ಕಾಣಿಯೂರಿನಲ್ಲಿ ಓಡು ಕಳ್ಳರು

                                                


   ಹಾಗೆಂದು ಕಾಣಿಯೂರು ಎಂಬ ಮಠದ ಊರಿನಲ್ಲಿ ಲೋಕಲ್ ಕಳ್ಳರು, ಕಾಕರು ಕಡಿಮೆ. ಇಲ್ಲಿಗೆ ಹೊರಗಿನಿಂದ ಕಳ್ಳರು ಬಿನ್ನೆರ್ ಕಟ್ಟಿಕ್ಕೊಂಡು ಬರಬೇಕಷ್ಟೆ. ಹೊರಗಿನಿಂದ ಬಂದ ಬಿನ್ನೆರ್ ಕಳ್ಳರು ಇಲ್ಲಿ ಫೋರ್, ಸಿಕ್ಸ್ ಬಡಿದ ಉದಾಹರಣೆಗಳಿವೆ. ಆದರೆ ಇದೀಗ  ಒಂದು ಕೇಸ್ ಕಾಣಿ ಯೂರಿನಲ್ಲಿ ನಡೆದಿದ್ದು ಈ ಕೇಸಿನಲ್ಲಿ ಲೋಕಲ್ ಕಳ್ಳರ ಕೈಚಳಕ ಇದೆ ಎಂದು ಮೊನ್ನೆ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬೊಬ್ಬೆ ಹಾಕಲಾಗಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಯಾಕೆಂದರೆ ಯಾರಿಗೂ ಕೆಬಿ ಕೇನುಜಿ.
   ಹಾಗೆಂದು ಕಾಣಿಯೂರಿನಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಸದ್ರಿ ಆರೋಗ್ಯ ಕೇಂದ್ರದ ಅಂದಾಜು ಎರಡು ಸಾವಿರ ಹೆಂಚುಗಳನ್ನು ಹೇಳದೆ ಕೇಳದೆ ಯಾರೋ ಪುಣ್ಯಾತ್ಮರು ತಮ್ಮ ಮನೆಗೆ ಸಾಗಿಸಿ ಪುಣ್ಯ ಕಟ್ಟಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮೊನ್ನೆ ನಡೆದ ಗ್ರಾಮ ಸಭೆಯಲ್ಲಿ ಲೋಕಲ್ ವಾರ್ಡ್ ಸದಸ್ಯರೊಬ್ಬರು ಬೊಬ್ಬೆ ಹೊಡೆದಿದ್ದರು. ಆದರೆ ಅದೇ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ನಿರ್ಣಯ ಕೈಗೊಳ್ಳಲಾಗಿತ್ತು. ಹಾಗಾದರೆ ಹೆಂಚು ಕದ್ದಿದ್ದು ಯಾರು? ಯಾರು?
   ಹಾಗೆಂದು ಆರೋಗ್ಯ ಕೇಂದ್ರದ ಹೆಂಚು ತೆಗೆದದ್ದು ಯಾರು ಮ್ಯಾಡಂ, ನಿಮಗೇನಾದರೂ ಗೊತ್ತಿದೆಯಾ ಎಂದು ಡಾಕ್ಟರ ರಲ್ಲಿ ಕೇಳಿದರೆ ಅವರಿಗೆ ವಿಷಯವೇ ಗೊತ್ತಿಲ್ಲ. ಆರೋಗ್ಯ ಕೇಂದ್ರದ ಜಾಗದಲ್ಲಿ ಅದೇನೋ ಕಾಮಗಾರಿ ನಡೆಯುತ್ತಿದ್ದಾಗ ಆ ಹೆಂಚುಗಳನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿತ್ತು ಮತ್ತು ಈ ಬಗ್ಗೆ ಕಾಮಗಾರಿ ನಡೆಸಿದ ಗುತ್ತಿಗೆದಾರರಲ್ಲಿ ಮಾಹಿತಿ ಕೇಳಿ ಎಂದು ಡಾಕ್ಟರ್ ತಮ್ಮ ಭಾರ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ.
   ಹಾಗಾದರೆ ಆರೋಗ್ಯ ಕೇಂದ್ರದ ಹೆಂಚು ಎಲ್ಲಿಗೆ ಹೋಯ್ತು? ಕಾಣಿಯೂರಿನ ಬಲಿಮ್ಮೆಯವರ ಪ್ರಕಾರ ಹೆಂಚು ಪಂಜದ ಪಿಕಪ್ ಒಂದರಲ್ಲಿ ಸಾಗಾಟ ಮಾಡಲಾಗಿದ್ದು ಮೂರು ಫೀಟಿನ ಜನವೊಂದರ ನೆರಳು ಈ ಪ್ರಕರಣದಲ್ಲಿ ಮಸ್ಕ್ ಮಸ್ಕಾಗಿ ಬಚ್ಚಿರೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಯಾರೂ ಬೆಳ್ಳಾರೆ ಕಡೆ ಹೋಗದಿರುವ ಕಾರಣ ಪೋಲಿಸರೂ ಈ ಕಡೆ ಬರದಿರುವ ಕಾರಣ ಓಡು ಕಲ್ಲರು ಸದ್ಯಕ್ಕೆ ಸೇಫ್ ಆಗಿದ್ದಾರೆಂದು ತಿಳಿದುಬಂದಿದೆ.



   

    







Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget