ ಒಬ್ಬ ರಸಗೊಬ್ಬರ ಸೆಕ್ಷನ್ ನಲ್ಲಿ ಪತ್ತ್ ಲಚ್ಚ ತನಕ ತಿಂದಿದ್ದು ಮೊನ್ನೆ ಅವನ ಬಂಜಿ ಒಂಭತ್ತು ತಿಂಗಳಿನಂತೆ ದೊಡ್ಡದಾಗಿ ಡೈಂಯಿ ಡುಂಯಿ ಅಂತ ಅರಚಿ ಕೊಂಡಾಗ ಆಡಳಿತ ಮಂಡಳಿ ಕುಂಭಕರ್ಣ ನಿದ್ದೆಯಿಂದ ಎದ್ದು ಕುಂತಿದೆ. ಇದೀಗ ಆ ಕರಫ್ಟ್ ಸ್ಟಾಫನ್ನು ಅಮಾನತಿನಲ್ಲಿ ಇಟ್ಟಿದ್ದು ಅವನಿಂದ ದುಡ್ಡು ವಸೂಲಿ ಮಾಡುವ ಕೆಲಸ ಕಾರ್ಯಗಳಿಗೆ ಆಡಳಿತ ಮಂಡಳಿ ಚಾಲನೆ ಕೊಟ್ಟಿದೆ. ಇದರ ಅಂಗವಾಗಿ ತಿಂದ ದುಡ್ಡು ಕಕ್ಕಿಸಲು ಆ ಸ್ಟಾಫ್ ನ ಮನೆಯವರನ್ನು ಕರೆಸಿ ಅವರ ಜಾಗಕ್ಕೆ ಬುಳೆ ಸಾಲ, ಮೂಜಿ ಪರ್ಸೆಂಟ್, ಓನ್ ಫಂಡ್ ಸಾಲ ಹೀಗೆ ಮೂಂಕು ಮುಟ್ಟ ಸಾಲ ಕೊಟ್ಟು ದುಡ್ಡು ಕಕ್ಕಿಸಲು ಪಂಚಾತಿಗೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲಾ ಮಾರಾಯ್ರೆ ಒಂದು ಸಂಸ್ಥೆಯಲ್ಲಿ ಹತ್ತು ಲಕ್ಷ ತಿನ್ನುವ ತನವೂ ಯಾರಿಗೂ ಗೊತ್ತೇ ಆಗಲ್ಲ ಅಂದ್ರೆ ಆ ಸಂಸ್ಥೆಗೆ ಮ್ಯಾನೇಜರ್ ಯಾಕೆ, ಆಡಳಿತ ಮಂಡಳಿ ಯಾಕೆ ಉಪ್ಪು ಹಾಕಿ ನೆಕ್ಲಿಕ್ಕ? ಆ ಪೂವಣ್ಣ ಎಲ್ಲಿದ್ದಾರೆ? ಅವರು ತಿಂದ ಎಂಟು ಲಕ್ಷ ಮನ್ನಾ ಆಯಿತಾ? ಇನ್ನು ಸೊಸೈಟಿ ಗಳಲ್ಲಿ ಎಲಿಪಾಸನ್ ಇಡಬೇಕಷ್ಟೇ. ಯಾಕೆಂದರೆ ಸಹಕಾರಿ ಸಂಘಗಳಲ್ಲಿ ಇಲಿ ಹೆಗ್ಗ ಣಗಳ ಜುಗಲ್ ಬಂದಿ, ಜಂಟಿ ಕಾರ್ಯಾಚರಣೆ ಭಾರೀ ಜಾಸ್ತಿ ಯಾಗಿದೆ.
Post a Comment