ಅವಿಭಜಿತ ದಕ್ಷಿಣಕನ್ನಡದ ಗೌಡ್ರುಗಳ ರಾಜಧಾನಿ ಸುಳ್ಯದಲ್ಲಿ ಸದ್ದಿಲ್ಲದೆ ಅನಧಿಕೃತವಾಗಿ ಸರ್ಕಾರಿ ಬೋರ್ಡ್ ನ ಅಡಿಯಲ್ಲಿ ಶಿಶು ಪಾಲನಾ ಕೇಂದ್ರವೊಂದು ಕಾರ್ಯಾ ಚರಿಸುತ್ತಿದೆ.
ಕೆಲವು ಸಮಯಗಳ ಹಿಂದೆ ಸರ್ಕಾರ ತಾನೇ ಪ್ರಾರಂಭಿಸಿದ್ದ ಕೆಲವು ಶಿಶು ಪಾಲನಾ ಕೇಂದ್ರಗಳನ್ನು ಮುಚ್ಚಿತ್ತು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಸರ್ಕಾರವೇ ನಡೆಸುತ್ತಿದ್ದ ಶಿಶು ಪಾಲನಾ ಕೇಂದ್ರಗಳನ್ನು ಅಂಡಿಗುಂಡಿ ಕಾರಣ ಕೊಟ್ಟು ಸರ್ಕಾರವೇ ಬಂದ್ ಮಾಡಿತ್ತು. ಈ ಬಗ್ಗೆ ಜಿಲ್ಲಾ ಕೋರ್ಡಿನೇಟರ್ ಎಲ್ಲಾ ಶಿಶು ಪಾಲನಾ ಕೇಂದ್ರಕ್ಕೆ ಬಂದ್ ಮಾಡುವಂತೆ ತಿಳಿಸಿದ್ದರು. ಅವರ ಸೂಚನೆಯಂತೆ ಎಲ್ಲಾ ಶಿಶು ಪಾಲನಾ ಕೇಂದ್ರಗಳನ್ನು ಮುಚ್ಚಲಾಗಿತ್ತು ಸಹ. ಆದರೆ ಅಲ್ಲಿ ಸುಳ್ಯದ ಗಾಂಧಿ ನಗರ ನಾವೂರು ಎಂಬಲ್ಲಿನ ಶಿಶು ಪಾಲನಾ ಕೇಂದ್ರ ಮಾತ್ರ ಇವತ್ತಿಗೂ ಸರ್ಕಾರದ ಬೋರ್ಡ್ ಅಡಿಯಲ್ಲಿ ಕಾನೂನು ಬಾಹಿರವಾಗಿ ಕಾರ್ಯಾ ಚರಿಸುತ್ತಿದೆ. ಅಲ್ಲಿ ನಾವೂರಿನಲ್ಲಿ ಶಿಶು ಪಾಲನಾ ಕೇಂದ್ರವನ್ನು ನಡೆಸುತ್ತಿರುವುದು ಅಕ್ರಮವಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲೇ ಬೇಕಾಗಿದೆ. ಅದೂ ಅಲ್ಲದೆ ಸದ್ರಿ ಶಿಶು ಪಾಲನಾ ಕೇಂದ್ರದಲ್ಲಿ ಪ್ರತಿ ಮಕ್ಕಳಿಗೆ ಮಂಡೆಗೆ ಆರು ನೂರು ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಹಾಗೆಂದು ಶಿಶು ಪಾಲನಾ ಕೇಂದ್ರಗಳನ್ನು ಸರ್ಕಾರದ ಬೋರ್ಡ್ ಅಡಿಯಲ್ಲಿ ನಡೆಸುತ್ತಿದ್ದರೆ ಅಲ್ಲಿ ದುಡ್ಡು ವಸೂಲಿಗೆ ಆಸ್ಪದವಿಲ್ಲ. ಹಾಗೇನಾದರೂ ವಸೂಲಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಕೂಡ. ಆದರೂ ನಾವೂರು ಶಿಶು ಪಾಲನಾ ಕೇಂದ್ರದಲ್ಲಿ ಆರು ನೂರು ರೂಪಾಯಿ ಪ್ರತಿ ಮಂಡೆಗೆ ವಸೂಲಿ ಮಾಡಲಾಗುತ್ತಿದೆ. ಟೀಚರನ್ನು ಕೇಳುವವರೇ ಇಲ್ಲ. ಅದೆಂತಾ ಬೇಬಿ ಸಿಟ್ಟಿಂಗ?
Post a Comment