ಮೊನ್ನೆ ತಾನೇ ಪೆರುವಾಜೆ ಪಂಚಾಯತ್ ವತಿಯಿಂದ ತನ್ನ ವಾರ್ಡ್ ನ ಒಂದು ರಸ್ತೆಯ ಚರಂಡಿ ರಿಪೇರಿ ಸಂದರ್ಭದಲ್ಲಿ ನಡೆದ ಅದೇನೋ ಕಿರಿಕಿರಿಯಿಂದ ಅಟ್ರಾಸಿಟಿ ಕೇಸ್ ಗೆ ಒಳಗಾಗಿದ್ದ ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯ, ಸುಳ್ಯ ಕಾಂಗ್ರೆಸ್ ಯುವ ನಾಯಕ ಸಚಿನ್ ರಾಜ್ ಶೆಟ್ಟಿ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅದೊಂದು ಪೊಕ್ಕಡೆ ಕೇಸ್ ಮಾರಾಯ್ರೆ. ಫಿಕ್ಸಿಂಗ್ ಕೇಸ್ ಅದು. ಅದೇ ಸ್ಪಾಟಲ್ಲಿ ಭದ್ರತೆಗೆ ಬಂದಿದ್ದ ಬೆಳ್ಳಾರೆ ಪೋಲಿಸರು ಇದ್ದರು, ಪಂಚಾಯತ್ ಗೆ ಸಂಬಂಧ ಪಟ್ಟವರು ಇದ್ದರು.
ಮೇಲಾಗಿ ಸಚಿನ್ ರಾಜ್ ಶೆಟ್ಟಿ ಆ ವಾರ್ಡ್ ನ ಮೆಂಬರ್ ಕೂಡ. ಕೆಲಸ ಎಲ್ಲಾ ಮುಗಿದ ಮರುದಿನ ಸಚಿನ್ ಮೇಲೆ ಅಟ್ರಾಸಿಟಿ ಕೇಸ್. ಇದೀಗ ಆ ಕೇಸ್ ಗೆ ತಡೆ ಸಿಕ್ಕಿದ್ದು ಮುಂದೆ ಈ ಸುಳ್ಳು ಕೇಸು ಕೊಟ್ಟವರ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡಲಾಗುವುದು ಮತ್ತು ಸತ್ಯ ಪ್ರಮಾಣ ಮಾಡಲು ಶ್ರೀ ಕ್ಷೇತ್ರ ಕಾನತ್ತೂರಿನ ಮೊರೆ ಹೋಗಲಾಗುವುದು ಎಂದು ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.
Post a Comment