ಸುಳ್ಯ ತಾಲೂಕಿನ ಈ ಗ್ರಾಮದ ಹೆಸರಿನಲ್ಲಿ ದೇವರಿದ್ದರೂ ಈ ಗ್ರಾಮದ ಅಮಾಯಕರನ್ನು ಕಂಕಣೆ ಮಾಡಿ ತಾವು ದುಡ್ಡು ಮಾಡಿಕೊಳ್ಳುವ ಬಿಸಿನೆಸ್ಗೆ ಅರಣ್ಯ ಇಲಾಖೆ ಇಳಿದದ್ದು ಮಾತ್ರ ವಿಪರ್ಯಾಸವೇ ಸರಿ. ದೇವಚಳ್ಳ ಗ್ರಾಮದ ದೇವಾ ಎಂಬಲ್ಲಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರಗಳು ಲಾರಿ ಹತ್ತಿ ಹೋದದ್ದು ಯಾರಿಗೂ ಗೊತ್ತಾಗದ್ದು ದೊಡ್ಡ ಸೋಜಿಗವಾಗಿದೆ. ದೇವಚಳ್ಳ ಗ್ರಾಮ ಯಾವ ರೇಂಜ್ ಅಂಡರ್ ಬರ್ತದೆ? ಸುಳ್ಯ ರೇಂಜ್ OR ಸುಬ್ರಹ್ಮಣ್ಯ ರೇಂಜ್? ಕೇಳಿದರೆ ಅರಣ್ಯ ಇಲಾಖೆಗೇ ಗೊತ್ತಿಲ್ಲ.
ಇದು ದೇವಾ. ಇಲ್ಲಿನ ಅರಿಯಣ್ಣ, ಬಾಚಣ್ಣ,ಕಿಷ್ಣಣ್ಣ, ಚಂದಣ್ಣ ಮುಂತಾದದವರ ಕುಮ್ಕಿಯಿಂದ ಮತ್ತು ಕಂಡಕಜೆ, ಕುಂಬಾರ ಕೇರಿ,ಕುಚ್ಯಾಲದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರಗಳನ್ನು ಸಮ್ಮಿ ಯಾನೆ ಸಮೀರ್ ಎಂಬುವನು ಲೋಡ್ ಮಾಡಿಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುಳ್ಯ ರೇಂಜ್ ನಲ್ಲಿ ಕೇಳಿದರೆ ದೇವಚಳ್ಳ, ದೇವಾ ನಮಗೆ ಬರಲ್ಲ ಅಂತ ಹೇಳುತ್ತಾರೆ. ಸುಬ್ರಹ್ಮಣ್ಯ ರೇಂಜ್ ನವರಲ್ಲಿ ದೇವಚಳ್ಳದ ಬಗ್ಗೆ ಕೇಳಿದರೆ ಅವರ ಪಿತ್ತ್ ನೆತ್ತಿಗೇರಿ ಅದರ ಬಗ್ಗೆ ನಮ್ಮಲ್ಲಿ ಕೇಳಬೇಡಿ ಎಂದು ಹೇಳುತ್ತಾರೆ. ಹಾಗಾದರೆ ದೇವಚಳ್ಳದ ಮರಗಳ್ಳರನ್ನು ಹಿಡಿಯೋದು ಯಾರು? ಪೋಲಿಸರಲ್ಲಿ ಹೇಳಲಾ?
ಹಾಗೆಂದು ನಮ್ಮ ಮಾಹಿತಿದಾರರ ಪ್ರಕಾರ ದೇವಾ ಸುಬ್ರಹ್ಮಣ್ಯ ರೇಂಜ್ ಅಡಿಯಲ್ಲಿ ಬರುತ್ತವೆ ಎಂದು ತಿಳಿದುಬಂದಿದೆ. ಸುಬ್ರಹ್ಮಣ್ಯ ಕಡೆಯಿಂದ ದೇವಚಳ್ಳ ಗ್ರಾಮಕ್ಕೆ ಅಪಗಪಗ ಒಂದು ಬಸವ ಬಂದು ಹೋಗಿ ಮಾಡುತ್ತಿರುವ ವಿಷಯ ಈಗ ಲೀಕ್ ಆಗಿದ್ದು ಬಸವನಿಗೆ ಮರ ತಿನ್ನುವ ಬ್ಯಾಡ್ ಹ್ಯಾಬಿಟ್ ಇದೆ ಎಂದು ತಿಳಿದುಬಂದಿದೆ. ಮರ ತಿಂದು ತಿಂದು ತಿಂದು ಬಸವ ಹೀಟ್ ಗೆ ಬರುವ ಮೊದಲು ಸಂಬಂಧ ಪಟ್ಟವರು ಬಸವನಿಗೆ ಒಂದು ಬಕ್ಕಿನ ಬಲ್ಲಿನ ಮೂಗು ದಾರವಾದರೂ ಹಾಕುವುದು ಒಳ್ಳೆಯದು.
Post a Comment