ಕೆಲವು ದಿನಗಳ ಹಿಂದೆಯಷ್ಟೇ ನಾವು ಒಂದೇ ಗ್ರಾಮದಲ್ಲಿ ಮೂರು ಬಾರ್ ಓಪನ್ ಆಗಲಿದೆ ಎಂದು ಬರೆದ್ದಿದ್ದೆವು. ಒಂದೇ ಗ್ರಾಮದಲ್ಲಿ ಮೂರು ಬಾರ್ ಓಪನ್ ಆದರೆ ನಷ್ಟ ಬರಬಹುದು ಎಂದೂ ಗೀಚಿದ್ದೆವು. ಕೇವಲ ಎರಡೂವರೆ ಗ್ರಾಮಗಳಿಗಾಗಿ ಮೂರು ಬಾರ್ ಗಳಿಗೆ ಪರ್ಮಿಷನ್ ಕೊಟ್ಟರೆ ಬಾರೋನರ್ ಗಳಿಗೆ ಬ್ಯಾರದಲ್ಲಿ ನಷ್ಟ ಬರಬಹುದು ಎಂದೂ ಗೀಚಿದ್ದೆವು. ನಾವು ಯಾಕೆ ಬರೆದೆವೆಂದರೆ ಬಾರ್ ನಡೆಸಲು ಕಷ್ಟ ಇದೆ ಮಾರಾಯ್ರೆ. ಅದೆಲ್ಲ ಕೋಟಿ ಲೆಕ್ಕದ ವ್ಯವಹಾರ. ಚಿಲ್ಲರೆಗಳೆಲ್ಲ ಅದಕ್ಕೆ ಹೋದರೆ OC ಯಲ್ಲಿ ಮುಳುಗ ಬೇಕಾದೀತು.
ಹಾಗೆಂದು ಒಂದು ಬಾರ್ ಓಪನ್ ಮಾಡಲು ಕಡಿಮೆ ಅಂದರೂ ಒಂದು ಕೋಟಿ ಇಂಡಿಯನ್ ಕರೆನ್ಸಿ ನಮ್ಮ ಪರ್ಸ್ ನಲ್ಲಿರಬೇಕು. ಅದರಲ್ಲೂ ಈಗ ಒಂದು ಕೋಟಿ ವೆಚ್ಚದ CL2, CL9ಗೆ ಪರ್ಮಿಷನ್ ಸಿಗಲ್ಲ. ನೀವು ಎರಡು ಕೋಟಿ ಗೋಣಿಯಲ್ಲಿ ಹಿಡಕ್ಕೊಂಡು ಹೊರಟರೆ ಮಾತ್ರ ನಿಮಗೆ CL7 ಪರ್ಮಿಷನ್ ಸಿಗುತ್ತದೆ. ಆದರೆ ಇದಕ್ಕೆ ಹೋಟೆಲ್ ಬೇಕು, ಲಾಡ್ಜಿಂಗ್ ಬೇಕು, ಅದೆಲ್ಲ ದೊಡ್ಡ ರಾಮಾಯಣ. ಈ CL7 ಸಮಸ್ಯೆ ಏನೆಂದರೆ ಅದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್ ಮಾಡಕ್ಕಾಗಲ್ಲ. ನೀವೀಗ ಒಂದು CL7 ಪರ್ಮಿಷನ್ ತಗೊಂಡು ಹೋಗಿ ಬಂಟಮಲೆಯಲ್ಲಿ ಬಾರ್ ಓಪನ್ ಮಾಡಿದರೆ ಅದು ಅಲ್ಲೇ ಕುಡುಕರ ಮನ ತಣಿಸ ಬೇಕು. ಕುಡುಕರು ಬಂಟಮಲೆಗೆ ಬರಲ್ಲ, ಅವರಿಗೆ ಕಷ್ಟ ಆಗುತ್ತದೆ ಅಲ್ಲಿಗೆ ಬರ್ಲಿಕ್ಕೆ ಎಂದು ಅದೇ ಪರ್ಮಿಟ್ ಹಿಡಕ್ಕೊಂಡು ಕೆಳಗೆ ಬಂದು ಪಂಜದಲ್ಲಿ, ಬೆಳ್ಳಾರೆಯಲ್ಲಿ ಬಾರ್ ಓಪನ್ ಮಾಡಲು ಆಗಲ್ಲ. ಇನ್ನು MSIL ಗಡಂಗ್ ಮಾಡಲೂ ಪರ್ಮಿಷನ್ ಸಿಗುತ್ತದೆ. ಗೂಡಂಗಡಿಗಳ ಹಾಗೆ ಇಂತಹ ಗಡಂಗ್ ಓಪನ್ ಆಗಿದೆ. ಇಂಥ MSIL ಗಡಂಗ್ ಗಳು ಕುಡುಕರನ್ನು ದೋಚುತ್ತಿದ್ದು MRP ಬಿಟ್ಟು ಇವರೇ ಅಂಡಿಗುಂಡಿ ರೇಟ್ ಹಾಕಿ ಕುಡುಕರ ನೆತ್ತೆರ್ ಸ್ಟ್ರಾದಲ್ಲಿ ಎಳೆಯುತ್ತಿದ್ದಾರೆ. ಹಾಗೆಂದು ಈ MSIL ನವರು ಪ್ರಿಂಟೆಡ್ ರೇಟ್ ನಲ್ಲಿಯೇ ಕುಡುಕರಿಗೆ ಕುಪ್ಪಿ ಕೊಡಬೇಕು. ಉದಾಹರಣೆಗೆ ಈಗ MLಗೆ ಒಂದು ಕ್ವಾಟ್ರಿಗೆ 80 ರೂಪಾಯಿ ಅಂತ ಅದರ ಕುಪ್ಪಿಯಲ್ಲಿ ರೇಟ್ ಬರೆದಿದ್ದರೆ MSIL ಗಡಂಗ್ ನವರು ಅಷ್ಟೇ ರೇಟೀಗೆ ಕುಪ್ಪಿ ಕಟ್ಟಿ ಕುಡುಕ ನನ್ಮಗನ ಕೈಯಲ್ಲಿ ಕೊಡಬೇಕು. ಆದರೆ MSIL ನವರು 80 ರೂಪಾಯಿ ಮೌಲ್ಯದ MLಗೆ ಕುಡುಕರ ಕೈಯಿಂದ 85 ರೂಪಾಯಿ ಎಳೆದು ಕೊಳ್ಳುತ್ತಿದ್ದಾರೆ. ಇದು ಅನ್ಯಾಯ. ಇಲ್ಲಿ ಕಮಿಷನ್ ಬೇರೆ, ಲಾಭ ಬೇರೆ. ಅಂತೂ ಇಂತೂ ಕುಡುಕ ನನ್ಮಕ್ಕಳಿಗೆ ಚರಂಡಿಯೇ ಗತಿ.
ಇನ್ನು ಬಾರ್ ನಡೆಸಲು ಕಷ್ಟ ಇದೆ ಎಂದು ನಾನು ಆಗಲೇ ಹೇಳಿದ್ದೆ. ಯಾಕೆಂದರೆ ಅಬ್ಕಾರಿ ಇಲಾಖೆ ಸರ್ಕಾರದ ATM ಇದ್ದ ಹಾಗೆ. ಯಾವಾಗ ಮೇಲಿಂದ ಫಂಡ್ಸ್ ಗೆ ಕರೆ ಬರುತ್ತದೆಂದೇ ಹೇಳಕ್ಕಾಗಲ್ಲ. ಇನ್ನು ಲಂಚದ ಮಟ್ಟಿಗೆ ಅಬ್ಕಾರಿ ಇಲಾಖೆ ಕ್ಲೀನ್. ಪ್ರತಿ ಬಾರಿನವರೂ ತಿಂಗಳಿಗೆ ಹತ್ತು ಸಾವಿರದ ಕಟ್ಟನ್ನು ಇಲಾಖೆ ಟೇಬಲ್ ಗೆ ಮುಟ್ಟಿಸಲೇ ಬೇಕು. ಒಂದು ದಿನ ಅಂಚಿಂಚಿ ಆದರೂ ಇಲಾಖೆಗೆ ಸೂತಿಕೊ ಬಂದು ಬಿಡುತ್ತದೆ. ಲೆಕ್ಕ ಹಾಕಿ, ಒಂದು ತಾಲೂಕಿನಲ್ಲಿ, ಒಂದು ಜಿಲ್ಲೆ ಯಲ್ಲಿ ಎಷ್ಟು ಬಾರುಗಳಿವೆ. ಒಂದೊಂದು ಬಾರೂ ಹತ್ತತ್ತು ಕೊಟ್ಟರೆ ದುಡ್ಡೇಷ್ಟಾಯಿತು ಮಾರಾಯ್ರೆ. ಆಯ್ತು ಅಬ್ಕಾರಿಗಳಿಗೆ ಮಾತ್ರನಾ ಅಗೆಲು? ಇಲ್ಲ. ಅಬ್ಕಾರಿ ಜೀಪು ಹೋದ ಕೂಡಲೇ ಲೋಕಲ್ ಪೋಲಿಸ್ ಠಾಣೆ ಬಿನ್ನೆರ್ ಬಂದು ಕ್ಯಾಶ್ ಕೌಂಟರ್ ನಲ್ಲಿ ನಿಲ್ಲುತ್ತಾರೆ. ಲೋಕಲ್ ಪೋಲಿಸ್ ಸ್ಟೇಷನ್ ಗೆ ಪ್ರತೀ ಬಾರಿಂದ ಮಿನಿಮಮ್ ಎರಡೂವರೆಯಿಂದ ಹತ್ತರ ತನಕ ಮಾಮೂಲು ಕೊಡಲೇ ಬೇಕಾಗುತ್ತದೆ. ಕೊಡದಿದ್ದರೆ ಪೋಲಿಸರು ಹೇಗೆಲ್ಲ ಎಣ್ಣೆ ಕಾಯಿಸ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆಯ್ತು ಮಾಮೂಲು ಕೊಟ್ಟು ಬಾರಿನವರು ಸುಮ್ಮನೆ ಕೂರಂಗಿಲ್ಲ. ಅಬ್ಕಾರಿ ಪೋಲಿಸರ, ಮಾಮೂಲು ಪೋಲಿಸರ ಮನೆಯ ಮದುವೆ, ಬಯಕ್ಕೆ, ಬರ್ಡೆ, ನೇಮ, ಕೊನೆಗೆ ಕುಲೆಗಳಿಗೆ ಬಡಿಸಲೂ ಬೇಕಾಗುವ ಮದ್ಯವನ್ನೂ ಬಾರಿನವರು ಮುಟ್ಟಿಸಲೇಬೇಕು. ಇಲ್ಲದಿದ್ದರೆ ಪೋಲಿಸರು ಅಂಚಿಂಚಿ ಹೋಗುವಾಗ ಬಾರಿನತ್ತ ನೋಡಿ ಮಲೆಯುತ್ತಾ ಹೋಗು ವುದು ರೂಢಿ. ಇಷ್ಟು ಮಾಹಿತಿ ಕೊಟ್ಟ ನನ್ನ ಬಾರ್ ಫ್ರೆಂಡ್ ನಲ್ಲಿ ಕೊನೇಗೆ ಕೇಳಿದೆ, ಲೋಕಲ್ ರೌಡಿಗಳಿಗೆ ನೀವು ಮಾಮೂಲು ಕೊಡಲ್ವಾ ಎಂದು. ಅದಕ್ಕವನು ಲೋಕಲ್ ರೌಡಿಗಳು ಯಾರಿದ್ದಾರೆ, ಸದ್ಯಕ್ಕೆ ನಾವೇ ಲೋಕಲ್ ರೌಡಿಗಳು ಎಂದು ನಕ್ಕಿದ್ದ.
Post a Comment