ಅಲ್ಲಿ ಗುತ್ತಿಗಾರು ಕಾಲೇಜು ಓಣಿಯಲ್ಲಿ ಹಗಲಿಡೀ ಕಾಲೇಜು ಮಕ್ಕಳ ಕಲರವ ಕೇಳಿ ಬಂದರೆ ಅತ್ತ ಸೂರ್ಯ ಅಡ್ಡ ಹೋಗುತ್ತಿದ್ದಂತೆ ಓಣಿ ರಂಗೇರಿ ಬಿಡುತ್ತದೆ ಎಂದು ನಮ್ಮ ಗುತ್ತಿಗಾರು ಟವರ್ ವರದಿ ಓದಿದೆ. ಈ ಓಣಿ ಕಾಲೇಜು ಮಕ್ಕಳು ಮನೆಗೆ ಹೋಗಿ ಕಾಲೇಜು ಅಟೆಂಡರ್ ಕಾಲೇಜಿಗೆ ಕೊನೆಯ ಬೀಗ ಹಾಕಿದ ಮೇಲೆ ಅನಾಥವಾಗಿ ಬಿಡುತ್ತದೆ. ಹಾಗೇ ಕತ್ತಲು ಕವಿಯುತ್ತಾ ಓಣಿ ಮಸ್ಕ್ ಮಸ್ಕ್ ಆಗುತ್ತಿದ್ದಂತೆ ಇಲ್ಲಿ ಮೋಹಿನಿ ಬಾಧೆ ಶುರುವಾಗುತ್ತದೆ ಎಂದು ಬಚ್ಚಿರೆ ಬಲಿಮೆಯಲ್ಲಿ ಕಂಡು ಬಂದಿದೆ. ಇಲ್ಲಿ ಸಂಜೆ ಏಳೂವರೆಯಿಂದ ನೈಟ್ ಹತ್ತರ ತನಕ ಕೆಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಕೆಲವು ಲೋಕಲ್ ಮೋಹಿನಿಗಳು ಇಲ್ಲಿ ರಾತ್ರಿ ವಿದ್ಯಾಭ್ಯಾಸ ಮಾಡುತ್ತಿದ್ದು ಏಳರಿಂದ ಎಂಟು, ಎಂಟರಿಂದ ಒಂಭತ್ತು, ಕೊನೆಗೆ ಹತ್ತು ತನಕ ಜಲಜನಕದ ಬಗ್ಗೆ ಥಿಯರಿ ಸ್ಟಡಿ ನಂತರ ಭಟ್ಟಿ ಇಳಿಸುವ ಪುಣ್ಯ ಕಾರ್ಯಗಳು ನಡೆಯುತ್ತವೆ ಎಂದು ತಿಳಿದುಬಂದಿದೆ. ಇದರ ಪರಿಣಾಮ ಮರುದಿನ ಬೆಳಿಗ್ಗೆ ಓಣಿಯಲ್ಲಿ, ಓಣಿ ಆಸುಪಾಸಿನಲ್ಲಿ ಬೀಡಿ ಸಿಗರೇಟು ಕುತ್ತಿಗಳು, ಪಿಂಟಿದ ಪಿಂಟ್ ಬಾಟ್ಲಿಗಳು, ಕ್ವಾಟ್ರು ಬಾಟ್ಲಿಗಳು, ಪುಗ್ಗೆಯಂತಹ ವಸ್ತುಗಳು, ಮಾರುತಿ, ಪಾನ್ ಮಸಾಲ ಪ್ಯಾಕೆಟ್ ಗಳು ಮತ್ತು ಅರ್ಜೆಂಟ್ ಅರ್ಜೆಂಟಲ್ಲಿ ಬಿಟ್ಟು ಹೋದ ಡೆಡ್ಲಿ ಚೆಡ್ಡಿಗಳು ಅಲ್ಲಲ್ಲಿ ಬಿದ್ದಿರುತ್ತದೆ. ಈ ವಸ್ತುಗಳು ಹಿಂದಿನ ನೈಟಿನಲ್ಲಿ ನೈಂಟಿ ಹಾಕಿ ನೈಟಿ ಮೇಲೆ ನಡೆಸಿದ ದಾಳಿಗೆ ಸಾಕ್ಷಿಯಾಗಿದೆ. ಒಬ್ಬರದ್ದು ಫಸ್ಟ್ ಶೋ ಮುಗಿದ ಮೇಲೆ ಇನ್ನೊಬ್ಬರದ್ದು ಸೆಕೆಂಡ್ ಶೋ.
ಹಾಗೆಂದು ಈ ಓಣಿಗೆ ನೈಟ್ ಕುಲೆಗಳು ಬರಲೂ ಹೆದರಿಕೊಳ್ಳುತ್ತವೆ ಮತ್ತು ನಾಚಿಕೊಳ್ಳುತ್ತದೆ. ಯಾಕೆಂದರೆ ಅವು ಅಪ್ಪಿ ತಪ್ಪಿ ಬಂದರೂ ವಯಸ್ಕರ ಸಿನಿಮಾಗಳ ಅಬ್ಬರ ಈ ಓಣಿಯಲ್ಲಿ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ ನಾಚಿಕೆ ಪಟ್ಟುಕೊಂಡು ಬಂದ ದಾರಿಯಲ್ಲೇ ಛೀ.. ಥೂ... ಎಬೂ... ಎಂದು ಹೋಗ ಬೇಕಾಗುತ್ತದೆ. ಅಷ್ಟು ನಿರ್ಜನ ಈ ಓಣಿ. ಹಾಗೆಂದು ಈ ಓಣಿಗೆ ಪೋಲಿಸರೂ ಬರಲ್ಲ. ಯಾಕೆಂದರೆ ಅಗತ್ಯ ಇಲ್ಲ ಎಂದು. ಆದರೆ ಈ ಓಣಿ ಗುತ್ತಿಗಾರಿನಿಂದ ಬಳ್ಪಕ್ಕೆ ಓಡಲು ಕಳ್ಳ ದಾರಿಯಾಗಿದೆ. ಕಳ್ಳರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಓಣಿ ಹೇಳಿ ಮಾಡಿಸಿ ದಂತಿದೆ. ಆದ್ದರಿಂದ ಪೋಲಿಸರು ನೈಟ್ರೌಂಡ್ಸ್ ಗೆ ಬಂದಾಗ ಒಮ್ಮೆ ಈ ಓಣಿಗೆ ಲೈಟ್ ಹಾಕಿದರೂ ಸಾಕು ಹುಟ್ಟುಡುಗೆಯಲ್ಲಿ ಮಹಾನುಭಾವರು ಮತ್ತು ಭಾವಿಯರು ಓಡುವ ಸೀನ್ ಕಣ್ತುಂಬಿಸಿ ಕೊಳ್ಳ ಬಹುದು. ಪೋಲಿಸರು ಈ ಓಣಿಗೆ ಮೋಹೀನಿ ಕಾಟದಿಂದ ಮುಕ್ತಿ ಕೊಡಿಸ ಬೇಕಾಗಿದೆ.
Post a Comment