November 2023

                                    


           ಹಾಗೆಂದು ಈ  ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಕಾಡು ಪಂಜಿ ಹಾವಳಿ ಜೋರು. ತೋಟ, ಗದ್ದೆಗಳಿಗೆ ಧಾಳಿ ಮಾಡುವ ಈ ಕಾಡು ಹಂದಿಗಳು ರೈತರು ಬೆಳೆದ ಬೆಳೆಗಳನ್ನು ಲಗಾಡಿ ಮಾಡಿ ಬಿಡುತ್ತದೆ. ಅದರಲ್ಲೂ ಕಂಡೆ ಮಗುರಿದ ಅಡಿಕೆ ಸಸಿಗಳನ್ನಂತೂ ಕಬ್ಬು ಜಗಿದ ಹಾಗೆ ಜಬ್ಬಿ ಬಿಡುತ್ತದೆ ಈ ಲೋಫರ್ ಪಂಜಿಗಳು. ಹಾಗೆಂದು ಈ ಕಾಡು ಹಂದಿಗಳು ಎಷ್ಟೇ‌ ಅತ್ರಣ ಮಾಡಿದರೂ ಅವನ್ನು ಯಾರೇ ಆಗಲಿ ಟಚ್ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಜೈಲು ವಾಸ್ತವ್ಯ ಗ್ಯಾರೆಂಟಿ. ಅರಣ್ಯ ಇಲಾಖೆ ಮತ್ತು ಪೋಲಿಸ್ ಇಬ್ಬರೂ ಕಾಡು ಪಂಜಿ ಕೇಸಲ್ಲಿ ಟೈಟ್ ಬರೆಯುತ್ತಾರೆ.
          ಇದೀಗ ಗುತ್ತಿಗಾರು ಸಮೀಪದ ಮೊಗ್ರ ಕಾಡಪನ ಗುಡ್ಡೆಯಲ್ಲಿ ಪಂಜಿ  ಬೋಂಟೆ ಭಾರೀ ಜೋರುಟ್ಟು ಗಡ. ಲೋಕಲ್ ಬೇಟೆಗಾರರ ಉಪಟಳದಿಂದ ಇಡೀಕ್ಕಿಡಿ  ಪಂಜಿ ಫ್ಯಾಮಿಲಿಗಳೇ ಗಡ ಗಡ ಆಗಿದೆ ಗಡ. ಪಂಜಿಗಳಿಗೆ ಒಂದು ಕಟ್ಟು ಬೀಡಿ ಸೂತಪೆಟ್ಯೆ ಅಂಗಡಿಯಿಂದ ತರಲೂ ಆಗದಂತಹ ಪರಿಸ್ಥಿತಿ ಮೊಗ್ರದಲ್ಲಿದೆ. ಪಂಜಿಗಳು ಬರುವ ಓಣಿ ಒರುಂಕು, ಬರೆಯಿಂದ ಜಾರಿ ಲ್ಯಾಂಡ್ ಆಗುವ ಜಾಗ, ಅಗರುಗಳಲ್ಲಿ, ಗುರುಂಪುಗಳಲ್ಲಿ, ತೋಡುಗಳಲ್ಲಿ, ಉಜಿರು ಕಣಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಲೋಕಲ್ ಬೇಟೆಗಾರರು ಗೇರ್ ವಯರಿನ ಉರ್ಲು ಇಟ್ಟಿರುತ್ತಾರೆ. ಎಲ್ಲಿಯಾದರೂ ಪಂಜಿ ನನ್ಮಗನ ಹಣೆಯಲ್ಲಿ ಟೇಸ್ಟೀ‌ ಟೇಸ್ಟೀ, ಹೆಲ್ದಿ ಹೆಲ್ದಿ ಪಂಜಿ ಕಜಿಪ್ಪಿನ ಬಗ್ಗೆ ಉಲ್ಲೇಕವಿದ್ದರೆ ಆವತ್ತೇ ಅವನು ಇವರು ಅಲ್ಲಲ್ಲಿ ಇಟ್ಟಿರುವ ಗೇರ್ ವಯರಿನ ಉರ್ಲುಗೆ ಬಂದು ಬಿದ್ದೇ ಬೀಳುತ್ತಾನೆ. ಆವತ್ತು ಬೇಟೆಗಾರರಿಗೆ ವಿಜಯದಶಮಿ. ಹಾಗೆಂದು ಮೊಗ್ರದಲ್ಲಿ ಒಂದು ನಾಲ್ಕು ಜನ ಪ್ರೊಫೆಷನಲ್ ಬೊಂಟೆಯವರು ಇದ್ದಾರೆ. ಮೇಲೆ ಸೂರ್ಯ ಅತ್ತ ಮಸ್ಕ್ ಮಸ್ಕ್ ಆಗುತ್ತಿದ್ದಂತೆ ಈ ಬೇಟೆಗಾರರು ಬೆಡಿ ತಗೊಂಡು ಕಾಡು ಹತ್ತಿದರೆ ಮುಗಿಯಿತು, ಆವತ್ತು ಯಾವುದನ್ನಾದರೂ ಢಂ ಮಾಡದೆ ಇವರಿಗೆ ನಿದ್ದೆ ಬರಲ್ಲ. ಓ ಮೊನ್ನೆ ತಾನೇ ಎರಣಿಗುಡ್ಡೆ ಮರ್ಮಯ ಇಟ್ಟಿದ್ದ ಉರ್ಲ್ ಗೆ ಎರಡು ಸಲ ಹಂದಿ ಬಿದ್ದು ಡಬಲ್ ಧಮಾಕಾ ಆಗಿತ್ತು. ನಂತರ ಮೊನ್ನೆ ಮೊಗ್ರ ನದಿಯಲ್ಲಿ ಉರ್ಲಿಗೆ ಬಿದ್ದ ಟೇಸ್ಟೀ ಟೇಸ್ಟೀ ಹಂದಿಯನ್ನು ಭಟ್ರ‌ ಜಾಗದಲ್ಲಿ ಬೆಳಿಗ್ಗೆ 9 ಗಂಟೆಯ ಕರ್ಕಾಟಕ ಲಗ್ನದ ಸುಮುಹೂರ್ತದಲ್ಲಿ ಢಂ ಮಾಡಲಾಗಿದೆ. ಒಟ್ಟಾರೆಯಾಗಿ ಮೊಗ್ರದಲ್ಲಿ ಹಂದಿ ಬೇಟೆ ಒಂದು ಕ್ರೇಜ್ ಆಗಿ ಬೆಳೆಯುತ್ತಿದೆ. ದಿನಾ ಬೇಟೆ ನಡೆಯುತ್ತಿದೆ. ಅದರಲ್ಲೂ ಇರಣಿ ಗುಡ್ಡೆ ಮರ್ಮಯನಿಗೆ ಉರ್ಲ್ ಇಡುವುದರಲ್ಲಿ ಮಾಸ್ಟರ್ ಡಿಗ್ರಿ ಆಗಿದೆ. ಇವನ ಉರ್ಲಿಗೆ ಹೆದರಿ ಮೊಗ್ರ ಭಾಗದ ಅಷ್ಟೂ ಕುಲೆ, ಪೀಡೆ,ಪಿಚಾಚಿಗಳೂ ತಾವೂ ಉರ್ಲಿಗೆ ಬಿದ್ದು ಇನ್ನೊಮ್ಮೆ ಸಾಯೋದು ಬೇಡ ಎಂದು ‌ತಮ್ಮ ನೈಟ್ ರೌಂಡ್ಸನ್ನೇ ನಿಲ್ಲಿಸಿದೆಯೆಂದು  ಬಲಿಮ್ಮೆಯವರು ಮಂಡೆ ಬೆಚ್ಚ ಮಾಡಿಕೊಂಡಿದ್ದಾರೆ. ಇನ್ನು ಮೊಗ್ರದ ಚೊಕ್ಕಾಡಿ ಅಳಿಯ ಶಾರ್ಪ್ ಶೂಟರ್. ಇವನು ಗಾಳಿಯಲ್ಲಿ ಗುಂಡು ಹಾರಿಸಿದರೂ ಸಾಕು ಕಾಡು ಹಂದಿಗೆ HEART ATTACK ಆಗಿ ಬಿಡುತ್ತದೆ. ಆದ್ದರಿಂದ ಈ ಬೇಟೆಗಾರರು ಇನ್ನು ಕಾಡಲ್ಲಿ ಟೈಟಾಗಿ ಹಂದಿ ಅಂತ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕ್ಕೊಂಡು ಮೈನೀರು ಬಿಡಲು ಕುಂತವನನ್ನು ಢಂ ಮಾಡಿ ಒಂಜೆಕ್ಕ್ ಒಂಜರೆ ಆಗುವ ಮೊದಲು ಇವರ ಬೇಟೆಯನ್ನು ಸಂಬಂಧ ಪಟ್ಟ ಇಲಾಖೆಗಳು ನಿಲ್ಲಿಸೋದು ಒಳ್ಳೆಯದು. ಇಲ್ಲದಿದ್ದರೆ ಇವರು ಪಂಜಿಯ ಫೋಟೋವನ್ನು ಕೂಡ ಕಜಿಪು ಮಾಡಿ ತಿನ್ನುವ ಅಪಾಯಗಳಿವೆ.






                                   


                       


      ಹಾಗೆಂದು ಈ ಚೆಂಬು ಹೆಸರಿನ ಗ್ರಾಮ ಮಡಿಕೇರಿ ತಾಲೂಕಲ್ಲಿದ್ದರೂ ಮಡಿಕೇರಿಯಿಂದ ಇಲ್ಲಿಗೆ ಬರಬೇಕಾದರೆ ಸುಳ್ಯ ತಾಲೂಕಿನ ಕಲ್ಲುಗುಂಡಿ ದಾಟಿಯೇ ಬರಬೇಕು ಮತ್ತು ಚೆಂಬು ಜನ ಹೆಚ್ಚಾಗಿ ಸುಳ್ಯದಲ್ಲಿಯೇ ಬಂದು ಬೈಯಿಂಗ್ ಮತ್ತು ಸೆಲ್ಲಿಂಗ್‌ ಮಾಡಿಕೊಂಡಿರುತ್ತಾರೆ. ಇದೀಗ ಸದ್ರಿ ಚೆಂಬು ಗ್ರಾಮದಲ್ಲಿ ತಮ್ಮನೊಬ್ಬ ಪಿತ್ತ ನೆತ್ತಿಗೇರಿ ಸ್ವಂತ ಅಣ್ಣನ ಮಂಡೆಯನ್ನೇ ಶರ್ಬತ್ ಮಾಡಿದ ಘಟನೆ ನಡೆದಿದೆ.
   ಇದು ಚೆಂಬು. ಚೆಂಬಿನಲ್ಲಿ ಎರಡು ಚೆಂಬುಗಳಿವೆ. ಒಂದು U ಚೆಂಬು, ಇನ್ನೊಂದು M ಚೆಂಬು. U ಚೆಂಬು ಅಂದರೆ ಊರುಬೈಲು ಚೆಂಬು ಮತ್ತು M ಚೆಂಬು ಅಂದರೆ ಮೇಲ್ಚೆಂಬು ಎಂದರ್ಥ. ಮೊನ್ನೆ ಮೇಲ್ಚೆಂಬು ಗ್ರಾಮದ ನಾಯರ್ ಗದ್ದೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಫೈಟಿಂಗ್ ಒಂದು ನಡೆದಿದ್ದು ಫೈಟಿಂಗ್ ನಲ್ಲಿ ವಿಪರೀತ  ಪಿತ್ತ ನೆತ್ತಿಗೇರಿದ್ದ ತಮ್ಮ ಅಣ್ಣನ ಮಂಡೆ ಶರ್ಬತ್ ಮಾಡಿದ ಘಟನೆ ನಡೆದಿದೆ. ಇದರಿಂದಾಗಿ ಅಣ್ಣನ ಭೋಧ ತಪ್ಪಿದ್ದು ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ‌ICU ನಲ್ಲಿ ಗುಲ್ಗುಸು ಹಾಕಿ ಚಿಕಿತ್ಸೆ ಕೊಡಲಾಗುತ್ತಿದೆ. ಅಲ್ಲಿ ಆಸ್ಪತ್ರೆಯಲ್ಲಿ ಪೇಶೆಂಟನ್ನು ನೋಡಿ ಕೊಳ್ಳಲು ಖುದ್ದು ಶರ್ಬತ್ ಮಾಡಿದ ತಮ್ಮನೇ ಆರೈಕೆಗೆ ನಿಂತಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯಿಂದಾಗಿ ಭಯಂಕರ ಹೆದರಿಕೊಂಡಿರುವ ತಮ್ಮನ ಪಿತ್ತಕೋಶದದ ಅಷ್ಟೂ ಪಿತ್ತ ಲೀಕೇಜ್ ಆಗಿರುವ ಸಾಧ್ಯತೆಗಳಿವೆ. ಯಾಕೆಂದರೆ ಅಣ್ಣನ ಪರಿಸ್ಥಿತಿ ಇತ್ತೆ ಬುಕ್ಕ ಲೆವೆಲ್ ನಲ್ಲಿದ್ದು ಎಲ್ಲಿಯಾದರೂ ಅಂಚಿಂಚಿ ಆದರೆ ತಮ್ಮ ಸೆಕ್ಷನ್ 302 ಅಡಿಗೆ ಬರುತ್ತಾನೆ. ಸದ್ಯಕ್ಕೆ ತಮ್ಮ ಸೆಕ್ಷನ್ 307 ಅಡಿಯಲ್ಲಿದ್ದು ಇದೇ ಪರಿಸ್ಥಿತಿ ಮುಂದುವರೆದು ಅಣ್ಣ ಅಪಾಯದಿಂದ ಪಾರಾಗಲಿ. ಈ ಘಟನೆ ಮಡಿಕೇರಿ-ಸಂಪಾಜೆ OP ಪೋಲಿಸರ ವ್ಯಾಪ್ತಿಯಲ್ಲಿ ನಡೆದಿದ್ದು ಪಾಪ ಅವರಿಗೆ ವಿಷಯವೇ ಗೊತ್ತಿಲ್ಲ ಎಂದು ಕಾಣುತ್ತದೆ.


                                                          




    ವೇದಿಕೆ ರೆಡಿಯಾಗುತ್ತಿದೆ. ಮೈಕ ಸೆಟ್, ಬ್ಯಾಂಡ್ ಸೆಟ್, ಶಾಮೀಯಾನದವರಿಗೆ ಹೇಳಲು ಬಚ್ಚಿರೆ ಕೊಯ್ಯಲಾಗಿದೆ. ಇನ್ನೇನು ಚಡ್ಡಿ ಕಳಚಿ ಗರಿ ಗರಿ ಖಾದಿ ಧರಿಸಲು ದಿನ ಫಿಕ್ಸ್ ಆದರೆ ಮುಗೀತು. ಚೊಕ್ಕಾಡಿ-ಕುಕ್ಕುಜಡ್ಕ ಭಾಗದ ಪ್ರಭಾವೀ ದೇಶಭಕ್ತನೊಬ್ಬ ಕಾಂಗ್ರೆಸ್ ‌ಗೆ ಸೇರ್ಪಡೆ ಆಗುವ ಕರಾಳ ದಿನ ಹತ್ತಿರದಲ್ಲೇ ಇದೆ.
   ಹೌದು ಸ್ವಾಮಿ ! ಸುಳ್ಯ ತಾಲೂಕಿನ ಚೊಕ್ಕಾಡಿ- ಕುಕ್ಕುಜಡ್ಕ‌ ಏರಿಯಾದ ಪ್ರಭಾವೀ ದೇಶಭಕ್ತನೊಬ್ಬ ಬಿಜೆಪಿಗೆ ವಂದನಾರ್ಪಣೆ ಹೇಳಿ ಕಾಂಗ್ರೆಸ್ ನಲ್ಲಿ ಸ್ವಾಗತ ಭಾಷಣಕ್ಕೆ ರೆಡಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆ ಮೂಲಕ ಇಲ್ಲಿ ದೇಶ ಭಕ್ತರ ಟೀಮು ವಿರಾಟ್ ಕೊಹ್ಲಿ ವಿಕೆಟನ್ನೇ ಕಳೆದು ಕೊಳ್ಳಲಿದೆ.
    ಹಾಗೆಂದು ಚೊಕ್ಕಾಡಿ ಭಾಗದಲ್ಲಿ ಈ ದೇಶ ಭಕ್ತ ಪವರ್ ಫುಲ್ ಲೀಡರ್. ಸುಳ್ಯ ದೇಶಭಕ್ತರ ಗ್ಯಾಂಗಿನಲ್ಲೂ ಈ ನಾಯಕ ಟಾಪ್ ಲೆವೆಲ್ ಲೀಡರು. ದೇಶಭಕ್ತರ ಪಕ್ಷದಿಂದ ಈ ನಾಯಕ ಜನಪ್ರತಿನಿಧಿಯೂ ಆಗಿದ್ದು ತಾಲೂಕು ಲೆವೆಲ್ ನ ಎಲ್ಲಾ ಸೀಟುಗಳನ್ನು  ಅಲಂಕರಿಸಿಯಾಗಿದೆ. ಇದೀಗ ಈ ನಾಯಕ ಅದ್ಯಾಕೋ ದೇಶ ಭಕ್ತರ ಮೇಲೆ ಕೋಪಗೊಂಡಿದ್ದು ಪಕ್ಷಕ್ಕೆ ಡೈವೊರ್ಸ್ ಕೊಡಲು ನಿರ್ಧರಿಸಿದ್ದಾರೆ ಎಂದು ನಮ್ಮ ಚೊಕ್ಕಾಡಿ ಟವರ್ ಡುಂಯಿ ಡುಂಯಿ ಮಾಡಿದೆ. ಆಯಿತು ಈ ನಾಯಕರು ಹೋದರೆ ಹೋಗಲಿ ಎಂದು ದೇಶಭಕ್ತರು ಸುಮ್ಮನಿರಬಹುದಿತ್ತು. ಆದರೆ ಸದ್ರಿಯವರು "ನೀ ಬಂದಿಯನ.... ನೀ ಬಂದಿಯನ" ಎಂದು ಸುಳ್ಯ ಬಿಜೆಪಿಯ ಅಷ್ಟೂ ಆತ್ರಪ್ತ ಆತ್ಮಗಳಿಗೆ ಕಾಲ್ ಮಾಡಿ ಅವರನ್ನೂ ಕಾಂಗ್ರೆಸ್ ಸೇರಿಕೊಳ್ಳಲು ಒತ್ತಾಯಿಸುತ್ತಿದ್ದಾರೆ.   ಮಂಕಿ ತಾನೂ ಕೆಟ್ಟಿತ್ತಲ್ಲದೆ ಫಾರೆಸ್ಟನ್ನೆಲ್ಲ ಕೆಡಿಸಿತು ಎಂಬ ಪರಿಸ್ಥಿತಿ ಸದ್ಯಕ್ಕೆ ದೇಶಭಕ್ತರ ಗ್ಯಾಂಗಿನಲ್ಲಿದೆ. ಕೊಹ್ಲಿ ಹೋದರೆ ಹೋಗಲಿ ರಾಹುಲ್, ಜಡ್ಡೂ, ಸೂರ್ಯ ಇದ್ದಾರೆ. ಇಷ್ಟಕ್ಕೂ ಈ ನಾಯಕರಿಗೆ ದೇಶಭಕ್ತರ ಗ್ಯಾಂಗಿನಲ್ಲಿ ಎಲ್ಲಿ ವಯರ್ ಶಾರ್ಟ್  ಆಗಿದೆ ಎಂದೇ ಅರ್ಥವಾಗುತ್ತಿಲ್ಲ.


                                                         


    ಹಾಗೆಂದು ದಕ್ಷಿಣ ಕನ್ನಡ ಗಡಿ ಭಾಗದ ಆಚೆ ಯಾರೂ ಹೋಗಲ್ಲ. ಅಲ್ಲಿ ಫಾರೆಸ್ಟ್ ಬಿಟ್ಟರೆ ಬೇರೇನೂ ಇಲ್ಲ. ಆದರೆ ಅಂಥ ಫಾರೆಸ್ಟ್ ನಲ್ಲೂ ಅಕ್ರಮ ಗಣಿಗಾರಿಕೆ ಮಾಡುತ್ತಾರೆಂದರೆ ಅವರನ್ನು ಮೆಚ್ಚಲೇಬೇಕು. ಹಾಗೆಂದು ಈ ಭಾಗದಲ್ಲಿ ಹರಳು ಕಲ್ಲು ಅಗೆದ ವಿಷಯ ಇಡೀ ಲೋಕಕ್ಕೆ ಗೊತ್ತುಂಟು. ಅದನ್ನೆಲ್ಲ ವರ್ಣಿಸಲಸಾಧ್ಯ. ಆದರೆ ಇದೀಗ ಇಲ್ಲಿ ಚಿಕ್ಕದಾಗಿ, ಚೊಕ್ಕದಾಗಿ, ಯಾರಿಗೂ ಗೊತ್ತಾಗದಂತೆ ಕೆಂಪು ‌ಕಲ್ಲಿನ ಪಣೆಯೊಂದು ಕಾರ್ಯಚರಿಸುತ್ತಿದೆ ಎಂದು ನಮ್ಮ ಕಲ್ಮಕಾರ್ ಟವರ್ ಕೂಕುಲು ಹಾಕಿ ಹೇಳಿದೆ. ಯಾರಿಗೆ ಹೇಳೋಣ ಈ ವಿಷಯ?
   ಅಲ್ಲಿ ಕಲ್ಮಕಾರಿನ ಅರಣ್ಯ ಪ್ರದೇಶದಲ್ಲಿ ಈಗ ಕೆಂಪು ಕಲ್ಲಿನ ಪಣೆಯೊಂದು ಇದ್ದು‌ ಇಲ್ಲಿಂದ  ಪಿಕಪ್ ನಲ್ಲಿ ಕೆಂಪು ಕಲ್ಲು ಸಾಗಾಟ ಮಾಡಲಾಗುತ್ತಿದೆ. ಮೊದಲು ಭೂತ ಸ್ಥಾನ ಕಟ್ಟಲು ಕಲ್ಲು ಎಂದು ಕಲ್ಲು ಕಳ್ಳರು ಘೋಷಣೆ ಮಾಡಿದ್ದು ಇದೀಗ ನೂರು ಭೂತಗಳಿಗಾಗುವಷ್ಟು ಕಲ್ಲು ಇಲ್ಲಿಂದ ಹೊರಹೋಗು ತ್ತಿದೆ. ಭೂತಗಳಿಗೆ ಹತ್ತು ಕಲ್ಲು ಮಾತ್ರ ಹಾಕುವ ಇದೇ ಕಲ್ಲು ಕಳ್ಳರು ಹೊರಗೆ ಲೋಡ್ ಲೋಡ್ ಕಲ್ಲು ಇಳಿಸುತ್ತಿದ್ದಾರೆ. ಭೂತದ ಹೆಸರಿನಲ್ಲಿ ಕಲ್ಲು ಬ್ಯಾರಕ್ಕೆ ಇಳಿದಿರುವ ಈ ಕಲ್ಲು ಕಳ್ಳರ ಭಾವಚಿತ್ರ, ಅವರ ಸಾಧನೆಗಳ ಪಟ್ಟಿ, ಯಾರ ಮಿಸನ್, ಯಾರ ಪಿಕಪು ಮತ್ತು ಕಲ್ಲು ಕಳ್ಳರ, ಮರಗಳ್ಳರ, ಹರಳು ಕಳ್ಳರ ಮಹಾನ್ ನಾಯಕನ ಜಾತಕ ಪತ್ರಿಕೆಗೆ ಬಂದಿದೆ. ಇನ್ನಾದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಪ್ರದೇಶದಲ್ಲಿ ಸಣ್ಣ ವಾಕಿಂಗ್ ಆದರೂ ಮಾಡಲಿ. ಗ್ಯಾಸ್ಟ್ರಿಕ್ ಗೆ ಒಳ್ಳೆದು.

Copy to DFO Mangalore  ✅


                                                        


    ಕೆಲವು ದಿನಗಳ ಹಿಂದೆ ನಾವು ದೇವಚಳ್ಳ ಗ್ರಾಮದ ದೇವಾ ಎಂಬಲ್ಲಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರಗಳನ್ನು ಕಡಿದು ಮಾರಾಟ ‌ಮಾಡಲಾಗಿದೆ ಎಂದು ಬರೆದಿದ್ದೆವು. ಅಸಲಿಗೆ ಆ ಮರ ಕಡಿದ ಏರ್ಯ ಯಾರ ಅಂಡರಲ್ಲಿ ಬರುತ್ತದೆ ಎಂದು ಸುಳ್ಯ- ಸುಬ್ರಹ್ಮಣ್ಯ ಎರಡೂ ರೇಂಜಲ್ಲೂ ಕೇಳಿದ್ದೆವು. ನಮಗಲ್ಲ, ನಮಗಲ್ಲ ಎಂದು ಎರಡೂ ರೇಂಜ್ ನವರೂ ರೈಲು ಬಿಟ್ಟಿದ್ದರು. 
    ನಾವೂ ಮಣ್ಣು ಹಾಕಲಿ ಎಂದು ಸುಮ್ಮನಾಗಿ ಬಿಟ್ಟೆವು. ಈಗ ನೋಡಿದರೆ ಅದೇ ದೇವಚಳ್ಳ ಗ್ರಾಮದ ಕರಂಗಲ್ ಎಂಬಲ್ಲೂ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರ ಗಳನ್ನು ಮಟಾಷ್ ಮಾಡಲಾಗಿದೆ. ಯಾರಲ್ಲಿ ಹೇಳೋಣ? ಇದಕ್ಕೆ ಸಾಕ್ಷಿ ಎಂಬಂತೆ  ಕರಂಗಲ್ ನಲ್ಲಿ ಅಲ್ಲಲ್ಲಿ ಮರದ ಕುತ್ತಿಗಳು ಸಿಗುತ್ತಿದ್ದು ಕೇಳುವವರೇ ಇಲ್ಲದಂತಾಗಿದೆ. ಹಿಂದೆ ಸ್ಟೇಟ್ ಗೊಬ್ಬ ವೀರಪ್ಪನ್ ಇದ್ದ. ಈಗ ಅವನ ಸಂತಾನ ಗ್ರಾಮ ಗ್ರಾಮಗಳಲ್ಲಿ, ಅರಣ್ಯ ಇಲಾಖೆಯಲ್ಲಿ ಹುಟ್ಟಿಕೊಂಡದ್ದು ವಿಪರ್ಯಾಸವೇ ಸರಿ. ಅರಣ್ಯ ಇಲಾಖೆಯ ವೈಟ್ ಕಾಲರ್ ಗಳು ಒಮ್ಮೆ ದೇವಚಳ್ಳ ಗ್ರಾಮಕ್ಕೆ ವಾಕಿಂಗ್ ಹೋದರೂ ಸಾಕು. ಮರ ತಿಂದದ್ದು ಯಾರೆಂದು ಗೊತ್ತಾಗುತ್ತದೆ.







                                                       



    ಅದು ಸುಳ್ಯ- ಮಡಿಕೇರಿ ಸ್ಟೇಟ್ ಹೈವೇಯಲ್ಲಿ ಸಿಗುವ ಪ್ರತಿಷ್ಠಿತ ಗ್ರಾಮ ಪಂಚಾಯತ್. ಕೊಡಗು ಜಿಲ್ಲಾ ಸರಹದ್ದಿಗೆ ಸೇರಿರುವ ಈ ಊರು ಅರೆಭಾಷೆ ಗೌಡ್ರುಗಳ ರಿಪಬ್ಲಿಕ್ ಸಹ. ಇಲ್ಲಿ ಗೌಡ್ರುಗಳು ಹಾಕಿರುವ ಲಕ್ಷ್ಮಣ ರೇಖೆಯನ್ನು ಯಾರೂ ದಾಟುವಂತಿಲ್ಲ. ಇಂತಹ ಪ್ರತಿಷ್ಠಿತ ಪಂಚಾಯ್ತಿಗೆ ಒಬ್ಬ PDO ಘಟ್ಟದ ಮೇಲಿಂದ ಇಳಿದು ಬರುತ್ತಾನೆ. ಸದ್ರಿ PDOಗೆ ಸ್ವಲ್ಪ ಚೂಡಿ ಮರ್ಲ್ ಜಾಸ್ತಿ ಇತ್ತು ಗಡ. ಹಾಗೇ ಕಣ್ಣಿಗೆ ಕಂಡ ಚೂಡಿಗೆಲ್ಲ ಈತ ಬಲೆ ಹಾಕುತ್ತಿದ್ದ, ಕಾಳು ಹಾಕುತ್ತಿದ್ದ, ಬಿಸ್ಕತ್ತು ಬಿಸಾಡುತ್ತಿದ್ದ ಗಡ. ಆದರೆ ಎಲ್ಲಾ ಬಾಲುಗಳು ಲೂಸ್ ಡೆಲಿವರಿ ಅಲ್ವಲ್ಲ. ಒಂದು ಬಾಲಿಗೆ ಔಟಾದ.
   ಹಾಗೇ ಈತನ ಭಂಡಾರ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದೇ ಗ್ರಾಮಕ್ಕೆ ಸಂಬಂಧ ಪಟ್ಟ VA ಒಬ್ಬಳು ಹೆಣ್ಣು ಮಗಳಾಗಿದ್ದಳು. ಹಾಗಾಗಿ ಇಬ್ಬರೂ ಒಂದೇ ಗ್ರಾಮಕ್ಕೆ ಸಂಬಂಧ ಪಟ್ಟವರಾದ ಕಾರಣ PDO ಕಣ್ಣು VA ಮೇಲೆ ಬೀಳುತ್ತದೆ. ಅಲ್ಲಿಂದ VAಗೆ ಇವನ ಗುಳಿಗ್ಗ ಬಾಧೆ ಶುರುವಾಗುತ್ತದೆ. VAಗೆ ಶೇಕ್ ಹ್ಯಾಂಡ್ ಮಾಡೋದು, ಬೆನ್ನು ತಟ್ಟೋದು/ಸವರೋದು, ಅಪಗಪಗ ಟಚ್ಚಿಂಗ್, ಡ್ಯಾಶ್ ಹೊಡೆಯೋದು, ಡ್ರಾಪ್ ಕೊಡೋಕೆ  ನೋಡೋದು ಇತ್ಯಾದಿ ಇತ್ಯಾದಿ ಮಾಡುತ್ತಿದ್ದ. ಆದರೆ ಇವನ ಎಲ್ಲಾ ಬಾಲಲೀಲೆಗಳನ್ನು ಸಹಿಸಿಕ್ಕೊಂಡಿದ್ದ VA ತನ್ನಂತೆಯೇ ಇವನೂ ಸರ್ಕಾರಿ ನೌಕರ ಎಂದು ಸುಮ್ಮನಿದ್ದಳು. ಆದರೆ VAಯ ಈ ಮೌನವನ್ನೇ ಒಪ್ಪಿಗೆ ಎಂದು ಮಿಸ್ಸಾಗಿ ಅರ್ಥ ಮಾಡಿಕೊಂಡ PDO ಒಂದು ದಿನ ಮೈನ್ ಸ್ವಿಚ್ ಗೆ ಕೈ ಹಾಕಿ ಬಿಟ್ಟ. ಅಷ್ಟೇ. ಕೇಸ್ ದೊಡ್ಡದಾಯಿತು.
   PDOನ ಈ ಒಂದು ಅತಿರೇಕದ ವರ್ತನೆಯಿಂದ ರೋಸಿ ಹೋದ VA  ಸೀದಾ ಹೋಗಿ ಆ ಊರಿನ ಪ್ರಮುಖರಲ್ಲಿ PDO ಬಗ್ಗೆ, ಅವನ ಲೀಲೆಗಳ ಬಗ್ಗೆ ಇಂಚಿಂಚು ಬಿಡದೆ ಹೇಳಿದ್ದಾರೆ. ಮೊದಲೇ ಅರೆಭಾಷೆ ಗೌಡ್ರುಗಳ ರಿಪಬ್ಲಿಕ್ಕು, ದೇಶಭಕ್ತರ ಭದ್ರಕೋಟೆ  ಬೇರೆ. ಊರ ಪ್ರಮುಖರು PDOನ ಕರೆದು ಬಚ್ಚಿರೆ ತಿಂದು ಉಗಿದಿದ್ದಾರೆ. ಕೂಡಲೇ ಆ ಊರಿಂದ ಕರ ಕೈಲ್, ಗಂಟು ಮೂಟೆ ಕಟ್ಟುವಂತೆ ಪಂಚಾಯಿತಿ ಮುಗಿಸಿದ್ದಾರೆ ಮಾತ್ರವಲ್ಲದೆ ಸದ್ರಿ PDOಗೆ ಆ ಪಂಚಾಯಿತಿಯಿಂದ ಟ್ರಾನ್ಸ್ ಫರ್ ಮಾಡಿಸಿ ಫೈಲ್‌ ಕ್ಲೋಸ್ ಮಾಡಿಸಿದ್ದಾರೆ. ಇದೀಗ ಆ PDO ಅದೇ ಸ್ಟೇಟ್ ಹೈವೇಯಲ್ಲಿ ಸಿಗುವ ಇನ್ನೊಂದು ಪಂಚಾಯಿತಿಯಲ್ಲಿ ಸ್ಥಾಪನೆಯಾಗಿದ್ದು ಸದ್ಯಕ್ಕೆ ಆ ಪಂಚಾಯಿತಿಗೆ ಕೆಲಸಕ್ಕೆ ಬರುತ್ತಿದ್ದ ಹುಡುಗಿಯೊಂದು ಕೆಲಸಕ್ಕೆ ಬರುತ್ತಿಲ್ಲ ಎಂದು ತಿಳಿದುಬಂದಿದೆ. PDO ಭಾರೀ ಚಾಲೂ ಮಾರಾಯ್ರೆ ದೊಡ್ಡವನಾಗುವಾಗ ಇನ್ನೂ ದೊಡ್ಡ ಚಾಪ್ಟರ್ ಆಗ ಬಹುದು.
    







                                                      


  ದೇವರಿಗೂ ಬೇಸರವಾಗಿರಬಹುದು ಸುಳ್ಯ ದ ಮದುವೆ ಗದ್ದೆಯ ಹುಡುಗಿಯನ್ನು ವಾಪಾಸ್ ಕರೆಸಿಕೊಳ್ಳಲು. ಆದರೆ ಈ ಪಾಪಿಗಳ ಲೋಕದಿಂದ ಅವಳೇ ಸ್ವಯಂ  ಮುಕ್ತಿ ತೆಗೆದುಕೊಳ್ಳಲು ನಿರ್ಧರಿಸಿದಾಗ ಆ ದೇವರೇ ಮದುವೆ ಗದ್ದೆ ಹುಡುಗಿಯನ್ನು ವಾಪಾಸ್ ಕರೆಸಿಕೊಂಡಿದ್ದಾನೆ ಅಷ್ಟೇ.
   ಇದು ಸುಳ್ಯ ಉಬರಡ್ಕದ ಮದುವೆ ಗದ್ದೆಯ ದುರಂತ ನಾಯಕಿಯೊಬ್ಬಳ ಕತೆ. ಹೆಸರು ಐಶ್ವರ್ಯ. ಸೌಂದರ್ಯದ ಗಣಿ, ಚೆಲುವಿನ ಖಜಾನೆ ಇವಳು. ಬೆಂಗಳೂರಿನಲ್ಲಿ ಸೆಟಲ್ ಆಗಿರುವ ಮದುವೆಗದ್ದೆಯ  ಸುಬ್ರಹ್ಮಣ್ಯ - ಉಷಾ ದಂಪತಿಯ ಕೊಂಡಾಟದ ಪುತ್ರಿ ಈಕೆ.  ಮದುವೆ ಗದ್ದೆಯ ಪ್ರತಿಷ್ಠೆಗೆ ಮತ್ತು ಕೊಂಡಾಟದ ಮಗಳ ಯಶಸ್ಸಿಗಾಗಿ ಸುಬ್ರಹ್ಮಣ್ಯರು ಮಗಳು ಐಶೂವನ್ನು ಅಮೇರಿಕಾದಲ್ಲಿ ಓದಿಸಿದ್ದರು. ಐಶೂ ಬೆಂಗಳೂರಿನಲ್ಲಿ ಅದ್ಯಾವುದೋ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸವನ್ನೂ ಮಾಡುತ್ತಿದ್ದಳು. ಓದು  ಮುಗಿದು, ಕೆಲಸ ಸಿಕ್ಕಿದ ಮೇಲೆ ಸುಬ್ರಹ್ಮಣ್ಯರು ಮಗಳನ್ನು ಬೆಂಗಳೂರಿನ ಡೈರಿ ರಿಚ್ ಸಾಮ್ರಾಜ್ಯದ ರಾಜ ಕುಮಾರ ರಾಜೇಶನಿಗೆ ಕೊಟ್ಟು ಮದುವೆಯನ್ನೂ ಮಾಡಿಸಿದ್ದರು ನಾಲಕ್ಕು ವರ್ಷಗಳ ಹಿಂದೆ. ಮದುವೆ ಗದ್ದೆ ಸುಬ್ರಹ್ಮಣ್ಯರದ್ದು  ಎಲ್ಲಾ ಮುಗಿದ ಮೇಲೆ ರಾಜೇಶಂದು ಶುರುವಾಯಿತು. ಮದುವೆ ಗದ್ದೆಯ ಹುಡುಗಿ ಧರೆಗಿಳಿದು ಹೋಯ್ತು.
   ಹಾಗೆಂದು ಈ ಡೈರಿ ರಿಚ್ ರಾಜೇಶ್ ಕೂಡಾ ಸುಳ್ಯದವನು. ಕನಕಮಜಲು ಕಾಪಿಲ ಗಿರಿಯಪ್ಪ ಗೌಡರು ಬೆವರು ಸುರಿಸಿ ಕಟ್ಟಿದ ಡೈರಿ ರಿಚ್ ಸಾಮ್ರಾಜ್ಯದ ಉತ್ತರಾಧಿಕಾರಿ ಅವನು. ಸೌಂದರ್ಯದ ಗಣಿಯನ್ನು ಚೆನ್ನಾಗಿಯೇ ನೋಡಿ ಕೊಂಡಿದ್ದ ರಾಜೇಶ. ಆದರೆ ಅದ್ಯಾರೋ ಶಕುನಿ ಗಳು ಎಂಟ್ರಿ ಕೊಟ್ಟು ಮದುವೆ ಗದ್ದೆ ಹುಡುಗಿ ಮತ್ತು ಡೈರಿ ರಿಚ್ ಸಾಮ್ರಾಜ್ಯದ ನಡುವೆ ಫಿಟ್ಟಿಂಗ್ ಇಟ್ಟು ಬಿಟ್ಟರು. ಇದರ  ರಿಸಲ್ಟ್ ಮಾತ್ರ ದುರಂತಮಯವಾಗಿ ಹೋಯ್ತು. ಮದುವೆ ಗದ್ದೆ ಹುಡುಗಿ ವಾಪಾಸ್ ಹೊರಟು ಹೋದರೆ ಡೈರಿ ರಿಚ್ ಸಾಮ್ರಾಜ್ಯದ ರಾಜ, ರಾಣಿ, ಯುವರಾಜ ಮತ್ತು ರಾಜ ಪರಿವಾರದ ಕೆಲವು ಸದಸ್ಯರು ಪೋಲಿಸ್ ಕಸ್ಟಡಿಯಲ್ಲಿ VIP ಚಡ್ಡಿಯಲ್ಲಿ ಕುಂತಿದ್ದಾರೆ. ಬೇಕಾ ಇವ್ರಿಗೆ?
   ಹಾಗೇ ಮದುವೆ ಗದ್ದೆ ಹುಡುಗಿಯನ್ನು ಮದುವೆಯಾಗಿ ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಇವರಿಬ್ಬರ ಬದುಕಿನಲ್ಲಿ ಶನಿ ವಕ್ಕರಿಸಿ ಬಿಟ್ಟ. ರಾಜೇಶನಿಗೆ ಐಶೂ ಬೊಡಿದು ಬಿಟ್ಟಲು. ಅದೇನೋ ಆಸ್ತಿ ಗಲಾಟೆಯೂ ಇವರಿಬ್ಬರ ದಾಂಪತ್ಯದಲ್ಲಿ ಹುಳಿ ಹಿಂಡಿತು. ಐಶೂಗೆ ಗಂಡನ ಮನೆಯಲ್ಲಿ ಕ್ಲಾಸ್, ಸ್ಪೆಷಲ್ ಕ್ಲಾಸ್ ಶುರುವಾಯ್ತು. ಹುಡುಗಿ ಇದನ್ನೆಲ್ಲ ತಡೆದುಕೊಂಡು ಕುಂತಿತು. ಆದರೆ ಕಡೆಗೊಮ್ಮೆ ಇನ್ನು ಸಾಧ್ಯವಿಲ್ಲ ಎಂದು ಗಂಡನ ಮನೆಯಿಂದ ಎದ್ದು ತವರಿನ ಕಡೆಗೆ ತನ್ನ ಲಾಸ್ಟ್ ಜರ್ನಿ ಮುಗಿಸಿ ಬಿಟ್ಟಳು ಮತ್ತು ಅಲ್ಲೇ ತನ್ನ ತವರಿನಲ್ಲೇ ನಾಲಕ್ಕು ಪುಟಗಳ ಗಂಡನ ಮನೆಯ ಕತೆಯನ್ನು ಬರೆದಿಟ್ಟು ಬದುಕಿಗೊಂದು ಅಂತ್ಯ ಹಾಡಿ ಬಿಟ್ಟಳು.
   ಹಾಗೇ ಈ ಬಗ್ಗೆ ಪೋಲಿಸ್ ಕಂಪ್ಲೈಂಟ್ ಆಗಿ ಐಶೂ ಬರೆದಿದ್ದ ಗಂಡನ ಮನೆಯ ಕತೆ ಪೋಲಿಸರಿಗೆ ಸಿಕ್ಕು ಅವರು ಡೈರಿ ರಿಚ್ ಮನೆಗೆ ಬಂದರೆ ಡೈರಿ ರಿಚ್ ಅದಾಗಲೇ ಗೋವಾ ರೀಚ್ ಆಗಿತ್ತು. ಗೋವಾದಿಂದ ಡೈರಿ ರಿಚ್ ಪರಿವಾರ ‌ಬಾಂಬೆ ಕಡೆ ದಿಬ್ಬಣ ಹೊರಟಾಗ ಹೋಗಿ ಬೆಂಗಳೂರು ಪೊಲೀಸರು ಹಿಡ್ಕೊಂಡಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಕರೆ ತಂದ ಪೋಲಿಸರು ಡೈರಿ ರಿಚ್ ಪರಿವಾರಕ್ಕೆ   ಸನ್ಮಾನ ಮಾಡಲು, ಬೆಂಡ್ ತೆಗೆಯಲು ಪರಿವಾರವನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
   ಇನ್ನೊಬ್ಬರ ಮನೆಯ ಗಿಳಿಯನ್ನು ತಂದು ಕತ್ತೆ ಮಾಡುವುದು ಬಹಳ ಪುರಾತನ ಕಾಲದಿಂದಲೂ ನಮ್ಮ ಸಂಪ್ರದಾಯವೇ ಆಗಿ ಬಿಟ್ಟಿದೆ. ಬೇರೆಯವರ ಮನೆಯ ರಾಜ ಕುಮಾರಿಯನ್ನು ತಂದು ಅವಳನ್ನು ಮಹಾ ರಾಣಿ ಮಾಡಬೇಕೇ ಹೊರತು ಅವಳನ್ನು ದಾಸಿ ಮಾಡಿದರೆ ನಾವು ಪೋಲಿಸ್ ಮಾಮನ ಕಸ್ಟಡಿಯಲ್ಲಿ ಚಡ್ಡಿಯಲ್ಲಿ ಕೊಕ್ಕರ ಕೂರ ಬೇಕಾಗುತ್ತದೆ. ಮದುವೆ ಗದ್ದೆ ಹುಡುಗಿಯ ಆತ್ಮಕ್ಕೆ ಶಾಂತಿ ಸಿಗಲಿ.
    







MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget