ಹಾಗೆಂದು ದಕ್ಷಿಣ ಕನ್ನಡ ಗಡಿ ಭಾಗದ ಆಚೆ ಯಾರೂ ಹೋಗಲ್ಲ. ಅಲ್ಲಿ ಫಾರೆಸ್ಟ್ ಬಿಟ್ಟರೆ ಬೇರೇನೂ ಇಲ್ಲ. ಆದರೆ ಅಂಥ ಫಾರೆಸ್ಟ್ ನಲ್ಲೂ ಅಕ್ರಮ ಗಣಿಗಾರಿಕೆ ಮಾಡುತ್ತಾರೆಂದರೆ ಅವರನ್ನು ಮೆಚ್ಚಲೇಬೇಕು. ಹಾಗೆಂದು ಈ ಭಾಗದಲ್ಲಿ ಹರಳು ಕಲ್ಲು ಅಗೆದ ವಿಷಯ ಇಡೀ ಲೋಕಕ್ಕೆ ಗೊತ್ತುಂಟು. ಅದನ್ನೆಲ್ಲ ವರ್ಣಿಸಲಸಾಧ್ಯ. ಆದರೆ ಇದೀಗ ಇಲ್ಲಿ ಚಿಕ್ಕದಾಗಿ, ಚೊಕ್ಕದಾಗಿ, ಯಾರಿಗೂ ಗೊತ್ತಾಗದಂತೆ ಕೆಂಪು ಕಲ್ಲಿನ ಪಣೆಯೊಂದು ಕಾರ್ಯಚರಿಸುತ್ತಿದೆ ಎಂದು ನಮ್ಮ ಕಲ್ಮಕಾರ್ ಟವರ್ ಕೂಕುಲು ಹಾಕಿ ಹೇಳಿದೆ. ಯಾರಿಗೆ ಹೇಳೋಣ ಈ ವಿಷಯ?
ಅಲ್ಲಿ ಕಲ್ಮಕಾರಿನ ಅರಣ್ಯ ಪ್ರದೇಶದಲ್ಲಿ ಈಗ ಕೆಂಪು ಕಲ್ಲಿನ ಪಣೆಯೊಂದು ಇದ್ದು ಇಲ್ಲಿಂದ ಪಿಕಪ್ ನಲ್ಲಿ ಕೆಂಪು ಕಲ್ಲು ಸಾಗಾಟ ಮಾಡಲಾಗುತ್ತಿದೆ. ಮೊದಲು ಭೂತ ಸ್ಥಾನ ಕಟ್ಟಲು ಕಲ್ಲು ಎಂದು ಕಲ್ಲು ಕಳ್ಳರು ಘೋಷಣೆ ಮಾಡಿದ್ದು ಇದೀಗ ನೂರು ಭೂತಗಳಿಗಾಗುವಷ್ಟು ಕಲ್ಲು ಇಲ್ಲಿಂದ ಹೊರಹೋಗು ತ್ತಿದೆ. ಭೂತಗಳಿಗೆ ಹತ್ತು ಕಲ್ಲು ಮಾತ್ರ ಹಾಕುವ ಇದೇ ಕಲ್ಲು ಕಳ್ಳರು ಹೊರಗೆ ಲೋಡ್ ಲೋಡ್ ಕಲ್ಲು ಇಳಿಸುತ್ತಿದ್ದಾರೆ. ಭೂತದ ಹೆಸರಿನಲ್ಲಿ ಕಲ್ಲು ಬ್ಯಾರಕ್ಕೆ ಇಳಿದಿರುವ ಈ ಕಲ್ಲು ಕಳ್ಳರ ಭಾವಚಿತ್ರ, ಅವರ ಸಾಧನೆಗಳ ಪಟ್ಟಿ, ಯಾರ ಮಿಸನ್, ಯಾರ ಪಿಕಪು ಮತ್ತು ಕಲ್ಲು ಕಳ್ಳರ, ಮರಗಳ್ಳರ, ಹರಳು ಕಳ್ಳರ ಮಹಾನ್ ನಾಯಕನ ಜಾತಕ ಪತ್ರಿಕೆಗೆ ಬಂದಿದೆ. ಇನ್ನಾದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಪ್ರದೇಶದಲ್ಲಿ ಸಣ್ಣ ವಾಕಿಂಗ್ ಆದರೂ ಮಾಡಲಿ. ಗ್ಯಾಸ್ಟ್ರಿಕ್ ಗೆ ಒಳ್ಳೆದು.
Copy to DFO Mangalore ✅
Post a Comment