ಅಲ್ಲೊಂದು ಕೊರಗಜ್ಜನ ಸಾನಿಧ್ಯ ಇದೆ. ಶುರುವಿನಿಂದಲೂ ಅಜ್ಜನಿಗೆ ಕ್ವಾಟ್ರು ಇಡೋದು ಪದ್ಧತಿ. ಇದೀಗ ಅದನ್ನೇ ನೆಪ ಮಾಡಿಕೊಂಡು ದೊಡ್ಡಡ್ಕ ಪರಿಸರದಲ್ಲಿ ಕೆಲವು ಮಂದಿ ಕ್ವಾಟ್ರು ಮಾರುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ದೊಡ್ಡಡ್ಕ ಪರಿಸರದ ಟೈಟ್ ಮಾಸ್ಟರ್ ಗಳು ಟೈಟ್ ಆಗಲು ಒಂದೋ ಕಲ್ಲುಗುಂಡಿಗೆ ಹತ್ತ ಬೇಕು ಅಥವಾ ಅರಂತೋಡಿನಲ್ಲಿ ಇಳಿಯ ಬೇಕು. ಹಾಗಾಗಿ ದೊಡ್ಡಡ್ಕದಲ್ಲೇ ಅಜ್ಜನ ನೆವದಲ್ಲಿ ಕ್ವಾಟ್ರು ಸಿಗುವ ಕಾರಣ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂತ ಖುಷಿಯಲ್ಲಿದ್ದಾರೆ.
ದೊಡ್ಡಡ್ಕ ಪರಿಸರದಲ್ಲಿ ಪುಣಿಟ್ ಅಂಗಡಿ, ಮಲೆಯಾಳಿ ಅಂಗಡಿಗಳಲ್ಲಿ ಕೂಲ್ ಡ್ರಿಂಕ್ ಮಾರಿದ ಹಾಗೆ ಕ್ವಾಟ್ರು ಮಾರ ಲಾಗುತ್ತಿದೆ. ಇನ್ನು ಇಲ್ಲಿ ದೊಡ್ಡಡ್ಕ ಪರಿಸರದಲ್ಲಿ ಪೆರ್ಮರಿ ಒಂದಿದ್ದು ಅದು ಆ ಭಾಗದ ಅಷ್ಟೂ ಅಂಗಡಿಗಳಿಗೆ, ಮನೆ ಗಳಿಗೆ ರಖಂ ಮತ್ತು ಚಿಲ್ಲರೆ ಕ್ವಾಟ್ರು ಸರಬರಾಜು ಮಾಡುವ ಏಕೈಕ ಡೀಲರ್ ಎಂದು ತಿಳಿದುಬಂದಿದೆ. ಇವನದ್ದು ಒಂಥರಾ ಕ್ವಾಟ್ರು ಲೈನ್ ಸೇಲ್ ಇದ್ದ ಹಾಗೇ. ಇನ್ನು ಕಲ್ಲುಗುಂಡಿ ಪೋಲಿ ಸರು ಏನಾದರೂ ಅಪ್ಪಿ ತಪ್ಪಿ ದೊಡ್ಡಡ್ಕ ಸೈಡಿಗೆ ಬಂದರೆ ಎಲ್ಲರೂ ಸೇರಿ ಅಜ್ಜನನ್ನು ತೋರಿಸಿ ಬಿಡುತ್ತಾರೆ. ಪೋಲಿಸರೂ ಪಾಪ ಅಜ್ಜನಿಗೆ ಕೈ ಮುಗಿದು ಮುಂದೆ ಹೋಗುತ್ತಾರೆ.
Post a Comment