September 2023

                                               



    ಕೆಲವು ದಿನಗಳ ಹಿಂದೆಯಷ್ಟೇ ನಾವು ಒಂದೇ ಗ್ರಾಮದಲ್ಲಿ ಮೂರು ಬಾರ್ ಓಪನ್ ಆಗಲಿದೆ ಎಂದು ‌ಬರೆದ್ದಿದ್ದೆವು. ಒಂದೇ ಗ್ರಾಮದಲ್ಲಿ ಮೂರು ಬಾರ್ ಓಪನ್ ಆದರೆ ನಷ್ಟ ಬರಬಹುದು ಎಂದೂ ಗೀಚಿದ್ದೆವು. ಕೇವಲ ಎರಡೂವರೆ ಗ್ರಾಮಗಳಿಗಾಗಿ ಮೂರು ಬಾರ್ ಗಳಿಗೆ ಪರ್ಮಿಷನ್ ಕೊಟ್ಟರೆ ಬಾರೋನರ್ ಗಳಿಗೆ ಬ್ಯಾರದಲ್ಲಿ ನಷ್ಟ ಬರಬಹುದು ಎಂದೂ ಗೀಚಿದ್ದೆವು. ನಾವು ಯಾಕೆ ಬರೆದೆವೆಂದರೆ ಬಾರ್ ನಡೆಸಲು ಕಷ್ಟ ಇದೆ ಮಾರಾಯ್ರೆ. ಅದೆಲ್ಲ ಕೋಟಿ ಲೆಕ್ಕದ ವ್ಯವಹಾರ. ಚಿಲ್ಲರೆಗಳೆಲ್ಲ ಅದಕ್ಕೆ ಹೋದರೆ OC ಯಲ್ಲಿ ಮುಳುಗ ಬೇಕಾದೀತು.
   ಹಾಗೆಂದು ಒಂದು ಬಾರ್ ಓಪನ್ ಮಾಡಲು ಕಡಿಮೆ ಅಂದರೂ ಒಂದು ಕೋಟಿ ಇಂಡಿಯನ್ ಕರೆನ್ಸಿ ನಮ್ಮ ಪರ್ಸ್ ನಲ್ಲಿರಬೇಕು. ಅದರಲ್ಲೂ ಈಗ ಒಂದು ಕೋಟಿ ವೆಚ್ಚದ CL2, CL9ಗೆ ಪರ್ಮಿಷನ್ ಸಿಗಲ್ಲ. ನೀವು ಎರಡು ಕೋಟಿ ಗೋಣಿಯಲ್ಲಿ ಹಿಡಕ್ಕೊಂಡು ಹೊರಟರೆ ಮಾತ್ರ ನಿಮಗೆ CL7 ಪರ್ಮಿಷನ್ ಸಿಗುತ್ತದೆ. ಆದರೆ ಇದಕ್ಕೆ ಹೋಟೆಲ್ ಬೇಕು, ಲಾಡ್ಜಿಂಗ್ ಬೇಕು, ಅದೆಲ್ಲ ದೊಡ್ಡ ರಾಮಾಯಣ. ಈ CL7 ಸಮಸ್ಯೆ ಏನೆಂದರೆ ಅದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್  ಮಾಡಕ್ಕಾಗಲ್ಲ. ನೀವೀಗ ಒಂದು CL7 ಪರ್ಮಿಷನ್ ತಗೊಂಡು ಹೋಗಿ ಬಂಟಮಲೆಯಲ್ಲಿ ಬಾರ್ ಓಪನ್ ಮಾಡಿದರೆ ಅದು ಅಲ್ಲೇ ಕುಡುಕರ ಮನ ತಣಿಸ ಬೇಕು. ಕುಡುಕರು ಬಂಟಮಲೆಗೆ ಬರಲ್ಲ, ಅವರಿಗೆ ಕಷ್ಟ ಆಗುತ್ತದೆ ಅಲ್ಲಿಗೆ ಬರ್ಲಿಕ್ಕೆ ಎಂದು ಅದೇ ಪರ್ಮಿಟ್ ಹಿಡಕ್ಕೊಂಡು ಕೆಳಗೆ ಬಂದು ಪಂಜದಲ್ಲಿ, ಬೆಳ್ಳಾರೆಯಲ್ಲಿ ಬಾರ್ ಓಪನ್ ಮಾಡಲು ಆಗಲ್ಲ. ಇನ್ನು MSIL ಗಡಂಗ್ ಮಾಡಲೂ ಪರ್ಮಿಷನ್ ಸಿಗುತ್ತದೆ. ಗೂಡಂಗಡಿಗಳ ಹಾಗೆ ಇಂತಹ ಗಡಂಗ್ ಓಪನ್ ಆಗಿದೆ. ಇಂಥ MSIL ಗಡಂಗ್ ಗಳು ಕುಡುಕರನ್ನು ದೋಚುತ್ತಿದ್ದು MRP ಬಿಟ್ಟು ಇವರೇ ಅಂಡಿಗುಂಡಿ ರೇಟ್ ಹಾಕಿ ಕುಡುಕರ ನೆತ್ತೆರ್ ಸ್ಟ್ರಾದಲ್ಲಿ ಎಳೆಯುತ್ತಿದ್ದಾರೆ. ಹಾಗೆಂದು ಈ MSIL ನವರು ಪ್ರಿಂಟೆಡ್ ರೇಟ್ ನಲ್ಲಿಯೇ ಕುಡುಕರಿಗೆ ಕುಪ್ಪಿ ಕೊಡಬೇಕು. ಉದಾಹರಣೆಗೆ ಈಗ MLಗೆ ಒಂದು ಕ್ವಾಟ್ರಿಗೆ 80 ರೂಪಾಯಿ ಅಂತ ಅದರ ಕುಪ್ಪಿಯಲ್ಲಿ ರೇಟ್ ಬರೆದಿದ್ದರೆ MSIL ಗಡಂಗ್ ನವರು ಅಷ್ಟೇ ರೇಟೀಗೆ ಕುಪ್ಪಿ ಕಟ್ಟಿ ಕುಡುಕ ನನ್ಮಗನ ಕೈಯಲ್ಲಿ  ಕೊಡಬೇಕು. ಆದರೆ MSIL ನವರು 80 ರೂಪಾಯಿ ಮೌಲ್ಯದ MLಗೆ ಕುಡುಕರ ಕೈಯಿಂದ 85 ರೂಪಾಯಿ ಎಳೆದು ಕೊಳ್ಳುತ್ತಿದ್ದಾರೆ. ಇದು ಅನ್ಯಾಯ. ಇಲ್ಲಿ ಕಮಿಷನ್ ಬೇರೆ, ಲಾಭ ಬೇರೆ. ಅಂತೂ ಇಂತೂ ಕುಡುಕ ನನ್ಮಕ್ಕಳಿಗೆ ಚರಂಡಿಯೇ ಗತಿ.
   ಇನ್ನು ಬಾರ್ ನಡೆಸಲು ಕಷ್ಟ ಇದೆ ಎಂದು ನಾನು ಆಗಲೇ ಹೇಳಿದ್ದೆ. ಯಾಕೆಂದರೆ ಅಬ್ಕಾರಿ ಇಲಾಖೆ ಸರ್ಕಾರದ ATM ಇದ್ದ ಹಾಗೆ. ಯಾವಾಗ ಮೇಲಿಂದ ಫಂಡ್ಸ್ ಗೆ ಕರೆ ಬರುತ್ತದೆಂದೇ ಹೇಳಕ್ಕಾಗಲ್ಲ. ಇನ್ನು ಲಂಚದ ಮಟ್ಟಿಗೆ ಅಬ್ಕಾರಿ ಇಲಾಖೆ ಕ್ಲೀನ್. ಪ್ರತಿ ಬಾರಿನವರೂ ತಿಂಗಳಿಗೆ ಹತ್ತು ಸಾವಿರದ ಕಟ್ಟನ್ನು ಇಲಾಖೆ ಟೇಬಲ್ ಗೆ ಮುಟ್ಟಿಸಲೇ ಬೇಕು. ಒಂದು ದಿನ ಅಂಚಿಂಚಿ ಆದರೂ ಇಲಾಖೆಗೆ ಸೂತಿಕೊ ಬಂದು ಬಿಡುತ್ತದೆ. ಲೆಕ್ಕ ಹಾಕಿ, ಒಂದು ತಾಲೂಕಿನಲ್ಲಿ, ಒಂದು ಜಿಲ್ಲೆ ಯಲ್ಲಿ ಎಷ್ಟು ಬಾರುಗಳಿವೆ. ಒಂದೊಂದು ಬಾರೂ ಹತ್ತತ್ತು ಕೊಟ್ಟರೆ ದುಡ್ಡೇಷ್ಟಾಯಿತು ಮಾರಾಯ್ರೆ. ಆಯ್ತು ಅಬ್ಕಾರಿಗಳಿಗೆ  ಮಾತ್ರನಾ ಅಗೆಲು? ಇಲ್ಲ. ಅಬ್ಕಾರಿ ಜೀಪು ಹೋದ ಕೂಡಲೇ ಲೋಕಲ್   ಪೋಲಿಸ್ ಠಾಣೆ ಬಿನ್ನೆರ್ ಬಂದು ಕ್ಯಾಶ್ ಕೌಂಟರ್ ನಲ್ಲಿ ನಿಲ್ಲುತ್ತಾರೆ. ಲೋಕಲ್ ಪೋಲಿಸ್ ಸ್ಟೇಷನ್ ಗೆ ಪ್ರತೀ ಬಾರಿಂದ ಮಿನಿಮಮ್ ಎರಡೂವರೆಯಿಂದ ಹತ್ತರ ತನಕ ಮಾಮೂಲು ಕೊಡಲೇ ಬೇಕಾಗುತ್ತದೆ. ಕೊಡದಿದ್ದರೆ ಪೋಲಿಸರು ಹೇಗೆಲ್ಲ ಎಣ್ಣೆ ಕಾಯಿಸ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆಯ್ತು ಮಾಮೂಲು ಕೊಟ್ಟು ಬಾರಿನವರು ಸುಮ್ಮನೆ ಕೂರಂಗಿಲ್ಲ. ಅಬ್ಕಾರಿ ಪೋಲಿಸರ, ಮಾಮೂಲು ಪೋಲಿಸರ ಮನೆಯ ಮದುವೆ, ಬಯಕ್ಕೆ, ಬರ್ಡೆ, ನೇಮ, ಕೊನೆಗೆ ಕುಲೆಗಳಿಗೆ ಬಡಿಸಲೂ ಬೇಕಾಗುವ ಮದ್ಯವನ್ನೂ ಬಾರಿನವರು ಮುಟ್ಟಿಸಲೇಬೇಕು. ಇಲ್ಲದಿದ್ದರೆ ಪೋಲಿಸರು ಅಂಚಿಂಚಿ ಹೋಗುವಾಗ ಬಾರಿನತ್ತ ನೋಡಿ ಮಲೆಯುತ್ತಾ ಹೋಗು ವುದು ರೂಢಿ. ಇಷ್ಟು ಮಾಹಿತಿ ಕೊಟ್ಟ ನನ್ನ ಬಾರ್ ಫ್ರೆಂಡ್ ನಲ್ಲಿ ಕೊನೇಗೆ ಕೇಳಿದೆ, ಲೋಕಲ್ ರೌಡಿಗಳಿಗೆ ನೀವು ಮಾಮೂಲು ಕೊಡಲ್ವಾ ಎಂದು. ಅದಕ್ಕವನು ಲೋಕಲ್ ರೌಡಿಗಳು ಯಾರಿದ್ದಾರೆ, ಸದ್ಯಕ್ಕೆ ನಾವೇ ಲೋಕಲ್ ರೌಡಿಗಳು ಎಂದು ನಕ್ಕಿದ್ದ.



   

    







                                      


 ಭೂ ಕಬಳಿಕೆ ಧರ್ಮಸ್ಥಳದವರು ಮಾತ್ರ ಮಾಡಿದ್ದ?
     ಓ ಮೊನ್ನೆಯಿಂದ ಧರ್ಮಸ್ಥಳದವರು ಭೂ ಕಬಳಿಕೆ ಮಾಡಿದ್ದಾರೆ ಎಂಬ ಅರಚಾಟ ಜೋರಾಗಿ ಶುರುವಾಗಿದೆ.  ಈ ಅರಚಾಟ ಹಿಂದೆಯೂ ಇತ್ತು. ಆದರೆ ಈಗ ಕಂಡೆ ಯಿಂದಲೇ ಅರಚಾಟ ಶುರುವಾಗಿದೆ. ಹಾಗೆಂದು ಇಲ್ಲಿ ಭೂ ಕಬಳಿಕೆ ಮಾಡದ್ದು ಯಾರು? 74ನೇ ಇಸವಿಯಲ್ಲಿ ಭೂ ಮಸೂದೆ ಎಂಬ ಕಾನೂನು ಬಂದಾಗ ಇದೇ ಧರ್ಮಸ್ಥಳ ದವರ ಭೂಮಿಯ ಸಮೇತ ಇತರೇ ಜಮೀನ್ದಾರರ ಭೂಮಿಯನ್ನು ಗಲಾಟೆ ಮಾಡಿ, ಬಲಾತ್ಕಾರವಾಗಿ ನುಂಗಿ ನೀರು ಕುಡಿದದ್ದು ಯಾರು? ಅದು ಭೂ ಕಬಳಿಕೆ ಅಲ್ವಾ? ಆ ಪ್ರಕ್ರಿಯೆಯನ್ನು ಏನೆಂದು ಕರೆಯಲಿ? ಆ ಕಬಳಿಕೆ ನಂತರ ಅದೇ ಭೂಮಿಯ ಆಸುಪಾಸಿನ ಸರ್ಕಾರಿ ಭೂಮಿಯನ್ನು ಕುಮ್ಕಿ ಹೆಸರಲ್ಲಿ ಕಬಳಿಕೆ ಮಾಡಿದ್ದು ಯಾರು? ಹಾಗೆ ಸರ್ಕಾರಿ ಭೂಮಿಯನ್ನು ಕುಮ್ಕಿ ಹೆಸರಲ್ಲಿ ಕಬಳಿಕೆ ಮಾಡಿದ ನಂತರ ಕುಮ್ಕಿ ಭೂಮಿಯ ಆಸು ಪಾಸಿನ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಆಕ್ರಮಣ ಮಾಡಿ ಆ ಅಕ್ರಮವನ್ನು ಸಕ್ರಮ ಮಾಡಿ ಕೊಂಡು ಆ ಭೂಮಿಯನ್ನೂ ಕಬಳಿಸಿದ್ದು ಯಾರು? ನಮ್ಮಲ್ಲೆಲ್ಲ ಎಕರೆ ಗಟ್ಟಲೆ ಭೂಮಿ ಇದ್ದರೂ ಹೆಂಡತಿ ಹೆಸರಿನಲ್ಲಿ, ಮಗನ ಹೆಸರಲ್ಲಿ, ಮಗಳ ಹೆಸರಿನಲ್ಲಿ, ಸೊಸೆ ಹೆಸರಿನಲ್ಲಿ, ಕುಟುಂಬಿಕರ ಹೆಸರಿನಲ್ಲಿ ಗೋಮಾಳಗಳನ್ನು, ಖಾಲಿ ಸರ್ಕಾರಿ ಭೂಮಿಯನ್ನು, ಅರಣ್ಯ ಪ್ರದೇಶಗಳನ್ನು, ಶಾಲಾ ಕಾಲೇಜುಗಳ ಭೂಮಿಯನ್ನು, ಕಡೆಗೆ ಸ್ಮಶಾನದ ಜಾಗವನ್ನೂ ಬಿಡದೆ ಅಕ್ರಮ ಸಕ್ರಮದಡಿ ಮಂಜೂರು ಮಾಡಿಕ್ಕೊಂಡು ಕಬಳಿಸಿದ್ದು ಯಾರು? ಇಷ್ಟಾಗಿಯೂ ಮನೆ ನಿವೇಶನದ ಹೆಸರಿನಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಮನೆ ನಿವೇಶನದ ಜಾಗ ಮಾಡಿಕೊಂಡು ಭೂಮಿ ನುಂಗಿದ್ದು ಯಾರು? ದಲಿತರ ಭೂಮಿಯನ್ನು ಅವರಿಗೆ ಚಿಲ್ಲರೆ ಸಾಲ ಕೊಟ್ಟು, ಅದಕ್ಕೆ ಅಂಡಿಗುಂಡಿ ಬಡ್ಡಿ ಹಾಕಿ ಕೋರ್ಟ್ ಏಲಂ ಮಾಡಿಸಿ ನುಂಗಿ ನೀರು ಕುಡಿದದ್ದು ಯಾರು? ಸಾರ್ವಜನಿಕ ‌ರಸ್ತೆಯ ಕಬಳಿಕೆ, ಕೆರೆ ಒತ್ತುವರಿ, ನದಿ ಜಾಗ ಕಬಳಿಕೆ, ಮೈದಾನ ಕಬಳಿಕೆ, ಕಾದಿರಿಸಿದ ಭೂಮಿ ಕಬಳಿಕೆ, ಪಾರ್ಕಿಂಗ್ ಒತ್ತುವರಿ ಹೀಗೆ ಭೂಮಿ ವಿಷಯದಲ್ಲಿ ನಾವು ಮಾಡದ ಘನಂಧಾರಿ ಕೆಲಸಗಳೇ ಇಲ್ಲ. ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿರುವ ನಾವು ಈವತ್ತು ಧರ್ಮಸ್ಥಳದವರು ಭೂ ಕಬಳಿಕೆ ಮಾಡಿದರು ಎಂದು ಭೂಕಂಪ ಆಗುವಷ್ಟು ಬೊಬ್ಬೆ ಹೊಡೆಯುತ್ತಿದ್ದೇವೆ. ನಾಚಿಕೆ ಮಾನ ಮರ್ಯಾದೆ, ಲಜ್ಜೆ ಪೊಲೆಜ್ಜಿ ಏನಾದರೂ ನಮಗಿದೆಯಾ? ಹಾಗೆಲ್ಲ ಭೂ ಕಬಳಿಕೆ ಮಾಡದೆ ಇರಲು ಧರ್ಮಸ್ಥಳದವರು ಏನು ದಿಗಂಬರ ಸ್ವಾಮಿಗಳಾ? ಅಖಂಡ ಬ್ರಹ್ಮಚಾರಿಗಳಾ? ವಿವಿಧ ಮಠಗಳ ಸ್ವಾಮಿಗಳೇ ದೇವರ ಹೆಸರಿನಲ್ಲಿ, ಖಾವೀ ಹೆಸರಿನಲ್ಲಿ, ಮಠದ ಹೆಸರಿನಲ್ಲಿ ಕಂಡ ಕಂಡಲ್ಲಿ ಬೇಲಿ ಹಾಕುವಾಗ ಧರ್ಮಸ್ಥಳದವರು ಸುಮ್ಮನೆ ಕೈಕಟ್ಟಿ ‌ಕೂರಬೇಕೆಂದು ಯಾರು ಹೇಳಿದ್ದು? ಈಗ ಧರ್ಮಸ್ಥಳ ವಿರೋಧಿಗಳ  ಪ್ರಕಾರ ಧರ್ಮಸ್ಥಳದವರು ಚಕ್ಕುಲಿ ನುಂಗಿರ ಬಹುದು. ಆದರೆ ನಾವು? ನಾವು ಕೂಡ ಚಕ್ಕುಲಿ‌ ನುಂಗು ವವರೇ. ಆದರೆ ನಾವು ಒಮ್ಮೆಲೇ ನುಂಗಲ್ಲ. ಚಕ್ಕುಲಿಯ ಸುತ್ತಲಿನ ಸೈಡ್ ಸೈಡಿಂದ ಒಂದೊಂದೇ ಎಳೆಯನ್ನು ತಿನ್ನುತ್ತಾ ತಿನ್ನುತ್ತಾ ಇಡೀ ಚಕ್ಕುಲಿಯನ್ನು ತಿನ್ನುವ ಜಾತಿ ನಾವು. ತಿನ್ನುವುದು ಮತ್ತು ನುಂಗುವುದು ಎರಡೂ ಒಂದೇ ಅಲ್ವಾ?
   ಹಾಗೆಂದು ಸೌಜನ್ಯ ಎಂಬ ಹೆಣ್ಣು ಮಗುವಿಗೆ ಈ ಭರತ ಖಂಡದ ಮಣ್ಣಿನ ಕಾನೂನಿನಡಿಯಲ್ಲಿ ಇನ್ನು ನ್ಯಾಯ ಸಿಗಲ್ಲ ಕಣ್ರೀ. ಆ ನ್ಯಾಯದ ಹಾದಿ ತಪ್ಪಿ ಒಂದು ದಶಕವೇ ಕಳೆದು  ಹೋಗಿದೆ. ಇನ್ನು ಆ ಮಗುವಿಗೆ ನ್ಯಾಯ ಕೊಡಬೇಕಾಗಿದ್ದ ಅಣ್ಣಪ್ಪನ ಗುಡಿಯನ್ನು, ಮಂಜುನಾಥನ ಆಲಯವನ್ನು ಜೆಸಿಬಿ ತಂದು ಒಡೆದು ಹಾಕುವ ‌ಬಗ್ಗೆ ಮಾತಾಡಿದ್ದೇವೆ. ನಸುಕಿನ ಜಾವ ಧರ್ಮಸ್ಥಳಕ್ಕೆ ನುಗ್ಗಿ ಎಲ್ಲವನ್ನೂ ದೋಚುವ ಎಂಬ ಮಾತೂ ಬಂದಿದೆ.ದೈವ ನಿಂದಕರು ಮತ್ತು ಧರ್ಮ ದೂಷಣೆ ಮಾಡಿದವರು ನ್ಯಾಯ ಕೇಳಿದರೆ ಅಣ್ಣಪ್ಪ ಮತ್ತು ಮಂಜುನಾಥ ನ್ಯಾಯ ಕೊಡುತ್ತಾರಾ? ನ್ಯಾಯ ಸಿಗಲ್ಲ ಕಣ್ರೀ, ಯಾಕೆಂದರೆ ರಸ್ತೆ ರಸ್ತೆಗಳಲ್ಲಿ ನಿಂತು ದೈವ ನಿಂದನೆ ಮಾಡುವವರೊಂದಿಗೆ, ಧರ್ಮ ದೂಷಣೆ ಮಾಡುವವ ರೊಂದಿಗೆ ಅಕ್ರಮ ಕೂಟ ಸೇರಿಕ್ಕೊಂಡು ನಾವು ಆ ಮಗುವಿಗೆ ನ್ಯಾಯ ಕೇಳುತ್ತಿದ್ದೇವೆ. ಎಂಟು ನೂರು ವರ್ಷಗಳ ಹಿನ್ನೆಲೆ ಇರುವ, ವಿವಿಧ ಧಾರ್ಮಿಕ ಕಾರಣಗಳಿಗಾಗಿ ಈ ಭರತ ಖಂಡದಲ್ಲಿ ತನ್ನದೇ ವಿಶೇಷ ಕಾರಣಿಕಗಳಿಂದ ಹೆಸರು ವಾಸಿಯಾಗಿರುವ ಹಿಂದೂ ಶ್ರದ್ಧಾ ‌ಕೇಂದ್ರದ ಅಡಿಗಲ್ಲನ್ನೇ ಅಲುಗಾಡಿಸಿ ನ್ಯಾಯ ಕೇಳಿದರೆ ದೇವರು ಒಲಿಯುತ್ತಾನಾ? ನ್ಯಾಯ ಕೇಳುವ ಭರದಲ್ಲಿ ದೈವ ನಿಂದನೆ ಮಾಡಿ ಅಣ್ಣಪ್ಪ ಮತ್ತು ಮಂಜುನಾಥನ ಅಸ್ತಿತ್ವವನ್ನೇ ಪ್ರಶ್ನಿಸುವ ದೈವ ನಿಂದಕರ ಪರವಾಗಿ ಮಂಜುನಾಥನ ದೇವ ನ್ಯಾಯಾಲಯ ತೀರ್ಪು ಕೊಡುವ ಬಗ್ಗೆ ಅನುಮಾನಗಳಿವೆ. ಒಂದು ಕಡೆ ದೈವ ನಿಂದಕರು ಇನ್ನೊಂದು ಕಡೆ ಧರ್ಮ ನಡೆಸಿದವರು. ದೇವರು  ಯಾರ ಪರ ನಿಲ್ಲ ಬಹುದು?
   ಹಾಗೆಂದು ಸೌಜನ್ಯ ಪರ ಹೋರಾಟಗಾರರ ಟಾರ್ಗೆಟ್ ಯಾರು, ಅವರ ಮನಸ್ಸಿನಲ್ಲಿ ಏನಿದೆ, ಅವರ ಹಿಡನ್ ಅಜೆಂಡಾ ಏನು ಎಂಬುದು ಕೂಡ ಧರ್ಮಸ್ಥಳದ ದೈವ ದೇವರುಗಳ ದಿವ್ಯ ಜ್ಞಾನಕ್ಕೆ ಬರದ ವಿಷಯವೇನಲ್ಲ. ಸೌಜನ್ಯ ಪರ ವೇದಿಕೆಗಳಲ್ಲಿ ಸಿಗುವ ಪ್ರತೀ ಮುಖವೂ ಅವರ ಗೇಮ್ ಪ್ಲಾನ್ ಗಳ ಇಂಡಿಕೇಟ್ ಮಾಡುತ್ತಿದೆ. ಅವರು ಕೇಳುವ ನ್ಯಾಯದ ಹಿಂದೆ ಇನ್ನೂ ಏನೇನೋ ಇದೆ.
   ನಮಗೆ ನಮ್ಮ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಮೇಲೆ ನಂಬಿಕೆ ಇಲ್ಲ. ಎಂಟು ನೂರು ವರ್ಷಗಳ ಇತಿಹಾಸ ಹೊಂದಿರುವ ಶ್ರದ್ಧಾ ‌ಕೇಂದ್ರದ ಮೇಲೆ ನಂಬಿಕೆ ಇಲ್ಲ, ದೈವ ದೇವರುಗಳ ಮೇಲೆ ನಂಬಿಕೆ ಇಲ್ಲ, ಒಂದು ವ್ಯವಸ್ಥಿತ ಅಸ್ತಿತ್ವದ ಮೇಲೆ ನಂಬಿಕೆ ಇಲ್ಲ. ಹಾಗಾದರೆ ನಮ್ಮ ಟಾರ್ಗೆಟ್ ಏನು?  ಟಾರ್ಗೆಟ್ ಒಂದೇ.
   ಸೌಜನ್ಯ ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟವರು ನಾವು. ಸೌಜನ್ಯ ಬೆಂಕಿಯಲ್ಲಿ ಚಳಿ ಕಾಯಿಸಿ ಕೊಳ್ಳುವವರು ನಾವು. ಸೌಜನ್ಯ ಪ್ರಕರಣವನ್ನು ನಮ್ಮ ರಾಜಕೀಯ ಯಶಸ್ಸಿನ ಮೆಟ್ಟಿಲು ಮಾಡಿಕೊಂಡವರು ನಾವು. ಅದೆಲ್ಲ ಕಾರಣಗಳಿಗಾಗಿ ನಮ್ಮದೇ ಶ್ರದ್ಧಾ ಕೇಂದ್ರದ ಬಲಿ. ದೈವ ನಿಂದನೆ ಮಹಾ ಪಾಪ. ಧರ್ಮ ದೂಷಿಕರಿಗೆ, ದೈವ ನಿಂದಕರಿಗೆ ನ್ಯಾಯ ಸಿಗಲ್ಲ.


   

    











MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget