ಹಾಗೆಂದು ಈ ಚೆಂಬು ಹೆಸರಿನ ಗ್ರಾಮ ಮಡಿಕೇರಿ ತಾಲೂಕಲ್ಲಿದ್ದರೂ ಮಡಿಕೇರಿಯಿಂದ ಇಲ್ಲಿಗೆ ಬರಬೇಕಾದರೆ ಸುಳ್ಯ ತಾಲೂಕಿನ ಕಲ್ಲುಗುಂಡಿ ದಾಟಿಯೇ ಬರಬೇಕು ಮತ್ತು ಚೆಂಬು ಜನ ಹೆಚ್ಚಾಗಿ ಸುಳ್ಯದಲ್ಲಿಯೇ ಬಂದು ಬೈಯಿಂಗ್ ಮತ್ತು ಸೆಲ್ಲಿಂಗ್ ಮಾಡಿಕೊಂಡಿರುತ್ತಾರೆ. ಇದೀಗ ಸದ್ರಿ ಚೆಂಬು ಗ್ರಾಮದಲ್ಲಿ ತಮ್ಮನೊಬ್ಬ ಪಿತ್ತ ನೆತ್ತಿಗೇರಿ ಸ್ವಂತ ಅಣ್ಣನ ಮಂಡೆಯನ್ನೇ ಶರ್ಬತ್ ಮಾಡಿದ ಘಟನೆ ನಡೆದಿದೆ.
ಇದು ಚೆಂಬು. ಚೆಂಬಿನಲ್ಲಿ ಎರಡು ಚೆಂಬುಗಳಿವೆ. ಒಂದು U ಚೆಂಬು, ಇನ್ನೊಂದು M ಚೆಂಬು. U ಚೆಂಬು ಅಂದರೆ ಊರುಬೈಲು ಚೆಂಬು ಮತ್ತು M ಚೆಂಬು ಅಂದರೆ ಮೇಲ್ಚೆಂಬು ಎಂದರ್ಥ. ಮೊನ್ನೆ ಮೇಲ್ಚೆಂಬು ಗ್ರಾಮದ ನಾಯರ್ ಗದ್ದೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಫೈಟಿಂಗ್ ಒಂದು ನಡೆದಿದ್ದು ಫೈಟಿಂಗ್ ನಲ್ಲಿ ವಿಪರೀತ ಪಿತ್ತ ನೆತ್ತಿಗೇರಿದ್ದ ತಮ್ಮ ಅಣ್ಣನ ಮಂಡೆ ಶರ್ಬತ್ ಮಾಡಿದ ಘಟನೆ ನಡೆದಿದೆ. ಇದರಿಂದಾಗಿ ಅಣ್ಣನ ಭೋಧ ತಪ್ಪಿದ್ದು ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ICU ನಲ್ಲಿ ಗುಲ್ಗುಸು ಹಾಕಿ ಚಿಕಿತ್ಸೆ ಕೊಡಲಾಗುತ್ತಿದೆ. ಅಲ್ಲಿ ಆಸ್ಪತ್ರೆಯಲ್ಲಿ ಪೇಶೆಂಟನ್ನು ನೋಡಿ ಕೊಳ್ಳಲು ಖುದ್ದು ಶರ್ಬತ್ ಮಾಡಿದ ತಮ್ಮನೇ ಆರೈಕೆಗೆ ನಿಂತಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯಿಂದಾಗಿ ಭಯಂಕರ ಹೆದರಿಕೊಂಡಿರುವ ತಮ್ಮನ ಪಿತ್ತಕೋಶದದ ಅಷ್ಟೂ ಪಿತ್ತ ಲೀಕೇಜ್ ಆಗಿರುವ ಸಾಧ್ಯತೆಗಳಿವೆ. ಯಾಕೆಂದರೆ ಅಣ್ಣನ ಪರಿಸ್ಥಿತಿ ಇತ್ತೆ ಬುಕ್ಕ ಲೆವೆಲ್ ನಲ್ಲಿದ್ದು ಎಲ್ಲಿಯಾದರೂ ಅಂಚಿಂಚಿ ಆದರೆ ತಮ್ಮ ಸೆಕ್ಷನ್ 302 ಅಡಿಗೆ ಬರುತ್ತಾನೆ. ಸದ್ಯಕ್ಕೆ ತಮ್ಮ ಸೆಕ್ಷನ್ 307 ಅಡಿಯಲ್ಲಿದ್ದು ಇದೇ ಪರಿಸ್ಥಿತಿ ಮುಂದುವರೆದು ಅಣ್ಣ ಅಪಾಯದಿಂದ ಪಾರಾಗಲಿ. ಈ ಘಟನೆ ಮಡಿಕೇರಿ-ಸಂಪಾಜೆ OP ಪೋಲಿಸರ ವ್ಯಾಪ್ತಿಯಲ್ಲಿ ನಡೆದಿದ್ದು ಪಾಪ ಅವರಿಗೆ ವಿಷಯವೇ ಗೊತ್ತಿಲ್ಲ ಎಂದು ಕಾಣುತ್ತದೆ.
Post a Comment