ಹಾಗೆಂದು ಗುತ್ತಿಗಾರು ಭಾಗದ ವಳಲಂಬೆ ಒಂದು ರಿಪಬ್ಲಿಕ್ ಇದ್ದಂತೆ. ಅಲ್ಲಿ ಏನಿದ್ದರೂ ಆನೆ ನಡೆದದ್ದೇ ದಾರಿ. ಈ ಗುತ್ತಿಗಾರು ಕೂಡ ವಳಲಂಬೆ ರಿಪಬ್ಲಿಕ್‌ಗೇ ಸೇರ್ಪಡೆ ಆಗುವ ಎಲ್ಲಾ ಅಪಾಯಗಳಿವೆ. ಓ ಮೊನ್ನೆ ತಾನೆ ಯಾರೋ ವಳಲಂಬೆ ರಿಪಬ್ಲಿಕ್‌ನಲ್ಲಿ ಬೋರ್‌ವೆಲ್ ಕದ್ದು ಸಿಕ್ಕಿ ಬಿದ್ದಿದ್ದರು. ಈ ಬಗ್ಗೆ ನಾವು ವರದಿಗಳನ್ನು ಪ್ರಕಟಿಸಿದಾಗ ಒಂದೇ ಬೋರ್‌ವೆಲ್ ಅಲ್ಲ ಗಡ, ಇನ್ನೊಂದು ಗುತ್ತಿಗಾರು ಪೇಟೆಯಲ್ಲಿದ್ದ ಬೋರ್ ವೆಲ್ ಕೂಡ ಆಚೆ ಮನೆಗೂ ಹೋಗದೆ, ಇತ್ತ ಅಜ್ಜಿ ಮನೆಗೂ ಹೋಗದೆ ಕಾಣೆಯಾಗಿದೆ ಎಂಬ ಮಾಹಿತಿ ಬಂದಿತ್ತು. ಇದೀಗ ಸಿಮೆಂಟು ಕತೆ ಒಂದು ಬಂದಿದೆ. ಅಲ್ಲಿ ವಳಲಂಬೆಯಲ್ಲಿ ಕೂವೆಕ್ಕೋಡಿ-ವಳಲಂಬೆ ರಸ್ತೆ ಕಾಂಕ್ರೀಟಿಕರಣಕ್ಕೆಂದು ಎರ ಡು ಲೋಡ್ ಸಿಮೆಂಟು ಬಂದಿತ್ತಂತೆ ಗಡ. ಕಾಂಕ್ರೀಟಿಕರಣ ಮುಗಿದು ಉಳಿದ 42 ಗೋಣಿ ಸಿಮೆಂಟನ್ನು ಕಂತ್ರಟ್ಟಿನವನು ಅಲ್ಲೇ ಎಲ್ಲೋ ಕಲ್ಚರ್ ಎಂಬಲ್ಲಿಯೋ ಅಥವಾ ವಳಲಂಬೆ ಸಂಕಪಾಲನ ಆಲಯದ ಎದುರೋ ಇಟ್ಟು ನಾಳೆ ಬಂದು ಇನ್ನೊಂದು ಕಾಂಕ್ರೀಟೀಕರಣ ನಡೆಯುವ ಜಾಗಕ್ಕೆ ಕೊಂಡೋ ದರಾಯಿತು ಎಂದು ಅಲ್ಲಿಂದ ತೆರಳಿದ್ದನಂತೆ. ಆದರೆ ಮರು ದಿನ ಬಂದು ನೋಡಿದರೆ 42ರಲ್ಲಿ ಅರ್ಧದಷ್ಟು ಸಿಮೆಂಟು ಗೋಣಿ ಇಲ್ಲ.
ವಳಲಂಬೆಯಲ್ಲಿ ಬೊಳ್ಳಗಿಳ್ಳ ಏನಾದರೂ ಬಂದಿದೆಯಾ ಎಂದು ಕೇಳಿದರೆ, 'ಇಲ್ಲ ರಾತ್ರಿಯಿಡಿ ಚಂದಿರ ಬಾನಲ್ಲಿದ್ದ' ಎಂಬ ಉತ್ತರ ಬಂದಿದೆ. ಇನ್ನು ಇಲಿ ಹೆಗ್ಗಣಗಳಿಗೆ ಎಸಿಸಿ ಸಿಮೆಂಟು ಬೇಡ, ಅವುಗಳು ಕೋರಮಂಡಲ್ ಸಿಮೆಂಟ್ ಮಾತ್ರ ಮೂ ಸೋದು. ಹಾಗಾದರೆ ಸಿಮೆಂಟು ಗೋಣಿಗಳು ಎಲ್ಲಿ ಹೋದ ವು? ಈ ಬಗ್ಗೆ ಸ್ಥಳೀಯ ಮಹಾನ್ ದೇಶಭಕ್ತ, ಬಡವರ ಬಂಧು, ಬೆಚ್ಚ ರಕ್ತದ ಯುವಕರ ಕಣ್ಮಣಿ, ಅಜಾತ ಸತ್ರು, ದೀನ ದಲಿತರ ಉದ್ಧಾರಕ, ಗುತ್ತಿಗಾರಿನ ಸಿಲ್ಪಿ, ವಳಲಂಬೆಯ ಸೆಲ್ಫೀಯಲ್ಲಿ ಕೇಳಿದರೆ 'ರಾತ್ರಿ ಸ್ವಲ್ಪ ಅರ್ಜೆಂಟ್ ಇತ್ತು, ಅದಕ್ಕೆ ಸಿಮೆಂಟ್ ಕೊಂಡೋಗಿದ್ದೇನೆ' ಎಂಬ ಉತ್ತರ ಬಂದಿದೆ. ಅಲ್ಲ ಮಾರಾ ಯ್ರೇ ರಾತ್ರಿ ಹೊತ್ತಲ್ಲಿ ಸಿಮೆಂಟ್‌ನ ಅರ್ಜೆಂಟ್ ಯಾಕೆ ಬಂತೆಂದೇ ಕಾಂಟ್ರಕ್ಟ್ನವನಿಗೆ ಇಲ್ಲಿ ತನಕ ಅರ್ಥವೇ ಆಗಿ ಲ್ಲವಂತೆ. ಅಲ್ಲ ಮಾರಾಯ್ರೇ ರಾತ್ರಿ ಹೊತ್ತಲ್ಲಿ ಟಾರ್ಚು, ಪಜೆ, ಬೆಡ್‌ಶೀಟು, ಹೇಸಿಗೆ ಮಾಡಲು ಹಾಸಿಗೆ, ಸೊಳ್ಳೆ ಬತ್ತಿ, ನೈಂಟಿ, ನೈಟಿ ಮತ್ತು ನಿದ್ದೆ ಇದ್ದರೆ ರಾತ್ರಿಗೆ ಸಾಕಾಗುತ್ತದೆ. ಇದು ರಾತ್ರಿ ಸಿಮೆಂಟ್‌ನ ಅರ್ಜೆಂಟ್ ಮನುಷ್ಯರಿಗೆ ಯಾಕೆ ಬೀಳುತ್ತದೆ ಎಂದೇ ಅರ್ಥವಾಗುತ್ತಿಲ್ಲ. ನೈಟ್ ಹಲ್ಲುನೋವು ಏನಾದರೂ ಶುರುವಾಯ್ತಾ?ಅದಕ್ಕೂ ಅಷ್ಟು ಸಿಮೆಂಟ್ ಬೇಡ. ಮತ್ಯಾಕೆ ಸಿಮೆಂಟು?
Post a Comment